ಟಾನ್ಸಿಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪ ನೇ ಸಾಲು:
 
ಟಾನ್ಸಿಲ್ಲುಗಳ ನೈಜ ಕ್ರಿಯೆ ಏನೆಂಬುದು ಖಚಿತವಾಗಿ ತಿಳಿಯದು. ಬಹುಶಃ ಯಾವ ಅಂತಸ್ಸ್ರಾವವನ್ನೂ ಅವು ಸ್ರವಿಸುವುದಿಲ್ಲ. ಹುಟ್ಟಿದಾಗ ಟಾನ್ಸಿಲ್ಲುಗಳು ಗಣನೆಗೆ ಬಾರದಷ್ಟು ಸಣ್ಣವಾಗಿರುತ್ತವೆ. ಮುಂದಿನ ತಿಂಗಳುಗಳಲ್ಲಿ ಟಾರ್ಸಿಲ್ಲುಗಳ ಕ್ಷೇತ್ರದಲ್ಲಿ ಶ್ವೇತಕಣಗಳ ಆಕ್ರಮಣವಾಗಿ ಟಾನ್ಸಿಲ್ಲುಗಳು ಶ್ವೇತಕಣಗಳು ಕೋಠಿಯಾಗಿ ಮಾರ್ಪಡುವುದರಿಂದ ಮತ್ತು ಅಲ್ಪಸ್ವಲ್ಪ ಸೋಂಕು ಉಂಟಾಗಿ ಊತ ಉಂಟಾಗುವುದರಿಂದ ಅವುಗಳ ಗಾತ್ರ ಹೆಚ್ಚಾಗುತ್ತದೆ. ಪುನಃ 2 ವರ್ಷಗಳ ಅನಂತರ, ಮತ್ತೆ 3-4 ವರ್ಷಗಳ ಮೇಲೆ ಗಾತ್ರ ಇನ್ನೂ ಹೆಚ್ಚುವುದು ಸಾಮಾನ್ಯ. ಬಹುಕಾಲಿಕ ಸೋಂಕು ಉಂಟಾಗದಿದ್ದರೆ ಹದಿವಯಸ್ಸಿನಲ್ಲಿ ಟಾನ್ಸಿಲ್ಲಿನ ಗಾತ್ರ ಕುಂದಿ ಮುದಿತನದಲ್ಲಿ ಪುನಃ ಅದು ಅಗಣನೀಯ ಗಾತ್ರದ ಅಂಗವಾಗಿಬಿಡುತ್ತದೆ. ಅಪರೂಪವಾಗಿ ಹದಿವಯಸ್ಸಿನಲ್ಲಿ ಗಾತ್ರವೃದ್ಧಿಯಾಗುವುದೂ ಉಂಟು. ಟಾನ್ಸಿಲ್ಲುಗಳು ಶ್ವೇತಕಗಣಗಳ ಕೋಠಿಯಾಗಿರುವುದರಿಂದ ಬಹುಶಃ ಸೋಂಕಿನ ವಿರುದ್ಧ ಇವೇ ಪ್ರಥಮ ಈಡಾಗಿ ದೇಹವನ್ನು ರಕ್ಷಿಸುವುದೇ ಅಲ್ಲದೆ ಅನೇಕ ವಿಷಾಣು ವಿರೋಧವಸ್ತುಗಳನ್ನು ತಯಾರಿಸುವ ಅಂಗಗಳೂ ಆಗಿವೆ.
ಟಾನ್ಸಿಲ್ಲಿನ ರೋಗಗಳು: ಅಟ್ಟದ ಟಾನ್ಸಿಲ್ಲುಗಳು ಸೋಂಕಿನಿಂದ ಆವೃತವಾಗಿ ಅವುಗಳಲ್ಲಿ ಉರಿಊತ ಕಂಡುಬರುವ ರೋಗಸ್ಥಿತಿಗೆ ಟಾನ್ಸಿಲ್ಲೈಟಿಸ್ ಎಂದು ಹೆಸರು. ಟಾನ್ಸಿಲ್ಲಿನ ಗಾತ್ರವೃದ್ಧಿ ಆಗಿರುವುದು ಇದರ ಮುಖ್ಯ ಲಕ್ಷಣ. ಇದರಲ್ಲಿ ನಾಲ್ಕು ಹಂತಗಳನ್ನು ಗುರುತಿಸಬಹುದು. ಮೊದಲ ಹಂತ ಕಫಯುಕ್ತ (ಕೆಟ್ಹಾರಲ್) ಟಾನ್ಸಿಲ್ಲೈಟಿಸ್. ಸೋಂಕು ಲೋಳೆಪೊರೆಗೆ ಸೀಮಿತ. ಇದು ತೀವ್ರವಾಗಿ ಮುಂದುವರಿದರೆ ಎರಡನೆಯ ಹಂತ ಫಲಿಸುವುದು. ಇದಕ್ಕೆ ಫಾಲಿಕ್ಯುಲರ್ ಟಾನ್ಸಿಲ್ಲೈಟಿಸ್ ಎಂದು ಹೆಸರು. ಇಲ್ಲಿ ಟಾನ್ಸಿಲ್ಲಿನಲ್ಲಿರುವ ಶ್ವೆತಕಣಗಂಟುಗಳು (ಲಿಂಫಾಯ್ಡ್ ಫಾಲಿಕಲ್ಸ್) ಸೋಂಕಿನಿಂದ ಆವೃತವಾಗಿ ಕೀವು ಉಂಟಾಗಿ, ಕೀವು ಟಾನ್ಸಿಲ್ಲಿನ ಮೇಲ್ಮೈಯಲ್ಲಿ ಅಲ್ಲಲ್ಲಿ ಜಿನುಗುತ್ತಿರುತ್ತದೆ. ಕೀವು ಅಧಿಕವಾಗಿದ್ದರೆ ಟಾನ್ಸಲ್ಲಿನ ಮೇಲೆ ಪೂರ ಕೀವು ಹರಡಿ ಬೆಳ್ಳಗಾಗಿ ಗಂಟಲಮಾರಿ (ಡಿಫ್ತಿರಿಯ) ರೋಗವೇನೋ ಎಂದು ಅಪಾರ್ಥಮಾಡಿಕೊಳ್ಳುವಂತಿರುತ್ತದೆ. ಸೋಂಕು ಇನ್ನೂ ತೀವ್ರವಾಗಿ ಇಲ್ಲವೇ ದೀರ್ಘಕಾಲಿಕವಾಗಿದ್ದರೆ ಟಾನ್ಸಿಲ್ಲಿನ ಒಳಭಾಗದಲ್ಲೆಲ್ಲ ಉರಿಊತ ಉಂಟಾಗುತ್ತದೆ. ಇದು ಮೂರನೆಯ ಹಂತ. ಇದಕ್ಕೆ ಪ್ಯಾರೆಂಕೈಮ್ಯಾಟನ್ ಟಾನ್ಸಿಲ್ಲೈಟಿಸ್ ಎಂದು ಹೆಸರು. ಹೀಗಾದಾಗ ಟಾನ್ಸಿಲ್ಲಿನ ಗಾತ್ರ ವೃದ್ಧಿಯಾಗಿರುವುದು ವ್ಯಕ್ತ. ಅಲ್ಲದೆ ಸುತ್ತಲಿನ ಲೋಳೆಪೊರೆ ಕೂಡ ಊತದಿಂದ ಕೆಂಪಾಗಿರುತ್ತದೆ. ನಾಲ್ಕನೆಯ ಹಂತ ಅತ್ಯಂತ ತೀವ್ರ ಸೋಂಕಿನಿಂದಾದುದು. ಇದಕ್ಕೆ ಸಪ್ಪುರೇಟಿವ್ ಟಾನ್ಸಿಲ್ಲೈಟಿಸ್ ಎಂದು ಹೆಸರು. ಇಡೀ ಟಾನ್ಸಿಲ್ಲೇ ನಾಶವಾಗಿ ಕೀವಾಗಿ ಮಾರ್ಪಟ್ಟು ಕೀವು ತುಂಬಿದ ಕೋಶದಂತೆ ಇರುತ್ತದೆ. ಇದು ಒಂದೇ ಕಡೆ ಇಲ್ಲವೇ ಎರಡು ಕಡೆಯೂ ಕಂಡುಬರುವುದು. ಕೀವು ಟಾನಿಸಲ್ ಪ್ರದೇಶಕ್ಕೆ ಸೀಮಿತವಾಗಿ ಇರುತ್ತದೆ. ಆದ್ದರಿಂದ ಕ್ವಿನ್ಸಿ ಮುಂತಾದ ಕೀವುತುಂಬಿದ ನೆರೆ ಪ್ರಾಂತ್ಯಗಳ ಬಾವುಗಳಿಂದ ಪ್ರತ್ಯೇಕವಾಗಿ ಇದನ್ನು ಗುರುತಿಸಬಹುದು. ಟಾನ್ಸಲ್ಲೈಟಿಸ್ 5-6 ವರ್ಷದ ಮಕ್ಕಳಲ್ಲಿ ಸಾಮಾನ್ಯ-ತತ್ರಾಪಿ ಬಡತನ, ಕೊಳಕು ಪ್ರದೇಶಗಳಲ್ಲಿ ವಾಸ, ಮಳೆ ಚಳಿಗಾಳಿಗಳಿಗೆ ಒಡ್ಡಲ್ಪಡುವುದು ಇಂಥ ಸಂದರ್ಭಗಳಲ್ಲಿ. ಕೈಶೋರ್ಯದಲ್ಲೂ ವಯಸ್ಸಾದ ಮೇಲೂ ಟಾನ್ಸಿಲ್ ಟಿಸ್ ಉಂಟಾಗಬಹುದು. ಗಂಟಲುನೋವು, ನುಂಗುವಾಗ ನೋವು. 40◦ಅ-41◦ಅ ಅಷ್ಟು ಕೂಡ ಜ್ವರ, ಇರಸುಮುರಸು, ಮೈಕೈನೋವು, ಕಣ್ಣುರಿ, ಕಣ್ಣಲ್ಲಿ ನೀರುಸುರಿಯುವಿಕೆ, ಕಿವಿನೋವು (ಮಕ್ಕಳಲ್ಲಿ ವಿಶೇಷವಾಗಿ), ಮಲಬದ್ಧತೆ ಇವು ಸಾಮಾನ್ಯ ಲಕ್ಷಣಗಳು. ಗಂಟಲುನೋವು ಸತತವಾಗಿ ಕಾಡಿಸುತ್ತದೆ. ಅಂದರೆ ಇದು ವಯಸ್ಕರಲ್ಲಿ ಮಾತ್ರ. ನುಂಗಿದಾಗ ನೋವೂ ಅಷ್ಟೇ. ಮಕ್ಕಳು ಗಂಟಲುನೋವಿನಿಂದ ಅಷ್ಟು ಬಾಧಿತರಾಗರೆಂದು ತೋರುವುದು. ಅದರೆ ಅವರ ಮೂಗಿನಲ್ಲಿ ಸುರಿಯುತ್ತದೆ. ಅಲ್ಲದೆ ಕಿವಿನೋವು ಚಿಕಿತ್ಸೆಗೆಂದೇ ಬಂದಾಗ ಅವರಿಗೆ ವಾಸ್ತವವಾಗಿ ಟಾನ್ಸಿಲ್ಲೈಟಿಸ್ ಆಗಿರುವುದು ವ್ಯಕ್ತಪಡುತ್ತದೆ. ಕೆಲವು ವೇಳೆ ಟಾನ್ಸಿಲ್ಲೈಟಿಸ್ ಅದ ಮಕ್ಕಳಿಗೆ ಜ್ವರ, ಮೈಕೈನೋವು ಮಾತ್ರ ಮೊದಲು ಮೊದಲು ಕಂಡುಬಂದು ನ್ಯೂಮೋನಿಯವೋ ಅಪೆಂಡಿಸೈಟಿಸ್ಸೋ ಎಂದು ಶಂಕಿಸುವಂತಿರುತ್ತದೆ. ಉಸಿರಾಡಿದಾಗ ಬಾಯಿಯಿಂದ ಕೆಟ್ಟ ವಾಸನೆ, ಅಜೀರ್ಣ, ಬಾಯರಿಕೆ, ಅಲ್ಪಮೂತ್ರ, ಅಸ್ಪಷ್ಟ ಮಾತು (ನೋವಿನಿಂದಾಗಿ) ಇವು (ವಿಶೇಷವಾಗಿ ವಯಸ್ಕರಲ್ಲಿ) ಕಂಡುಬರುವ ಇತರ ಲಕ್ಷಣಗಳು. ಸ್ಥಳೀಯ ದುಗ್ಧರಸಗ್ರಂಥಿಗಳು ಗಳಲೆ ಕಟ್ಟಿಕೊಂಡಿರುವುದೂ ನೋಯುವುದೂ ಸಾಮಾನ್ಯ. ಇಂಥ ಕೆಲವು ಲಕ್ಷ್ಷಣಗಳಿರುವ ಕೆಂಡಾಮಂಡಲಜ್ವರ (ಸ್ಕಾರ್ಲೆಟ್ ಫೀವರ್), ಗಂಟಲ ಮಾರಿ, ವಿನ್ಸೆಂಟನ ಊತರೋಗ (ವಿನ್‍ಸೆಂಟ್ಸ್ ಆಂಜೈನ), ಶ್ವೇತಕಣ ವಿರಳತೆ (ಎಗ್ರಾನ್ಯುಲೋಸ್ಟೆಟೋಸಿಸ್) ಇವುಗಳಿಂದ ಪ್ರತ್ಯೇಕಿಸಿ ಟಾನ್ಸಿಲ್ಲೈಟಿಸ್ಸನ್ನು ಗುರುತಿಸಬೇಕಾದ್ದು ಅಗತ್ಯ. ಟಾನ್ಸಿಲ್ಲೈಟಿಸ್ ಅದಾಗ ನೆರೆಕ್ಷೇತ್ರಗಳಲ್ಲಿ ಕೀವುಯುಕ್ತ ಹುಣ್ಣು (ಆಬ್ಸೆಸ್), ಧ್ವನಿಪೆಟ್ಟಿಗೆಯ ಊತ, ಕಿವಿನೋವು, ಕೂರಾದ ಸಂಧಿವಾತ, ಜ್ವರ ಕೂರಾದ ಮೂತ್ರಪಿಂಡ ಊತ, ವಿಷಮತೆ ಇಂಥ ಜಟಿಲತೆಗಳು ಉಂಟಾಗಬಹುದಾದರೂ ಇವು ಈಚಿನ ರಾಸಾಯನಿಕ ಔಷಧಗಳ ಉಪಯೋಗ ಕಾಲದಲ್ಲಿ ವಿರಳವಾಗಿವೆ.
 
=== ಟಾನ್ಸಿಲ್ಲಿನ ರೋಗಗಳು ===

== ಚಿಕಿತ್ಸೆ ==
ಟಾನ್ಸಿಲ್ಲೈಟಸ್ಸಿಗೆ ಚಿಕಿತ್ಸಯನ್ನು ಔಷಧೋಪಚಾರಗಳಿಂದಾಗಲಿ ಶಸ್ತ್ರಕಾರ್ಯದಿಂದಾಗಲಿ ಮಾಡಬಹುದು. ಹಾಸಿಗೆ ಮೇಲೆ ಮಲಗಿ ವಿಶ್ರಾಂತಿಪಡೆಯುವುದು, ಒದ್ದೆ ಬಟ್ಟೆಯಿಂದ ಮೈ ಒರಸಿಕೊಳ್ಳುವುದು, ಜ್ವರ ಮತ್ತು ಮೈಕೈನೋವಿಗಾಗಿ ಪ್ಯಾರೆಸಿಟಿಮಾಲ್ ಎಂಬ ಔಷದವನ್ನು ಪ್ರತಿಸಲವೂ 250 ಮಿಲಿಗ್ರಾಮಿನಷ್ಟು ದಿನಕ್ಕೆ ಮೂರು ಬಾರಿಯಂತೆ 5 ದಿವಸಗಳ ಕಾಲ ಬಿಡದೆ ತೆಗೆದುಕೊಳ್ಳುವುದು-ಇದು ಚಿಕಿತ್ಸಾಕ್ರಮ, ವಯಸ್ಕರು ಸುಮಾರು 1/2-1/4 ಗ್ರಾಮಿನಷ್ಟು ಆಸ್ಪಿರಿನ್ ಕರಗಿರುವ ಬಿಸಿನೀರನ್ನು ಗಂಟಲಿಗೆ ಹಾಕಿ ಗುಳುಗುಳುಮಾಡಿ ಉಗುಳುವುದರಿಂದ ಗಂಟಲು ನೋವನ್ನು ಶಮನವಾಡಿಕೊಳ್ಳಬಹುದು. ಈಚಿಗೆ ಕ್ರಮವರಿತು ಸಲ್ಫೋನೆಮೈಡ್, ಪೆನಿಸಿಲ್ಲಿನ್ ಇತ್ಯಾದಿಗಳನ್ನು ಚಿಕಿತ್ಸಕ ಔಷಧಗಳನ್ನಾಗಿ ಉಪಯೋಗಿಸುವುದಿದೆ. ರೋಗಿ ಈ ಔಷಧಗಳಿಗೆ ಒಗ್ಗದ ಪ್ರವೃತ್ತಿಯನ್ನು ತೋರಿಸುವಂತಿದ್ದರೆ ಟೆಟ್ರಸೈಕ್ಲಿನ್ನುಗಳನ್ನು ಕೊಡಬಹುದು. ಮಲಬದ್ಧತೆಯನ್ನು ತಕ್ಕ ಔಷಧಗಳಿಂದ ನಿವಾರಿಸಬೇಕು.
 
"https://kn.wikipedia.org/wiki/ಟಾನ್ಸಿಲ್" ಇಂದ ಪಡೆಯಲ್ಪಟ್ಟಿದೆ