ಜೀವನಚರಿತ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜೀವನಚರಿತ್ರೆ
 
 
೧೯ ನೇ ಸಾಲು:
ಯಾವ ದೇಶದಲ್ಲಿಯೇ ಆಗಲಿ, ಯಾವ ಕಾಲದಲ್ಲಿಯೇ ಆಗಲಿ, ಜೀವನಚರಿತ್ರೆಗೆ ಹೋಲಿಸಿದರೆ ಆತ್ಮಚರಿತ್ರೆ ಸಂಖ್ಯಾದೃಷ್ಟಿಯಿಂದ ತುಂಬ ಕಡಿಮೆ. ಸಾಹಿತ್ಯಗುಣದ ದೃಷ್ಟಿಯಿಂದ, ಪಾಶ್ಚಾತ್ಯದೇಶಗಳಲ್ಲಿ ಉತ್ತಮೋತ್ತಮ ಕೃತಿಗಳು ಸೃಷ್ಟಿಯಾಗಿವೆ. ಇಂಗ್ಲೆಂಡಿನ ಅತ್ಯಂತ ಪ್ರಸಿದ್ಧ ಆತ್ಮಕಥನಕಾರರಲ್ಲಿ-ರೋಮನ್ ಚಕ್ರಾಧಿಪತ್ಯದ ಚರಿತ್ರೆಯನ್ನು ಬರೆದಿರುವ ಗಿಬನ್ (1737-1794), ಕವಿ-ವಿಮರ್ಶಕ ಎಡ್ಮಂಡ್ ಗಾಸ್ (1849-1928), ಕಾರ್ಡಿನಲ್ ನ್ಯೂಮನ್ (1801-1890) ತತ್ತ್ವಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞ ಜೆ.ಎಸ್.ಮಿಲ್ (1806-0873), ಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಹರ್ಬರ್ಟ್ ಸ್ಪೆನ್‍ಸರ್ (1820-1903) ಮತ್ತು ಅತ್ಯಂತ ಈಚಿನ ಬರಹಗಾರ ಸಾಮರ್‍ಸೆಟ್ ಮಾಮ್ (1874-1965) ಇವರನ್ನು ಸ್ಮರಿಸಬಹುದು. ಮಾಮ್‍ನ ಸಮಿಂಗ್ ಅಪ್‍ನಲ್ಲಿ (ಉಪಸಂಹಾರ) ಬಿಚ್ಚುಮನಸ್ಸಿನ ನಿಸ್ಸಂಕೋಚ ಆತ್ಮವಿಮರ್ಶೆ ಗಂಭೀರಗತಿಯಲ್ಲಿ ಸಾಗಿ, ಅತ್ಯಂತ ಸ್ವಾರಸ್ಯವಾಗಿದೆ. "ನಾನು ಈ ಆತ್ಮಚರಿತ್ರೆಯ ಬರೆವಣಿಗೆಯಲ್ಲಿ ಅಪಾರ ಶ್ರಮವಹಿಸಿದ್ದೇನೆ; ಅದಕ್ಕಾಗಿ ತುಂಬ ಸಂಶೋಧನೆ ಮಾಡಿದ್ದೇನೆ; ಆದರೂ ಇದೊಂದು ಕಟ್ಟು ಕಥಯೆ"ಎಂಬ ಮಾಮ್‍ನ ಮಾತು ಗಮನಾರ್ಹ. ಸ್ವಲ್ಪವೂ ಶ್ರಮವಹಿಸದೆ ನೆನಪುಗಳನ್ನೆ ನೆಮ್ಮಿ ಬರೆಯುವ ಆತ್ಮಚರಿತ್ರೆ ಅಪಕ್ವ ಲೇಖಕನ ಕೈಲಿ ಯಾವ ರೂಪವನ್ನೂ ತಳೆಯಬಹುದೆಂಬುದನ್ನು ಇದರಿಂದ ಊಹಿಸಿಕೊಳ್ಳಬಹುದು.
 
ಫ್ರಾನ್ಸಿನ ಕ್ರಾಂತಿಕಾರಿ ಲೇಖಕ ರೂಸೋ ತನ್ನ ಆತ್ಮಕಥೆಯನ್ನು ಕನ್‍ಫೆಷನ್ (ತಪ್ಪೊಪಿಗೆ) ಎಂದು ಕರೆದಿದ್ದಾನೆ. ಎಂದ ಮಾತ್ರಕ್ಕೆ ಗ್ರಂಥದ ತುಂಬ ಅವನ ದೋಷದೌರ್ಬಲ್ಯಗಳ ಅವಿವೇಕಗಳ ಪಾಪಕಾರ್ಯಗಳ ಉಲ್ಲೇಖವೇ ತುಂಬಿಕೊಂಡಿದೆ ಎಂದು ಭಾವಿಸಬಾರದು. ಎಂಥ ಪ್ರಾಮಾಣಿಕ ಲೇಖಕನಾದರೂ ತನ್ನ ಅವಗುಣಗಳೆಲ್ಲವನ್ನೂ ಒಂದನ್ನೂ ಬಿಡದೆ ಹೇಳಿಕೊಳ್ಳುವುದಿಲ್ಲ. ರೂಸೋ ತನ್ನ ತಪ್ಪುಗಳ ಒಪ್ಪಿಗೆಗೂ ಇತರ ಸಂಗತಿಗಳ ಜೊತೆಗೆ ಸಮಪ್ರಾಧಾನ್ಯವಿತ್ತಿದ್ದಾನೆ. [[ಥಾಮಸ್ ಡಿ ಕ್ವಿನ್ಸಿ|ಡೆ ಕ್ವಿನ್ಸಿ]] ಎಂಬ ಇಂಗ್ಲಿಷ್ ಲೇಖಕನೂ ಇದೇ ಮಾದರಿಯ ಆತ್ಮಚರಿತ್ರೆಯೊಂದನ್ನು (ಕನ್‍ಫೆಷನ್ ಆಫ್ ಎನ್ ಓಪಿಯಂ ಈಟರ್) ಲೇಖಿಸಿದ್ದಾನೆ. ಆತ್ಮಚರಿತ್ರೆಯಲ್ಲಿ ಸತ್ಯನಿಷ್ಠೆ ಇರಬೇಕು ಸರಿ, ಆದರೆ ಅದು ಎಂಥ ಸತ್ಯ? ಸರ್ವರಿಗೂ ಸಾಮಾನ್ಯವಾದ ಚಿಲ್ಲರೆ ಸಂಗತಿಗಳ ಯಥಾವತ್ತಾದ ನಿರೂಪಣೆಯಲ್ಲಿ ನೈಜತೆ ತೋರಬಹುದು. ಅದರಲ್ಲಿ ಬದುಕಿನ ಅಂತರಂಗನಿಷ್ಠವಾದ ಸತ್ಯ ಅಡಗಿದ್ದೀತೆ? ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕೊಡುವಂಥದು ಜರ್ಮನಿಯ ಮಹಾಕವಿ ಗಯಟೆಯ (1749-1832) ಮಹಾಕೃತಿ ಎನಿಸಿದ ಆತ್ಮಚರಿತೆ. ಕಾವ್ಯ ಮತ್ತು ಸತ್ಯ ಎಂಬ ಕೃತಿನಾಮ ಅವನ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಪ್ರಪಂಚದಲ್ಲಿ ಕೋಲಾಹಲವನ್ನುಂಟುಮಾಡಿದ ಅಡಾಲ್‍ಫ್ ಹಿಟ್ಲರನ ಆತ್ಮಕಥೆಯನ್ನು (ಮೈನ್ ಕಾಂಫ್) ಯಾರೂ ಮರೆಯುವಂತಿಲ್ಲ. ರಷ್ಯದ ಬರಹಗಾರ ಮ್ಯಾಕ್ಸಿಂ ಗಾರ್ಕಿಯ (1868-1936) ನನ್ನ ಬಾಲ್ಯ ಎಂಬುದು ಕನ್ನಡಕ್ಕೂ ಅನುವಾದವಾಗಿದೆ. ಇದೇ ಸಂದರ್ಭದಲ್ಲಿ, ರವೀಂದ್ರನಾಥಠಾಗೂರರ ಬಾಲ್ಯ ಕಥನವು ಕನ್ನಡದಲ್ಲಿ ಅವತರಿಸಿರುವುದನ್ನು ಗಮನಿಸಬಹುದು. ಮಹಾತ್ಮ ಗಾಂಧಿಯವರ ಆತ್ಮಕಥೆ (ಮೈ ಎಕ್ಸ್‍ಪೆರಿಮೆಂಟ್ಸ್ ವಿತ್ ಟ್ರೂತ್) ಲೋಕಪ್ರಸಿದ್ಧವಾಗಿದೆ. ಇಬ್ಬರು ಮೂವರ ಕೈಯಲ್ಲಿ ಇದು ಅನುವಾದಗೊಂಡು ಕನ್ನಡ ಸಾಹಿತ್ಯದ ಮೇಲೆ ತುಂಬಾ ಪ್ರಭಾವ ಬೀರಿದೆ. ಸರ್ ಎಂ ವಿಶ್ವೇಶ್ವರಯ್ಯನವರ `ನನ್ನ ಕಾರ್ಯನಿರತ ಜೀವನದ ನೆನಪುಗಳು ಇಂಗ್ಲಿಷಿನಲ್ಲಿದ್ದರೂ ಈಚಿನ ದಿನಗಳಲ್ಲಿ ಕನ್ನಡ ಲೇಖಕರಿಗೆ ಸ್ಫೂರ್ತಿದಾಯಕವಾಗಿ ಪರಿಣಮಿಸಿದೆ.
 
==ಕನ್ನಡದಲ್ಲಿ==
"https://kn.wikipedia.org/wiki/ಜೀವನಚರಿತ್ರೆ" ಇಂದ ಪಡೆಯಲ್ಪಟ್ಟಿದೆ