ದಖ್ಖನ್ ಪೀಠಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
image, cat, iw
೧ ನೇ ಸಾಲು:
[[File:Indiahills.png|thumb|right|150px|ಭಾರತದ ದಕ್ಷಿಣದಲ್ಲಿ ದಖ್ಖನ್ ಪೀಠಭೂಮಿ]]
'''ದಖ್ಖನ್ ಪೀಠಭೂಮಿ''' ಅಥವ '''ದಖ್ಖನ್ ಪ್ರಸ್ಥಭೂಮಿ''' [[ಭಾರತ]]ದ ಒಂದು ವಿಶಾಲವಾದ [[ಪ್ರಸ್ಥಭೂಮಿಪೀಠಭೂಮಿ]]ಯಾಗಿದೆ. ಇದಕ್ಕೆ ದಖ್ಖನ್ ಪೀಠಭೂಮಿ ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯು [[ಭಾರತ ಜಂಬೂದ್ವೀಪ]]ದ ಬಹುಪಾಲು ಪ್ರದೇಶವನ್ನು ಆವರಿಸಿದೆ. ರಾಷ್ಟ್ರದ ಮೂರು ಪರ್ವತ ಶ್ರೇಣಿಗಳ ನಡುವೆ ವ್ಯಾಪಿಸಿರುವ ಈ ಪೀಠಭೂಮಿಯು ಎಂಟು ರಾಜ್ಯಗಳಲ್ಲಿ ಹರಡಿದೆ. ಮಧ್ಯಭಾರತದ [[ಸಾತ್ಪುರ ಪರ್ವತಗಳು]], [[ಪಶ್ಚಿಮ ಘಟ್ಟಗಳು]] ಹಾಗೂ ಪೂರ್ವ ಘಟ್ಟಗಳನ್ನು ಗಡಿಯಾಗಿ ಹೊಂದಿರುವ ದಖ್ಖನ್ ಪೀಠಭೂಮಿಯು [[ಮಹಾರಾಷ್ಟ್ರ]] ಮತ್ತು [[ಕರ್ನಾಟಕ]] ರಾಜ್ಯಗಳ ಬಹಳಷ್ಟು ಭಾಗ ಮತ್ತು [[ಆಂಧ್ರಪ್ರದೇಶ]]ದ ಕೆಲಭಾಗಗಳನ್ನು ವ್ಯಾಪಿಸಿದೆ. ದಖ್ಖನ್ ಪೀಠಭೂಮಿಯ ಸರಾಸರಿ ಎತ್ತರ ಉತ್ತರದ ಭಾಗಗಳಲ್ಲಿ ೧೦೦ ಮೀ. ಗಳಷ್ಟಿದ್ದರೆ ದಕ್ಷಿಣದ ಭಾಗಗಳಲ್ಲಿ ೧೦೦೦ ಮೀ. ಗಳಷ್ಟು. ಈ ಪ್ರದೇಶವು ಜಗತ್ತಿನಲ್ಲಿ [[ಭೂಗರ್ಭಶಾಸ್ತ್ರ]]ದ ಪ್ರಕಾರ ಅತಿ ಸ್ಥಿರವಾದ ಭೂ ಪ್ರದೇಶಗಳಲ್ಲಿ ಒಂದಾಗಿದೆ. ಭಾರತದ ಹಲವು ಮಹಾನದಿಗಳ [[ಜಲಾನಯನ ಪ್ರದೇಶ]]ಗಳು ದಖ್ಖನ್ ಪೀಠಭೂಮಿಯಲ್ಲಿವೆ. [[ಗೋದಾವರಿ ನದಿ]]ಯು ದಖ್ಖನ್ ಪೀಠಭೂಮಿಯ ಉತ್ತರದಲ್ಲಿ ಹರಿದರೆ [[ಕೃಷ್ಣಾ]] ಮತ್ತು [[ತುಂಗಭದ್ರಾ ನದಿ]]ಗಳು ಮಧ್ಯಭಾಗದಲ್ಲಿ ಹಾಗೂ [[ಕಾವೇರಿ ನದಿ]]ಯು ದಖ್ಖನ್ ಪೀಠಭೂಮಿಯ ದಕ್ಷಿಣಭಾಗದ ಪ್ರದೇಶಗಳಿಗೆ ನೀರುಣಿಸುತ್ತವೆ. ಈ ಪ್ರದೇಶದಲ್ಲಿ [[ಇಂಡೋ-ಆರ್ಯನ್]] ಮತ್ತು [[ದ್ರಾವಿಡ]] ಭಾಷಾ ಸಂಸ್ಕೃತಿಗಳೆರಡರ ಜನರೂ ನೆಲೆಸಿದ್ದಾರೆ. ದಖ್ಖನ್ ಪೀಠಭೂಮಿ ಪ್ರದೇಶದ ಮುಖ್ಯ ಬೆಳೆ [[ಹತ್ತಿ]]. ಉಳಿದಂತೆ [[ಕಬ್ಬು]] ಹಾಗೂ [[ಭತ್ತ]]ವನ್ನು ಸಹ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದ ಪ್ರಮುಖ ನಗರಗಳೆಂದರೆ - [[ಬೆಂಗಳೂರು]], [[ಹೈದರಾಬಾದ್]], [[ತಿರುಪತಿ]],[[ಪುಣೆ]], [[ನಾಗಪುರ]], [[ಔರಂಗಾಬಾದ್]] ಮತ್ತು [[ಮೈಸೂರು]].
 
[[ವರ್ಗ:ಭೂಗೋಳಪೀಠಭೂಮಿಗಳು]]
[[ವರ್ಗ:ದಕ್ಷಿಣ ಭಾರತ]]
 
 
[[en:Deccan Plateau]]
"https://kn.wikipedia.org/wiki/ದಖ್ಖನ್_ಪೀಠಭೂಮಿ" ಇಂದ ಪಡೆಯಲ್ಪಟ್ಟಿದೆ