ಇಂಗ್ಲೆಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕನ್ನಡ ಕೊಂಡಿ, replaced: [[English language| → [[ಆಂಗ್ಲ|
೮೯ ನೇ ಸಾಲು:
ಇದರ ದಕ್ಷಿಣಕ್ಕೆ [[ಇಂಗ್ಲಿಷ್ ಕಡಲ್ಗಾಲುವೆ]] ಮತ್ತು ಡೋವರ್ ಜಲಸಂಧಿ ; ಪೂರ್ವಕ್ಕೆ [[ಉತ್ತರ ಸಮುದ್ರ]] ; ಉತ್ತರಕ್ಕೆ [[ಸ್ಕಾಟ್ಲೆಂಡ್]] ; ಪಶ್ಚಿಮಕ್ಕೆ [[ಐರಿಷ್ ಸಮುದ್ರ]] ಹಾಗೂ [[ವೇಲ್ಸ್]] ಸಂಸ್ಥಾನ, [[ಬ್ರಿಸ್ಟಲ್ ಕಡಲ್ಗಾಲುವೆ]] ಮತ್ತು [[ಅಟ್ಲಾಂಟಿಕ್ ಮಹಾಸಾಗರ]].
==ವಿಸ್ತೀರ್ಣ==
ಇದರ ವಿಸ್ತೀರ್ಣ 1.30.360 ಚ,ಕಿ.ಮೀ. (50,869 ಚ.ಮೈ.) ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ಸಂಯುಕ್ತರಾಜ್ಯದಲ್ಲೇ (ಯುನೈಟೆಡ್ ಕಿಂಗ್‍ಡಮ್) ಅತ್ಯಂತ ದೊಡ್ಡ ಘಟಕವಾದ ಇಂಗ್ಲೆಂಡು ಉಳಿದ ಎಲ್ಲ ಘಟಕಗಳಿಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವುದಲ್ಲದೆ ಕೈಗಾರಿಕೆಯಲ್ಲೂ ಹೆಚ್ಚು ಮುಂದುವರಿದಿದೆ. ಲಂಡನ್ ಇದರ ರಾಜಧಾನಿ. ಯೂರೋಪ್ ಖಂಡಕ್ಕೂ ಇಂಗ್ಲೆಂಡಿಗೂ ನಡುವೆ ಕಡಲಿರುವುದಾದರೂ ಇದರ ದಕ್ಷಿಣ ಹಾಗೂ ನೈಋತ್ಯತೀರಕ್ಕೂ ಯೂರೋಪ್ ಖಂಡಪ್ರದೇಶದ ಪಶ್ಚಿಮ ಭಾಗದಲ್ಲಿರುವ ಫ್ರಾನ್ಸಿಗೂ ಬಹಳ ಸಮೀಪ. ಡೋವರ್ ಜಲಸಂಧಿಯಂತೂ ಬಹಳ ಕಿರಿದು. ಇದರ ಅಗಲ ಕೇವಲ 21 ಮೈಲಿ. ಆದರೆ ಈ ಪ್ರದೇಶದಲ್ಲಿ ಬೀಸುವ ಕ್ಲುಪ್ತ ಮಾರುತಗಳೂ ಸಮುದ್ರದ ಉಬ್ಬರವಿಳಿತಗಳೂ ಶತ್ರುನೌಕೆಗಳಿಗೆ ಪ್ರತಿಕೂಲಕರವೆನಿಸಿದೆ. ಇಂಗ್ಲೆಂಡನ್ನು ಆಕ್ರಮಿಸಲೆಳಿಸಿದ ಫ್ರಾನ್ಸ್, ಸ್ಪೇನ್ ಮುಂತಾದ ದೇಶಗಳ ಪ್ರಯತ್ನಗಳು ಈ ಹಿಂದೆ ವಿಫಲವಾಗಲು ಈ ಸಮುದ್ರವೇ ಅಡ್ಡಿ ಆದರೆ ಇತರ ದೇಶಗಳೊಂದಿಗೆ ವಾಣಿಜ್ಯವೇ ಮುಂತಾದ ಸ್ನೇಹಸಂಬಂಧಗಳನ್ನು ಬೆಳೆಸುವುದಕ್ಕೂ ಸಾಮ್ರಾಜ್ಯ ಕಟ್ಟುವುದಕ್ಕೂ ಈ ಸಮುದ್ರ ಅಡ್ಡಿಯಾಗುವ ಬದಲು ಅನುಕೂಲಕರವಾಗಿಯೇ ಪರಿಣಮಿಸಿದೆ. ಪ್ರಾಕೃತಿಕ ==ಭೂವಿವರಣೆ ==
== ಪ್ರಾಕೃತಿಕ ಭೂವಿವರಣೆ ==
[[File:Keswick Panorama - Oct 2009.jpg|thumb|upright=1.5|alt=Blue lake between green hills.|right|[[Skiddaw|Skiddaw massif]], seen from [[Walla Crag]] in the [[Lake District]]]]
ಇಂಗ್ಲೆಂಡಿನ ಏಳಿಗೆಗೆ ಇದರ ಹಿತಕರ ವಾಯುಗುಣವೂ ಒಂದು ಕಾರಣ ಯಾವ ಪ್ರದೇಶವೂ ಸಮುದ್ರಕ್ಕಿಂತ ತುಂಬ ದೂರದಲ್ಲಿಲ್ಲ. ಪಶ್ಚಿಮತೀರದ ಹತ್ತಿರ ಗಲ್ಫ್ ಸ್ಟ್ರೀಂ ಎಂಬ ಉಷ್ಣೋದಕ ಪ್ರವಾಹ ಹರಿಯುತ್ತದೆ. ಚಳಿಗಾಲದಲ್ಲಿ ನೈಋತ್ಯದಿಂದಲೂ ಬೇಸಗೆಯಲ್ಲಿ ಪಶ್ಚಿಮದಿಂದಲೂ ಬೀಸುವ ಮಾರುತಗಳು ಬೇಸಗೆಯ ಸೆಕೆಯನ್ನೂ ಚಳಿಗಾಲದ ಚಳಿಯನ್ನೂ ತಗ್ಗಿಸುತ್ತವೆ. ಪೂರ್ವಕ್ಕಿಂತ ಪಶ್ಚಿಮದ ಕಡೆಯ ಪ್ರದೇಶ ಹೆಚ್ಚು ಹಿತಕರ. ಪಶ್ಚಿಮದ ಮಾರುತಗಳು ವಾಯುಗುಣವನ್ನು ಸಮಧಾತುವಾಗಿ ಇಡುವುದರ ಜೊತೆಗೆ ಪಶ್ಚ್ಚಿಮತೀರಕ್ಕೆ ಹೆಚ್ಚು ಮಳೆ ಬೀಳಿಸುತ್ತವೆ.
Line ೯೬ ⟶ ೯೭:
ಇಂಗ್ಲೆಂಡಿನಲ್ಲಿ ವ್ಯಾಪಕವಾದ ಪರ್ವತಪ್ರದೇಶಗಳಿಲ್ಲ. ಆದರೆ ಅಲ್ಲಿ ಮಟ್ಟಸವಾದ ಬಯಲುಗಳೂ ಇಲ್ಲ. ದೇಶದ ಬಹುಭಾಗ ಸ್ವಲ್ಪ ಇಳಿಜಾರಾಗಿದೆ. ಇಡೀ ಬ್ರಿಟನ್ನಿನ ಕರಾವಳಿಯಂತೆ ಇಂಗ್ಲೆಂಡಿನ ಕರಾವಳಿಯೂ ವೈವಿಧ್ಯಮಯ. ನದಿಗಳು ತಮ್ಮ ಮುಖದ ಬಳಿ ತಂದು ತುಂಬುವ ಮಣ್ಣನ್ನು ಕಡಲಿನ ಉಬ್ಬರವಿಳಿತಗಳು ಕೊಚ್ಚಿಹಾಕುತ್ತಿರುತ್ತವೆ. ಆದ್ದರಿಂದ ನದಿಗಳು ಸಮುದ್ರವನ್ನು ಕೂಡುವೆಡೆಗಳಲ್ಲಿ ಅಳಿವೆಗಳಾಗಿವೆ. ಇವು ಬಂದರುಗಳಿಗೆ ಬಹಳ ಅನುಕೂಲಕರ. ಪೂರ್ವತೀರದಲ್ಲಿ ಉತ್ತರದ ಟೈನ್ ನದಿಯ ಮುಖದ ಬಳಿಯಲ್ಲಿ ನ್ಯೂಕ್ಯಾಸಲ್ ಎಂಬ ರೇವುಪಟ್ಟಣವಿದೆ. ವೇರ್ ನದಿಯ ಮುಖದಲ್ಲಿ [[ಸಂಡರ್‍ಲೆಂಡ್]] ಎಂಬ ಪಟ್ಟಣವಿದೆ. ಟೀಸ್ ಮುಖದ ಬಳಿಯಲ್ಲಿ ಮಿಡ್ಲ್ಸ್ ಬರೊ ಎಂಬ ಪಟ್ಟಣವಿದೆ. ಇದು ಬಹಳ ದೊಡ್ಡದಾದ ಕಬ್ಬಿಣ-ಉಕ್ಕು ಕೈಗಾರಿಕೆಯ ಕೇಂದ್ರ. ಈಚೆಗೆ ಈ ಪ್ರದೇಶದಲ್ಲಿ ಅನೇಕ ರಾಸಾಯನಿಕ ಕೈಗಾರಿಕೆಗಳ ನಗರಗಳು ಎದ್ದಿವೆ. ಇವುಗಳಲ್ಲಿ ಬಿಲ್ಲಿಂಗ್ ಹ್ಯಾಂ ಎಂಬುದು ಮುಖ್ಯ. ಹಂಬರ್ ನದಿಯ ಮುಖದಲ್ಲಿ ಹಲ್ ರೇವುಪಟ್ಟಣವಿದೆ. ಢೇಮ್ಸ ನದಿಯ ಅಳಿವೆಯ ಮೇಲಂತೂ ಬ್ರಿಟನ್ನಿನ ಅತ್ಯಂತ ದೊಡ್ಡ ನಗರ ಹಾಗೂ ರೇವುಪಟ್ಟಣವಾದ ಲಂಡನ್ ಇದೆ. ಬಂಡೆಗಳಿಲ್ಲದ ಈ ನದಿಯ ಪಾತ್ರದ ಉದ್ದಕ್ಕೂ ಸದಾ ಹೂಳು ತೆಗೆಸುತ್ತ್ತಿರುವುದರಿಂದ ಸಾಗರಗಾಮಿ ಹಡಗುಗಳು ಲಂಡನ್ನಿನ ಹೊರ ರೇವುಪಟ್ಟಣವಾದ ಟಿಲ್‍ಬರಿಯವರೆಗೂ ಬರುತ್ತವೆ. ಸಾಗರಕ್ಕೆ ಕೊಂಡೊಯ್ಯುವ ಹಡಗುಗಳು ಲಂಡನ್ನಿನ ವಕ್ಷಸ್ಥಲವನ್ನೇ ಪ್ರವೇಶಿಸುತ್ತವೆ.
ದಕ್ಷಿಣದಲ್ಲಿ ಕೆಲವು ಕಿರಿ ಆಳದ ಕೊಲ್ಲಿಗಳಿವೆ. ಇವುಗಳಲ್ಲಿ ಎರಡರ ಮೇಲೆ ಪೋತ್ರ್ಸ್‍ಮತ್ ಮತ್ತು ಲ್ಯಾಂಗ್ಸ್‍ಟನ್ ರೇವುಗಳಿವೆ. ಸೌತಾಂಪ್ಟನ್ ವಾಟರ್ ಎಂಬಲ್ಲಿರುವ ಸೌತಾಂಪ್ಟನ್ ಬಂದರು ಬಲು ದೊಡ್ಡದು. ಪ್ಲಿಮತ್ ಮತ್ತು ಡೇವನ್‍ಪೋರ್ಟ್ ಇನ್ನೆರಡು ರೇವುಗಳು. ವಾಯುವ್ಯದಲ್ಲಿ ಡೀನದಿಯ ಅಳಿವೆ ಆಳವಿಲ್ಲ. ಇಲ್ಲಿನ ಚೆಸ್ಟರ್ ಎಂಬ ರೇವುಪಟ್ಟಣ ರೋಮನ್ ಆಧಿಪತ್ಯದ ಕಾಲದಲ್ಲಿ ಪ್ರಸಿದ್ಧವಾಗಿತ್ತು. ಮರ್ಸಿನದಿಯ ಮುಖದಲ್ಲಿ ಲಿವರ್‍ಪೂಲ್, ಬರ್ಕನ್‍ಹೆಡ್ ಬಂದರಿವೆ. ಇವು ಲಂಡನ್ನಿಗೂ ಸವಾಲು ಹಾಕುವಷ್ಟು ಉತ್ತಮವಾಗಿವೆ.
 
==ಭೂ ಇತಿಹಾಸ==
[[File:Stonehenge2007 07 30.jpg|thumb|alt=Sun shining through row of upright standing stones with other stones horizontally on the top.|[[Stonehenge]], a [[Neolithic]] [[monument]]]]
"https://kn.wikipedia.org/wiki/ಇಂಗ್ಲೆಂಡ್" ಇಂದ ಪಡೆಯಲ್ಪಟ್ಟಿದೆ