ಜೋಗುಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 2 sources and tagging 0 as dead.) #IABot (v2.0.8
ಕನ್ನಡ ವಿಕಿಸೋರ್ಸ್ ಮಾಹಿತಿ ಸೇರಿಸಿದೆ
೨ ನೇ ಸಾಲು:
 
'''ಜೋಗುಳ''' ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಜೋ ಜೋ ಎಂಬ [[ಪಲ್ಲವಿ]]ಯೊಡನೆ ತೂಗುತ್ತಾ ಹಾಡುವ ಹಾಡು. ಜನಪದರ ಪ್ರತಿಯೊಂದು ನಡವಳಿಕೆ ಜೀವನ ಕ್ರಮಗಳು ಅವರ ಹಾಡುಗಳಲ್ಲಿ ದಾಖಲಾಗಿವೆ. ಮಕ್ಕಳನ್ನು ಮಲಗಿಸುವ ಕ್ರಿಯೆ ಭಾವನಾ ತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. [[ತಾಯಿ]] ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟೀಲಹಾಡುಗಳೆಂದು ಕರೆಯುತ್ತಾರೆ. ತಾಯಿ ಮಗುವನ್ನು ತೋಳಿನ ಮೇಲೆ ,ಹಾಸಿಗೆ ಮೇಲೆ ಇಲ್ಲವೆ ತೊಟ್ಟಿಲಲ್ಲಿ ಮಲಗಿಸಿ ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರವಾಗಿದೆ. ಜೋಗುಳದ ಹಾಡಿನಲ್ಲಿ ತೊಟ್ಟಿಲನ್ನು ಕಾಯುವುದಕ್ಕಾಗಿ ಸಂತರು, ದೇವರು, ದೇವತೆಗಳನ್ನೂ ಆಹ್ವಾನಿಸುವ ಪದ್ದತಿ ಪ್ರಪಂಚದ ಕೆಲವು ಭಾಗಗಳಲ್ಲಿದೆ. ಜೋಗುಳವೆಂದರೆ ಒಂದರ್ಥದಲ್ಲಿ ಮಗುವಿನ ಹಿತಕ್ಕಾಗಿ ತಾಯಿ ಪ್ರಾರ್ಥಿಸಿ ಹಾಡುವ ಪ್ರಾರ್ಥನಾ ಗೀತೆಗಳಾಗಿವೆ.
 
 
ಜೋಗುಳದ ಹಾಡುಗಳು ಜನಪದ ಸಾಹಿತ್ಯದ ಬಹು ಮುಖ್ಯ ಭಾಗವಾಗಿದೆ. ತಾಯಿ ಮಗುವನ್ನು ತೊಟ್ಟಿಲಲ್ಲೊ ಜೋಳಿಗೆಯಲ್ಲೊ ಮಲಗಿಸಿ ತೂಗುವಾಗ ಹಾಡುವ ಹಾಡುಗಳಿವು. ಇವನ್ನು ಲಾಲಿ ಪದಗಳು ಎನ್ನುವುದೂ ಉಂಟು. ಇವುಗಳ ಛಂದಸ್ಸು ಸಾಮಾನ್ಯವಾಗಿ ತ್ರಿಪದಿ. ರಾಗ, ಹಳ್ಳಿಯ ಹೆಣ್ಣುಮಕ್ಕಳಿಗೇ ಮೀಸಲಾದ್ದು. ವಸ್ತು ಮಗುವಿನ ಅಂದಚಂದ, ಸಂಸಾರದ ಸುಖ, ಮಕ್ಕಳ ಪ್ರಾಮುಖ್ಯಗಳನ್ನು ಕುರಿತದ್ದು. ಸಂಸಾರದ ಅತಿ ಮಧುರವಾದ ಅನುಭವಗಳನ್ನಿಲ್ಲಿ ತಾಯಿಯಾದವಳು ನೆನೆದು ಸುಖಿಸುತ್ತಾಳೆ. ಮಗುವಾದರೋ ತಾಯಿಯ ಇಂಪಾದ ಕಂಠಕ್ಕೆ ಮಾರುಹೋಗಿ, ಅಳುವನ್ನು ನಿಲ್ಲಿಸಿ, ಹಾಲು ಕುಡಿಯುವುದನ್ನೂ ಮರೆತು ನಿದ್ರಿಸುತ್ತದೆ.
 
==ಜೋಗುಳದಲ್ಲಿನ ಉಪಮೆ/ಜೋಗುಳದ ಹಾಡುಗಳು==
Line ೬೬ ⟶ ೬೯:
ಗೊಂಬೆ ಚಿನುದಂತೆ ಹೊಳೆವದೆ.
</poem>
 
== ತೆಲುಗಿನಲ್ಲಿ ==
ತೆಲುಗಿನಲ್ಲಿ ಈ ಹಾಡುಗಳನ್ನು ಜೋಲಪಾಟಲು ಎನ್ನುತ್ತಾರೆ. ನೇದು ನೂರಿ ಗಂಗಾಧರಂ. ಬಿ. ರಾಮರಾಜು ಮುಂತಾದವರು ತೆಲುಗಿನ ಅನೇಕ ಜೋಲಗಳನ್ನು ಸಂಗ್ರಹಿಸಿದ್ದಾರೆ. ಟೀಕುಮಳ್ಳ ಕಾಮೇಶ್ವರರಾವು; ಅವರು 80 ಲಾಲಿ ಮತ್ತು ಜೋಲಗಳನ್ನು ಸಂಗ್ರಹ ಮಾಡಿ ಪಾತಪಾಟಲು ಎಂಬ ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಎನ್. ಗಂಗಾಧರಂ ಅವರು ನೆಲಯೇದು ಎಂಬ ತಮ್ಮ ಸಂಗ್ರಹದಲ್ಲಿ 25 ಹಾಡುಗಳನ್ನು ಕೊಟ್ಟಿರುತ್ತಾರೆ.
 
== ಪರಿಸಮಾಪ್ತಿ==
ಜೋಗುಳದ ಹಾಡಿಗೆ ಸಂಗೀತವೇ ಬೇಕಿಲ್ಲ. ಹಾಡುಗಾರರ ಪರಿಸರ ,ಕಲ್ಪನೆಗಳಿಗನುಗುಣವಾಗಿ ಹಾಡು ಬೆಳೆಯುತ್ತಾ ಸಾಗುತ್ತದೆ. ಯಾವುದೇ ರೀತಿಯ ಹಾಡನ್ನು ಜೋಗುಳದಂತೆ ಹಾಡಬಹುದಾಗಿದೆ. ಏಕೆಂದರೆ ಜೋಗುಳದ ಹಾಡು ಬಹಳ ಕಾಲ ಮಗುವಿನ ಮನದಲ್ಲಿ ಉಳಿಯುತ್ತದೆ. ಜೋಗುಳದಲ್ಲಿರುವ ಮತ್ತಿತರ ಸೊಲ್ಲುಗಳೆಂದರೆ-ಲೂ..ಲೂ..ಲಲ್ಲೆ..ಲಲ್ಲೆ ,ದೂರೀ ದೂರೀ ,ಜೋ ಜೋ ಜೋ ಜೋ ,ಬೊ ಬೊ, ಡೂ ಡೂ ಇತ್ಯಾದಿ. ಎಲ್ಲಿಯವರೆಗೆ ಮಕ್ಕಳು ಅಳುತ್ತಾರೋ, ಅಲ್ಲಿಯವರೆಗೆ ತಾಯಂದಿರ ದನಿ ಜೋಗುಳ ರೂಪದಲ್ಲಿ ಅವನ್ನು ಸಮಾಧಾನಗೊಳಿಸುತ್ತಾ, ಅಂಥದನಿ, ಪದಗಳು ಒಬ್ಬರಿಂದೊಬ್ಬರಿಗೆ ಮೌಖಿಕವಾಗಿ ವರ್ಗಾಯಿತವಾಗುತ್ತಾ ಇನ್ನು ಅಸ್ತಿತ್ವದಲ್ಲಿ ಉಳಿದಿವೆ.
 
ಜೋಗುಳದ ಹಾಡುಗಳು ಯಾವ ಒಂದು ಜನದ ವೈಶಿಷ್ಟ್ಯವೂ ಅಲ್ಲ. ಎಲ್ಲೆಲ್ಲೂ ಕಂಡುಬರುವ ಗೀತಪ್ರಕಾರವಿದು. ಇಂಗ್ಲಿಷಿನಲ್ಲಿ ಈ ಹಾಡುಗಳನ್ನು ಲಲಬೈ ಎನ್ನುತ್ತಾರೆ.
 
== ಗ್ರಂಥ ನೆರವು==
ಕನ್ನಡ ಜಾನಪದ ವಿಶ್ವಕೋಶ ಸಂಪುಟ-೧, ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೋಗುಳ}}
 
==ಉಲ್ಲೇಖ==
"https://kn.wikipedia.org/wiki/ಜೋಗುಳ" ಇಂದ ಪಡೆಯಲ್ಪಟ್ಟಿದೆ