ಕೇದಾರನಾಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 122.172.255.215 (talk) to last revision by InternetArchiveBot
೧೭ ನೇ ಸಾಲು:
== ಐತಿಹ್ಯ ==
 
ಹಿಮಾಲಯ ಶ್ರೇಣಿಯಲ್ಲಿ ರದ್ರನಾಥನರುದ್ರನಾಥನ ಧಾರ್ಮಿಕ ತಾಣವಿದೆ. ಹರಿದ್ವಾರದಿಂದ ೨೫೦ ಕಿ.ಮೀ ದೂರದಲ್ಲಿ ಹಿಮಗಿರಿಗಳ ನಡುವೆ ಇರುವ ಪುಣ್ಯ ಕ್ಷೇತ್ರ. ಪೌರಾಣಿಕ ಹಿನ್ನಲೆಯಂತೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಕೊಂದು ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಈಶ್ವರನ ದರ್ಶನ ಪಡೆಯಲು ವಾರಣಾಸಿ ಕ್ಷೇತ್ರಕ್ಕೆ ಬರುತ್ತಾರೆ. ಅವರನ್ನು ಪರೀಕ್ಷಿಸಲು ಶಿವ ಗುಪ್ತ ಕಾಶಿಗೆ ನಂತರ ಕೇದಾರಕ್ಕೆ ಬರುತ್ತಾನೆ. ಇದನ್ನು ಅರಿತ ಪಾಂಡವರೂ ಕೇದಾರಕ್ಕೆ ಬರುತ್ತಾರೆ.ಶಿವನು ಅವರಿಗೆ ಕಾಣದಂತೆ ಎತ್ತಿನ ರೂಪ ತಾಳಿ ಮೇಯುತ್ತಿರುತ್ತಾನೆ. ಇದನ್ನು ಗ್ರಹಿಸಿದ ಭೀಮನು ಶಿವನ ದರ್ಶನ ಪಡೆದೇ ತೀರುವ ಛಲದಿಂದ ಎರಡು ಪರ್ವತಗಳ ನಡುವೆ ಒಂದೊಂದು ಕಾಲಿಟ್ಟು ಹಸುಗಳು ಹೋಗುವ ದಾರಿಯಲ್ಲಿ ನಿಂತು ಬಿಡುತ್ತಾನೆ. ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ. ಆದರೆ ಒಂದು ಎತ್ತು ಮಾತ್ರ ಹಾಗೇ ಹೋಗದೆ ನಿಂತು ಬಿಡುತ್ತದೆ. ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ. ಶಿರೋ ಭಾಗ ರುದ್ರನಾಥ,
ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ.
 
"https://kn.wikipedia.org/wiki/ಕೇದಾರನಾಥ" ಇಂದ ಪಡೆಯಲ್ಪಟ್ಟಿದೆ