ಮನ್ನಾ ಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಅವರ ಹೆಸರಿನ ಮೂಲರೂಪವನ್ನು ಸೇರಿಸಲಾಗಿದೆ
ಚುNo edit summary
೨೦ ನೇ ಸಾಲು:
[[ಚಿತ್ರ:Mannada two.jpg|thumb|right|250px|ಮನ್ನಾಡೆ ಅವರಿಗೆ ''ದಾದಾಸಾಹೇಬ್ ಫಾಲ್ಕೆ'' ಪ್ರಶಸ್ತಿ ಸಿಕ್ಕಿದಾಗ]]
 
ಪ್ರಬೋಧ ಚಂದ್ರ ದೇ ([[ಅಸ್ಸಾಮಿ|ಅಹೋಮಿಯಾ]]: মান্না দে "ಮನ್ನಾ ದೇ"; ಮೇ ೧, ೧೯೧೯ - ಅಕ್ಟೋಬರ್ ೨೪ ೨೦೧೩) ''ಮನ್ನಾ ದೇ'' [[ಭಾರತ|ಭಾರತದ]] ಪ್ರಸಿದ್ಧ ಗಾಯಕರಲ್ಲಿ ಒಬ್ಬರು.
 
೧೯೬೦-೭೦ ರ ದಶಕದ ಸಮಯದಲ್ಲಿ, ದೇಶದಾದ್ಯಂತ ಹಿಂದಿ, ಬಂಗಾಳೀ ಚಿತ್ರರಂಗದ ಮಧುರಗೀತೆಗಳನ್ನು ಹಾಡಿರಂಜಿಸುತ್ತಿದ್ದ ಮನ್ನಾಡೆಯವರ ಛಾಪನ್ನು ಮೂಡಿಸುವ ಗೀತೆಗಳನ್ನು ಕೇಳಿದ ಕೂಡಲೇ ಮನ್ನಾಡೆ, ನಮಗೆ ಫಕ್ಕನೆ ನೆನೆಪಾಗುತ್ತಾರೆ. ಆಗಿನಕಾಲದಲ್ಲಿ ’ಮುಖೇಶ್’, ಒಂದು ಶೈಲಿಯ ಗಾಯಕರು. ’ಮೊಹಮ್ಮದ್ ರಫಿ,’ ಇನ್ನೊಂದು ತರಹ. ಮತ್ತೆ ’ಮನ್ನಾಡೆ’, ಹಿಂದೂಸ್ತಾನಿ ಸಂಗೀತದ ಜಾಡನ್ನು ಆಧರಿಸಿ ಹಲವಾರು ಹಾಡುಗಳನ್ನು ಹಾಡಿದ್ದಾರೆ, ’ಏ ಭಾಯ್ ಝರ ದೇಖ್ ಕೆ ಚಲೊ’, ಗೀತೆ, ರಾಜ್ ಕಪೂರ್ ರವರ ಕಾಲದ್ದು. ಆದರೆ ಅದನ್ನು ಮನ್ನಾಡೆ ಹಾಡಿದ ರೀತಿ ಅತ್ಯಂತ ರೋಚಕವಾದದ್ದು. ಆ ಹಾಡಿನಲ್ಲಿ ತಮ್ಮೆಲ್ಲಾ ಭಾವನೆ ಸಂವೇದನೆಗಳನ್ನು ತುಂಬಿ, ರಾಜಕಪೂರ್ ರವರ ಪಾತ್ರಕ್ಕೆ ತುಂಬು-ಪೋಷಣೆ ನೀಡಿದ್ದಾರೆ. ಬಹುಶಃ ಆ ಹಾಡು ಅವರಲ್ಲದೆ ಬೇರೆ ಯಾರೂ ಹಾಡಲು ಸಾಧ್ಯವಿಲ್ಲವೇನೋ ಎನ್ನುವಷ್ಟು ಭಾವ ಆ ಗೀತೆಯಲ್ಲಡಗಿದೆ.
"https://kn.wikipedia.org/wiki/ಮನ್ನಾ_ಡೆ" ಇಂದ ಪಡೆಯಲ್ಪಟ್ಟಿದೆ