ಟೀತಿಸ್ ಸಮುದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ, ಇಂಗ್ಲೀಷ್ ಪುಟದಿಂದ ಚಿತ್ರ ಸೇರ್ಪಡೆ
ಟ್ಯಾಗ್: 2017 source edit
 
೧ ನೇ ಸಾಲು:
ಟೀತಿಸ್ ಸಮುದ್ರ -ಪುರಾತನ ಕಾಲದ ಸಮುದ್ರ.. [[ಚಿತ್ರ:Laurasia-Gondwana.svg|thumb|ಟೇತಿಸ್ ಸಮುದ್ರದ ರಚನೆಯ ಮೊದಲ ಹಂತ]]
 
== ಟೇತಿಸ್ಟೀತಿಸ್ ಸಮುದ್ರದ ರಚನೆ ==
ಆಧುನಿಕ [[ಮೆಡಿಟರೇನಿಯನ್ ಸಮುದ್ರ]]ದ ಪೂರ್ವಜ. [[ಪರ್ಮಿಯನ್ ಕಲ್ಪ]]ದ ತರುಣದಲ್ಲಿ ಅಂದರೆ ಸುಮಾರು 280 ದಶಲಕ್ಷ ವರ್ಷಗಳಷ್ಟು ಪ್ರಾಚೀನದಲ್ಲಿ ಅಸ್ತಿತ್ವಕ್ಕೆ ಬಂತು. [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್]] ಹಾಗೂ [[ಆರ್ಕ್ಟಿಕ್ ಮಹಾಸಾಗರ|ಆರ್ಕ್‍ಟಿಕ್ ಸಾಗರ]]ಗಳ ನಡುವಿನ ಸಂಯೋಜಕವಾಗಿಯೂ ಉತ್ತರದಲ್ಲಿ [[ಅಂಗಾರ (ಪ್ರದೇಶ)|ಅಂಗಾರ]] ಮತ್ತು ದಕ್ಷಿಣದಲ್ಲಿ [[ಗೋಂಡ್ವಾನ ಖಂಡ|ಗೊಂಡವಾನ]] ಭೂಖಂಡಗಳನ್ನು ಪ್ರತ್ಯೇಕಿಸುವ ಜಲರಾಶಿಯಾಗಿಯೂ ಇತ್ತು. [[ಕಾರ್ಬಾನಿಫೆರಸ್ ಕಲ್ಪ]]ದ (350 ದ.ಲ.ವ.ಪ್ರಾ. -280 ದ.ಲ.ವ.ಪ್ರಾ.) ಅಂತ್ಯಕಾಲದಲ್ಲಿ ಮಹತ್ತರ ಬದಲಾವಣೆಗಳಾದವು. ನೆಲಜಲಗಳ ಪುನರ್ವರ್ಗೀಕರಣವಾಯಿತು. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಪರ್ವತ ರಚನಾ ಕಾರ್ಯವೂ ನಡೆಯಿತು. ಆಗ ಉದಯಿಸಿದ ಪರ್ವತಗಳಲ್ಲಿ [[ಹರ್ಷೀನಿಯನ್ ಪರ್ವತ]] ಮುಖ್ಯವಾದದ್ದು. ಆದ್ದರಿಂದ ಈ ಪರ್ವಕಾಲಕ್ಕೆ [[ಹರ್ಷೀಯನ್ ಪ್ರಳಯ]]ವೆಂಬ ಹೆಸರು ಬಂದಿದೆ. ಇದರ ತರುವಾಯ ಪ್ರಪಂಚದ ಭೂಭಾಗಗಳು ಎರಡು ದೊಡ್ಡ ಖಂಡಗಳಾಗಿದ್ದುವು. ಇವೆರಡರ ಮಧ್ಯೆ, ಹೆಚ್ಚು ಕಡಿಮೆ ಭೂಮಧ್ಯ ಭಾಗದಲ್ಲಿ, ಇದ್ದ ಜಲರಾಶಿಯೇ ಟೀತಿಸ್ ಸಮುದ್ರ.
== ಟೀತಿಸ್ ಸಮುದ್ರದಲ್ಲಿ ಶಿಲಾನಿಕ್ಷೇಪ ==
Line ೬ ⟶ ೭:
== ಟೀತಿಸ್ ನಿಕ್ಷೇಪಗಳು ಭಾರತದಲ್ಲಿ ==
ಟೀತಿಸ್ ನಿಕ್ಷೇಪಗಳು ಭಾರತದಲ್ಲಿ [[ಕಾಶ್ಮೀರ]]ದಿಂದ [[ಎವರೆಸ್ಟ್‌ ಶಿಖರ|ಎವರೆಸ್ಟ್]] ಪ್ರದೇಶವರೆಗಿನ [[ಟಿಬೆಟ್]] ಪ್ರಾಂತ್ಯದಲ್ಲಿ ಚೆನ್ನಾಗಿ ರೂಪುಗೊಂಡಿವೆ. [[ಸ್ಫಿಟಿ]] ಮತ್ತು ಕಾಶ್ಮೀರ ಪ್ರದೇಶಗಳ ಶಿಲಾಸ್ತೋಮಗಳು ಅತ್ಯುತ್ತಮವಾದವು. ಕಾಶ್ಮೀರ ಪ್ರದೇಶ ಕಾರ್ಬಾನಿಫೆರಸ್ ಕಲ್ಪದ ಮಧ್ಯಕಾಲದ ವರೆಗೂ (ಸು.305 ದ.ಲ.ವ.ಪ್ರಾ.) ಜಲಪ್ರದೇಶವಾಗಿದ್ದು ಪ್ರಶಾಂತ ವಾತಾವರಣವನ್ನು ಹೊಂದಿತ್ತು. ಕಾರ್ಬಾನಿಫೆರಸ್ ಅಂತ್ಯದಲ್ಲಿ (280 ದ.ಲ.ವ.ಪ್ರಾ.) ಈ ವಾತಾವರಣ ಅತಿ ಉಗ್ರಜ್ವಾಲಾಮುಖಿಗಳ ಆಸ್ಫೋಟನೆಯಿಂದ ಕಲಕಲ್ಪಟ್ಟಿತು. ಹೀಗೆ ಕಾಶ್ಮೀರವು ಗೊಂಡವಾನ ಖಂಡದ ವಾಯುವ್ಯ ಎಲ್ಲೆಯೆನಿಸಿದೆ. ಇಲ್ಲಿ ಗೊಂಡವಾನ ಖಂಡ ಮತ್ತು ಅಂಗಾರ ಖಂಡಗಳೆರಡರ ಸಸ್ಯವರ್ಗಗಳ ಮಿಶ್ರಣ ಇರುವುದರಿಂದ ಈ ಭಾಗ ಇವೆರಡು ಖಂಡಗಳ ಸಂಪರ್ಕ ಸೇತುವೆ ಎನಿಸಿರಬೇಕು.
 
== ಟೇತಿಸ್ಟೀತಿಸ್ ಸಮುದ್ರದ ಕೊನೆ ==
[[ಕ್ರಿಟೇಷಿಯಸ್ ಕಲ್ಪ]]ದ ಕೊನೆಯಲ್ಲಿ (65 ದ.ಲ.ವ.ಪ್ರಾ.) ಮಹತ್ತರ ಬದಲಾವಣೆಗಳಾದವು. ಆಧುನಿಕ ಕಾಲದ ಮೇಲ್ಮೈ ಲಕ್ಷಣಗಳು ಮೈದಳೆದದ್ದು ಆಗಲೇ. ಅದುವರೆಗೂ ಒಂದಾಗಿದ್ದ ಗೊಂಡವಾನ ಭೂಭಾಗ ಆಧುನಿಕ ಇಂಡಿಯ, [[ಆಸ್ಟ್ರೇಲಿಯ]], [[ಆಫ್ರಿಕಾ|ಆಫ್ರಿಕ]] ಮತ್ತು [[ದಕ್ಷಿಣ ಅಮೇರಿಕ|ದಕ್ಷಿಣ ಅಮೆರಿಕ]] ಮುಂತಾದ ಖಂಡಗಳಾಗಿ ಬೇರ್ಪಟ್ಟಿತು. ಹೀಗೆ ಬೇರ್ಪಟ್ಟ ಖಂಡಗಳ ಚಲನೆಯಿಂದ ಆ ಕಾಲದಲ್ಲಿ ಭೂ ಮಧ್ಯ ಪ್ರದೇಶದಲ್ಲಿ ಬಹುಕಾಲದಿಂದಿದ್ದ ಟೀತಿಸ್ ಸಮುದ್ರ ನಿರ್ಗಮಿಸಬೇಕಾಯಿತು. ಇದರಲ್ಲಿ ನಿಕ್ಷೇಪವಾಗಿದ್ದ ಜಲಜಶಿಲೆಗಳು ಭೂಚಲನೆಗಳ ಒತ್ತಡಕ್ಕೆ ಸಿಕ್ಕಿ [[ಅಟ್ಲಾಸ್]], [[ಪೈರನೀಸ್]], ಆಲ್ಪ್ಸ್ ಮತ್ತು ಹಿಮಾಲಯ ಪರ್ವತಗಳಾಗಿ ಮೇಲಕ್ಕೆದ್ದುವು. ಈ ಕಾರ್ಯ ಕ್ರಿಟೇಷಸ್ ಕಲ್ಪದಲ್ಲಿ (135 ದ.ಲ.ವ. ಪ್ರಾ.- 65 ದ.ಲ.ವ. ಪ್ರಾ.) ಪ್ರಾರಂಭವಾಗಿ ಸಾಗರ ಪ್ರದೇಶಗಳಲ್ಲೆಲ್ಲ ಆಳ ಕಡಿಮೆಯಾಗಿ ಪ್ಲಿಸ್ಟ್ ನಿಕ್ಷೇಪವಾಗಿದೆ. ಇಲ್ಲೆಲ್ಲ ನಮ್ಮುಲಿಟಿಕ್ ಸಣ್ಣಶಿಲೆ ನಿಕ್ಷೇಪಗೊಂಡಿರುವುದು. ನಿಜವಾದ ಆರಂಭ ಇಯೊಸೀನ್ ಕಲ್ಪದ ಮಧ್ಯ ಭಾಗದಲ್ಲಿ (ಸು. 50 ದ.ಲ.ವ.ಪ್ರಾ.) ಆಯಿತು. ಇದೇ ಹಿಮಾಲಯ ಪರ್ವತೋದಯದ ಮೊದಲನೆಯ ಹಂತ. ಈ ಕಾರ್ಯ ಆಲಿಗೊಸೀನ್ ಕಲ್ಪದಲ್ಲಿ (40 ದ.ಲ.ವ. ಪ್ರಾ.-25 ದ.ಲ.ವ.ಪ್ರಾ) ತೀವ್ರಗೊಂಡಿತು. ಈ ಕಲ್ಪದಲ್ಲಿ ಟೀತಿಸ್ ಸಮುದ್ರ ಮುಕ್ಕಾಲು ಭಾಗ ನಿರ್ಗಮಿಸಿ ಅಲ್ಲಲ್ಲಿ [[ಕ್ಯಾಸ್ಪಿಯನ್‌ ಸಮುದ್ರ|ಕ್ಯಾಸ್ಪಿಯನ್ ಸಮುದ್ರ]]ದ ಹಾಗೆ ಲಡಕ್, ಹುಂಡೆಸ್ ಮತ್ತು ಕುಮಾಯುನ್ ಪ್ರದೇಶಗಳಲ್ಲಿ ವಿಶಾಲವಾದ ಸರೋವರಗಳಾಗಿ ಉಳಿಯಿತು. ಟೀತಿಸ್ ಸಮುದ್ರದ ನೀರು ದಕ್ಷಿಣ ಸಮುದ್ರಕ್ಕೆ ಎರಡು ಖಾರಿಗಳ ಮೂಲಕವಾಗಿ ತಳ್ಳಲ್ಪಟ್ಟಿತು. ಪೂರ್ವದಲ್ಲಿ ಬಲೂಚಿಸ್ತಾನ್-ಸಿಂದ್ ಖಾರಿ, ಪಶ್ವಿಮದಲ್ಲಿ ಅಸ್ಸಾಮ್-ಬರ್ಮ ಖಾರಿ ಇವೇ ಈ ಎರಡು ಖಾರಿಗಳು. [[ಮಧ್ಯಮಯೋಸೀನ್ ಕಲ್ಪ]]ದ (ಸು.18 ದ.ಲ.ವ. ಪ್ರಾ) ಚಲನೆಯಿಂದ ಟೀತಿಸ್ ಸಮುದ್ರದ ಈ ಅವಶೇಷಗಳೆಲ್ಲ ಇಲ್ಲವಾದವು.
 
"https://kn.wikipedia.org/wiki/ಟೀತಿಸ್_ಸಮುದ್ರ" ಇಂದ ಪಡೆಯಲ್ಪಟ್ಟಿದೆ