"ತಾಳೀಕೋಟೆಯ ಯುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
 
== ಯುದ್ಧಾನಂತರ ==
ಈ ಯುದ್ಧ ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯದ ಅವನತಿಗೆ ಕಾರಣವಾದದ್ದಷ್ಟೇ ಅಲ್ಲ, ಸಂಪೂರ್ಣ [[ಭಾರತ]]ದಲ್ಲಿಯೇ ಹಿಂದೂ ರಾಜ್ಯಗಳ ಕೊನೆಗಾಲಕ್ಕೆ ನಾಂದಿ ಹಾಡಿತು. ವಿಜಯೋನ್ಮತ್ತ ಸುಲ್ತಾನರ ಸೇನೆ, ಇತರ ಕಳ್ಳಕಾಕರು ಮತ್ತು ಕಾಡುನಿವಾಸಿಗಳ ಗುಂಪುಗಳೊಂದಿಗೆ ವಿಜಯನಗರಕ್ಕೆ ಲಗ್ಗೆ ಇಟ್ಟಿತು. ಲೂಟಿ, ದರೋಡೆ, ಕಗ್ಗೊಲೆ, ಸುಲಿಗೆಗಳು ಅವ್ಯಾಹತವಾಗಿ ನಡೆದವು. ಕೊಡಲಿ, ಗಡಾರಿ, ಕತ್ತಿ ಇತ್ಯಾದಿಗಳೊಂದಿಗೆ ನಗರವನ್ನು ಹಾಳುಗೆಡವಿ, ಬೆಂಕಿ ಹಚ್ಚಲಾಯಿತು. ಈ ಧಾಳಿಯಿಂದ ವಿಜಯನಗರ ಮುಂದೆಂದೂ ಚೇತರಿಸಿಕೊಳ್ಳಲಿಲ್ಲ. [[ಪೆನುಗೊಂಡೆ]]ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಜಯನಗರ ಮತ್ತೆ ಮೇಲೇಳುವ ಪ್ರಯತ್ನ ಮಾಡಿದರೂ, ಅದು ಯಶಸ್ವಿಯಾಗಲಿಲ್ಲ. ಜನಬೆಂಬಲ ಅಳಿಯ ರಾಮರಾಯನ ತಮ್ಮನ ಪರವಾಗಿದ್ದ ಕಾರಣ , ಪಟ್ಟವೇರುವ ತಿರುಮಲನ ಪ್ರಯತ್ನ ಫಲಿಸಲಿಲ್ಲ. ಅದಕ್ಕಾಗಿ ಆತ ಮತ್ತೂ ಆರು ವರ್ಷ ಕಾಯಬೇಕಾಯಿತು. ಈ ಆರು ವರ್ಷಗಳಲ್ಲಿ ಅರಾಜಕತೆ ತಾಂಡವವಾಡಿತು. ಅಳಿಯ ರಾಮರಾಯನಿಂದ ಮಹತ್ವದ ಸ್ಥಾನಗಳಿಗೆ ನೇಮಿಸಲ್ಪಟ್ಟಿದ್ದ ಅವನ ಹತ್ತಿರದ ಸಂಬಂಧಿಕರಲ್ಲಿ ಈಗ ಒಳಜಗಳ ಪ್ರಾರಂಭವಾಯಿತು. ಅಷ್ಟೇ ಅಲ್ಲ ಇದರಿಂದ ಅಸಂತುಷ್ಟರಾಗಿದ್ದ ಸಾಮ್ರಾಜ್ಯ ನಿಷ್ಠ ಅಧಿಕಾರಿಗಳು ಈಗ ದಂಗೆ ಎದ್ದರು. ಹಿಂದೆ ಯಶಸ್ವಿಯಾಗಿ ನಢೆದುಕೊಂಡು ಬಂದಿದ್ದ ಪಾಳೆಯಗಾರಿ ಪದ್ಧತಿಯೂ ಸಾಮ್ರಾಜ್ಯವು ಅನೇಕ ಹೋಳಾಗುವುದಕ್ಕೆ ಕಾರಣವಾಯಿತು. [[ತಮಿಳು]] ಭಾಷಿಕರಾಗಿದ್ದ [[ಜಿಂಜೀ]], [[ಮಧುರೈ]] ಮತ್ತು ತಂಜಾವೂರಿನ ನಾಯಕ ಮನೆತನದವರು ಸ್ವತಂತ್ರರಾಗಲು ತಹತಹಿಸತೊಡಗಿದರು. [[ಬಿಜಾಪುರ]]ದಿಂದ ದಾಳಿಯ ಭೀತಿಯಲ್ಲಿದ್ದ ತಿರುಮಲನು , ನಾಯಕರುಗಳ ಸ್ವತಂತ್ರ ಆಳ್ವಿಕೆಗೆ ಮೌನಸಮ್ಮತಿ ನೀಡಬೇಕಾಯಿತು. ಚಂದ್ರಗಿರಿಗೆ, ಅದರ ನಂತರ ವೆಲ್ಲೂರಿಗೆ ರಾಜಧಾನಿಯನ್ನು ಮುಂದೆ ಬದಲಾಯಿಸಲಾಯಿತು. ಈ ಅವಧಿಯಲ್ಲಿಯೇ [[ಮೈಸೂರು ಸಂಸ್ಥಾನ|ಮೈಸೂರು]], [[ಕೆಳದಿ]], ವೆಲ್ಲೂರು ಮೊದಲಾದ ಸಾಮಂತರು ವಿಜಯನಗರದಿಂದ ಸ್ವತಂತ್ರರಾಗಿದ್ದರು. ವಿಜಯನಗರದ ಅವನತಿಯಿಂದಾಗಿ, ದಕ್ಷಿಣಭಾರತದ ರಾಜಕೀಯ ವ್ಯವಸ್ಥೆ ಛಿದ್ರಛಿದ್ರವಾಯಿತು. ಆದರೂ ಈ ಸಾಮ್ರಾಜ್ಯದ [[ತೆಲುಗು]] ಭಾಷಿಕ ಅವಶೇಷಗಳು ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಉಳಿದುಕೊಂಡವು. [[ಮೈಸೂರು ಸಂಸ್ಥಾನ]], [[ಕೆಳದಿ]] ನಾಯಕರು, [[ಚಿತ್ರದುರ್ಗ]]ದ ನಾಯಕರು ಇತ್ಯಾದಿ ಸಣ್ಣ ರಾಜ್ಯಗಳ ತಲೆ ಎತ್ತುವುದರೊಂದಿಗೆ, ಮುಂದಿನ ನಾಲ್ಕು ಶತಮಾನಗಳ ಕಾಲ ಕನ್ನಡ ನಾಡಿನಲ್ಲಿ ಏಕಾಧಿಪತ್ಯವು ಎರವಾಯಿತು. ಮುಂದೆ ಚಿತ್ರದುರ್ಗ ಮತ್ತು ಕೆಳದಿ ನಾಯಕರ ಸಂಸ್ಥಾನಗಳು ಮೈಸೂರಿನಲ್ಲಿ ಲೀನವಾದವು. ವಿಜಯನಗರದ ಮೇಲೆ ವಿಜಯ ಸಾಧಿಸಿದರೂ ಸುಲ್ತಾನರುಗಳು ತಮ್ಮತಮ್ಮಲ್ಲಿಯೇ ಕಚ್ಚಾಡಿಕೊಳ್ಳುವುದನ್ನು ಮುಂದುವರಿಸಿ, ಮುಂದೆ ಮೊಘಲರ, ಅದರ ನಂತರ ಬ್ರಿಟಿಷರ, ಅಧೀನಕ್ಕೆ ಸೇರಿಹೋದರು. ಕೆಲ ಕನ್ನಡ ಪ್ರದೇಶಗಳು ಹೈದರಾಬಾದಿನ ನಿಜಾಮನ ಆಳ್ವಿಕೆಗೆ ಸೇರಿದರೆ , ಮತ್ತೊಂದು ಭಾಗ ಬ್ರಿಟಿಶರ ಅಧೀನದಲ್ಲಿ ಆಳುತ್ತಿದ್ದ ಮರಾಠರ ಮುಂಬಯಿ ಪ್ರಸಿಡೆನ್ಸಿಗೆ ಸೇರಿತು.
 
== ಸೋಲಿಗೆ ಕಾರಣಗಳು ==
೧೦,೮೯೭

edits

"https://kn.wikipedia.org/wiki/ವಿಶೇಷ:MobileDiff/1073610" ಇಂದ ಪಡೆಯಲ್ಪಟ್ಟಿದೆ