ಟಾರ್ಮಿಗನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ, ಇಂಗ್ಲೀಷ್ ಪುಟದಿಂದ ಚಿತ್ರ ಸೇರ್ಪಡೆ
 
೧೦ ನೇ ಸಾಲು:
 
ಇವು ಸುಮಾರು 2000-4000 ಎತ್ತರದ ಕಲ್ಲುಬಂಡೆಗಳ ಮಧ್ಯದಲ್ಲಿರುವ ಬಂಜರು ಪ್ರದೇಶದಲ್ಲಿ ವಾಸಿಸುವುದರಿಂದ ಇವುಗಳ ವಿಷಯ ಹೆಚ್ಚು ತಿಳಿದುಬಂದಿಲ್ಲ. ಇವುಗಳ ಸರಾಸರಿ ಉದ್ದ ಸು. 35 ಸೆಂ.ಮೀ. ಮೈಬಣ್ಣ ಕೆಂಪು. ಮೇಲೆಲ್ಲ ಕಪ್ಪು ಮಿಶ್ರಿತ ಕಂದುಬಣ್ಣದ ಅಡ್ಡಪಟ್ಟೆಗಳಿವೆ. ಚಳಿಗಾಲದಲ್ಲಿ ಮಾತ್ರ ಮೈಬಣ್ಣ ಸಂಪೂರ್ಣವಾಗಿ ಬಿಳಿಯ ಬಣ್ಣಕ್ಕೆ ತಿರುಗಿ (ರೆಡ್‍ಗ್ರೌಸ್ ಮಾತ್ರ ವರ್ಷವಿಡೀ ಕೆಂಪು ಬಣ್ಣದ್ದಾಗಿಯೇ ಉಳಿಯುತ್ತದೆ) ಮಂಜಿನ ಪರಿಸರಕ್ಕೆ ಹೊಂದಿಕೊಳ್ಳುವುದರಿಂದ ಇವನ್ನು ಗುರುತಿಸುವುದು ಕಷ್ಟವಾಗುತ್ತದೆ. ಕಾಲುಗಳ ಮೇಲೂ ಕಾಲ್ಬೆರಳುಗಳ ಮೇಲೂ ಪುಕ್ಕಗಳ ಹೊದಿಕೆಯುಂಟು. ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಹೆಣ್ಣು ಹಕ್ಕಿಗಳು ಜೊತೆಜೊತೆಯಾಗಿ ಗುಂಪಿನಿಂದ ಹೊರಟು ಗೂಡುಕಟ್ಟಲು ಯೋಗ್ಯವಾದ ಸ್ಥಳ ಹುಡುಕುತ್ತವೆ. ಪೊದೆಯ ಸಂದಿಯಲ್ಲಿ ಅಥವಾ ಬಂಡೆಯ ಮಧ್ಯದಲ್ಲಿ ನೆಲದ ಮೇಲೆ ಅಷ್ಟು ಆಳವಿಲ್ಲದ ಗುಳಿಯನ್ನು ಮಾಡಿ ಅದರ ಸುತ್ತ ಎಲೆ ಅಥವಾ ಗಿಡಗಳಿಂದ ಅಲಂಕರಿಸುತ್ತವೆ. ಒಂದಾವರ್ತಿಗೆ 6-10 ಮೊಟ್ಟೆಗಳನ್ನಿಟ್ಟು 2 ವಾರದವರೆಗೆ ಕಾವು ಕೊಡುತ್ತವೆ. ಮೊಟ್ಟೆಯ ಬಣ್ಣ ಕೆಂಪು ಮಿಶ್ರಿತ ಹಳದಿ ಅಥವಾ ಬಿಳಿಮಿಶ್ರಿತ ಹಳದಿ. ಅಲ್ಲಲ್ಲಿ ಕಂದುಬಣ್ಣದ ಚುಕ್ಕೆಗಳೂ ಇವೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾರ್ಮಿಗನ್}}
 
[[ವರ್ಗ:ಹಕ್ಕಿಗಳು]]
"https://kn.wikipedia.org/wiki/ಟಾರ್ಮಿಗನ್" ಇಂದ ಪಡೆಯಲ್ಪಟ್ಟಿದೆ