ಗಣರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
ಪೌರಸ್ತ್ಯ ದೇಶಗಳಲ್ಲಿ, ಅದರಲ್ಲೂ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ, ಗಣರಾಜ್ಯ ತತ್ತ್ವಕ್ಕೆ ಮಾನ್ಯತೆ ಇತ್ತೆಂದು ಹೇಳಲು ಅನೇಕ ಆಧಾರಗಳುಂಟು.ಇವುಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು.<ref>[http://www.iloveindia.com/history/ancient-india/16-mahajanapadas.html 16 Mahajanapadas - Sixteen Mahajanapadas, 16 Maha Janapadas India, Maha Janapada Ancient India]. Iloveindia.com. Retrieved on 2013-07-12.</ref>.ಹದಿನಾರು ಗಣಗಳ ಒಂದು ಸಂಘಟನೆ ಮಹಾಜನಪದವಾಗುತ್ತಿತ್ತು.<ref>Anguttara Nikaya I. p 213; IV. pp 252, 256, 261.</ref><ref name=singh>{{cite book|last=Singh|first=Upinder|title=A History of Ancient and Early Medieval India: From the Stone Age to the 12th Century|url=https://books.google.com/books?id=H3lUIIYxWkEC&pg=PA260&dq=Great+States+Upinder+singh&hl=en&ei=tu6ITPDYMoG6vQO9uannCg&sa=X&oi=book_result&ct=result&resnum=1&ved=0CC4Q6AEwAA#v=onepage&q&f=false|year=2008|publisher=Pearson Education|location=Delhi|isbn=978-81-317-1120-0|pages=260–4}}</ref> . ಪ್ರಾಚೀನ ಭಾರತದ ರಾಜ್ಯ ವ್ಯವಸ್ಥೆಯ ಬಗ್ಗೆ ಆಮೂಲಾಗ್ರ ಸಂಶೋಧನೆ ನಡೆಸಿರುವ ಡಾ. ಜಯಸ್ವಾಲ್, ಡಾ ಘೋಷಾಲ್ ಮತ್ತು ಡಾ ಎ.ಎಸ್.ಅಳ್ಟೇಕರ್ ಇವರು ಈ ಬಗ್ಗೆ ಖಚಿತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ<ref>http://www.britannica.com/eb/article-9074639/Vaisali Vaisali, ''[[Encyclopædia Britannica]]''</ref><ref>{{cite book |title=A history of India|last=Kulke|first=Hermann|authorlink= |author2=Dietmar Rothermund |year=2004|publisher=Routledge |isbn=0-415-32919-1|page= 57|url=https://books.google.com/?id=TPVq3ykHyH4C&pg=PA57&dq=Vaishali&q=Vaishali |ref= }}</ref><ref>Sharma, RS. ''Aspects of Political Ideas and Institutions in Ancient India.'' Motilal Banarsidass Publ., 1999 pg. xxix</ref> . ಈ ಸಂಶೋಧಕರು ಪ್ರಾಚೀನ ಭಾರತದಲ್ಲಿ ಪ್ರಜಾಪ್ರಭುತ್ವ ಪದ್ಧತಿಯೊಂದೇ ಪ್ರಚಲಿತ ಸರ್ಕಾರ ಪದ್ಧತಿಯಾಗಿತ್ತೆಂದು ಹೇಳುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ರಾಜರಹಿತ ಪ್ರಭುತ್ವಗಳೆನಿಸಿಕೊಂಡಿರುವ ಶ್ರೀಮಂತ ಪ್ರಭುತ್ವ, ಪ್ರಜಾಪ್ರಭುತ್ವ ಅಥವಾಾ ಗಣರಾಜ್ಯ ಇವು ವೇದಗಳ ಕಾಲದಲ್ಲಿ ಪ್ರಚಲಿತವಿದ್ದುವು. ಮಾಲವ ಗಣ ಮತ್ತು ಯಾಹುದೇಯ ಗಣಗಳು ಹಿಂದುಳಿದ ಪಂಗಡಗಳ ರಾಜ್ಯಗಳಾಗಿರದೆ ಅವು ಸುವ್ಯವಸ್ಥಿತ ರಾಜ್ಯ ಪದ್ಧತಿಗಳೆನಿಸಿಕೊಂಡಿದ್ದವು. ಪ್ರಾಚೀನ ಭಾರತದಲ್ಲಿ ಗಣ ಎಂಬ ಪದಕ್ಕೆ ಖಚಿತವಾದ ರಾಜಕೀಯ ಹಾಗೂ ಸಂವೈಧಾನಿಕ ಅರ್ಥವಿತ್ತು. ಗಣವೆಂಬುದು ಸರ್ಕಾರದ ಒಂದು ಪ್ರಭೇದವಾಗಿತ್ತು. ಅದರಲ್ಲಿ ರಾಜ್ಯಾಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿರದೆ ಗಣ ಅಥವಾಾ ಜನಸಮೂಹದ ಕೈಯಲ್ಲಿರುತ್ತಿತ್ತು. ಗಣ ಎಂಬುದೇ ಅಲ್ಲದೇ ಸಂಘ ಅಥವಾಾ ಸಮಿತಿ ಎಂಬ ಪದಗಳೂ ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದುವು. ಮಧ್ಯ ಯುಗದಲ್ಲಿ ಅಲ್ಲಲ್ಲಿ ಕೆಲವು ಗಣರಾಜ್ಯಗಳು ತಲೆ ಎತ್ತಿದುವು.
==ಆಧುನಿಕ ಕಾಲದಲ್ಲಿ==
ಆದರೆ 14-16ನೆಯ ಶತಮಾನಗಳ ಅವಧಿಯಲ್ಲಿ ಉಂಟಾದ ಪುನರುಜ್ಜೀವನ ಕಾಲದಲ್ಲಿ ಇಟಲಿಯ ನಗರ ರಾಜ್ಯಗಳಾದ [[ವೆನಿಸ್‌|ವೆನಿಸ್]] ಮತ್ತು [[ಫ್ಲಾರೆನ್ಸ್]] ಗಣರಾಜ್ಯ ಸರ್ಕಾರಗಳು ಹೆಚ್ಚು ಸತ್ವಶಾಲಿ ಸರ್ಕಾರ ಪ್ರಭೇದಗಳಾಗಿ ಅಸ್ತಿತ್ವಕ್ಕೆ ಬಂದುವು. ಇವುಗಳಲ್ಲೂ ರಾಜರಹಿತ ಪ್ರಭುತ್ವವೇ ಪ್ರಮುಖ ಅಂಶವಾಗಿತ್ತು. ವೆನಿಸ್ ಮತ್ತು ಫ್ಲಾರೆನ್ಸ್‍ಗಳಲ್ಲಿ ಅಧಿಕಾರ ಹಲವು ಶ್ರೀಮಂತರ ಕೈಯಲ್ಲಿತ್ತು. ಸರ್ಕಾರವನ್ನು ಚುನಾಯಿತ ಅಥವಾಾ ಆಯ್ದ ಪ್ರತಿನಿಧಿಗಳ ಸಮಿತಿ ನಡೆಸುತ್ತಿತ್ತು. ಇದರಲ್ಲಿ ಪ್ರಜಾಪ್ರಭುತ್ವ ತತ್ವಕ್ಕೆ ಅಷ್ಟೊಂದು ಮಹತ್ವವಿರಲಿಲ್ಲ. ಇಂಗ್ಲೆಂಡಿನಲ್ಲಿ ಸ್ಥಾಪಿತವಾದ ಕ್ರಾಮ್ವೆಲ್ ಆಡಳಿತ ಅರಸೊತ್ತಿಗೆಯ ವಿರುದ್ಧ ಎದ್ದ ಬಂಡಾಯದ ಫಲ. ಆ ಅವಧಿಯಲ್ಲಿ ಗಣರಾಜ್ಯ ತತ್ತ್ವವನ್ನು ಎತ್ತಿ ಹಿಡಿಯಲಾಯಿತು. ಡಚ್ ಗಣರಾಜ್ಯದಲ್ಲಿ ಒಬ್ಬನ ಕೈಯಲ್ಲಿ ಅಧಿಕಾರವಿದ್ದರೂ ಅದು ಆಳರಸರ ವಿರುದ್ಧ ರಚಿತವಾದ ಅಧ್ಯಕ್ಷೀಯ ಸರ್ಕಾರ. ಇದೇ ರೀತಿ ಸ್ವಿಟ್ಜರ್ಲೆಂಡಿನಲ್ಲಿ ಕೂಡ ಗಣರಾಜ್ಯ ಪದ್ಧತಿ ರೂಪುಗೊಂಡಿತು. [[ಅಮೆರಿಕ]]ದ ಕ್ರಾಂತಿ ಮತ್ತು ಫ್ರಾನ್ಸಿನ ಕ್ರಾಂತಿಗಳು ರಾಜಪ್ರಭುತ್ವದ ವಿರುದ್ಧ ಎದ್ದ ಬಂಡಾಯಗಳು. ಅಲ್ಲಿ ಗಣರಾಜ್ಯಗಳು ಸ್ಥಾಪಿತವಾದುವು. ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳಲ್ಲಿ ರಾಜ್ಯಾಧಿಕಾರ ಜನತೆಯ ಒಪ್ಪಿಗೆಯಂತೆ ರೂಪುಗೊಂಡು ಚಲಾಯಿಸಲ್ಪಡಬೇಕು ಮತ್ತು ಅದು ಮಾನವೀಯ ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿರಬೇಕು ಎಂಬ ತತ್ತ್ವಗಳು ಪ್ರಮುಖವಾಗಿದ್ದುವು. ಸಮೂಹದಿಂದ ಪ್ರತ್ಯಕ್ಷವಾಗಿ ಅಥವಾಾ ಪರೋಕ್ಷವಾಗಿ ಅಧಿಕಾರ ಪಡೆದು, ಜನತೆಯ ಇಚ್ಛೆಗನುಗುಣವಾಗಿ, ನಿಯಮಿತ ಅವಧಿಯಲ್ಲಿ ಮಾತ್ರ ಆ ಅಧಿಕಾರವನ್ನು ಚಲಾಯಿಸುವ ಸರ್ಕಾರ ಪದ್ಧತಿಯೇ ಗಣರಾಜ್ಯವೆಂದು ಮ್ಯಾಡಿಸನ್ ಹೇಳಿದ್ದಾನೆ. ಇಂಥ ವ್ಯವಸ್ಥೆಯಲ್ಲಿ ಅಧಿಕಾರವನ್ನು ಹಲವೇ ಜನರಿಂದ ಪಡೆಯದೆ ಇಡೀ ಜನತೆಯಿಂದ ಪಡೆಯುವುದು ಬಹು ಮುಖ್ಯವಾದ ಅಂಶ. ಈ ಅರ್ಥದಲ್ಲಿ ಗಣರಾಜ್ಯವೆಂದರೆ ಇಂದಿನ ಪ್ರಜಾಪ್ರಭುತ್ವ ಪದ್ಧತಿ. ಅಮೆರಿಕದಲ್ಲಿ ಗಣರಾಜ್ಯ ಸ್ಥಾಪನೆಯಾದಂದಿನಿಂದ ಜಗತ್ತಿನ ಅನೇಕ ರಾಷ್ಟ್ರಗಳು ಗಣರಾಜ್ಯಗಳಾಗಿವೆ. ಸ್ವತಂತ್ರಭಾರತವೂ ತನ್ನ [[ಸಂವಿಧಾನ]]ದಲ್ಲಿ ಭಾರತವನ್ನು ಸರ್ವತಂತ್ರ ಸ್ವತಂತ್ರ ಗಣರಾಜ್ಯವೆಂದು ಸಾರಿದೆ. ಇಪ್ಪತ್ತನೆಯ ಶತಮಾನದಲ್ಲಿ ಗಣರಾಜ್ಯ ಪದ್ಧತಿಯ ಸರ್ಕಾರ ರಚನೆಗೆ ಎಲ್ಲೆಲ್ಲೂ ಪ್ರೋತ್ಸಾಹ ದೊರೆತಿದ್ದು ಸಹಜವೇ ಆದರೂ 1914-18ರಲ್ಲಿ ಜರುಗಿದ [[ಒಂದನೆಯ ಮಹಾಯುದ್ಧ|ಒಂದನೆ ಮಹಾಯುದ್ಧ]]ದ ತರುವಾಯ ಗಣರಾಜ್ಯದ ಹೆಸರಿನಲ್ಲಿ ಅನೇಕ ಐರೋಪ್ಯ ರಾಷ್ಟ್ರಗಳಲ್ಲಿ ಸರ್ವಾಧಿಕಾರಿಗಳು ಅಧಿಕಾರಕ್ಕೆ ಬಂದರು. [[ಜರ್ಮನಿ]], [[ಇಟಲಿ]], [[ಸ್ಪೇನ್]], ಸೋವಿಯೆತ್ ದೇಶ ಮುಂತಾದ ರಾಷ್ಟ್ರಗಳಲ್ಲಿ ಈ ಸರ್ವಾಧಿಕಾರಿಗಳು ರಾಜಪ್ರಭುತ್ವವನ್ನು ಮಾನ್ಯ ಮಾಡಲೂ ಇಲ್ಲ, ಗಣರಾಜ್ಯ ತತ್ತ್ವವನ್ನು ಅಲ್ಲಗಳೆಯಲೂ ಇಲ್ಲ. ತಮ್ಮದೇ ಆದ ರೀತಿಯಲ್ಲಿ ಅವರು ತಮ್ಮ ಕೈಯಲ್ಲಿ ರಾಜ್ಯಾಧಿಕಾರವನ್ನು ಇಟ್ಟುಕೊಂಡರು. ಅಂದಿನಿಂದ ಸರ್ಕಾರಗಳನ್ನು ಸಂವೈಧಾನಿಕ ಸರ್ಕಾರಗಳು ಮತ್ತು ಸರ್ವಾಧಿಕಾರ ಸರ್ಕಾರಗಳೆಂದು ವರ್ಗೀಕರಿಸಬೇಕಾಯಿತು. [[ಎರಡನೆಯ ಮಹಾಯುದ್ಧ]]ದ ಅನಂತರವೂ ಅನೇಕ ದೇಶಗಳು ಹೆಸರಿನಲ್ಲಿ ಮಾತ್ರ ಗಣರಾಜ್ಯಗಳಾಗಿ ಉಳಿದುವು. ಆದರೆ ಅನೇಕ ಗಣರಾಜ್ಯಗಳು ಯಶಸ್ವಿಯಾಗಿ ಮುಂದುವರೆಯುತ್ತಿವೆ.
==ಉಲ್ಲೇಖಗಳು==
{{reflist}}
"https://kn.wikipedia.org/wiki/ಗಣರಾಜ್ಯ" ಇಂದ ಪಡೆಯಲ್ಪಟ್ಟಿದೆ