ಜೋರ್ಡಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Fixed Lint errors by replacing obsolete font tags, general fixes enabled
೯೨ ನೇ ಸಾಲು:
== ಇತಿಹಾಸ ==
ಜಾರ್ಡನ್ ಪ್ರದೇಶದಲ್ಲಿ ಪ್ರಾರಂಭಕಾಲದಿಂದಲೂ ಆದಿ ಮಾನವ ವಾಸಿಸುತ್ತಿದ್ದನೆಂಬುದಕ್ಕೆ ಸಾಕಷ್ಟು ಮಾಹಿತಿಗಳಿವೆ. ಉತ್ತರ ಅಫ್ರಿಕದಲ್ಲಿ ರೂಢಿಯಲ್ಲಿದ್ದ ಪೂರ್ವಶಿಲಾಯುಗ ಸಂಸ್ಕøತಿಗಳು ಈಜಿಪ್ಟಿನ ಮಾರ್ಗವಾಗಿ ಜಾರ್ಡನ್ ಪ್ರದೇಶವನ್ನು ಪ್ರವೇಶಿಸಿದುವು. ಇಲ್ಲಿಯ ಅಲ್-ಉಬೇದಿಯ ಎಂಬಲ್ಲಿ ಆಸ್ಟ್ರಲೊ-ಪಿತಿಕಲ್ ವರ್ಗಕ್ಕೆ ಸೇರಿದ ಆದಿಮಾನವನ ದೇಹದ ಪಳೆಯುಳಿಕೆಗಳೂ ಆಗಿನ ಕಲ್ಲಿನಾಯುಧಗಳೂ ದೊರಕಿವೆ. ಜಾರ್ಡನಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮರಳ್ಗಾಡು ಪ್ರದೇಶದಲ್ಲಿ ಪೂರ್ವಶಿಲಾಯುಗದ ಬೇಟೆಗಾರರು ಅಲೆದಾಡುತ್ತಿದ್ದುದಕ್ಕೆ ಆಧಾರಗಳಿವೆ. ಪೂರ್ವಶಿಲಾಯುಗದ ಮೊದಲ ಹಂತವಾದ ಅಬ್ಬೆವಿಲಿಯನ್ ಸಂಸ್ಕøತಿಯ ಒರಟಾದ ಕೈಕೊಡಲಿಗಳು ಇಲ್ಲಿಯ ಪ್ಲೀಸ್ಟೊಸೀನ್ ಯುಗದ ಪ್ಲೂವಿಯಲ್ ಪದರಗಳಲ್ಲಿ ದೊರಕಿವೆ. 1956ರಲ್ಲಿ ಅಜûರಕ್ ಎಂಬಲ್ಲಿ ಅಷ್ಯೂಲಿಯನ್ ಸಂಸ್ಕøತಿಯ ಕೈ ಕೊಡಲಿಗಳು ಹೆಚ್ಚಾಗಿ ಕಂಡುಬಂದು, ದ್ವಿತೀಯ ಹಂತದಲ್ಲೂ ಆದಿಮಾನವ ಈ ಪ್ರದೇಶದಲ್ಲಿ ನೆಲಸಿದ್ದ ಅಂಶವನ್ನು ಸ್ಥಿರಗೊಳಿಸುತ್ತವೆ. ಆ ಕಾಲದ ಅನೇಕ ನೆಲೆಗಳು ಪೂರ್ವದ ಮರಳ್ಗಾಡಿನಲ್ಲಿವೆ. ಆಗ್ನೇಯ ಭಾಗದಲ್ಲಿರುವ ಜಬಾಲ್-ಟುಬೆಕ್ ಪ್ರದೇಶದಲ್ಲಿ ಪೂರ್ವ-ಮಧ್ಯಶಿಲಾಯುಗಗಳ ಹಂತದಲ್ಲಿ ಅನಂತರದ ಕಾಲದ ಎಲ್ಲ ಶಿಲಾಯುಗ ಸಂಸ್ಕøತಿಗಳಿಗೂ ಸೇರಿದ ಕಲ್ಲುಬಂಡೆಗಳ ಮೇಲೆ ಮಾಡಿದ ಕೆತ್ತನೆಗಳು ಕಂಡುಬಂದಿವೆ
 
[[ಜೆರಿಕೋ]] (ಈಗಿನ ಟೆಲ್-ಎಸ್-ಸುಲ್ತಾನ್) ಪರಿಸರದಲ್ಲಿ ಮಧ್ಯಶಿಲಾಯುಗದ ಬೇಟೆಗಾರರು ನೆಲಸಿದ್ದಕ್ಕೆ ಮಾಹಿತಿಗಳು ದೊರಕಿವೆ. ಇಲ್ಲಿ 1929ರಿಂದ 1936ರವರೆಗೆ ಜಾನ್ ಗಾಸ್ರ್ಟಾಂಗ್ ಮತ್ತು 1952ರಲ್ಲಿ ಕೆತಲಿನ್ ಕೆನ್ಯಾನ್ ಭೂಶೋಧನೆಗಳನ್ನು ನಡೆಸಿದರು. ಮಧ್ಯ ಶಿಲಾಯುಗದ ಬೇಟೆಗಾರರು ಬದಲಾಗುತ್ತಿದ್ದ ವಾತಾವರಣ ಮತ್ತು ವಾಯುಗುಣಗಳಿಂದಾಗಿ ಅಲೆಮಾರಿ ಜೀವನ ಮತ್ತು ಆಹಾರಸಂಗ್ರಹದ ಹಂತದಿಂದ ಮುಂದುವರಿದು, ಒಂದೆಡೆಯಲ್ಲಿ ನೆಲೆ ನಿಂತು ಆಹಾರ ಉತ್ಪಾದಿಸುವ ಹಂತವನ್ನು ಕ್ರಮೇಣ ತಲಪಿದರೆಂದೂ ಗ್ರಾಮೀಣ ಜೀವನವನ್ನು ರೂಢಿಸಿಕೊಂಡರೆಂದೂ ಈ ಶೋಧನೆಗಳಿಂದ ತಿಳಿದುಬರುತ್ತದೆ. ಬದಲಾದ ಈ ಸಾಂಸ್ಕøತಿಕ ವಿಧಾನವನ್ನು ನವಶಿಲಾಯುಗ ಸಂಸ್ಕøತಿಯೆಂದು ಕರೆಯುತ್ತಾರೆ. ಈ ಸಂಸ್ಕøತಿಯ ಎರಡು ಹಂತಗಳನ್ನು ಇಲ್ಲಿ ಗುರುತಿಸಲಾಗಿದೆ. ಕಂದಕವೊಂದರಲ್ಲಿ ಸುತ್ತುವರಿಯಲ್ಪಟ್ಟ ಕಲ್ಲಿನ ರಕ್ಷಣಾ ಕೋಟೆಯೊಳಗೆ ನಿರ್ಮಿಸಿದ ಗುಡಿಸಲುಗಳಲ್ಲಿ ಜನರು ವಾಸಿಸುತ್ತಿದ್ದುದು ಮೊದಲನೆಯ ಹಂತ. ಇವರು ಬೇಟೆಯಿಂದ ಆಹಾರ ಸಂಗ್ರಹಣೆ ಮಾಡುತ್ತಿದ್ದರೂ ಆಹಾರೋತ್ಪಾದನೆಯ ಮೊದಲ ಪ್ರಯತ್ನಗಳು ಇಲ್ಲಿ ಕಂಡುಬರುತ್ತವೆ. ಆಗಿನ ಜನರು ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಪಾತ್ರೆಗಳನ್ನು ಬಳಸುತ್ತಿದ್ದರು. ಎರಡನೆಯ ಹಂತದಲ್ಲಿ ಗ್ರಾಮೀಣ ಜೀವನದಲ್ಲಿ ಹಲವು ಸುಧಾರಣೆಗಳಾದುವು. ಜೇಡಿಮಣ್ಣಿನಲ್ಲಿ ಮಾಡಿ ಸುಟ್ಟ ಮಡಕೆಗಳ ಉಪಯೋಗ ಪ್ರಾರಂಭವಾಯಿತು. ಕಾರ್ಬನ್-14 ಕಾಲನಿರ್ಣಯ ವಿಧಾನದಿಂದ ಮೊದಲ ಹಂತವನ್ನು ಕ್ರಿ.ಪೂ.4ನೆಯ ಸಹಸ್ರಮಾನಕ್ಕೆ ನಿರ್ದೇಶಿಸಲಾಗಿದೆ. ಈಚೆಗೆ ದಕ್ಷಿಣ ಜಾರ್ಡನಿನ ಪೆಟ್ರಾ ಮತ್ತು ವಾಡಿ ಷಯಿಬ್ ನೆಲೆಗಳಲ್ಲಿ ನವಶಿಲಾಯುಗದ ಮೊದಲ ಹಂತದ ಸಂಸ್ಕøತಿಯ ಕುರುಹುಗಳು ಕಂಡುಬಂದಿವೆ. ದೇಶದ ವಿವಿಧ ಭಾಗಗಳಲ್ಲಿ ಹರಡಿರುವ ಬೃಹತ್ ಸಮಾಧಿ ಸಂಸ್ಕøತಿಯ ಅವಶೇಷಗಳು ಈ ಕಾಲಕ್ಕೆ ಸೇರುತ್ತವೆ.
 
ಕ್ರಿ.ಪೂ.4,500-3,000ಕ್ಕೆ ಸೇರಿದ ತಾಮ್ರಶಿಲಾಯುಗದ ಸಂಸ್ಕøತಿಯ ಅವಶೇಷಗಳು ಟೆಲ್-ಎಲ್-ಅಜ್ಜುಲ್ ನೆಲೆಯಲ್ಲಿ 1930-34 ಮತ್ತು 1938ರಲ್ಲಿ ವಿಲಿಯಮ್ ಫ್ಲಿಂಡರ್ಸ್‍ಪೆಟ್ರಿ ನಡೆಸಿದ ಸಂಶೋಧನೆಗಳಿಂದ ದೊರೆತಿವೆ. ಜೆರಿಕೋ ಬಳಿ ಇರುವ ಟೆಲೈಲತ್-ಎಲ್-ಫಸ್ಸುಲ್ ನೆಲೆಯಲ್ಲಿ 1930-38, 1960 ಮತ್ತು 1967ರಲ್ಲಿ ನಡೆಸಿದ ಭೂಶೋಧನೆಗಳಿಂದ ಕ್ರಿ.ಪೂ. ಸು.3,500ಕ್ಕೆ ನಿರ್ದೇಶಿಸಬಹುದಾದ ಈ ಸಂಸ್ಕøತಿಯ ಕಾಲದಲ್ಲಿ ಮಣ್ಣಿನ ಗೋಡೆಗಳಿಂದ ನಿರ್ಮಿಸಲಾದ ವಾಸಗೃಹಗಳು ಇದ್ದುದು ಗೊತ್ತಾಗಿದೆ. ಆ ಗೋಡೆಗಳ ಮೇಲೆ ವಿವಿಧ ಬಣ್ಣಗಳಿಂದ ಚಿತ್ರಗಳನ್ನು ರಚಿಸಲಾಗಿತ್ತು. ಆ ವೇಳೆಗೆ ವ್ಯವಸಾಯ ಬಹಳ ಸುಧಾರಿಸಿತ್ತು.
"https://kn.wikipedia.org/wiki/ಜೋರ್ಡಾನ್" ಇಂದ ಪಡೆಯಲ್ಪಟ್ಟಿದೆ