ಜಲೋದರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ಮಾಹಿತಿ ಸೇರಿಸಿದೆ
{{ಚುಟುಕು}} ತೆಗೆದಿದೆ
ಟ್ಯಾಗ್: 2017 source edit
೧೬ ನೇ ಸಾಲು:
 
[[ವೈದ್ಯಶಾಸ್ತ್ರ]]ದಲ್ಲಿ ([[ಜಠರ ಕರುಳು ವಿಜ್ಞಾನ]]), '''ಜಲೋದರ'''ವು ('''ಕರುಳುಪದರ ಕುಳಿಯ ದ್ರವ''', '''ಕರುಳುಪದರ ದ್ರವದ ಹೆಚ್ಚುವರಿ''', ಅಥವಾ ಬಹುಹಿಂದಿನ ಹೆಸರಾದ '''ಉದರದ ಬಾವು''' ಎಂದೂ ಪರಿಚಿತವಾದ) [[ಕರುಳುಪದರ ಕುಳಿ]]ಯಲ್ಲಿ ದ್ರವದ ಶೇಖರಣೆ. ಇದು ಹೆಚ್ಚು ಸಾಮಾನ್ಯವಾಗಿ [[ಸಿರೋಸಿಸ್]] ಮತ್ತು ತೀವ್ರ ಯಕೃತ್ತು ರೋಗದ ಕಾರಣದಿಂದ ಆಗುವುದಾದರೂ, ಇದರ ಇರುವಿಕೆಯು ಇತರ ದೊಡ್ಡ ವೈದ್ಯಕೀಯ ಸಮಸ್ಯೆಗಳ ಬಗ್ಗೆ ಮುನ್ಸೂಚನೆ ಕೊಡಬಲ್ಲದು. ಕಾರಣದ ರೋಗನಿದಾನವು ಸಾಮಾನ್ಯವಾಗಿ [[ರಕ್ತಪರೀಕ್ಷೆ]]ಗಳು, ಉದರದ [[ವೈದ್ಯಕೀಯ ಶ್ರವಣಾತೀತ ಧ್ವನಿಚಿತ್ರಣ|ಅಲ್ಟ್ರಾಸೌಂಡ್ ಸ್ಕ್ಯಾನ್]], ಮತ್ತು ಸೂಜಿ ಅಥವಾ [[ಪ್ಯಾರಸೆಂಟೀಸಿಸ್]]‌ನಿಂದ ದ್ರವದ ನೇರ ತೆಗೆಯುವಿಕೆಯ (ಇದು ಚಿಕಿತ್ಸಕವೂ ಇರಬಹುದು) ಮೂಲಕ ಮಾಡಲಾಗುತ್ತದೆ.
 
{{ಚುಟುಕು}}ಜಲೋದರ - ಹೊಟ್ಟೆಯಲ್ಲಿ ನೀರಿನಂಥ ದ್ರವದ ಶೇಖರಣೆಯಿಂದ ಉಂಟಾದ ನೋವಿಲ್ಲದ ಹೊಟ್ಟೆ ಉಬ್ಬರದ ಸ್ಥಿತಿ. (ಅಸೈಟಿಸ್).
 
{{ಚುಟುಕು}}ಜಲೋದರ - ಹೊಟ್ಟೆಯಲ್ಲಿ ನೀರಿನಂಥ ದ್ರವದ ಶೇಖರಣೆಯಿಂದ ಉಂಟಾದ ನೋವಿಲ್ಲದ ಹೊಟ್ಟೆ ಉಬ್ಬರದ ಸ್ಥಿತಿ. (ಅಸೈಟಿಸ್).
 
ಸಾಮಾನ್ಯವಾಗಿ ಈ ದ್ರವದ ಸಾಂದ್ರತೆ ಕಡಿಮೆ; ಅಲ್ಲದೆ ಇದರಲ್ಲಿ ಜೀವಕೋಶಗಳು ಬಲು ವಿರಳವಾಗಿವೆ. ಜಲೋದರ ಸ್ವತಃ ಒಂದು ರೋಗವಲ್ಲ. ಆದರೆ ಬೇರೆ ರೋಗಗಳ ಒಂದು ಲಕ್ಷಣವಾಗಿ ಇದು ಕಂಡುಬರುತ್ತದೆ. ಇದರ ಕಾರಣಗಳು ಬೇರೆ ಬೇರೆ. ಯಕೃತ್ತಿನೊಳಹೊಗುವ ಫೆÇೀರ್ಟಲ್ ಅಭಿಧಮನಿಯಲ್ಲಿ ಯಾವ ಕಾರಣದಿಂದಾದರೂ ರಕ್ತ ಚಲನೆಗೆ ಅಡಚಣೆಯಾದರೆ ಅದರಿಂದ ಜಲೋದರ ಉದ್ಭವಿಸುತ್ತದೆ. ಜಲೋದರಕ್ಕೆ ಇದೇ ಮುಖ್ಯ ಕಾರಣ. ಅಲ್ಲದೆ ಕ್ಷಯ ಮತ್ತು ಏಡಿಗಂತಿಗಳಿಂದ ಬರುವ ಉದರ ಪರಿವೇಷ್ಟನಪಟಲದ (ಪೆರಿಟೋನಿಯಮ್) ರೋಗ ಅಂದರೆ ಪೆರಿಟೋನೈಟಿಸ್, ಮೂತ್ರಜನಕಾಂಗಗಳ ವ್ಯಾಧಿ. ಗುಂಡಿಗೆ ಶಕ್ತಿಗುಂದುವಿಕೆ, ರಕ್ತಪುಷ್ಟಿಹೀನತೆ, ಗುಲ್ಮವೃದ್ಧಿ ಇವೆಲ್ಲವೂ ಜಲೋದರವನ್ನು ಉಂಟುಮಾಡಬಹುದು. ಹೊಟ್ಟೆಯ ಪಕ್ಕೆಗಳು ತುಂಬಿರುವಿಕೆ, ನಾಭಿಯ ಒಳಹೊರಗಾಗುವಿಕೆ (ಇವರ್ಷನ್) ರೋಗಿಯ ಸ್ಥಳ ಬದಲಾವಣೆಯೊಡನೆ ಉದರದ ಮಾರ್ದನಿಗೊಡುವ ಸ್ಥಳ ಬದಲಾವಣೆಯಾಗುವಿಕೆ ಇವುಗಳಿಂದ ಜಲೋದರವನ್ನು ಕಂಡುಹಿಡಿಯಬಹುದು.
"https://kn.wikipedia.org/wiki/ಜಲೋದರ" ಇಂದ ಪಡೆಯಲ್ಪಟ್ಟಿದೆ