ಬಾತುಕೋಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Undid edits by 117.230.61.20 (talk) to last version by Shreekant.mishrikoti
ಟ್ಯಾಗ್‌ಗಳು: ರದ್ದುಗೊಳಿಸಿ SWViewer [1.3]
ಚುNo edit summary
 
೮ ನೇ ಸಾಲು:
ಅನಾಟಿಡೀ ಕುಟುಂಬದ ಇತರ ಪಕ್ಷಿಗಳಿಗಿರುವಂತೆ ಬಾತುಕೋಳಿಗಳಿಗೂ ಕೆಂಪುಬಣ್ಣದ ಕೊಕ್ಕು ಮತ್ತು ಜಾಲಪಾದಗಳಿವೆ. ವಿವಿಧ ಪ್ರಭೇದಗಳಲ್ಲಿ ಕೊಕ್ಕಿನ ಆಕಾರ ಹಾಗೂ ಗಾತ್ರದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆಯಾದರೂ ಸಾಮಾನ್ಯ ಆಕಾರ ಚಪ್ಪಟೆ. ಎಲ್ಲ ತೆರನ ಕೊಕ್ಕುಗಳಲ್ಲಿ ಬಿರುಸಾದ ಹಲ್ಲಿನಂಥ ಚಕ್ಕೆಗಳು ಅಂಚಿನಲ್ಲಿ ಗರಗಸದಂಥ ಕಚ್ಚುಗಳು ಉಂಟು. ಇಂಥ ರಚನೆಗಳು ಆಹಾರ ಜಗಿಯುವಲ್ಲಿ ಮತ್ತು ಅದು ಹಾರದಂತೆ ಹಿಡಿಯುವಲ್ಲಿ ನೆರವಾಗುತ್ತವೆ. ಬಾತುಗಳಲ್ಲಿ ದಟ್ಟ ಹಾಗೂ ತೈಲಯುಕ್ತ ಗರಿಗಳ ಹೊದಿಕೆ ಉಂಟು. ತಮ್ಮ ಬಾಲದ ಬಳಿ ಇರುವ ತೈಲಗ್ರಂಥಿ ಸ್ರವಿಸುವ ತೈಲದಿಂದ ಗರಿಗಳಿಗೆ ಲೇಪಿಸಿ ಅವು ನೀರಿನಿಂದ ಒದ್ದೆಯಾಗದಂತೆ ನೋಡಿಕೊಳ್ಳುತ್ತವೆ. ಸಾಧಾರಣವಾಗಿ ಇವುಗಳ ತೂಕ 0.5-5 ಕೆ.ಜಿ. ದಕ್ಷಿಣ ಅಮೆರಿಕದ ಸ್ಟೀಮರ್ ಬಾತು ಅತಿಭಾರವಾದ ಬಾತು ಎನಿಸಿದೆ. ಇದರ ತೂಕ ಸುಮಾರು 8 ಕೆ.ಜಿ.
 
ಬಾತುಕೋಳಿಗಳು ಈಜುವುದರಲ್ಲಿ ಮಾತ್ರವಲ್ಲದೇ ಮುಳುಗು ಹಾಕುವುದರಲ್ಲಿ ಕೂಡ ಪರಿಣತ ಪಕ್ಷಿಗಳೆನಿಸಿವೆ. ನೆಲದ ಮೇಲೆ ವಿಚಿತ್ರವಾದ ಓಲುನಡಿಗೆಯೊಂದಿಗೆ ನಡೆದಾಡುವುವು. ಕೆಲವು ಪ್ರಭೇದಗಳ ಹೊರತು ಉಳಿದವೆಲ್ಲವೂ ಹಾರಬಲ್ಲವು. ಹಲವು ಬಗೆಯ ಬಾತುಗಳು ಚಳಿಗಾಲದಲ್ಲಿ ಗುಂಪು ಗುಂಪಾಗಿ ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತವೆ. ಬಾತುಕೋಳಿಗಳಲ್ಲಿ ಗಂಡು ಮತ್ತು ಹೆಣ್ಣುಗಳ ನಡುವೆ ವ್ಯತ್ಯಾಸ ಉಂಟು. ಸಾಧಾರಣವಾಗಿ ಹೆಣ್ಣಿಗಿಂತ ಗಂಡು ಹೆಚ್ಚು ವರ್ಣಮಯ. ಬಾತುಕೋಳಿಗಳು ವರ್ಷಕ್ಕೊಮ್ಮೆ ನೆಲದ ಮೇಲೆಯೇ 5 ರಿಂದ 12 ಮೊಟ್ಟೆ ಇಡುತ್ತವೆ. ಪ್ರಣಯಕಾಲದಲ್ಲಿ ಹೆಣ್ಣು ತನಗೆ ಬೇಕಾದ ಗಂಡನ್ನು ಆರಿಸಿಕೊಂಡು ಕೂಡುತ್ತದೆ. ಸ್ವಾಭಾವಿಕ ಪರಿಸ್ಥಿತಿಗಳಲ್ಲಿ ಏಕಪತ್ನಿತ್ವವನ್ನು ತೋರುವ ಗಂಡು ಪಳಗಿಸಿದಾಗ ಹಲವು ಹೆಣ್ಣುಗಳೊಡನೆ ಕೂಡುವುದೂ ಉಂಟು. ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಮಾಡುವ ಹೊಣೆ ಪೂರ್ತಿ ಹೆಣ್ಣಿನದು. ಈ ಸಮಯದಲ್ಲಿ ಹಳೆಯ ಗರಿಗಳನ್ನು ಕಳಚಿ ಹೊಸವನ್ನು ಬೆಳೆಸಿಕೊಳ್ಳುವ ಗಂಡು ಅಸಹಾಯ ಸ್ಥಿತಿಯಲ್ಲಿರುವುದು. ಮೊಟ್ಟೆಯೊಡೆದು ಹೊರಬರುವ ಮರಿಹಕ್ಕಿಗಳಿಗೆ ಆಹಾರ ಅರಸಿ ಓಡಾಡುವ ಸಾಮಥ್ರ್ಯ ಉಂಟು. ಬಾತುಕೋಳಿಗಳು ಸಸ್ಯಾಹಾರಿಗಳಾದರೂ ಬಸವನಹುಳು, ಕೀಟಗಳು, ಇವುಗಳ [[ಡಿಂಬ(ಲಾರ್ವಾ)|ಡಿಂಬ]] ಹಾಗೂ ಸಣ್ಣ ಮೀನುಗಳನ್ನು ತಿನ್ನುತ್ತವೆ.
 
ಯೂರೋಪ್, ಏಷ್ಯಾಖಂಡಗಳ ಸಮಶೀತೋಷ್ಣವಲಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಷೆಲ್‍ಬಾತುಗಳು ಪ್ರರೂಪಿ ಬಾತುಗಳು. ಇವುಗಳಲ್ಲಿ ಮಲಾರ್ಡ್ ಬಾತು ಹೆಸರುವಾಸಿ. ನದಿ, ಸರೋವರ, ಕೊಳಗಳ ಬಳಿ ವಾಸಿಸುವ ಮುಳುಗುವ ಬಾತುಗಳು ದಕ್ಷಿಣ ಭಾರತದಲ್ಲಿ ಪರಿಚಿತ ಹಕ್ಕಿಗಳು. ಅಮೆರಿಕದ ಮಸ್ಕೋವಿ ಮತ್ತು ಜಪಾನಿನ ಮ್ಯಾಂಡರಿನ್ ಬಾತುಗಳು ಮರದ ಮೇಲೆ ಗೂಡುಕಟ್ಟುತ್ತವೆ.
"https://kn.wikipedia.org/wiki/ಬಾತುಕೋಳಿ" ಇಂದ ಪಡೆಯಲ್ಪಟ್ಟಿದೆ