ಅಂತರ್ಜಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮ ನೇ ಸಾಲು:
ನೀರಿನ ಪ್ರಮುಖ ಗುಣವೆಂದರೆ ಅದು ಘನ, ದ್ರವ, ಮತ್ತು ಅನಿಲ ಸ್ಥಿತಿಯಲ್ಲಿರುವುದು. ಇದರಲ್ಲಿ ಪ್ರಮುಖವಾಗಿ ಕಾಣುವುದು ದ್ರವ ರೂಪದಲ್ಲಿರುವ ನೀರು. ಭೂಮೇಲ್ಮೈ ಮೇಲೆ ಇದು ನದಿ, ಸಾಗರ, ಸರೋವರಗಳಲ್ಲೂ, ಕೆರೆಕಟ್ಟೆಗಳಲ್ಲೂ ಲಭ್ಯ. ಹಿಮದ ರೂಪದಲ್ಲಿರುವ ನೀರು ಪ್ರಮುಖವಾಗಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕಂಡುಬರುತ್ತದೆ. ಈ ಹಿಮರೂಪಿ ನೀರು ಪರಿಶುದ್ಧವಾದುದು. ಸಮುದ್ರದ ನೀರು [[ಬಾಷ್ಫೀಕರಣ|ಬಾಷ್ಫೀಕರಣವಾಗಿ]] ಅನಂತರ ಸಾಂದ್ರೀಕರಣವಾಗಿ ಮೋಡಗಳು ಮೈದಳೆದು ಮಳೆರೂಪದಲ್ಲಿ ಮತ್ತೆ ಭೂಮಿಗೆ ಹಿಂತಿರುಗುವುದೇ '''ಜಲಚಕ್ರ'''.ಇದೊಂದು ನಿರಂತರವಾದ ಪ್ರಕ್ರಿಯೆ. ಇದರಲ್ಲಿ ಉಷ್ಣತೆ, ಗಾಳಿಯ ಗುಣ, ಒತ್ತಡ, ಗಾಳಿಯಲ್ಲಿ ತೇಲುವ ಸಣ್ಣ ಕಣಗಳು ಪ್ರಮುಖ ಪಾತ್ರ ವಹಿಸುತ್ತವೆ.ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿವರ್ಷ 370 ಮಿಲಿಯನ್ ಹೆಕ್ಟೇರು ಮೀಟರು ಮಳೆ ಬೀಳುತ್ತದೆ. ಇದರಲ್ಲಿ 120 ಮಿಲಿಯನ್ ಹೆಕ್ಟೇರು ಮೀಟರು ನದಿಯಾಗಿ ಹರಿಯುತ್ತದೆ. 120 ಮಿಲಿಯನ್ ಹೆಕ್ಟೇರು ಮೀಟರು ಬಾಷ್ಪೀಕರಣವಾಗಿ ವಾತಾವರಣ ಸೇರುತ್ತದೆ. 80 ಮಿಲಿಯನ್ ಹೆಕ್ಟೇರು ಮೀಟರು ಮಣ್ಣಿನಲ್ಲಿ ಜಿನುಗುತ್ತದೆ. ಅಂದಾಜು 26 ಮಿಲಿಯನ್ ಹೆಕ್ಟೇರು ಮೀಟರು ನೀರು ಅಂತರ್ಜಲ ಭಂಡಾರವಾಗಿ ನೆಲದಲ್ಲಿ ಸಂಗ್ರಹವಾಗುತ್ತದೆ.
==ಶಿಲಾ ರಚನೆಗಳು==
ಜಲ ಭೂವಿಜ್ಞಾನದ ಅಧ್ಯಯನದ ಮೇರೆಗೆ ಅಂತರ್ಜಲಕ್ಕೆ ಸಂಬಂಧಪಟ್ಟಂತೆ ಪ್ರಮುಖವಾಗಿ ಎರಡು ಪ್ರದೇಶಗಳನ್ನು ಗುರುತಿಸಬಹುದು. ಒಂದು '''ಪೂರಕ ಪ್ರದೇಶಗಳು''', ಮತ್ತೊಂದು '''ವಿಸರ್ಜಕ ಪ್ರದೇಶಗಳು'''. '''[[ಜಲಧರ]] ಶಿಲೆಗಳು''' ಎಂದರೆ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳ ಪ್ರದೇಶಗಳು. ಇಲ್ಲಿ ಶಿಲೆಗಳಲ್ಲಿ ಇರುವ ರಂಧ್ರಗಳು ಒಂದರೊಡನೊಂದು ಕೂಡಿಕೊಂಡಿರುತ್ತದೆ. ಮತ್ತೊಂದು ಪ್ರದೇಶ ವಿಸರ್ಜಕ ಪ್ರದೇಶ. ಇಲ್ಲಿ ನೀರು ಒಂದೆಡೆ ನಿಲ್ಲದೆ ತಗ್ಗಿನ ಕಡೆಗೆ ಹರಿಯುತ್ತದೆ. ವೈಜ್ಞಾನಿಕವಾಗಿ ಪೂರಕ ಪ್ರದೇಶದಿಂದ ವಿಸರ್ಜಕ ಪ್ರದೇಶಗಳೆಡೆಗೆ ಹರಿಯುತ್ತದೆ. ಬಯಲು ಪ್ರದೇಶ ಪೂರಕ ಪ್ರದೇಶ ಎನ್ನಿಸಿಕೊಂಡರೆ, ಕಣಿವೆಗಳು ವಿಸರ್ಜಕ ಪ್ರದೇಶ ಎನ್ನಿಸಿಕೊಳ್ಳುತ್ತದೆ. ಅನೇಕ ಕಡೆಗಳಲ್ಲಿ ನೀರು ಚಿಲುಮೆಯ ರೂಪದಲ್ಲಿ ಹೊರಹರಿಯುವುದನ್ನು ಕಾಣಬಹುದು. ಇಂಥ ಪ್ರದೇಶಗಳಲ್ಲಿ ಅಂತರ್ಜಲದ ಮಟ್ಟ ನೆಲದ ಮಟ್ಟವನ್ನು ಛೇದಿಸಿದಾಗ ಅಲ್ಲಿ ಚಿಲುಮೆಯ ರೂಪದಲ್ಲಿ ನೀರು ಉಕ್ಕುತ್ತದೆ. ಪೂರಕ ಪ್ರದೇಶಕ್ಕೂ ವಿಸರ್ಜಕ ಪ್ರದೇಶಕ್ಕೂ ಪ್ರಮುಖ ವ್ಯತ್ಯಾಸವಿದೆ. ಮಳೆ ಬಿದ್ದ ನಂತರ ನೀರು ಒಳಗಿಳಿಯುತ್ತದೆ. ಅಲ್ಲಿಗೆ ಈ ಪ್ರಕ್ರಿಯೆಗೆ ನಿಲುಗಡೆ ಬರುತ್ತದೆ. ಆದರೆ ವಿಸರ್ಜಕ ಪ್ರದೇಶದಲ್ಲಿ ನೆಲದ ನೀರು ಸದಾ ಹರಿಯುತ್ತಲೇ ಇರುತ್ತದೆ.<ref>https://en.wikipedia.org/wiki/File:Groundwater_flow.svg</ref>
===ಸಚ್ಛಿದ್ರತೆ===
ಶಿಥಿಲವಾದ ಶಿಲೆಗಳಲ್ಲಿ ರಂಧ್ರಗಳಿರುತ್ತವೆ. ಇದರ ಪ್ರಮಾಣ ಹೆಚ್ಚಿ\ದಷ್ಟೂ ನೀರು ಹೆಚ್ಚು ಹೀರಿಕೆಯಾಗುತ್ತದೆ. ರಂಧ್ರಮಯ ಲಕ್ಷಣವೇ ಸಚ್ಛಿದ್ರತೆ. ಉದಾ : ಒಂದು ಘನ ಮೀಟರು ಶಿಲೆ ಕಾಲು ಘನ ಮೀಟರಿನಷ್ಟು ನೀರನ್ನು ಹೀರಿ ಹಿಡಿದಿಟ್ಟುಕೊಂಡರೆ, ಆ ಶಿಲೆಯ ಸಚ್ಛಿದ್ರತೆ ಶೇ. 25 ಎಂದು ಗಣನೆ ಮಾಡಬಹುದು.
"https://kn.wikipedia.org/wiki/ಅಂತರ್ಜಲ" ಇಂದ ಪಡೆಯಲ್ಪಟ್ಟಿದೆ