ಮೈಸೂರು ಸ್ಯಾಂಡಲ್ ಸಾಬೂನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 3 sources and tagging 0 as dead.) #IABot (v2.0.8
ಚುNo edit summary
೨ ನೇ ಸಾಲು:
 
==ಇತಿಹಾಸ==
ಇಪ್ಪತ್ತನೇ ಶತಮಾನದ ಮೊದಲಲ್ಲಿ, [[ಮೈಸೂರು ಸಂಸ್ಥಾನ|ಮೈಸೂರು ರಾಜ್ಯ]]ವು ಜಗತ್ತಿನಲ್ಲಿ ದೊಡ್ಡಮಟ್ಟದ ಗಂಧದಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನು ರಫ್ತು ಮಾಡುತ್ತಿತ್ತು. ಅದರಲ್ಲಿ ಹೆಚ್ಚಿನದು [[ಯುರೋಪ್|ಯುರೋಪಿ]]ಗೆ ರಫ್ತಾಗುತ್ತಿತ್ತು. ವಿಶ್ವಯುದ್ಧದ ಕಾರಣವಾಗಿ ರಫ್ತುಮಾಡಲು ಸಾಧ್ಯವಾಗದೇ ಇದ್ದಾಗ ಹೇರಳವಾದ ಗಂಧದಮರದ ದಾಸ್ತಾನು ಉಳಿಯಿತು. ಇದನ್ನು ಸದುಪಯೋಗಪಡಿಸಿಕೊಳ್ಳಲು ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರರು ಸರ್ಕಾರಿ ಸಾಬೂನು ಕಾರ್ಖಾನೆಯನ್ನು [[ಬೆಂಗಳೂರು|ಬೆಂಗಳೂರಿ]]ನಲ್ಲಿ ಸ್ಥಾಪಿಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಧದ ಮರದಿಂದ ಎಣ್ಣೆ ತೆಗೆಯುವಂತಹ ಕಾರ್ಖಾನೆಯೂ ಸ್ಥಾಪಿಸಲ್ಪಟ್ಟಿತು. ಶ್ರೀ ಎಸ್.ಜಿ.ಶಾಸ್ತ್ರಿ ಇವರು ೧೯೧೬ರಲ್ಲಿ ಅಭಿವೃದ್ಧಿಪಡಿಸಿದ ಶ್ರೀಗಂಧದ ಸುಗಂಧ ದ್ರವ್ಯವು ಸಾಬೂನು ತಯಾರಿಕೆಗೆ ಮೂಲದ್ರವ್ಯವಾಗಿ ಪರಿಗಣಿಸಲ್ಪಟ್ಟು ಬಳಸಲ್ಪಟ್ಟಿತು. ಶ್ರೀಗಂಧದೆಣ್ಣೆಯ ಸುಗಂಧವನ್ನು ಪ್ರಮುಖ ದ್ರವ್ಯ ವಸ್ತುವಾಗಿ ಬಳಸಿ, ಮೈಸೂರು ಸ್ಯಾಂಡಲ್ ಸಾಬೂನನ್ನು ವಿಶಿಷ್ಟ ಆಕಾರ, ಕವಚದಲ್ಲಿ ತಯಾರಿಸಿ, ಪ್ರಪ್ರಥಮವಾಗಿ ೧೯೧೮ ರ ನವಂಬರ್ [[ಮಾಹೆ]]ಯಲ್ಲಿ ಮಾರುಕಟ್ಟೆಗೆ ಪರಿಚಯಸಲಾಯಿತು. ನಂತರ ೧೯೪೪ರಲ್ಲಿ ಶಿವಮೊಗ್ಗದಲ್ಲಿ ಶ್ರೀಗಂಧದೆಣ್ಣೆ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. [[ಕರ್ನಾಟಕ ಏಕೀಕರಣ]]ದ ನಂತರ ಈ ಕಾರ್ಖಾನೆಗಳು ಕರ್ನಾಟಕ ಸರ್ಕಾರದ ಸುಪರ್ದಿಗೆ ಬಂದವು. ಈ ಎಲ್ಲಾ ಕಾರ್ಖಾನೆಗಳನ್ನು ಮಿಳಿತಗೊಳಿಸಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ೧೯೮೦ನೇ ಇಸವಿಯಲ್ಲಿ ಕರ್ನಾಟಕ ರಾಜ್ಯಸರ್ಕಾರದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಯಾಗಿ ಪರಿವರ್ತಿಸಿ '''ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ''' ಎಂದು ಪುನರ್ ನಾಮಕರಣ ಮಾಡಲಾಯಿತು. ತದನಂತರ ಸಾಬೂನಿನ ಹೊರತಾಗಿ, ಅಗರಬತ್ತಿ, ಮೈಪೌಡರ್, ಮಾರ್ಜಕಗಳು, ಶ್ರೀಗಂಧದೆಣ್ಣೆ, ಹಾಗೂ ಶ್ರೀಗಂಧದ ಕೊರಡು ಮುಂತಾದ ಉತ್ಪನ್ನಗಳ ತಯಾರಿಕೆ ಆರಂಭಿಸಿತು. ೧೦ಮೇ೨೦೧೬ಕ್ಕೆ ಕಾರ್ಖಾನೆ ಸ್ಥಾಪನೆಯಾಗಿ ಒಂದು ಶತಮಾನ.
 
==ವ್ಯಾಪಾರ ವಹಿವಾಟು==
೯ ನೇ ಸಾಲು:
ಮೊದಲು ಅಷ್ಟೇನೂ ಮಾರ್ಕೆಟಿಂಗ್ ಇರದಿದ್ದ ಈ ಸಾಬೂನಿಗೆ ೨೦೦೬ರಲ್ಲಿ ಭಾರತದ ಕ್ರಿಕೆಟ್ ಆಟಗಾರ [[ಮಹೇಂದ್ರ ಸಿಂಗ್ ಧೋನಿ]] ಅವರನ್ನ ಮೈಸೂರು ಸ್ಯಾಂಡಲ್ ಸಾಬೂನಿನ ಮೊದಲ ಬ್ರ್ಯಾಂಡ್ ರಾಯಭಾರಿ ಮಾಡಿಕೊಳ್ಳಲಾಯಿತು.<ref name="dhon"/> ವಿವಿಧ ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸಿಕೊಂಡು ಪ್ರಚಾರ ಮಾಡಲಾಯಿತು. [[ಕರ್ನಾಟಕ]], [[ತಮಿಳುನಾಡು]], [[ಆಂಧ್ರಪ್ರದೇಶ]] ರಾಜ್ಯದಲ್ಲಿ ಹೆಚ್ಚು (ಶೇಕಡಾ ೮೫) ಮಾರುಕಟ್ಟೆ ಹೊಂದಿದೆ. ಮೈಸೂರು ಸ್ಯಾಂಡಲ್ ಬೇಬಿ ಸೋಪ್ ತಯಾರಿಕೆ ಕೂಡ ನಡೆಯುತ್ತಿದೆ. ಕರ್ನಾಟಕದಲ್ಲಿ ಗಂಧದ ಮರಗಳು ಕಡಿಮೆಯಾಗುತ್ತಿರುವ ಕಾರಣ ತಯಾರಿಕೆಗೆ ಬೇಕಾದ ಕಚ್ಛಾವಸ್ತುವಿನ ಕೊರತೆಯಿಂದಾಗಿ ತನ್ನ ಸಾಮರ್ಥ್ಯದ ಕಾಲುಭಾಗವಷ್ಟೇ ಉತ್ಪಾದನೆ ಸಾಧ್ಯವಾಗುವಂತಾಯಿತು. ಇದರ ಸಲುವಾಗಿ ನೇರಮಾರುಕಟ್ಟೆಯಲ್ಲಿ ಖರೀದಿಸಲು ಆರಂಭಿಸಿದೆ ಮತ್ತು ಹೊರದೇಶಗಳಿಂದ ಆಮದು ಮಾಡಿಕೊಳ್ಳುವದನ್ನೂ ಪರಿಗಣಿಸಿದೆ.
 
೧೦ಮೇ೨೦೧೬ಕ್ಕೆ ಕಾರ್ಖಾನೆ ಸ್ಥಾಪನೆಯಾಗಿ ಒಂದು ಶತಮಾನ. ನೂರು ವರ್ಷದ ಸಂಭ್ರಮ ಆಚರಣೆ ಜೊತೆಗೆ ಮೈಸೂರು ಸ್ಯಾಂಡಲ್ ಜನ್ಮದಿನೋತ್ಸವದ ಹೊಸ ಸೋಪ್ ಬಿಡುಗಡೆಯ ಯೋಜನೆ ಹಾಕಿಕೊಳ್ಳಲಾಗಿದೆ.
 
==ಉಲ್ಲೇಖಗಳು==