ಜೋರ್ಡಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Fixed Lint errors by replacing obsolete font tags, general fixes enabled
೪೩ ನೇ ಸಾಲು:
|HDI = {{increase}} 0.760
|HDI_rank = 86ನೆಯದು
|HDI_category = <fontspan colorstyle="color:#ffcc00;">ಮಧ್ಯಮ</fontspan>
|Gini = 38.8
|Gini_year = 2002–03
|Gini_category = <fontspan colorstyle="color:#ffcc00;">ಮಧ್ಯಮ</fontspan>
|currency = ಜೋರ್ಡಾನಿನ ದಿನಾರ್
|currency_code = JOD
೬೪ ನೇ ಸಾಲು:
 
'''ಜೋರ್ಡಾನ್''' (ಅರಾಬಿಕ್ ಹೆಸರು - '''الأردن'''ّ ಅಥವಾ '''ಅಲ್-ಉರ್ದುನ್ನ್''')ಅಥವಾ ಜಾರ್ಡನ್ [[ಪಶ್ಚಿಮ ಏಷ್ಯಾ]]ದ [[ಅರಬ್]] ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ [[ಸಿರಿಯಾ]], ಈಶಾನ್ಯಕ್ಕೆ [[ಇರಾಖ್]], ಪಶ್ಚಿಮದಲ್ಲಿ [[ಇಸ್ರೇಲ್]] ಮತ್ತು [[ವೆಸ್ಟ್ ಬ್ಯಾಂಕ್]] ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ [[ಸೌದಿ ಅರೇಬಿಯಾ]] ರಾಷ್ಟ್ರಗಳಿವೆ. ಜೋರ್ಡಾನ್ ಇಸ್ರೇಲ್ ಜೊತೆಗೆ [[ಮೃತ ಸಮುದ್ರ]]ದ ಎಲ್ಲೆಗಳನ್ನು ಹಂಚಿಕೊಂಡಿದೆ. [[ಅಖಾಬಾ ಖಾರಿ]]ಯು ಜೋರ್ಡಾನ್, ಇಸ್ರೇಲ್, [[ಈಜಿಪ್ಟ್]] ಮತ್ತು ಸೌದಿ ಅರೇಬಿಯಾಗಳಿಗೆ ಹೊಂದಿಕೊಂಡಿದೆ.
 
 
ಜಾರ್ಡನಿನ ವ್ಯವಹಾರ ಭಾಷೆ ಅರಬ್ಬೀ.
Line ೧೦೮ ⟶ ೧೦೭:
 
ಕ್ರಿ.ಪೂ.1300ರಿಂದ 1000ರ ವರೆಗಿನ ಕಾಲದಲ್ಲಿ ಈ ಪ್ರದೇಶದ ಮೇಲೆ ಇಕ್ಕೆಲಗಳಿಂದಲೂ ದಾಳಿಗಳು ನಡೆಯುತಿದ್ದವು. ಮೋಅಬ್ ಮತ್ತು ಎಡೋಮ್ ರಾಜ್ಯಗಳನ್ನು ಡೇವಿಡ್ ಆಕ್ರಮಿಸಿ, ಮೋಅಬ್‍ನ ಮೂರನೆಯ ಎರಡು ಭಾಗದ ಜನರನ್ನೂ ಎಡೋಮ್‍ನ ಎಲ್ಲ ಜನರನ್ನೂ ಕೊಂದ. ಅಮ್ಮಾನ್ ಶತ್ರು ವಶವಾದರೂ ಕ್ರಿ.ಪೂ.960ರ ವೇಳೆಗೆ ಮತ್ತೆ ಸ್ವಾತಂತ್ರ ಗಳಿಸಿಕೊಂಡಿತು. ತೀರ ಪ್ರದೇಶದ ಎಜಿಯನ್ ಗೆಬರ್ ಎಂಬಲ್ಲಿ ಸಾಲೊಮನ್ ಒಂದು ಬಂದರನ್ನು ನಿರ್ಮಿಸಿದ.
ಜುಡಾ ಮತ್ತು ಎಡೋಮ್‍ಗಳ ನಡುವೆ ಸತತ ಹೋರಾಟ ನಡೆಯುತ್ತಿತ್ತು. ಹಿಬ್ರೂ ದೊರೆ ಅಮ್‍ಜóಯ ಸಲಾವನ್ನು (ಪೆಟ್ರಾ) ಆಕ್ರಮಿಸಿಕೊಂಡು, 10,000 ಜನರನ್ನು ಕೊಂದುಹಾಕಿದ. ಅನಂತರ ಎಡೋಮ್‍ವರೆಗಿನ ಪೂರ್ವಭಾಗವನ್ನು ಅಸ್ಸಿರಿಯನ್ ದೊರೆ 3ನೆಯ ಅದಾದ್ನಿರಾರಿ (ಕ್ರಿ.ಪೂ.811-782) ಗೆದ್ದರೂ ಮತ್ತೆ ಅಲ್ಲಿ ದಂಗೆಗಳಾದವು. 3ನೆಯ ಟಿಗ್ಲಾತ್ ಪಿಲೇಸರ್ (ಕ್ರಿ.ಪೂ.745-727)ಅವನ್ನು ಅಡಗಿಸಿದ. ಕ್ರಿ.ಪೂ.612ರಲ್ಲಿ ಅಸ್ಸಿರಿಯನ್ ಚಕ್ರಾಧಿಪತ್ಯ ಅಳಿಯುವವರೆಗೂ ಈ ಪ್ರದೇಶ ಅವರ ವಶದಲ್ಲಿ ಉಳಿದಿತ್ತು. ಅನಂತರ ಬ್ಯಾಬಿಲೋನಿಯ ಮತ್ತು ಪರ್ಷಿಯಗಳ ವಶವಾಗಿದ್ದ ಜಾರ್ಡನ್ ಕ್ರಿ.ಪೂ.5ನೆಯ ಶತಮಾನದ ಕೊನೆಯಲ್ಲಿ ನಬಾಟೇಯನರ ಅಧೀನವಾಯಿತು. ಆಗ ಪೆಟ್ರಾ ಅವರ ರಾಜಧಾನಿಯಾಯಿತು.
 
ಅಸ್ಸಿರಿಯನರ ಅನಂತರ ಸ್ವಲ್ಪಕಾಲ ನಿಯೋಬ್ಯಾಬಿಲೋನಿಯನರು ಮತ್ತು ಪರ್ಷಿಯನರು ಜಾರ್ಡನನ್ನು ಆಳಿದರು. ಗ್ರೀಕರ ಆಗಮನದವರೆಗೆ ದೇಶದಲ್ಲಿ ಯಾವ ಪ್ರಗತಿಯೂ ಕಂಡುಬರಲಿಲ್ಲ. ಗ್ರೀಕರ ಆಳ್ವಿಕೆಯ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲಾಯಿತು. ಅನೇಕ ಪಟ್ಟಣಗಳು ನಿರ್ಮಾಣವಾದುವು. ವ್ಯಾಪಾರ ವೃದ್ಧಿಗೊಂಡಿತು.
Line ೧೨೪ ⟶ ೧೨೩:
ಜಾರ್ಡನಿನಲ್ಲಿ ಬ್ರಿಟಿಷರ ಪರಭಾವವನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಅನೇಕ ದಂಗೆಗಳು ಎದ್ದುವು. 1956ರಲ್ಲಿ ದೊರೆ ಹುಸೇನ್ ಜಾರ್ಡನಿನ ಬ್ರಿಟಿಷ್ ಮಹಾದಂಡನಾಯಕನನ್ನು ವಜ ಮಾಡಿದರು. ಜಾರ್ಡನಿನ ರಕ್ಷಣೆಗಾಗಿ 1948ರಲ್ಲಿ ಬ್ರಿಟನಿನೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು 1957ರಲ್ಲಿ ಕೊನೆಗೊಳಿಸಲಾಯಿತು. 1967ರಲ್ಲಿ ಇಸ್ರೇಲಿನೊಂದಿಗೆ ನಡೆದ ಯುದ್ಧದಲ್ಲಿ ಜಾರ್ಡನ್ ನದಿಯ ಪಶ್ಚಿಮ ದಂಡೆಯ ಪ್ರದೇಶವನ್ನೆಲ್ಲ ಇಸ್ರೇಲ್ ಆಕ್ರಮಿಸಿಕೊಂಡಿತು. ಜೆರೊಸೆಲಮ್ ಹಳೆ ನಗರ ಇಸ್ರೇಲಿನ ಭಾಗವಾಯಿತು. ಉಳಿದ ಭಾಗವೆಲ್ಲ ಇಸ್ರೇಲಿ ಆಕ್ರಮಿತ ಪ್ರದೇಶ ಎನಿಸಿಕೊಂಡಿತು. ಪ್ಯಾಲಸ್ಟೀನಿಯನ್ ಗೆರಿಲಾ ಕಾರ್ಯಾಚರಣೆಗೆ ಜಾರ್ಡನ್ ನೆಲೆಯಾಯಿತು. ಸರ್ಕಾರಕ್ಕೂ ಗೆರಿಲಾಗಳಿಗೂ ನಡುವೆ ಘರ್ಷಣೆಗಳು ಮುಂದುವರಿದುವು. ಇವು ಅಂತರ್ಯುದ್ಧವಾಗಿ ಪರಿಣಮಿಸಿದುವು (1970). 1971ರಲ್ಲಿ ಸರ್ಕಾರ ವಿಜಯ ಗಳಿಸಿತು. 1973ರಲ್ಲಿ ನಡೆದ ಅರಬ್-ಇಸ್ರೇಲಿ ಯುದ್ಧದಲ್ಲಿ ಜಾರ್ಡನ್ ಭಾಗವಹಿಸಲಿಲ್ಲ.
 
ಈಗ ಜಾರ್ಡನಿನಲ್ಲಿರುವುದು ಸಂವಿಧಾನಬದ್ಧ ರಾಜತ್ವ. ಹುಸೇನ್ ಜಾರ್ಡನಿನ ದೊರೆಯಾಗಿ ಮುಂದುವರಿಯುತ್ತಿದ್ದಾರೆ. ವಿಧಾನಮಂಡಲದಲ್ಲಿ ಎರಡು ಸದನಗಳುಂಟು. ಕೆಳಸದನದಲ್ಲಿ 60 ಜನ ಚುನಾಯಿತ ಸದಸ್ಯರಿರುತ್ತಾರೆ. ಮೇಲಿನದು ಸೆನೆಟ್ ಸಭೆ. ಸೆನೆಟ್‍ನ ಎಲ್ಲ 30 ಜನ ಸದಸ್ಯರೂ ದೊರೆಯಿಂದ ನಾಮಕರಣ ಹೊಂದುತ್ತಾರೆ.
 
== ಇದನ್ನೂ ನೋಡಿ ==
Line ೧೩೦ ⟶ ೧೨೯:
* [[ಜಾರ್ಡನ್ ನದಿ]]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾರ್ಡನ್}}
 
[[ವರ್ಗ:ಏಷ್ಯಾ ಖಂಡದ ದೇಶಗಳು]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಜೋರ್ಡಾನ್" ಇಂದ ಪಡೆಯಲ್ಪಟ್ಟಿದೆ