"ಭೂಮಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by 2401:4900:16F4:13E9:1:1:3169:52D7 (talk) to last revision by InternetArchiveBot
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (Reverted edits by 2401:4900:16F4:13E9:1:1:3169:52D7 (talk) to last revision by InternetArchiveBot)
== ಇತಿಹಾಸ ==
*ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು [[:en:solar nebula|solar nebula]] ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು.
*ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರ ರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತಗಾತ್ರದ [[:en:Theia (planet)|ಥೀಯ]] ಎಂಬ ಕಾಯ ಭೂಮಿಯನ್ನು ತಾಡಿಸಿದ್ದರಿಂದ ಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು [[:en:Volcano|ಅಗ್ನಿಪರ್ವತ]]ಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು;
*[[ಧೂಮಕೇತು]]ಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ [[:en:water vapor|ನೀರಾವಿ]]ಗಳಿಂದ, [[:en:Origin of the world's oceans|ಮೊದಲ ಸಾಗರಗಳು]] ರೂಪುಗೊಂಡವು.<ref>A. Morbidelli ''et al'', 2000, "[http://adsabs.harvard.edu/abs/2000M&PS...35.1309M Source Regions and Time Scales for the Delivery of Water to Earth]", ''Meteoritics & Planetary Science'', vol. 35, no. 6, pp. 130920.</ref> ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಜೀವಾಧಾರವಾದ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು. *ಭೂವಿಜ್ಞಾನದಲ್ಲಿ ಈ ಕಾಲವನ್ನು ಆದಿಜೀವಿಕಲ್ಪ ಎಂದು ಗುರುತಿಸಲಾಗಿದೆ.<ref>W. Ford Doolitte, "Uprooting the Tree of Life", ''Scientific American'', Feb. 2000.</ref> ಆರಂಭದಲ್ಲಿ ಕೆಳದರ್ಜೆಯ ಸಸ್ಯವಾದ ಪಾಚಿ ಮೈದಳೆಯಿತು. [[ದ್ಯುತಿಸಂಶ್ಲೇಷಣೆ]]ಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ [[ಆಮ್ಲಜನಕ]]ವು ವಾಯುಮಂಡಲದಲ್ಲಿ ಶೇಖರವಾಗಿ [[:en:ozone layer|ಓಜೋನ್ ಪದರ]]ವನ್ನು ನಿರ್ಮಿಸಿತು.
*ದೊಡ್ಡ ಕೋಶಗಳಲ್ಲಿ ಸಣ್ಣ ಕೋಶಗಳ ಸಂಘಟನೆಯು [[:en:eukaryotes|ಯೂಕ್ಯಾರಿಯೋಟ್]] ಎಂದು ಕರೆಯಲಾಗುವ [[:en:endosymbiotic theory|ಸಂಕೀರ್ಣ ಕೋಶಗಳ ಅಭಿವೃದ್ಧಿ]]ಗೆ ಎಡೆಮಾಡಿಕೊಟ್ಟಿತು. ಗುಂಪಾಗಿದ್ದ ಜೀವಕೋಶಗಳು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ನೈಪುಣ್ಯತೆ ಹೊಂದುತ್ತಿದ್ದಂತೆ ನಿಜವಾದ ಬಹುಕೋಶ ಜೀವಿಗಳು ರೂಪುಗೊಂಡವು.
"https://kn.wikipedia.org/wiki/ವಿಶೇಷ:MobileDiff/1081520" ಇಂದ ಪಡೆಯಲ್ಪಟ್ಟಿದೆ