ದೂರದರ್ಶಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
ಕನ್ನಡ ವಿಕಿಸೋರ್ಸ್‌ನ ಮೈಸೂರು ವಿ.ವಿ. ವಿಶ್ವಕೋಶದ ಲೇಖನದಿಂದ ಮಾಹಿತಿ ಸೇರ್ಪಡೆ
೧ ನೇ ಸಾಲು:
[[ಚಿತ್ರ:Telescope.jpg|thumb|right|150px|[[:en:Nice Observatory|ನೀಸ್ ವೀಕ್ಷಣಾಲಯ]]ದಲ್ಲಿ ೫೦ ಸೆ.ಮೀ. ಪ್ರಮಾಣದ ವಕ್ರೀಭವಿಸುವವಕ್ರೀಕರಿಸುವ ದೂರದರ್ಶಕ.]]
'''ದೂರದರ್ಶಕ''' -ಎಂದರೆ ದೂರದ ವಸ್ತುಗಳನ್ನು ವೀಕ್ಷಿಸಲೆಂದು ನಿರ್ಮಿತವಾದ ಉಪಕರಣ. ಇದು ದೂರವಸ್ತುವಿನಿಂದ ಬರುವ ವಿಕಿರಣವನ್ನು ವಿಶ್ಲೇಷಿಸುವ ಅಥವಾ ಆ ವಸ್ತುವಿನ ಪ್ರತಿಬಿಂಬವನ್ನು ರೂಪಿಸುವ ಉಪಕರಣ. ದೂರದಲ್ಲಿರುವ ವಸ್ತು-ಅದು ಭೂಮಿಯ ಮೇಲಿರಬಹುದು ಆಕಾಶದಲ್ಲಿರಬಹುದು-ನಮ್ಮ ಕಣ್ಣುಗಳಲ್ಲಿ ರಚಿಸುವ ಕೋನವನ್ನು ಲಂಬಿಸಿ ಆ ವಸ್ತುವಿನ ಉತ್ತಮತರ ಪೃಥಕ್ಕರಣೆ (ಬೆಟರ್ ರಿಸೊಲ್ಯೂಷನ್) ದೊರೆಯುವಂತೆ ಮಾಡುವ ಪ್ರಕಾಶೀಯ ಉಪಕರಣ (ಟೆಲಿಸ್ಕೋಪ್). ಈ ಹೆಸರು ಸಾಮಾನ್ಯವಾಗಿ [[:en:optical telescope|ದೃಕ್-ದೂರದರ್ಶಕ]]ವನ್ನು ಪ್ರಸ್ತಾಪಿಸುತ್ತದಾದರೂ, [[ವಿದ್ಯುತ್‌ಕಾಂತೀಯ ವರ್ಣಪಟಲ]]ದ ಬಹುತೇಕ ಭಾಗಗಳಿಗೆ ಮತ್ತು ಬೇರೆ ತರಹದ ತರಂಗಗಳಿಗೂ ದೂರದರ್ಶಕಗಳು ಲಭ್ಯವಿವೆ.
 
ಅತ್ಯಂತ ಸರಳ ದೂರದರ್ಶಕದಲ್ಲಿ ದೃಶ್ಯಕ ಮಸೂರವೂ (ಅಬ್ಜಕ್ಟಿವ್ ಲೆನ್ಸ್) ನೇತ್ರಕವೂ (ಐ ಪೀಸ್) ಇವೆ. ಮೊದಲಿನದು ಅಭಿದೃಶ್ಯಕದ (ಆಬ್ಜಕ್ಟ್) ನೈಜ ಪ್ರತಿಬಿಂಬವನ್ನು ರೂಪಿಸುತ್ತದೆ. ಇದನ್ನು ನೇತ್ರಕ ಲಂಬಿಸಿ ದೃಷ್ಟಿಸಲು ಅನುಮಾಡಿಕೊಡುವುದು. ದೃಶ್ಯಕ ಮಸೂರವಿರುವ ಉಪಕರಣಕ್ಕೆ ವಕ್ರೀಕರಿಸುವ ದೂರದರ್ಶಕವೆಂದು (ರಿಫ್ರ್ಯಾಕ್ಟಿಂಗ್ ಟೆಲಿಸ್ಕೋಪ್) ಹೆಸರು. ದೃಶ್ಯಕ ಮಸೂರದ ಬದಲಾಗಿ ಕನ್ನಡಿಯನ್ನಾಗಲಿ ವಕ್ರೀಕರಿಸಿಸುವ ಮತ್ತು ಪ್ರತಿಫಲಿಸುವ ಘಟಕಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯನ್ನಾಗಲಿ ಬಳಸಬಹುದು. ಈ ತರಹದ ಉಪಕರಣಕ್ಕೆ ಪ್ರತಿಫಲಿಸುವ ದೂರದರ್ಶಕವೆಂದು (ರಿಫ್ಲೆಕ್ಟಿಂಗ್ ಟೆಲಿಸ್ಕೋಪ್) ಹೆಸರು.
==ಜಗತ್ತಿನ ದೊಡ್ಡ ದೂರದರ್ಶಕಗಳು==
 
ಆಧುನಿಕ ಪದಾವಳಿಯಲ್ಲಿ ದೂರದರ್ಶಕ ಎನ್ನುವ ಪದ ಈ ಮುಂದಿನ ಎರಡು ಬಗೆಯವನ್ನು ಒಳಗೊಂಡಿದೆ : ದೃಗ್ದೂರದರ್ಶಕ (ಆಪ್ಟಿಕಲ್) ಮತ್ತು ರೇಡಿಯೊ. ಆದ್ದರಿಂದ ಸಂದರ್ಭದಿಂದ ಪದದ ಅರ್ಥ ಸ್ಪಷ್ಟವಾಗದೆ ಇರುವಲ್ಲಿ ದೃಗ್ದೂರದರ್ಶಕ ಯಾ ರೇಡಿಯೊ ದೂದರ್ಶಕ ಎಂದು ಖಚಿತವಾಗಿ ನಿರೂಪಿಸುವುದು ವಾಡಿಕೆ. ಪ್ರಸಕ್ತ ಲೇಖನದಲ್ಲಿ ದೃಗ್ದೂರದರ್ಶಕ ಅಥವಾ ಪ್ರಕಾಶೀಯ ದೂರದರ್ಶಕಗಳನ್ನು ಮಾತ್ರ ವಿವೇಚಿಸಿದೆ.
==ಚೀನಾದ ದೊಡ್ಡ ದೂರದರ್ಶಕ ಯೋಜನೆ==
*13 Jan, 2017:ಗುರುತ್ವದ ಅಲೆ ಪತ್ತೆಗೆ ಚೀನಾದಿಂದ ಮತ್ತೊಂದು ಯೋಜನೆ;
*ಚೀನಾ ದೇಶವು ವಿಶ್ವ ಸೃಷ್ಟಿಯ ರಹಸ್ಯ ತಿಳಿಸುವ ಬಿಗ್ ಬ್ಯಾಂಗ್ ಸಿದ್ಧಾಂತದ ಬೆನ್ನುಹತ್ತಿದೆ. ಸೃಷ್ಟಿ ಕಾಲದಲ್ಲಿ ಹೊರಹೊಮ್ಮಿದ ಗುರುತ್ವ ಅಲೆಗಳನ್ನು ಪತ್ತೆ ಹಚ್ಚಲು ಟಿಬೆಟ್‌ನ ಅತಿಎತ್ತರದ ಪ್ರದೇಶದಲ್ಲಿ ದೂರದರ್ಶಕ (ಟೆಲಿಸ್ಕೋಪ್) ನಿರ್ಮಾಣ ಕಾರ್ಯ ಆರಂಭಿಸಿದೆ.
==ಯೋಜನೆ ಹೆಸರು: ‘ಎನ್ಗರಿ ನಂ.1’==
*ಉದ್ದೇಶ: ಬ್ರಹ್ಮಾಂಡದ ಕ್ಷೀಣ ತರಂಗಾಂತರಗಳನ್ನು (ಅಲೆಗಳನ್ನು) ಪತ್ತೆ ಹಚ್ಚುವುದು. ಈ ಮೂಲಕ ಸೃಷ್ಟಿ ಉಗಮದ ರಹಸ್ಯ ತಿಳಿಯುವುದು.
*ಸ್ಥಳ: ಭಾರತ–ಚೀನಾ–ಟಿಬೆಟ್ ಗಡಿಯ ‘ಎನ್ಗರಿ’ ಪ್ರದೇಶದಲ್ಲಿ ನಿರ್ಮಾಣ
*ಸ್ಥಳ ಮಹತ್ವ: ಗುರುತ್ವದ ಅಲೆ ಪತ್ತೆಹಚ್ಚಲು ಉತ್ತರ ಗೋಳಾರ್ಧದಲ್ಲಿರುವ ಅತ್ಯುತ್ತಮ ಸ್ಥಳ ‘'''ಎನ್ಗರಿ'''’. ಇಲ್ಲಿ ಗಾಳಿ ವಿರಳವಾಗಿದ್ದು, ವಾತಾವರಣದ ತೇವಾಂಶ ಕೂಡಾ ಕಡಿಮೆಯಿರುವುದರಿಂದ ಅಲೆಗಳನ್ನು ಪತ್ತೆ ಹಚ್ಚಲು ಹೆಚ್ಚು ಅವಕಾಶವಿದೆ.
*ನಿರ್ಮಾಣ ವೆಚ್ಚ: ರೂ.127 ಕೋಟಿ (ಮೊದಲ ಟೆಲಿಸ್ಕೋಪ್)
* ನಿರ್ಮಾಣ ಅವಧಿ: 5 ವರ್ಷ
* ಎತ್ತರ: ಸಮುದ್ರಮಟ್ಟದಿಂದ 5000 ಅಡಿ ಎತ್ತರದಲ್ಲಿ ನಿರ್ಮಾಣ
 
==ಇತಿಹಾಸ==
==ಹಿನ್ನೆಲೆ==
ಕ್ರಿ.ಪೂ. 3500 ರಷ್ಟು ಪ್ರಾಚೀನ ಕಾಲದಲ್ಲಿಯೇ ಗಾಜಿನ ನಿರ್ಮಾಣ ಮನುಷ್ಯನಿಗೆ ತಿಳಿದಿತ್ತು. ಕ್ರೀಟ್ ಮತ್ತು ಏಷ್ಯ ಮೈನರ್ ಪ್ರದೇಶಗಳಲ್ಲಿ ನೆಲವನ್ನು ಅಗೆದಾಗ ಒರಟು ಮಸೂರಗಳು ದೊರೆತಿವೆ. ಇವು ಕ್ರಿ. ಪೂ. 2000 ವರ್ಷಗಳಷ್ಟು ಪ್ರಾಚೀನ ಕಾಲದವು ಎಂದು ನಂಬಲಾಗಿದೆ. ತರುವಾಯದ ವರ್ಷಗಳಲ್ಲಿ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಗುಣಗಳನ್ನು ಕುರಿತು ವ್ಯಾಪಕ ಪ್ರಯೋಗ ಮತ್ತು ಅಧ್ಯಯನಗಳು ನಡೆದುದಕ್ಕೆ ಉಲ್ಲೇಖಗಳು ದೊರೆತಿವೆ. ಉದಾಹರಣೆಗೆ ಕ್ರಿ.ಪೂ 3ನೆಯ ಶತಮಾನದಲ್ಲಿ ಯೂಕ್ಲಿಡ್ ಬೆಳಕಿನ ಗುಣಗಳನ್ನು ಕುರಿತು ಮಾಡಿರುವ ವಿವೇಚನೆಗಳು, ಕ್ರಿ.ಶ. 1 ನೆಯ ಶತಮಾನದಲ್ಲಿ ರೋಮ್‍ನಲ್ಲಿ ನಡೆದ ಸಂಶೋಧನೆಗಳು, ಕ್ರಿ.ಶ. 11ನೆಯ ಶತಮಾನದಲ್ಲಿ ಅರಬ್ಬೀ ವಿಜ್ಞಾನಿ ಅಲ್‍ಹನ್ಸಾನ್ ಇಬ್ನ್ ಅಲ್ ಹಯಾತನ್ ಪರವಲಯಾತ್ಮಕ ದರ್ಪಣಗಳನ್ನು ಕುರಿತು ನಡೆಸಿದ ಸಂಶೋಧನೆಗಳು ಮುಂತಾದವನ್ನು ಹೆಸರಿಸಬಹುದು. 11 ನೆಯ ಶತಮಾನದ ವೇಳೆಗೆ ಮಸೂರಗಳ ವರ್ಧನ ಸಾಮರ್ಥ್ಯದ (ಮ್ಯಾಗ್ನಿಫೈಯಿಂಗ್ ಪವರ್) ಬಗ್ಗೆ ವಿಜ್ಞಾನಿಗಳಿಗೆ ಚೆನ್ನಾಗಿ ಅರಿವು ಇತ್ತೆಂದು ಹೇಳಬಹುದು. ವರ್ಧಿಸುವ ಮಸೂರದ ಮೂಲಕ ದೂರದ ವಸ್ತುವನ್ನು ನೋಡುವುದೇ (ಆಗ ಅದು ದೊಡ್ಡದಾಗಿ ಹತ್ತಿರ ಬಂದಂತೆ ಭಾಸವಾಗುತ್ತದೆ) ದೂರದರ್ಶಕದ ತತ್ತ್ವವಾದ್ದರಿಂದ ಈ ಉಪಕರಣದ ಆಕಸ್ಮಿಕ ಉಪಜ್ಞೆ (ಇನ್‍ವೆನ್‍ಶನ್) 11ನೆಯ ಶತಮಾನದ ಸರಿಸುಮಾರಿಗೆ ಆಗಿರುವುದು ಸಂಭಾವ್ಯ. ಆದ್ದರಿಂದ ಹ್ಯಾನ್ಸ್‌ಲಿಪ್ಪರ್‍ಶೇ (ಸಂಯುಕ್ತ ನೆದರ್ಲೆಂಡ್ಸ್ ದೇಶಸ್ಥ) ಎಂಬಾತ ದೂರದರ್ಶಕದ ಪ್ರಥಮ ಉಪಜ್ಞೆಕಾರ (1608) ಎಂಬ ಪ್ರಚಲಿತ ಭಾವನೆ ಅಷ್ಟು ಸರಿ ಅಲ್ಲ. ಲಿಪ್ಪರ್‍ಶೇ ಸಾಕಷ್ಟು ಸಂಖ್ಯೆಯಲ್ಲಿ ದೂರದರ್ಶಕಗಳನ್ನು ತಯಾರಿಸಿ ಸಂಯುಕ್ತ ನೆದರ್ಲೆಂಡ್ಸ್ ಸರ್ಕಾರಕ್ಕೆ ಮಾರುತ್ತಿದ್ದ ಓರ್ವ ನಿರ್ಮಾಣಕಾರ ಮಾತ್ರ, ಅಷ್ಟೆ. ಈ ಉಪಕರಣದ ಏಕಸ್ವವನ್ನು 30 ವರ್ಷಗಳ ತನಕ ತನಗೆ ಕೊಡಬೇಕೆಂದು ಆತ ಸರ್ಕಾರವನ್ನು ಪ್ರಾರ್ಥಿಸಿಕೊಂಡಾಗ ಇದೇ ಉಪಜ್ಞೆಯ ಜ್ಞಾನ ಬೇರೆ ಹಲಮಂದಿಗೆ ಇತ್ತೆಂಬುದು ಸರ್ಕಾರಕ್ಕೆ ತಿಳಿದಿದ್ದುದರಿಂದ ಲಿಪ್ಪರ್‍ಶೇಯ ಪ್ರಾರ್ಥನೆಯನ್ನು ಅದು ಮನ್ನಿಸಲಿಲ್ಲ. 1609ರ ವೇಳೆಗೆ ದೂರರ್ಶಕಗಳು ಪ್ಯಾರಿಸಿನಲ್ಲಿಯೂ ಜರ್ಮನಿಯಲ್ಲಿಯೂ ಮಾರುಕಟ್ಟೆಗೆ ಬರಲಾರಂಭಿಸಿದ್ದುವು.
* ಗುರುತ್ವದ ಅಲೆ: ಗುರುತ್ವದ ಅಲೆಗಳ ಬಗ್ಗೆ 1915ರಲ್ಲಿ ಮೊಟ್ಟಮೊದಲು ಬೆಳಕು ಚೆಲ್ಲಿದವರು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌. ಸಾಮಾನ್ಯ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವದ ಅಲೆಗಳ ಬಗ್ಗೆ ಅವರು ವಿಶ್ಲೇಷಿಸಿದ್ದರು. ಎರಡು ಆಕಾಶಕಾಯಗಳ ಘರ್ಷಣೆಯಿಂದ ಗುರುತ್ವದ ಅಲೆಗಳು ಹೊರಹೊಮ್ಮುತ್ತವೆ ಎಂದು ಸಿದ್ಧಾಂತ ತಿಳಿಸುತ್ತದೆ.
 
ಆ ವೇಳೆ ವಿಖ್ಯಾತ ಭೌತಶಾಸ್ತ್ರವಿದನಾಗಿದ್ದ ಇಟಲಿಯ ಗೆಲಿಲಿಯೋ ಗೆಲಿಲೀ (1564-1642) ಲಿಪ್ಪರ್‍ಶೇ ದೂರದರ್ಶಕಗಳ ವಿಚಾರ ಕೇಳಿ ತಿಳಿದುಕೊಂಡು ಕೇವಲ ಒಂದೇ ದಿವಸದಲ್ಲಿ ಸ್ವತಃ ತಾನೇ ಒಂದು ದೂರದರ್ಶಕವನ್ನು ನಿರ್ಮಿಸಿದ. ಇದೊಂದು ತೆಳು ಸೀಸದ ನಳಿಗೆ. ಇದರ ಒಂದು ಕೊನೆಯಲ್ಲಿ ಪೀನ ಮಸೂರವೂ (ಕಾನ್ವೆಕ್ಸ್ ಲೆನ್ಸ್) ಇನ್ನೊಂದು ಕೊನೆಯಲ್ಲಿ ನಿಮ್ನ ಮಸೂರವೂ (ಕಾನ್‍ಕೇವ್ ಲೆನ್ಸ್) ಇದ್ದುವು. ಈ ದೂರದರ್ಶಕದ ವರ್ಧನ ಸಾಮರ್ಥ್ಯ 3 ಪಟ್ಟಾಗಿತ್ತು. ತನಗೆ ಲಭಿಸಿದ ಫಲಿತಾಂಶದಿಂದ ತುಂಬ ಉತ್ತೇಜಿತನಾದ ಗೆಲಿಲಿಯೊ ತಾನೇ ಮಸೂರಗಳನ್ನು ಅರೆದು ಇನ್ನಷ್ಟು ಉತ್ತಮವಾದ ದೂರದರ್ಶಕಗಳ ನಿರ್ಮಾಣಕ್ಕೆ ಕೈ ಹಾಕಿದ. ಅವನ ಅತ್ಯಂತ ದೊಡ್ಡದಾದ ಉಪಕರಣದ ವ್ಯಾಸ 1.75 ಇಂಚುಗಳು (ಸುಮಾರು 4.4 ಸೆಂ.ಮೀ). ಅದರ ವರ್ಧನ ಸಾಮರ್ಥ್ಯ 33 ಪಟ್ಟಾಗಿತ್ತು. ಈ ನಾಜೂಕಾದ ಉಪಕರಣಗಳ ನೆರವಿನಿಂದ ಆತ ಚಂದ್ರನ ಮೇಲ್ಮೈ ಸ್ವರೂಪವನ್ನು ಗುರುತಿಸಿದ; ಶುಕ್ರಗ್ರಹದ ಕಲೆಗಳನ್ನು (ಫೇಸಸ್) ಗಮನಿಸಿದ; ಹಾಗೂ ಗುರುಗ್ರಹದ ಉಪಗ್ರಹಗಳನ್ನು ಆವಿಷ್ಕರಿಸಿದ. ಅಲ್ಲದೇ ಆಕಾಶಗಂಗೆಯನ್ನು ವೀಕ್ಷಿಸಿ ಅದರಲ್ಲಿನ ಅಸಂಖ್ಯಾತ ನಕ್ಷತ್ರಗಳನ್ನು ನೋಡುವುದು ಕೂಡ ಅವನಿಗೆ ಸಾಧ್ಯವಾಯಿತು.
* ಮೊದಲು ಪತ್ತೆ: 2015ರಲ್ಲಿ ಅಮೆರಿಕದ ಲೈಗೊ (ಲೇಸರ್ ಇಂಟರ್‌ಫೆರೋಮೀಟರ್ ವೇವ್ ಅಬ್ಸರ್ವೇಟರಿ) ಮೊಟ್ಟ ಮೊದಲ ಬಾರಿಗೆ ಗುರುತ್ವದ ಅಲೆಗಳನ್ನು ಪತ್ತೆಹಚ್ಚಿತ್ತು. 130 ಕೋಟಿ ವರ್ಷಗಳ ಹಿಂದೆ ಎರಡು ಕಪ್ಪುರಂಧ್ರಗಳು ಸಮ್ಮಿಲನ ಹೊಂದಿದಾಗ ಉಂಟಾದ ಅಲೆಗಳು ಇವು. ಐನ್‌ಸ್ಟೀನ್‌ ತನ್ನ ಸಿದ್ಧಾಂತ ಮಂಡಿಸಿದ 100 ವರ್ಷಗಳ ಬಳಿಕ ಗುರುತ್ವದ ಅಲೆಗಳನ್ನು ಪತ್ತೆಹಚ್ಚಲಾಗಿತ್ತು.
 
ದೂರದರ್ಶಕದ ಉಪಜ್ಞೆ ವಿಜ್ಞಾನ ಪ್ರಪಂಚದಲ್ಲಿ ತರಂಗಗಳನ್ನು ಎಬ್ಬಿಸಿತು. ಭೂಕೇಂದ್ರವಾದಕ್ಕೆ ಕೊನೆಯ ಪ್ರಹಾರವನ್ನು ನೀಡುವಲ್ಲಿ ಇದರ ಪಾತ್ರ ಕಡಿಮೆಯದೇನೂ ಅಲ್ಲ. 17ನೆಯ ಶತಮಾನದಿಂದ ಮುಂದಕ್ಕೆ ದೂರದರ್ಶಕಗಳು ಗಾತ್ರದಲ್ಲಿಯೂ ಸಾಮರ್ಥ್ಯದಲ್ಲಿಯೂ ಕ್ರಮೇಣ ಅಭಿವರ್ಧಿಸತೊಡಗಿದುವು. ನಿರ್ಮಾಣವೆಚ್ಚ ಕೂಡ ಜೊತೆಯಲ್ಲಿಯೇ ಏರುತ್ತಿತ್ತು. ಆದರೆ ಒಂದೊಂದೂ ಹೊಸ ದೂರದರ್ಶಕ ನಿರ್ಮಾಣದೊಂದಿಗೆ ವಿಶ್ವದ ಅತಿ ದೂರದ ನಿಗೂಢ ರಹಸ್ಯಗಳು ಬಯಲಾಗುತ್ತಿದ್ದುದರಿಂದ ಇದೊಂದು ಅಪರಿಮಿತ ಸಾಧ್ಯತೆಗಳ ಹೊಸ ಕ್ಷೇತ್ರವಾಯಿತು.
* ಸೃಷ್ಟಿ ರಹಸ್ಯ ಅರಿಯುವ ಯತ್ನ: ಬಿಗ್‌ ಬ್ಯಾಂಗ್ ಸಿದ್ಧಾಂತದ ಪ್ರಕಾರ, 1380 ಕೋಟಿ ವರ್ಷಗಳ ಹಿಂದೆ ಜಗತ್ತಿನ ಸೃಷ್ಟಿ ವೇಳೆ ಬಿಡುಗಡೆಯಾದ ಅಲೆಗಳನ್ನು (ಈಗ ಕ್ಷೀಣ ಸ್ವರೂಪದ ಅಲೆಗಳು) ಪತ್ತೆಹಚ್ಚುವುದು ಟಿಬೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಟೆಲಿಸ್ಕೋಪ್ ಉದ್ದೇಶ ಎಂದು ಚೀನಾ ವಿಜ್ಞಾನ ಅಕಾಡೆಮಿ (ಸಿಎಎಸ್‌) ತಿಳಿಸಿದೆ.
 
==ಬಗೆಗಳು==
* 2015ರಲ್ಲಿ ಮೊದಲ ಯೋಜನೆ: ಗುರುತ್ವದ ಅಲೆ ಪತ್ತೆ ಹಚ್ಚಲು ಚೀನಾ 2015ರಲ್ಲಿ ಟಿಯಾಂಕ್ವಿನ್‌ನಲ್ಲಿ ಮೊದಲ ಯೋಜನೆ ಆರಂಭಿಸಿತ್ತು. ನಾಲ್ಕು ಹಂತಗಳ ಈ ಯೋಜನೆಯಲ್ಲಿ ಉನ್ನತ ಭೂಕಕ್ಷೆಗೆ ಮೂರು ಉಪಗ್ರಹಗಳನ್ನು ಕಳುಹಿಸಲಾಗುತ್ತದೆ.
ಪ್ರಕಾಶೀಯ ದೂರದರ್ಶಕಗಳಲ್ಲಿ ಎರಡು ಬಗೆ: ವಕ್ರೀಕರಿಸುವಂಥವು ಮತ್ತು ಪ್ರತಿಫಲಿಸುವಂಥವು. ಆಧುನಿಕ ದಿವಸಗಳಲ್ಲಿ ಇವೆರಡರ ಸಂಯೋಜನೆಯನ್ನೂ ಯೋಜಿಸಲಾಗಿದೆ.
<ref>{{Cite web |url=http://www.prajavani.net/news/article/2017/01/13/465472.html |title=ವಿಶ್ವದ ಅತಿ ಎತ್ತರದ ಟೆಲಿಸ್ಕೋಪ್;ಪಿಟಿಐ;13 Jan, 2017 |access-date=2017-01-13 |archive-date=2017-01-13 |archive-url=https://web.archive.org/web/20170113161316/http://www.prajavani.net/news/article/2017/01/13/465472.html |url-status=dead }}</ref>
 
<ref>[http://www.ndtv.com/world-news/china-to-set-up-worlds-highest-altitude-telescopes-in-tibet-1646198 China To Set Up World's Highest Altitude Telescopes In Tibet World | Press Trust of India | Updated: January 07, 2017 17]</ref>
'''ವಕ್ರೀಕರಿಸುವ ದೂರದರ್ಶಕಗಳು''' : ಮಸೂರ ಬೆಳಕಿನ ದಿಶೆಯಲ್ಲಾಗುವ ಪಲ್ಲಟಕ್ಕೆ ಬೆಳಕಿನ ವಕ್ರೀಕರಣ ಎಂದು ಹೆಸರು. ಗೆಲಿಲಿಯನ್ ದೂರದರ್ಶಕದಲ್ಲಿನ ದೊಡ್ಡ ಮಸೂರ ಪೀನವಾಗಿದೆ; ಇದಕ್ಕೆ ದೃಶ್ಯಕ ಗಾಜು ಎಂದು ಹೆಸರು. ದೃಶ್ಯಕ ಗಾಜಿನ ನಾಭಿಯ (ಫೋಕಸ್) ಎದುರು (ನಾಭಿಗೂ ಅಭಿದೃಶ್ಯಕಕ್ಕೂ ನಡುವೆ) ನೇತ್ರಕವನ್ನು ಇಡಲಾಗುವುದು. ಇದು ನಿಮ್ನವಾಗಿದೆ. ಮಸೂರಗಳ ಈ ಸಂಯೋಜನೆಯಿಂದ ಮೈದಳೆವ ಪ್ರತಿಬಿಂಬ ಲಂಬಿತವಾಗಿರುವುದು ಮತ್ತು ನೆಟ್ಟಗಿರುವುದು. ಇದರಲ್ಲಿ ಲಂಬನ ಹಾಗೂ ದೃಷ್ಟಿ ಕ್ಷೇತ್ರ ಪರಿಮಿತವಾಗಿರುವುವು. ಗೆಲಿಲಿಯನ್ ದೂರದರ್ಶಕದ ಸುಧಾರಿತ ರೂಪಕ್ಕೆ ಕೆಪ್ಲೀರಿಯನ್ ದೂರದರ್ಶಕವೆಂದು ಹೆಸರು. ಇದರಲ್ಲಿ, ಕೆಪ್ಲರನ ಸೂಚನೆಯ ಪ್ರಕಾರ, ನಾಭಿಯ ಹಿಂದೆ (ದೃಶ್ಯಕ-ನಾಭಿ ರೇಖೆಯನ್ನು ಇದೇ ಕ್ರಮದಲ್ಲಿ ಮುಂದುವರಿಸಬೇಕು) ಪೀನ ನೇತ್ರಕವೊಂದನ್ನು ಇಡಲಾಗುವುದು. ಇದರಿಂದ ದೃಷ್ಟಿ ಕ್ಷೇತ್ರ ತುಂಬ ವಿಶಾಲಗೊಳ್ಳುತ್ತದೆ. ಇಲ್ಲಿ ದೊರೆಯುವ ಪ್ರತಿಬಿಂಬ ತಲೆಕೆಳಗಾಗಿರುವುದು ಸಹಜ ಏಕೆಂದರೆ ಇದು ದೃಶ್ಯಕ ಠಿಯಲ್ಲಿ ಮೂಡಿಸುವ ತಲೆಕೆಳಗು ಪ್ರತಿಬಿಂಬದ ಲಂಬನ. ಇನ್ನಷ್ಟು ಸೂಕ್ತ ಮಸೂರಗಳನ್ನು ಯುಕ್ತವಾಗಿ ಅಳವಡಿಸುವುದರ ಮೂಲಕ ನೇರ ಪ್ರತಿಬಿಂಬವನ್ನೇನೊ ಪಡೆಯಬಹುದು; ಆದರೆ ಈ ಹೊಸ ಮಸೂರಗಳ ಹೀರಿಕೆಯಿಂದ ಉಂಟಾಗುವ ಬೆಳಕಿನ ನಷ್ಟ ಮಾತ್ರ ಗಣನೀಯವಾಗಿರುತ್ತದೆ. ಕೆಪ್ಲೀರಿಯನ್ ದೂರದರ್ಶಕದಲ್ಲಿ ಸುಮಾರು, 1,000 ಪಟ್ಟು ಯಾ ಹೆಚ್ಚು ಲಂಬನವನ್ನು ಪಡೆಯಬಹುದು. ಇದರ ಉಭಯ ಮಸೂರಗಳ ಸಾಮಾನ್ಯ ನಾಭಿಯಲ್ಲಿ ಒಂದು ಚಿಕ್ಕ ವಸ್ತುವನ್ನು (ಉದಾಹರಣೆಗೆ ತೆಳು ತಂತಿ ಯಾ ತಂತಿಗಳು) ಇಡಬಹುದು. ಈಗ, ನೇತ್ರಕದಲ್ಲಿ ಕಾಣುವ ಒಂದು ನಕ್ಷತ್ರದ ಪ್ರತಿಬಿಂಬವನ್ನು P ಯಲ್ಲಿರುವ ಎರಡು ಅಡ್ಡ ತಂತಿಗಳ ಸಂಧಿ ಬಿಂದುವಿನಲ್ಲಿ ಕರಾರುವಾಕ್ಕಾಗಿ ಐಕ್ಯವಾಗುವಂತೆ ಮಾಡಿ ಖಗೋಳ ವಿಜ್ಞಾನಿ ದೂರದರ್ಶಕದ ಸ್ಥಾನವನ್ನೂ ನಕ್ಷತ್ರದ ಸ್ಥಾನವನ್ನೂ ತುಂಬ ನಿಖರವಾಗಿ ನಿರ್ಧರಿಸುವುದು ಸಾಧ್ಯ. ಈ ಸೌಕರ್ಯದ ತತ್ತ್ವವನ್ನು ಆಧರಿಸಿ ಸೂಕ್ಷ್ಮ ಮಾಪಕದ (ಮೈಕ್ರೋಮೀಟರ್) ಅಭಿವರ್ಧನೆ ಆಯಿತು. 1640 ರ ಸುಮಾರಿಗೆ ಸೂಕ್ಷ್ಮಮಾಪಕದ ಬಳಕೆಯಿಂದ ಗ್ರಹವ್ಯಾಸಗಳನ್ನು ಅಳೆಯುವ ತಂತ್ರಸಿದ್ಧಿಸಿತ್ತು.
 
ಖಗೋಳೀಯ ದೂರದರ್ಶಕದ ಲಂಬನ ಸಾಮಥ್ರ್ಯವನ್ನು (ಒ) ದೃಶ್ಯಕದ (ಈ) ಹಾಗೂ ನೇತ್ರಕದ (ಜಿ) ನಾಭೀ ಉದ್ದಗಳ ನಿಷ್ಪತ್ತಿ ಎಂದು ವ್ಯಾಖ್ಯಿಸುತ್ತೇವೆ; ಒ = ಈ/ಜಿ. ಮಸೂರದ ನಾಭೀ ಉದ್ದ ಸರಿಸುಮಾರಾಗಿ, ಪ್ರಧಾನ ನಾಭಿಯಿಂದ ಮಸೂರದ ಮಧ್ಯ ಬಿಂದುವಿನ ವರೆಗೆ ದೂರವಾದ್ದರಿಂದ ಚಿಕ್ಕ ನಾಭೀಉದ್ದವಿರುವ ನೇತ್ರಕವನ್ನು (ಜಿ) ಉಪಯೋಗಿಸಿ ಲಂಬನವನ್ನು ವರ್ಧಿಸುವುದು ಸಾಧ್ಯ. ಸಾಧಾರಣವಾಗಿ ಒಬ್ಬ ಖಗೋಳ ವಿಜ್ಞಾನಿಯ ಸಂಗ್ರಹದಲ್ಲಿ, ಬೇರೆ ಬೇರೆ ಸನ್ನಿವೇಶಗಳನ್ನು ಎದುರಿಸಲು ಅನುವಾಗುವಂತೆ, ವಿವಿಧ ನೇತ್ರಕಗಳಿರುವುವು. ಆದರೆ ಉಚ್ಚತರ ಲಂಬನವನ್ನೇ ನಾವು ಬಯಸುವುದಾದರೆ ಆಗ ಕ್ರಮೇಣ ದೃಷ್ಟಿಕ್ಷೇತ್ರ ಸಂಕುಚಿತವಾಗುತ್ತದೆ. ಆದ್ದರಿಂದ ಇಲ್ಲೆಲ್ಲ ವರ್ತಮಾನ ಸನ್ನಿವೇಶವನ್ನು ಅನುಲಕ್ಷಿಸಿ ಮಧ್ಯಮಾರ್ಗವೊಂದನ್ನು ಅನುಸರಿಸುವುದು ಕ್ಷೇಮ.
 
ವಕ್ರೀಕಾರಕಗಳನ್ನು (ರಿಫ್ರ್ಯಾಕ್ಟರ್ಸ್) ಉಪಯೋಗಿಸುತ್ತಿದ್ದ ಮೊದಲ ಖಗೋಳ ವಿಜ್ಞಾನಿಗಳು ಪ್ರತಿಬಿಂಬದಲ್ಲಿ ತೀವ್ರವಾದ ದೋಷವನ್ನು ಗಮನಿಸುತ್ತಿದ್ದರು. ಇದು ಮಸೂರಗಳ ಪರಿಣಾಮ ಅಲ್ಲ ಎಂಬುದನ್ನು ಅವರು ಬೇಗನೆ ಕಂಡುಕೊಂಡರು. ವಾಸ್ತವವಾಗಿ ಇದು ವರ್ಣ ವಿಪಥನ (ಕ್ರೊಮ್ಯಾಟಿಕ್ ಅಬರೇಶನ್) ಎಂಬ ಹೆಸರಿನ ಪ್ರತಿಬಿಂಬ ದೋಷದ ಪರಿಣಾಮ. ಬೆಳಕು ಎಂಬ ಶಕ್ತಿ ವಿವಿಧ ಆವರ್ತಾಂಕಗಳ (ಫ್ರೀಕ್ವೆನ್ಸೀಸ್) ಸಂಕಲನವಷ್ಟೆ. ಆದ್ದರಿಂದ ಇದು ಮಸೂರದಲ್ಲಿ ವಕ್ರೀಕರಣಕ್ಕೆ ಒಳಪಟ್ಟಾಗ ಬೇರೆ ಬೇರೆ ಆವರ್ತಾಂಕದ ಬಾಗು ಬೇರೆ ಬೇರೆ ಆಗಿ ವಕ್ರೀಕೃತ ಬೆಳಕು ಒಂದು ಬಿಂದುವಿನಲ್ಲಿ (ನಾಭಿಯಲ್ಲಿ) ಸಂಗಮಿಸುವುದರ ಬದಲಾಗಿ ಸ್ವಲ್ಪ ಆಚೆ ವ್ಯಾಪಿಸಿರುತ್ತದೆ. ಅಂದರೆ ಅದರ ವರ್ಣಗಳಲ್ಲಿ ಹರಡಿಕೆ ತಲೆದೋರಿರುತ್ತದೆ. ವಾಸ್ತವವಾಗಿ ನೇರಿಳೆಯ ಬಾಗು ಅತಿ ಹೆಚ್ಚು, ಕೆಂಪಿನ ಬಾಗು ಅತಿ ಕಡಿಮೆ, ಉಳಿದವುಗಳು ಇವುಗಳ ನಡುವೆ. ಹೀಗಾಗಿ ಕೆಂಪು ಸಂಗಮಿಸುವ ಬಿಂದುವಿನ ಸಮೀಪ ದೃಷ್ಟಿಸಿದ ನಕ್ಷತ್ರ ಆ ಬಿಂದುವಿನಿಂದ ಹೊರಗಿನ ಒಂದು ನೀಲ ಪ್ರಭಾವಲಯವನ್ನೂ ನೀಲ ಸಂಗಮಿಸುವ ಬಿಂದುವಿನ ಸಮೀಪ ದೃಷ್ಟಿಸಿದ ನಕ್ಷತ್ರ ಆ ಬಿಂದುವಿನಿಂದ ಹೊರಗಿನ ಒಂದು ಕೆಂಪು ಪ್ರಭಾವಲಯವನ್ನೂ ಪ್ರದರ್ಶಿಸುವುವು. ಈ ವಿದ್ಯಮಾನವೇ ವರ್ಣವಿಪಥನ. ಬಲು ತೆಳು ಮಸೂರಗಳ ಬಳಕೆಯಿಂದ ಇದನ್ನು ಕಮ್ಮಿ ಮಾಡಬಹುದು. ಆದರೆ ಇಂಥ ಮಸೂರಗಳ ನಾಭೀಉದ್ದಗಳು ಸಾಕಷ್ಟು ಹೆಚ್ಚಾಗಿರುವುದರಿಂದ ದೂದರ್ಶಕದ ಉದ್ದವೂ ಸಹಜವಾಗಿ ಮಿತಿಮೀರುತ್ತದೆ (ಉದಾಹರಣೆಗಳು 200 ಅಡಿಗಳಿಗಿಂತಲೂ ಹೆಚ್ಚು). ಇಂಗ್ಲಿಷ್ ಖಗೋಳ ವಿಜ್ಞಾನಿ ಜೇಮ್ಸ್ ಬ್ರಾಡ್ಲೆ ಶುಕ್ರದ ವ್ಯಾಸವನ್ನು ಅಳೆಯಲು (1722) ಬಳಸಿದ ದೂರದರ್ಶಕ ಮಸೂರದ ನಾಭೀಉದ್ದ 212 ಅಡಿಗಳಾಗಿದ್ದುವು. ವರ್ಣವಿಪಥನರಹಿತ ದೂರದರ್ಶಕವನ್ನು 1726ರ ಸುಮಾರಿಗೆ ಎಸ್ಸೆಕ್ಸಿನ ಚೆಸ್ಟರ್ ಮೂರ್‍ಹಾಲ್ ಎಂಬಾತ ಯಶಸ್ವಿಯಾಗಿ ನಿರ್ಮಿಸಿದ. ಮನುಷ್ಯನ ಕಣ್ಣುಗಳಲ್ಲಿಯೂ ಇರುವುದು ಮಸೂರವೇ; ಆದರೆ ಇದು ವರ್ಣವಿಪಥನವನ್ನು ಪ್ರದರ್ಶಿಸದ ಸಂಕೀರ್ಣ ಮಸೂರ. ಇಂಥ ಮಸೂರದ ರಚನೆ ಸಾಧ್ಯವಾಗಬೇಕು ಎಂಬುದಾಗಿ ಚೆಸ್ಟರ್‍ಮೂರ್ ದಾಲ್ ಸಕಾರಣವಾಗಿ ತರ್ಕಿಸಿ ಬೇರೆ ಬೇರೆ ಬಗೆಯ ಗಾಜುಗಳನ್ನು ಉಪಯೋಗಿಸಿ ಸಂಕೀರ್ಣ ಮಸೂರವನ್ನು ತಯಾರಿಸಿ ಮೊದಲ ಅವರ್ಣೀ (ಅಕ್ರೊಮ್ಯಾಟಿಕ್) ದೂರದರ್ಶಕವನ್ನು ರಚಿಸಿದ (1773). ಕ್ರೌನ್ ಗಾಜು ಮಸೂರ ಮತ್ತು ಫ್ಲಿಂಟ್ ಗಾಜು ಮಸೂರಗಳ ಸಂಗಮ ಈ ಸಂಕೀರ್ಣ ಅವರ್ಣೀ ಮಸೂರ. ಬಿಡಿ ಮಸೂರಗಳ ರಿಫ್ರೇಕ್ಷಣಾಂಕಗಳ ವಿಶೇಷ ಹೊಂದಾಣಿಕೆಯ ಪರಿಣಾಮವಾಗಿ ವರ್ಣವಿಪಥನ ರದ್ದಾಗಿ ಹೋಗುವುದು. (ಇಲ್ಲೂ ಪೂರ್ತಿ ರದ್ದಾಗುವುದೆಂದೇನೂ ಭಾವಿಸಲಾಗದು). ಲಂಡನ್ನಿನ ಜಾನ್ ಡೋಲಂಡ್ ಸ್ವತಂತ್ರವಾಗಿ 1758 ರಲ್ಲಿ ಉಪಜ್ಞಿಸಿದ ಅವರ್ಣೀ ದೂರದರ್ಶಕ ತುಂಬ ಜನಪ್ರಿಯವಾಯಿತು. ಆದರೆ ಇದರ ಮಸೂರ ವ್ಯಾಸ 4 ಇಂಚುಗಳಿಗೆ ಸೀಮಿತವಾಗಿತ್ತು. ಏಕೆಂದರೆ ದೊಡ್ಡ ಗಾತ್ರದ ಫ್ಲಿಂಟ್ ಗಾಜಿನ ಬಿಲ್ಲೆಗಳನ್ನು ಎರಕ ಹುಯ್ಯುವುದು ಹೇಗೆಂದು ಆಗ ತಿಳಿದಿರಲಿಲ್ಲ. ಕ್ರಮೇಣ ಸಂಶೋಧನೆ ಮುಂದುವರಿದಂತೆ ಈ ಅಡ್ಡಗೋಡೆಯನ್ನು ದಾಟಿ ದೊಡ್ಡ ದೊಡ್ಡ ಮಸೂರಗಳ ನಿರ್ಮಾಣ ಸಾಧ್ಯವಾಯಿತು. 19 ನೆಯ ಶತಮಾನದ ಕೊನೆಗೆ ಲಿಕ್ ವೇಧಶಾಲೆಯಲ್ಲಿ 36-ಇಂಚಿನ ವಕ್ರೀಕರಿಸುವ ದೂರದರ್ಶಕವೂ ಯಕ್ರ್ಸ್ ವೇದ ಶಾಲೆಯಲ್ಲಿ 30-ಇಂಚಿನ ವಕ್ರೀಕರಿಸುವ ದೂರದರ್ಶಕವೂ ಇದ್ದುವು.
 
'''ಪ್ರತಿಫಲಿಸುವ ದೂರದರ್ಶಕಗಳು''' : ಬೆಳಕನ್ನು ಕನ್ನಡಿ ಪ್ರತಿಫಲಿಸುವ ಕ್ರಿಯೆಗೆ ಬೆಳಕಿನ ಪ್ರತಿಫಲನ ಎಂದು ಹೆಸರು. ಆದ್ದರಿಂದ ಪ್ರತಿಫಲಿಸುವ ದೂರದರ್ಶಕದ ಮುಖ್ಯ ಭಾಗ ಕನ್ನಡಿ, ಮಸೂರ ಅಲ್ಲ. ಈ ದೂರದರ್ಶಕದಲ್ಲಿ ಪ್ರಾಥಮಿಕ ನಿಮ್ನ ದರ್ಪಣವೊಂದು ದೂರದ ಅಭಿದೃಶ್ಯಕದಿಂದ (ಆಬ್ಜಕ್ಟ್) ಬರುವ ಬೆಳಕನ್ನು ಪ್ರತಿಫಲಿಸಿ ನಾಭೀಯಲ್ಲಿ ಒಗ್ಗೂಡಿಸುವುದು. ಇದನ್ನು ಇನ್ನೊಂದು ದ್ವಿತೀಯಕ (ಮತ್ತು ಕಿರಿದಾದ) ನಿಮ್ನ ದರ್ಪಣ ಪುನಃ ಪ್ರತಿಫಲಿಸುತ್ತದೆ. ಈ ಬೆಳಕು ಪ್ರಾಥಮಿಕದಲ್ಲಿರುವ ವರ್ತುಳೀಯ ರಂಧ್ರದ ಮೂಲಕ ವೀಕ್ಷಕನ ಕಣ್ಣುಗಳನ್ನು ತಲಪುವುದು. ಇದು ಗ್ರೆಗೊರಿ ಮಾದರಿಯ ದೂರದರ್ಶಕ. ಪ್ರತಿಫಲಿಸುವ ದೂರದರ್ಶಕದಲ್ಲಿ ಬೆಳಕು ವಕ್ರೀಕರಿಸಲ್ಪಡುವುದಿಲ್ಲವಾದ್ದರಿಂದ ವರ್ಣವಿಪಥನದ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಇಲ್ಲಿ ಪ್ರತಿಫಲಕಗಳು ಮಾತ್ರ ಬಲು ಪರಿಷ್ಕಾರವಾಗಿರಬೇಕಾದದ್ದು ಅತ್ಯಗತ್ಯ. ಇಂಥ ಕನ್ನಡಿಗಳ ನಿರ್ಮಾಣ ಮತ್ತು ಅರೆತಕ್ಕೆ ಬೇಕಾದ ಮಾಹಿತಿಯನ್ನು ನ್ಯೂಟನ್ ಒದಗಿಸಿದ; ಟನ್ ಮತ್ತು ತಾಮ್ರದ ಮಿಶ್ರಲೋಹದಿಂದ (ಸ್ಪೆಕ್ಯುಲಮ್ ಮಿಶ್ರಲೋಹವೆಂದು ಇದರ ಹೆಸರು) ಪ್ರತಿಫಲಗಳ ತಯಾರಿಕೆಯನ್ನು ಅವನು ಸೂಚಿಸಿದ. ನ್ಯೂಟನ್‍ಮಾದರಿಯ ಈ ದೂರದರ್ಶಕದ ತತ್ತ್ವವಿಷ್ಟು. ಇದರಲ್ಲಿನ ದರ್ಪಣ ಹೆಚ್ಚು ಗೋಳೀಯವಾಗಿದೆ. ದೂರದರ್ಶಕದ ಕೊಳವೆಯ ಮೇಲುಕೊನೆಯಲ್ಲಿ ಮಟ್ಟಸ ಕನ್ನಡಿಯನ್ನು 450 ಬಾಗುವಿನಲ್ಲಿ ಜೋಡಿಸಿದೆ. (ಚಿತ್ರ. 2). ಇದರ ನೆರವಿನಿಂದ ಕೊಳವೆಯ ಪಾಶ್ರ್ವದ ಮೂಲಕ ವೀಕ್ಷಕ ಪ್ರತಿಬಿಂಬವನ್ನು ಕ್ಷಿತಿಜೀಯವಾಗಿ ದೃಷ್ಟಿಸುತ್ತಾನೆ. 1672 ರ ಜನವರಿ 11ರಂದು ನ್ಯೂಟನ್ ರಾಯಲ್ ಸೊಸೈಟಿಗೆ ಒಂದು ದೂರದರ್ಶಕವನ್ನು ಬಹುಮಾನಿಸಿದ. ಇದರ ಲಂಬನ ಸಾಮರ್ಥ್ಯ 38 ವ್ಯಾಸಗಳು; ಸ್ಪೆಕ್ಯುಲಮ್ ಮಿಶ್ರಲೋಹ ದರ್ಪಣದ ನಾಭೀಉದ್ದ 6 1/3 ಇಂಚುಗಳು ಮತ್ತು ವ್ಯಾಸ ಸುಮಾರು 2 ಇಂಚುಗಳು. 1740ರ ವೇಳೆಗೆ ಪ್ರತಿಫಲಗಳು (ಅಂದರೆ, ಪ್ರತಿಫಲಿಸುವ ದೂರದರ್ಶಕಗಳು) ವ್ಯಾಪಕವಾಗಿ ಮಾರುಕಟ್ಟೆಗಳಲ್ಲಿ ಬಿಕರಿಗೆ ಬಂದಿದ್ದುವು. ಹವ್ಯಾಸೀ ವೀಕ್ಷಕರಲ್ಲಿ ಇವು ತುಂಬ ಜನಪ್ರಿಯವಾದುವು. ದರ್ಪಣಗಳಿಗೆ ಮಾಪನೋಪಕರಣಗಳನ್ನು ಲಗತ್ತಿಸುವುದು ಕಷ್ಟವಾದ್ದರಿಂದ ತಾಂತ್ರಿಕ ವ್ಯವಹಾರಗಳಲ್ಲಿ ತಜ್ಞರು ವಕ್ರೀಕಾರಕಗಳನ್ನೇ (ಅಂದರೆ ವಕ್ರೀಕರಿಸುವ ದೂರದರ್ಶಕಗಳು) ಉಪಯೋಗಿಸುತ್ತಿದ್ದರು.
 
ಇಂಗ್ಲೆಂಡಿನ ವಿಲಿಯಂ ಹರ್ಷಲ್ (1738-1822) ಎಂಬ ಖಗೋಳವಿಜ್ಞಾನಿ ಪ್ರತಿಫಲಿಸುವ ದರ್ಪಣಗಳನ್ನು ಸ್ವಂತವಾಗಿ ಮಾಡಿ ದೂರದರ್ಶಕಗಳನ್ನು ತಯಾರಿಸುತ್ತಿದ್ದ. 7-ಇಂಚ್ ಪ್ರತಿಫಲಕದ ನೆರೆವಿನಿಂದ ಅವನು 1781 ರಲ್ಲಿ ಯುರೇನಸ್ ಗ್ರಹವನ್ನು ಆವಿಷ್ಕರಿಸಿ ಖಗೋಳವಿಜ್ಞಾನದಲ್ಲಿ ದಾಖಲೆ ಸ್ಥಾಪಿಸಿದ. ಯುರೇನಸಿನ ಬಿಂಬವನ್ನೇ ಕಾಣುವುದು ಸಾಧ್ಯವಾಗಿತ್ತು. ಆತನ ಸುಪ್ರಸಿದ್ಧ ದೂರದರ್ಶಕಗಳೆಂದರೆ 19-ಇಂಚ್ ಬೆಳಕುಕಂಡಿಯದು (ಅಪೆರ್ಚರ್) ಮತ್ತು 48-ಇಂಚ್ ಬೆಳಕು ಕಂಡಿಯದು (1789). ಸ್ಪೆಕ್ಯುಲಮ್ ಮಿಶ್ರ ಲೋಹದಿಂದ ತಯಾರಿಸಲಾದ ಅತಿ ದೊಡ್ಡ ದರ್ಪಣ 72-ಇಂಚಿನದು (1845).
 
ಪ್ರತಿಫಲಕಗಳಲ್ಲಿನ ಒಂದು ಸಮಸ್ಯೆ ಎಂದರೆ ಸ್ಪೆಕ್ಯುಲಮ್ ದರ್ಪಣ. ಇದರ ಮೇಲೆ ಬಿದ್ದ ಬೆಳಕಿನ 60% ಅಂಶವನ್ನು ಮಾತ್ರ ಇದು ಪ್ರತಿಫಲಿಸಬಲ್ಲುದು-ಅದೂ ದರ್ಪಣ ಒಂದಿನಿತೂ ಮಸಕಾಗಿರದೆ ತುಂಬ ಮೆರುಗಿನಿಂದ ಕೂಡಿರುವಾಗ. ಈ ಆದರ್ಶ ಸನ್ನಿವೇಶವನ್ನು ವಾಸ್ತವಿಕವಾಗಿ ಪಡೆಯುವುದು ಬಲುಕಷ್ಟ. ಮಿಶ್ರ ಲೋಹದ ಮೇಲ್ಮೈ ಬಲು ಬೇಗನೆ ಮಸಕಾಗಿ ಅದಕ್ಕೆ ಮತ್ತೆ ಮೆರುಗು ನೀಡಲು ತುಂಬ ಶ್ರಮಪಡಬೇಕಾಗುತ್ತದೆ. ಇದಕ್ಕೆ ಪರಿಹಾರ ಗಾಜಿನ ಮೇಲೆ ಬೆಳ್ಳಿ ಲೇಪಿಸಿ ಸಿದ್ಧಪಡಿಸಿದ ಕನ್ನಡಿ. ಇದು 1850-60ರ ವೇಳೆಗೆ ಅಸ್ತಿತ್ವಕ್ಕೆ ಬಂತು. ಇಂಥ ಒಂದು ಮೇಲ್ಮೈಯ ಪ್ರತಿಫಲನೀಯತೆ 90% ಇರುವುದು. ಅಲ್ಲದೆ ಮಾಸಿದಾಗ ಇದಕ್ಕೆ ಮತ್ತೆ ಮೆರುಗು ನೀಡುವುದು ಅಷ್ಟೇನೂ ಕಷ್ಟದ ಕೆಲಸ ಅಲ್ಲ. ಈ ಮಾದರಿಯ ದರ್ಪಣಗಳಲ್ಲಿಯೂ ಸುಧಾರಣೆಗಳಾಗಿವೆ. ಉದಾಹರಣೆಗೆ ದರ್ಪಣದ ಮೇಲೆ ಅಲ್ಯೂಮಿನಿಯಮನ್ನು ನಿರ್ವಾತದಲ್ಲಿ ನಿಕ್ಷೇಪಿಸುವಂಥ ತಂತ್ರವನ್ನು 1931ರಲ್ಲಿ ಅಭಿವರ್ಧಿಸಲಾಯಿತು. ಇಂಥ ದರ್ಪಣಕ್ಕೆ ಅತಿನೇರಿಳೆಯಲ್ಲಿ ಉಚ್ಚ ಪ್ರತಿಫಲನೀಯತೆ ಉಂಟು; ಇದರಲ್ಲಿ ಚದರಿಕೆಯಿಂದ ಬೆಳಕು ನಷ್ಟಗೊಳ್ಳುವುದು ಬಲು ಕಡಿಮೆ; ಮತ್ತು ಇದರ ಮೇಲ್ಮೈಯನ್ನು ಚೆನ್ನಾಗಿ ಕಾಪಾಡಿಕೊಂಡು ಬಂದರೆ ಇದು ಸಾಕಷ್ಟು ದೀರ್ಘಕಾಲ ಹಾಳಾಗದೆ ಉಳಿಯಬಲ್ಲುದು.
 
'''ವಕ್ರೀಕಾರಕಗಳ ಮತ್ತು ಪ್ರತಿಫಲಕಗಳ ಸಾಪೇಕ್ಷ ಸೌಕರ್ಯಗಳು''' : ದೂರದರ್ಶಕದ ಈ ಎರಡು ಬಗೆಗಳಲ್ಲಿಯೂ ಈಗ ಅತ್ಯುಚ್ಚ ಮಟ್ಟದ ಪರಿಷ್ಕರಣ ಸಿದ್ಧಿಸಿದೆ. ಆದರೂ ಪ್ರತಿಯೊಂದು ಬಗೆಗೂ ವಿಶಿಷ್ಟವಾದ ಸೌಕರ್ಯ ಮತ್ತು ಅಸೌಕರ್ಯಗಳು ಇಲ್ಲದಿಲ್ಲ. ಒಂದೊಂದು ಈಡೇರಿಸುವ ಉದ್ದೇಶವೂ ಒಂದೊಂದು. ವಕ್ರೀಕಾರಕದಲ್ಲಿ ಬೆಳಕು ಮಸೂರದ ಮೂಲಕ ಸಾಗಬೇಕಾದ್ದರಿಂದ ಆ ಮಸೂರದ ಗಾಜು ಪ್ರಕಾಶೀಯವಾಗಿ ಏಕರೀತಿಯದಾಗಿರಬೇಕು ಮತ್ತು ಅದರಲ್ಲಿ ಗುಳ್ಳೆಗಳು ಇರಬಾರದು. ಪ್ರತಿಫಲಕದಲ್ಲಿನ ದರ್ಪಣದ ಗಾಜಾದರೋ ಯಾಂತ್ರಿಕವಾಗಿ ಏಕರೀತಿಯದಾಗಿದ್ದರೆ ಸಾಕು. ಎರಡನೆಯ ಬೇಡಿಕೆ ಮೊದಲಿನದರಷ್ಟು ಕಠಿಣವಾದದ್ದಲ್ಲ. ವಕ್ರೀಕಾರಕದ ಎರಡು ಮಸೂರಗಳ ನಾಲ್ಕು ಮೇಲ್ಮೈಗಳು ಕ್ರಿಯೋದ್ಯುಕ್ತವಾಗಿದ್ದರೆ ಪ್ರತಿಫಲಕದಲ್ಲಿ ಒಂದೇ ಒಂದು ಮೇಲ್ಮೈ ಮಾತ್ರ ಕ್ರಿಯೋದ್ಯುಕ್ತವಾಗಿರುವುದು. ಹೀಗಾಗಿ ಬೆಳಕು ಕಂಡಿಯ ಗಾತ್ರ ಒಂದೇ ಆಗಿರುವಾಗ ಪ್ರತಿಫಲಕಗಳ ರಚನೆ ವಕ್ರೀಕಾರಕಗಳ ರಚನೆಗಿಂತ ಕಡಿಮೆ ವೆಚ್ಚದ್ದು. ಅಲ್ಲದೇ ಮೊದಲಿನವುಗಳಲ್ಲಿ ವರ್ಣವಿಪಥನ ಪೂರ್ತಿ ಗೈರುಹಾಜರಿ ಆಗಿರುವುದರಿಂದ ಅವು ರೋಹಿತಲೇಖನ ಹಾಗೂ ಛಾಯಾಲೇಖನ (ಸ್ಟೆಕ್ಟ್ರೊಗ್ರಾಫಿಕ್ ಅಂಡ್ ಫೋಟೊಗ್ರಾಫಿಕ್) ಕೆಲಸಗಳಲ್ಲಿ ತುಂಬ ಉಪಯುಕ್ತವಾದವು. ಈಗ ಬೆಳಕನ್ನು ಒಟ್ಟುಗೂಡಿಸುವ ಸಾಮರ್ಥ್ಯ ಒಂದೇ ಆಗಿರುವ ಎರಡು ದೊಡ್ಡ ದೂರದರ್ಶಕಗಳಿವೆ. ಅವುಗಳ ಪೈಕಿ ಒಂದು ವಕ್ರೀಕಾರಕ ಇನ್ನೊಂದು ಪ್ರತಿಫಲಕ ಎಂದು ಊಹಿಸೋಣ. ಉಪಯೋಗದಲ್ಲಿ ಮೊದಲಿನದು ತುಂಬ ತಾಪತ್ರಯದ್ದು; ಇದು ಬೇಡುವ ಗುಮ್ಮಟ ಪ್ರತಿಫಲಕದ್ದಕ್ಕಿಂತ ಬಲು ದೊಡ್ಡದೂ ದುಬಾರಿಯದೂ ಆಗಿರುತ್ತದೆ. ವ್ಯಾಸ 40 ಇಂಚುಗಳಿಗಿಂತ ಹಿರಿದಾಗಿರುವ ವಕ್ರೀಕಾರಕಗಳನ್ನು ಕಟ್ಟಿದ್ದೇ ಆದರೆ ಅವುಗಳಿಗೆ ದೊಡ್ಡದಾದ ಹಾಗೂ ದಪ್ಪವಾದ ಮಸೂರಗಳು ಬೇಕಾಗುತ್ತವೆ. ಅವುಗಳ ಮೂಲಕ ಬೆಳಕು ಸಾಗುವಾಗ ಸಾಕಷ್ಟು ಬೆಳಕು ಹೀರಿಕೆಯಿಂದ ನಷ್ಟವಾಗುವುದರಿಂದ ಇವು ಒಟ್ಟುಗೂಡಿಸುವ ಅಧಿಕ ಬೆಳಕಿನ ಸೌಕರ್ಯ ಅಂತಿಮವಾಗಿ ನಮಗೆ ದೊರೆಯಲಾರದು. ಈ ಒಂದು ಕಾರಣಕ್ಕಾಗಿಯೇ ಅತ್ಯಂತ ದೊಡ್ಡ ಪ್ರಕಾಶೀಯ ದೂರದರ್ಶಕಗಳು ಪ್ರತಿಫಲಕಗಳೇ ಆಗ ಬೇಕಾಗುತ್ತವೆ. ಇಂಥ ಒಂದು ಅತಿ ದೊಡ್ಡ ಪ್ರಕಾಶೀಯ ದೂರದರ್ಶಕವನ್ನು ಸೋವಿಯೆತ್ ಒಕ್ಕೂಟದಲ್ಲಿ 1970 ರಿಂದ ಈಚೆಗೆ ಕಟ್ಟಲಾಗುತ್ತಿದೆ. ಇದರ ಪ್ರತಿಫಲಕದ ವ್ಯಾಸ 236 ಇಂಚುಗಳು (6 ಮೀಟರುಗಳು). ನಳಿಗೆಯ ಉದ್ದ 82 ಅಡಿಗಳು (25 ಮೀಟರುಗಳು); ಮತ್ತು ಕನ್ನಡಿಯ ವ್ಯಾಸ ಸುಮಾರು 20 ಅಡಿಗಳು (6.5 ಮೀಟರುಗಳು). ರೋಹಿತದರ್ಶಕ ಕಾರ್ಯದಲ್ಲಿ ಪ್ರತಿ ಫಲಕಗಳ ಉಪಯೋಗ ಅಪಾರವಾಗಿದೆ. ನೆಬ್ಯುಲ, ಅತಿದೂರದ ಬ್ರಹ್ಮಾಂಡ ಮುಂತಾದ ತೀರ ಮಸಕಾದ ಆಕಾಶ ಕಾಯಗಳನ್ನು ಗುರುತಿಸಿ ವೀಕ್ಷಿಸುವಲ್ಲಿ ಇವು ತುಂಬ ಫಲಕಾರಿಗಳಾಗಿವೆ. ವಕ್ರೀಕಾರಕಗಳಲ್ಲಿ ಪ್ರತಿಫಲಕಗಳಿಗಿಂತ ಹೆಚ್ಚು ಅಗಲದ ಮತ್ತು ವಿವರಗಳನ್ನು ಸ್ಪಷ್ಟವಾಗಿ ನೀಡುವ ದೃಷ್ಟಿ ಕ್ಷೇತ್ರ ಉಂಟು.
 
==ಷ್ಮಿಟ್ ದೂರದರ್ಶಕ==
ವಿಶ್ವದ ಪೂರ್ಣ ರಹಸ್ಯಗಳನ್ನು ಶೋಧಿಸಿ ಅರ್ಥವಿಸಬೇಕೆಂಬುದು ಮನುಷ್ಯನ ನಿರಂತರ ಆಸೆ. ಇದು ಪೂರೈಸಲು ಈ ಮುಂದಿನ ಅಂಶಗಳತ್ತ ಮುಖ್ಯವಾಗಿ ಲಕ್ಷ್ಯ ಹರಿಸಬೇಕಾಗುತ್ತದೆ : ಇಡೀ ಆಕಾಶದ ಛಾಯಾಚಿತ್ರಣ ನಡೆಯಬೇಕು. ಅದೆಷ್ಟೇ ಮಸುಕಾಗಿದ್ದರೂ ಆ ಆಕರ ಈ ಚಿತ್ರಣದಲ್ಲಿ ಮೂಡುವಂತಾಗಬೇಕು.
 
ಈ ಚಿತ್ರದ ಮಾನಕ (ಸ್ಕೇಲ್) ಸಾಧ್ಯವಿರುವಷ್ಟು ದೊಡ್ಡದಿರಬೇಕು. ಬೇರೆ ಬೇರೆ ಅಲೆಯುದ್ದದ ವಲಯಗಳಲ್ಲಿ (ವರ್ಣಗಳಲ್ಲಿ) ಛಾಯಾಚಿತ್ರೀಕರಿಸುವುದು ಸಾಧ್ಯವಾಗಬೇಕು. ಇವೆಲ್ಲವನ್ನೂ ಸಾಧಿಸಲು ಮೊದಲನೆಯದಾಗಿ ಎರಡು ದೂರದರ್ಶಕಗಳು, ಒಂದು ಉತ್ತರಾರ್ಧ ಗೋಳದಲ್ಲಿಯೂ ಇನ್ನೊಂದು ದಕ್ಷಿಣಾರ್ಧಗೋಳದಲ್ಲಿಯೂ ಬೇಕಾಗುತ್ತವೆ. ವಕ್ರೀಕಾರಕ ಹಾಗೂ ಪ್ರತಿಫಲಕ ಎರಡರ ಉತ್ತಮೋತ್ತಮ ಲಕ್ಷಣಗಳನ್ನು ದೂರದರ್ಶಕಗಳಲ್ಲಿ ಅಳವಡಿಸಬೇಕಾಗುತ್ತದೆ. ಈ ತೆರನಾಗಿ ತಯಾರಿಸಲಾದ ಉಪಕರಣದ ಹೆಸರು ಷ್ಮಿಟ್ ದೂರದರ್ಶಕ. ಹ್ಯಾಂಬರ್ಗಿನ ಬರ್ಜ್‍ಡಾರ್ಫ್ ವೇದಶಾಲೆಯ ದೃಷ್ಟಿ ಪರೀಕ್ಷಕ ಬರ್ನಾರ್ಡ್ ಷ್ನಿಟ್ (1879-1935) ಇದರ ಉಪಜ್ಞೆಕಾರನಾದ್ದರಿಂದ ಈ ಹೆಸರು ಬಂದಿದೆ. ಷ್ಮಿಟ್ ದೂರದರ್ಶಕದ ಹಿರಿಮೆಯನ್ನು ವಿವರಿಸುವ ಮುನ್ನ ಸಾಮಾನ್ಯ ದೂರದರ್ಶಕದಲ್ಲಿದ್ದ ಎದುರಾಗುವ ಸಮಸ್ಯೆಗಳನ್ನು ಅರಿತಿರುವುದು ಅಪೇಕ್ಷಣೀಯ.
 
ದೂರದರ್ಶಕದಲ್ಲಿ ಬಳಸುವ ಪ್ರತಿಫಲಕ ಪರವಲಯಾತ್ಮಕವಾಗಿರಬಹುದು ಯಾ ಗೋಳೀಯವಾಗಿರಬಹುದು. ಮೊದಲನೆಯದರಲ್ಲಿ ಪರವಲಯದ ಸಮಾಂಗತ್ವದ ಅಕ್ಷಕ್ಕೆ ಸಮಾಂತರವಾಗಿ ಬರುವ ಬೆಳಕಿನ ಕಿರಣಗಳೆಲ್ಲವೂ ಪ್ರತಿಫಲನಾಂತರ ನಾಭಿಯಲ್ಲಿ ಸಂಗಮಿಸುತ್ತವೆ. ಇಂಥ ನಕ್ಷತ್ರಗಳ ಛಾಯಾಚಿತ್ರಗಳೇನೋ ಸ್ಫುಟವಾಗಿರುತ್ತವೆ. ಆದರೆ ಆಕಾಶದ ಬಹ್ವಂಶವನ್ನು ದೂರದರ್ಶಕ ವೀಕ್ಷಿಸುತ್ತಿರುವಾಗ ಎಲ್ಲ ನಕ್ಷತ್ರಗಳಿಂದಲೂ ಬರುವ ಬೆಳಕಿನ ಕಿರಣಗಳು ಸಮಾಂಗತ್ವಾಕ್ಷಕ್ಕೆ ಸಮಾಂತರವಾಗಿರುವುದಿಲ್ಲ. ಇಂಥ ಲಕ್ಷವಿಚಲಿತ ನಕ್ಷತ್ರಗಳ ಛಾಯಾಚಿತ್ರಗಳು ಧೂಮಕೇತುಗಳೋಪಾದಿಯಲ್ಲಿ ಬಾಲಯುತವಾಗಿರುತ್ತವೆ. ಇದೊಂದು ದೋಷ. ಗೋಳಾತ್ಮಕ ದರ್ಪಣದಲ್ಲಿ ಅದರ ಎಲ್ಲ ವ್ಯಾಸಗಳೂ (ಇವು ಅನಂತವಾಗಿವೆ) ಸಮಾಂಗತ್ವಾಕ್ಷಗಳೇ. ಆದ್ದರಿಂದ ಇದಕ್ಕೆ ಏಕೈಕ ಸಮಾಂಗತ್ವಾಕ್ಷ ಇಲ್ಲ. ಆದರೆ ದರ್ಪಣದ ಅಕ್ಷಕ್ಕೆ ಸಮಾಂತರವಾಗಿ ಬರುವ ಬೆಳಕಿನಕಿರಣಗಳಲ್ಲಿ ಕೂಡ ಹೊರಭಾಗದಲ್ಲಿ ಪ್ರತಿಫಲಿತವಾದವು ದರ್ಪಣಕ್ಕೆ ಸಮೀಪವಾಗಿರುವ ಒಂದು ಬಿಂದುವಿನಲ್ಲಿಯೂ ಒಳಭಾಗದಲ್ಲಿ ಪ್ರತಿಫಲಿತವಾದವು ದರ್ಪಣದಿಂದ ದೂರವಾಗಿರುವ ಒಂದು ಬಿಂದುವಿನಲ್ಲಿಯೂ ಸಂಗಮಿಸುತ್ತವೆ. ಇದರಿಂದ ತಲೆದೋರುವ ಪ್ರತಿಬಿಂಬದೋಷಕ್ಕೆ ಗೋಳಾತ್ಮಕ ವಿಪಥನವೆಂದು ಹೆಸರು. ವಕ್ರೀಕಾರಕಗಳಲ್ಲಿಯೂ ಈ ಬಗೆಯ ಪ್ರತಿಬಿಂಬದೋಷ ಉಂಟು. ಗೋಳಾತ್ಮಕ ದರ್ಪಣಕ್ಕೆ ವಿವಿಧ ದಿಶೆಗಳಿಂದ ವಿವಿಧ ಕೋನಗಳಲ್ಲಿ ಆಗಮಿಸುವ ಬೆಳಕಿನ ಕಿರಣಗಳಿಂದ ಸಂಜನಿಸುವ ಪ್ರತಿಬಿಂಬಗಳು ತೀರ ಅಸ್ಪಷ್ಟವಾಗಿರುವುವು. ಈ ದರ್ಪಣದ ವಕ್ರತಾಕೇಂದ್ರದಲ್ಲಿ ಮಡಗಿದ ಒಂದು ಬೆಳಕುಕಂಡಿಯ ಮೂಲಕ ಒಳಬರುವ ಎಲ್ಲ ಕಿರಣಗಳೂ ದರ್ಪಣದ ಮೇಲ್ಮೈಯನ್ನು ಲಂಬಾತ್ಮಕವಾಗಿತಾಗುವುವು; ಹೀಗಾಗಿ ಅಕ್ಷವಿಚಲಿತ ವಿಪಥನ ಇಲ್ಲಿ ತಲೆದೋರುವುದಿಲ್ಲ. ಅದೇ ವೇಳೆ ತೆಳುವಾದ ಮತ್ತು ದುರ್ಬಲವಾದ ಒಂದು ಮಸೂರವನ್ನು (ತಿದ್ದುಪಡಿ ಮಾಡುವ ಫಲಕವೆಂದು ಹೆಸರು) ಬೆಳಕುಕಂಡಿಯಲ್ಲಿ ಲಗತ್ತಿಸಿ ಗೋಳಾತ್ಮಕ ವಿಪಥನವನ್ನು ಪೂರ್ಣವಾಗಿ ನಿವಾರಿಸಬಹುದು (ಇದಕ್ಕೆ ಶುಲ್ಕವಾಗಿ ಒಂದಿಷ್ಟು ಸಹ್ಯ ವರ್ಣವಿಪಥನವನ್ನು ಎದುರಿಸಬೇಕಾಗುತ್ತದೆ. ಆದರೆ ಇದರಿಂದ ವಿಶೇಷ ತೊಂದರೆ ಆಗುವುದಿಲ್ಲ). ಚತುರ ಮತ್ತು ವಿಶಿಷ್ಟವಾದ ಈ ಬಗೆಯ ಪ್ರಕಾಶೀಯ ಏರ್ಪಾಡನ್ನು ಉಪಜ್ಞಿಸಿ ದೊರೆತದ್ದೇ ಷ್ಮಿಟ್ ದೂರದರ್ಶಕ.
 
ಷ್ಮಿಟ್ ದೂರದರ್ಶಕದ ಮುಖ್ಯ ಅಸೌಕರ್ಯಗಳಿವು. ತಿದ್ದುಪಡಿ ಮಾಡುವ ಫಲಕದ ನಿರ್ಮಾಣ ಸುಲಭವೇನೂ ಅಲ್ಲ. ಅದರ ವಕ್ರತೆ ಬಲು ಸಂಕೀರ್ಣ. ನಾಭೀ ಸಮತಲದ ವಕ್ರತೆಯ ಪರಿಣಾಮವಾಗಿ ಸರಿಯಾದ ಛಾಯಾಚಿತ್ರಗಳನ್ನು ಗ್ರಹಿಸಲು ವಕ್ರಮೈಯ ಛಾಯಾಚಿತ್ರ ಫಲಕಗಳು ಯಾ ಫಿಲಮುಗಳನ್ನು ಒದಗಿಸಿಕೊಳ್ಳಬೇಕಾಗುತ್ತದೆ. ದೂರದರ್ಶಕದ ಉದ್ದ ಸಾಕಷ್ಟು ಹಿರಿದಾಗಿರುವುದು. ಅತಿ ದೊಡ್ಡ ಷ್ಮಿಟ್ ದೂರದರ್ಶಕ ಪೂರ್ವ ಜರ್ಮನಿಯ ಯೇನಾದಲ್ಲಿರುವ ಕಾರ್ಲ್ ಶ್ವಾರ್ಝ್ ಚೈಲ್ಡ್ ವೇಧಶಾಲೆಯಲ್ಲಿದೆ. ಇದರ ಪ್ರಾಥಮಿಕ ದರ್ಪಣದ ವ್ಯಾಸ 79 ಇಂಚುಗಳು.
 
ಈ ವರೆಗೆ ವಿವರಸಿದವಲ್ಲದೇ ವಿಶೇಷ ಬಗೆಯ ದೂರದರ್ಶಕಗಳೂ ಉಂಟು. ಉದಾಹರಣೆಗೆ ಸೂರ್ಯವೀಕ್ಷಣೆಗೆಂದೇ ಮೀಸಲಾಗಿರುವ ಸೌರ ದೂರದರ್ಶಕಗಳು ಹಾಗೂ ಉಪಕರಣಗಳೂ. ಅರಿಜೋನದ ಟಕ್ಸನ್ ಬಳಿ ಇರುವ ಕಿಟ್ ಪೀಕ್ ನ್ಯಾಷನಲ್ ಅಬ್ಸರ್ವೇಟರಿಯಲ್ಲಿರುವ ಮ್ಯಾಕ್‍ಮತ್ ಸೌರದೂರದರ್ಶಕ ಉಲ್ಲೇಖಾರ್ಹವಾದದ್ದು. ಇದರ ನಾಭೀ ಉದ್ದ 300 ಅಡಿಗಳು; ಇದರಲ್ಲಿ ಮೂಡುವ ಸೂರ್ಯನ ಪ್ರತಿಬಿಂಬದ ವ್ಯಾಸ 3 ಅಡಿಗಳು. ತಮಿಳುನಾಡಿನ ಕೊಡೈಕ್ಕಾನಲಿನಲ್ಲಿರುವ ಸೌರಭೌತ ವೇದಶಾಲೆಯಲ್ಲಿ 20 ಇಂಚು ವ್ಯಾಸದ ಪ್ರತಿಪಲಕವಿದೆ. ರೋಹಿತ ಸೂರ್ಯಲೇಖನ (ಸ್ಪೆಕ್ಟ್ರೊಹೀಲಿಯೊಗ್ರಾಫ್) ಎಂಬ ಉಪಕರಣದಿಂದ ಸೂರ್ಯನನ್ನು ಒಂಟಿ ಅಲೆಯದ್ಧದಲ್ಲಿ ಛಾಯಾಚಿತ್ರೀಕರಿಸಬಹುದು. ಸೂರ್ಯ ಬಿಂಬದ ಯಾವುದೇ ಬಿಂದುವಿನಲ್ಲಿನ ಕಾಂತೀಯ ಕ್ಷೇತ್ರವನ್ನು ಅಳೆಯಲು ಸೌರಕಾಂತಲೇಖನ ಎಂಬ ಉಪಕರಣ ಉಂಟು. ಉಲ್ಕೆಗಳನ್ನು ಛಾಯಾ ಚಿತ್ರೀಕರಿಸಲು ವಿಶೇಷ ಸಲಕರಣೆಗಳಿವೆ.
 
<ref>[http://www.dnaindia.com/scitech/report-china-constructing-world-s-highest-altitude-telescopes-in-tibet-2290565 China constructing world's highest altitude telescopes in Tibet]</ref>
==ನೋಡಿ==
*[[ಹಬಲ್ ದೂರದರ್ಶಕ]]
 
==ಗಮನಿಸಿ==
 
==ಹೆಚ್ಚಿನ ಓದಿಗೆ==
==ಉಲ್ಲೇಖ==
* ''Contemporary Astronomy – Second Edition'', [[Jay Pasachoff|Jay M. Pasachoff]], Saunders Colleges Publishing – 1981, {{ISBN|0-03-057861-2}}
* {{Citation
|last=Elliott
|first=Robert S.
|date=1966
|title=Electromagnetics
|publisher=[[McGraw-Hill]]
}}
* {{Citation
|last1=Rashed
|first1=Roshdi
|last2=Morelon
|first2=Régis
|date=1996
|title=Encyclopedia of the History of Arabic Science
|volume=1 & 3
|publisher=[[Routledge]]
|isbn=978-0-415-12410-2
|title-link=Encyclopedia of the History of Arabic Science
}}
* {{cite book|last=Sabra|first=A.I. |author2=Hogendijk, J.P. |date=2003|title=The Enterprise of Science in Islam: New Perspectives|publisher=[[MIT Press]]|pages=85–118|isbn=978-0-262-19482-2}}
* {{Citation
|doi=10.1068/p3210
|last1=Wade
|first1=Nicholas J.
|last2=Finger
|first2=Stanley
|date=2001
|title=The eye as an optical instrument: from camera obscura to Helmholtz's perspective
|journal=Perception
|volume=30
|issue=10
|pages=1157–1177
|pmid=11721819
|s2cid=8185797
}}
 
==ಹೊರಗಿನ ಕೊಂಡಿಗಳು==
{{Commons|Telescope}}
* [http://telescopes.stardate.org/ ''Galileo to Gamma Cephei – The History of the Telescope'']
* [http://galileo.rice.edu/sci/instruments/telescope.html ''The Galileo Project – The Telescope'' by Al Van Helden]
* [http://www.aip.org/history/cosmology/tools/tools-first-telescopes.htm "The First Telescopes". Part of an exhibit from Cosmic Journey: A History of Scientific Cosmology] by the American Institute of Physics
* {{cite EB1911 |wstitle=Telescope |volume=26 |pages=557–573 |first1=Harold Dennis |last1=Taylor |first2=David |last2=Gill |short=1}}
* [http://spiff.rit.edu/classes/phys230/lectures/nonoptical/nonoptical.html Outside the Optical: Other Kinds of Telescopes]
* {{cite web|last=Gray|first=Meghan|title=Telescope Diameter|url=http://www.sixtysymbols.com/videos/telescope.htm|work=Sixty Symbols|publisher=[[Brady Haran]] for the [[University of Nottingham]]|author2=Merrifield, Michael |date=2009}}
 
[[ವರ್ಗ:ದೂರದರ್ಶಕಗಳು]]
"https://kn.wikipedia.org/wiki/ದೂರದರ್ಶಕ" ಇಂದ ಪಡೆಯಲ್ಪಟ್ಟಿದೆ