ಲಾಂಗ್ ಸ್ಕರ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
==ಇತಿಹಾಸ==
ಸುಮಾರು ಕ್ರಿ. ಪೂ. 2,130 ರಲ್ಲಿ ಈಜಿಪ್ಟ್ನ ಹಳೆಯ ಸಾಮ್ರಾಜ್ಯದ ಸಮಯದಲ್ಲಿ ಪುರುಷರು ಸುತ್ತುಗಟ್ಟಿದ ಸ್ಕರ್ಟ್‍ಗಳನ್ನು ಧರಿಸುತ್ತಿದ್ದರು. ಅವುಗಳು ಆಯತಾಕಾರದ ತುಂಡಿನಿಂದ ಕೆಳಭಾಗದ ಸುತ್ತಲೂ ಸುತ್ತಿಕೊಂಡಿದ್ದವು ಮತ್ತು ಮುಂಭಾಗದಲ್ಲಿ ಕಟ್ಟಲ್ಪಟ್ಟಿದ್ದವು. ಸುದೀರ್ಘವಾದ ಲಂಗಗಳು ಸೊಂಟದಿಂದ ಮೊಣಕಾಲುಗಲಿಗೆ ತಲುಪುತ್ತವೆ ಮತ್ತು ಕೆಲವೊಮ್ಮೆ ನೇತಾಡುತ್ತವೆ. ಹೀಗೆ ಈ ಉಡುಪು ಫ್ಯಾಷನ್ ಆಗಿವೆ. ಕಂಚಿನ ಯುಗದಲ್ಲಿ ಪಶ್ಚಿಮ ಮತ್ತು ಮಧ್ಯ ಯುರೋಪ್‍ನ ದಕ್ಷಿಣ ಭಾಗಗಳಲ್ಲಿ ಸುತ್ತುವರಿದ ಉಡುಗೆ ರೀತಿಯ ಉಡುಪುಗಳಿಗೆ ಆದ್ಯತೆ ನೀಡಲಾಗಿದೆ. ಉತ್ತರ ಯುರೋಪ್‍ನಲ್ಲಿ ಹೆಂಗಸರು ಸ್ಕರ್ಟ್‍ಗಳು ಮತ್ತು ಬ್ಲೌಸ್‍ಗಳನ್ನು ಧರಿಸುತ್ತಿದ್ದರು.
 
ಮಧ್ಯಕಾಲೀನ ಯುಗದಲ್ಲಿ ಕೆಲವು ಉನ್ನತ ವರ್ಗದ ಮಹಿಳೆಯರು ಮೂರು ಮೀಟರ್‍ಗಳಷ್ಟು ಹೊಂದಿದ್ದ ವಸ್ತ್ರವನ್ನು ಕೆಳಭಾಗದಲ್ಲಿ ಧರಿಸಿದ್ದರು. 1960ರ ದಶಕದಲ್ಲಿ ಮಿನಿ ಸ್ಕರ್ಟ್‍ಗಳು ಕಡಿಮೆ ಉಡುಪುಗಳನ್ನು ಹೊಂದಿದ್ದವು, ಅದು ಕುಳಿತುಕೊಳ್ಳುವಾಗ ಒಳ ಉಡುಪುಗಳು ಕಾಣುತ್ತವೆ ಎಂಬ ಉದ್ದೇಶಕ್ಕೆ ಅದನ್ನು ಲಾಂಗ್ ಸ್ಕರ್ಟ್ ಆಗಿ ಪರಿವರ್ತಿಸಿದರು. ವೇಷಭೂಷಣ ಇತಿಹಾಸಕಾರರು 18ನೇ ಶತಮಾನದಲ್ಲಿ ಸ್ಕರ್ಟ್ ರೀತಿಯ ಉಡುಪುಗಳನ್ನು ವಿವರಿಸಲು ಸಾಮಾನ್ಯವಾಗಿ ‘ಪೆಟಿಕೋಟ್’ ಪದವನ್ನು ಬಳಸಿದರು. ಸ್ಕರ್ಟ್ ಪ್ರಪಂಚದಾದ್ಯಂತ ಅನೇಕ ಶಾಲೆಗಳಲ್ಲಿ ಬಾಲಕಿಯರ ಸಮವಸ್ತ್ರದ ಒಂದು ಭಾಗವಾಗಿದೆ. ಸ್ಥಳಿಯ ಸಂಸ್ಕøತಿಯ ಪ್ರಕಾರ ಸ್ಕರ್ಟ್ ಉದ್ದವು ಬದಲಾಗುತ್ತಿರುತ್ತದೆ.
 
ಇಪ್ಪತ್ತನೇಯ ಶತಮಾನದ ಯುಕೆಯಲ್ಲಿದ್ದ ಪ್ಲೆಟೆಡ್ [[ಟಾರ್ಟನ್]] ಸ್ಕರ್ಟ್ ಬಾಲಕಿಯರ ಶಾಲಾ ಸಮವಸ್ತ್ರಗಳ ಅಂಗವಾಗಿದೆ. 21ನೇ ಶತಮಾನದಲ್ಲಿ ಸ್ಕರ್ಟ್ ಮಹಿಳಾ ಪಾಶ್ಚಾತ್ಯ ಉಡುಪಿನ ಭಾಗವಾಗಿ ಮಾರ್ಪಟ್ಟಿದೆ. ವ್ಯಾಪಾರ ಪ್ರಾಸಂಗಿಕ ಮತ್ತು ಕಛೇರಿಯಲ್ಲಿ ಸ್ಕರ್ಟ್ ಅನ್ನು ಹೆಚ್ಚಾಗಿ ಧರಿಸುತ್ತಾರೆ. ಸ್ಕರ್ಟ್ ಸಹ ಔಪಚಾರಿಕ ಉಡುಗೆಗಳಂತೆ ಕಡ್ಡಾಯವಾಗಿರಬಹುದು. ಸೌಂದರ್ಯಶಾಸ್ತ್ರದ ಸಾಂಸ್ಕøತಿಕ ಪರಿಕಲ್ಪನೆಗಳನ್ನು ಆಧರಿಸಿ ಮತ್ತು ಧರಿಸುವವನ ವೈಯಕ್ತಿಕ ರುಚಿ, ಫ್ಯಾಷನ್ ಮತ್ತು ಸಾಮಾಜಿಕ ಸನ್ನಿವೇಶದಂತಹ ಅಂಶಗಳನ್ನು ಪ್ರಭಾವಿಸಬಹುದು. ಹೆಚ್ಚಿನ ಸ್ಕರ್ಟ್‍ಗಳು ಸ್ವಯಂ ಉಡುಪುಗಳಾಗಿವೆ. ಆದರೆ ಕೆಲವು ಸ್ಕರ್ಟ್ ಕಾಣುವ ಫಲಕಗಳು, ಲೆಗ್ಗಿಂಗ್ಸ್, ಶಾಟ್ರ್ಸ್ ಮತ್ತು ಈಜುಡುಗೆಗಳಂತಹ ಮತ್ತೊಂದು ಉಡುಪಿನ ಭಾಗವಾಗಿರಬಹುದು.<ref>http://arizonasonoranewsservice.com/the-squaw-dress-tucsons-controversial-but-unique-fashion-history/</ref>
 
==ವಿಧಗಳು==
"https://kn.wikipedia.org/wiki/ಲಾಂಗ್_ಸ್ಕರ್ಟ್" ಇಂದ ಪಡೆಯಲ್ಪಟ್ಟಿದೆ