ಆತ್ಮಹತ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
ಚುNo edit summary
೧೭ ನೇ ಸಾಲು:
==ಆತ್ಮಹತ್ಯೆಯ ಬಗ್ಗೆ ಖಂಡನೆ==
* ಅನೇಕ ಪ್ರಮುಖ ಮತಗಳು ಆತ್ಮಹತ್ಯೆಯನ್ನು ದುಷ್ಕರ್ಮ, ಪಾಪ ಎಂದು ಖಂಡಿಸಿವೆ. ಇಸ್ಲಾಂ ಮತದಲ್ಲಿ ಇದನ್ನು ನಿಷೇಧಿಸಿದ್ದಾರೆ. ಬೈಬಲ್ಲಿನ ಹಳೆಯ, ಹೊಸ ಒಡಂಬಡಿಕೆಗಳಲ್ಲಿ ಸ್ಪಷ್ಟವಾಗಿ ಟೀಕಿಸಿ ಪ್ರತಿಷೇಧಿಸಿಲ್ಲದಿದ್ದರೂ ಸಂತ ಅಗಸ್ಟೀನ್ ಕಾಲದಿಂದೀಚೆಗೆ ಕ್ರೈಸ್ತಮತದವರು ಆತ್ಮಹತ್ಯೆಯನ್ನು ನಿಷೇಧಿಸಿದ್ದಾರೆ. ಅದು ಖೂನಿ, ಕೊಲೆಗಳನ್ನು ಮಾಡಿದಷ್ಟೇ ಪಾಪಕರವೆಂದು ಸಾರಿದ್ದಾರೆ.
* ಯೆಹೂದ್ಯರ [[ಟಾಲ್ಮೂಡ್|ತಾಲ್ಮೂಡ್]] ಎಂಬ ಧರ್ಮಶಾಸ್ತ್ರದಲ್ಲಿ ಆತ್ಮಹತ್ಯೆ ಘೋರ ಪಾಪವೆಂದು ಸಾರಿ, ಆತ್ಮಹತ್ಯೆ ಮಾಡಿಕೊಂಡವನಿಗೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರವನ್ನು ನಿಷೇಧಿಸಿದೆ. ಬುದ್ಧ ಮಧ್ಯಮಾರ್ಗಾವಲಂಬಿಯಾಗಿ ದೇಹವನ್ನು ದಂಡಿಸುವುದನ್ನು ಖಂಡಿಸುವುದರಿಂದ ಆತ್ಮಹತ್ಯೆಯನ್ನು ನಿಷೇಧಿಸಿದ್ದಾನೆಂದು ತೀರ್ಮಾನಿಸಬಹುದು.
* ಆದರೆ ಬೌದ್ಧಮತದಲ್ಲಿ ಬೌದ್ಧ ಸಂಘಕ್ಕೋಸ್ಕರ ಪುನರ್ಜನ್ಮತಾಳುವ ಅತಿಶ್ರೇಷ್ಠ ಉದ್ದೇಶಕ್ಕೋಸ್ಕರ ಅತಿ ಮೇಲ್ಮಟ್ಟದ ಬೋಧಿಸತ್ವರು ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶವಿದೆ. ಅದು ಜನಸಾಮಾನ್ಯರಿಗೆ ಖಂಡಿತ ಅನ್ವಯಿಸುವುದಿಲ್ಲ. ಇದೇ ರೀತಿಯಲ್ಲಿ ಜೈನಧರ್ಮದಲ್ಲೂ ಅತಿಶ್ರೇಷ್ಠ ಯತಿಗಳು ಅವಸಾನ ಕಾಲದಲ್ಲಿ ಭಿಕ್ಷೆಯನ್ನು ತಿರಸ್ಕರಿಸಿ ಹಸಿವು ಬಾಯಾರಿಕೆಗಳಿಂದ ಬಳಲಿ ದೇಹವನ್ನು ದಂಡಿಸಿ (ಪ್ರಾಯೋಪವಾಸ) ಅಸುವನ್ನು ನೀಗಲು ಅವಕಾಶವಿದೆ. ಇದಕ್ಕೆ ಸಲ್ಲೇಖನಪದ್ಧತಿ ಎಂದು ಹೇಳುತ್ತಾರೆ. ಪಾಶ್ರ್ವ ಮತ್ತು ಅರಿಷ್ಟನೇಮಿ ತೀರ್ಥಂಕರರು ಈ ರೀತಿಯಲ್ಲಿ ಕಾಯೋತ್ಸರ್ಗ ಮಾಡಿದರು. ಈಗಲೂ ಕೆಲವು ಶ್ರೇಷ್ಠ ಜೈನ ಯತಿಗಳು ಸಲ್ಲೇಖನ ಮಾಡುತ್ತಾರೆ.
 
"https://kn.wikipedia.org/wiki/ಆತ್ಮಹತ್ಯೆ" ಇಂದ ಪಡೆಯಲ್ಪಟ್ಟಿದೆ