ಹೊಯ್ಸಳ ವಾಸ್ತುಶಿಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
→‎ಕೂಟಗಳು: Spelling correction
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫೩ ನೇ ಸಾಲು:
==ಕೂಟಗಳು==
 
ಹೊಯ್ಸಳರ ದೇವಾಲಯಗಳನ್ನು ಕೂಟ ದೇವಾಲಯಗಳಾಗಿ ವಿಂಗಡಿಸಲಾಗಿದೆ. ಇಂದುಒಂದು ಜಗತಿಯ ಮೇಲೆ ಒಂದೇ ಮುಖ್ಯ ದೇವಾಲಯವಿದ್ದು ಒಂದೇ ಮುಖ್ಯ ಗರ್ಭಗುಡಿಯಿರುವುದನ್ನು '''ಏಕಕೂಟ''' ಎನ್ನಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ [[ಬೇಲೂರು]] ನಗರದಲ್ಲಿರುವ [[ಚೆನ್ನಕೇಶವ ದೇವಾಲಯ]]. ಒಂದೇ ಜಗತಿಯ ಮೇಲೆ ಎರಡು ಮುಖ್ಯ ಗರ್ಭಗುಡಿಗಳಿರುವುದಕ್ಕೆ '''ದ್ವಿ-ಕೂಟ''' ಅಥವಾ ಜೋಡಿಗುಡಿ ಎನ್ನಲಾಗುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆ [[ಹಳೇಬೀಡು]] ಪಟ್ಟಣದಲ್ಲಿರುವ [[ಹೊಯ್ಸಳೇಶ್ವರ ದೇವಸ್ಥಾನ]].
ಮೂರು ಮುಖ್ಯ ಗರ್ಭಗುಡಿಗಳಿರುವ ದೇವಾಲವು '''ತ್ರಿಕೂಟ''' , ಇದನ್ನು ನಾವು [[ಸೋಮನಾಥಪುರದಲ್ಲಿ]] ಕಾಣಬಹುದು. ನಾಲ್ಕು ಗರ್ಭಗುಡಿಯಿರುವ '''ಚತುಷ್ಕೂಟ''' ದೇವಾಲಯವು [[ಹಾಸನ ಜಿಲ್ಲೆ]] ಯ [[ದೊಡ್ಡಗದ್ದವಳ್ಳಿ]] ಯಲ್ಲಿದೆ. ಐದು ಗರ್ಭಗುಡಿಯಿರುವ '''ಪಂಚಕೂಟ''' ಆಲಯವನ್ನು [[ಮಂಡ್ಯ ಜಿಲ್ಲೆ]] ಯ [[ಕಿಕ್ಕೇರಿ]] ತಾಲ್ಲೂಕಿನ [[ಗೋವಿಂದನ ಹಳ್ಳಿ]] ಎಂಬಲ್ಲಿ ಕಾಣಬಹುದು. ಹೀಗೆ ಕೂಟಗಳನ್ನಾಗಿ ವಿಂಗಡಿಸಿಕೊಂಡು ತಮ್ಮದೇ ಶೈಲಿಯಲ್ಲಿ ಹೊಯ್ಸಳರು ಸುಮಾರು ೯೨ ದೇವಾಲಯಗಳನ್ನು ಕರ್ನಾಟಕದಲ್ಲಿ ನಿರ್ಮಿಸಿದ್ದಾರೆ.
 
೫೯ ನೇ ಸಾಲು:
 
ಹೀಗೆಯೇ ಹೊಯ್ಸಳರ ಆಲಯಗಳ ಒಳಛಾವಣಿಗಳನ್ನು '''ಭುವನೇಶ್ವರಿ'''ಗಳು ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ , ಇವೂಗಳನ್ನು ಸಹ ಸೂಕ್ಷ್ಮ ಕುಸುರಿ ಕೆತ್ತನೆಯಿಂದ ಅಲಂಕರಿಸಲಾಗಿದೆ. ಭುವನೇಶ್ವರಿಗಳಲ್ಲಿ ಸಾಮಾನ್ಯವಾಗಿ [[ಅಷ್ಟದಿಕ್ಪಾಲಕ]] (ಎಂಟು ದಿಕ್ಕಿನ ದೇವತೆಗಳು) ರನ್ನು ಅವರ ವಾಹನಗಳ ಜೊತೆಗೆ ತೋರಿಸಲಾಗಿರುತ್ತದೆ. ಈ ವಿಗ್ರಹಗಳನ್ನು ಮೊದಲು ಕೆಳಗೆ ಕೆತ್ತನೆ ಮಾಡಿಕೊಂಡು ನಂತರ ಮೇಲಕ್ಕೆ ಇಂಟರ್ ಲಾಕ್ ಮಾದರಿಯಲ್ಲಿ ಜೋಡಿಸಲಾಗಿದೆ. ಹೆಚ್ಚು ಸ್ಪಷ್ಟತೆ, ಹೆಚ್ಚು ಅಲಂಕಾರ ಮತ್ತು ಪೂರ್ಣ ಚಿತ್ರಣ ಹೊಯ್ಸಳರ ವಾಸ್ತುಶೈಲಿಯ ಪ್ರಮುಖ ಅಂಶ. ವಿಗ್ರಹಗಳನ್ನು ಕೆತ್ತುವುದಕ್ಕೆಂದೇ ದೋರದಮುದ್ರ (ಇಂದಿನ [[ಹಳೇಬೀಡು]] ) ದಲ್ಲಿ ಶಿಲ್ಪಕಲಾ ವಿಶ್ವವಿದ್ಯಾಲಯವೇ ಇತ್ತೆಂದು ವಿದ್ವಾಂಸರು ಶಾಸನಗಳ ಆಧಾರದಲ್ಲಿ ಹೇಳುತ್ತಾರೆ. ವಿಗ್ರಹಗಳನ್ನು ಕೆತ್ತುವ ಮುನ್ನ ಅದರ ಕರಡು ತಯಾರಿಕೆ , ನಂತರ ದಪ್ಪ ಕೆತ್ತನೆ, ತದನಂತರ ವಿಗ್ರಹದ ಸೂಕ್ಷ್ಮ ಕೆತ್ತನೆಗಳನ್ನು ಪೂರೈಸುತ್ತಿದ್ದರೆಂದು ಹೊಯ್ಸಳರ ಅನೇಕ ದೇವಾಲಯಗಳಲ್ಲಿನ ಕೆತ್ತನೆಯ ಶೈಲಿಯಿಂದ ತಿಳಿದುಬರುತ್ತದೆ. ಭಾರತೀಯ ವಾಸ್ತುಶೈಲಿಯಲ್ಲಿ ಹೊಯ್ಸಳ ವಾಸ್ತುಶಿಲ್ಪವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿದೆ.
 
 
==ಉಲ್ಲೇಖನಗಳು==