ನಗ್ನಬೀಜ ಸಸ್ಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
೩ ನೇ ಸಾಲು:
<br>
==ವರ್ಗೀಕರಣ==
ಬೀಜಸಸ್ಯಗಳನ್ನು ಸಾಮಾನ್ಯವಾಗಿ ನಗ್ನಬೀಜಸಸ್ಯಗಳು ಮತ್ತು ಆವೃತಬೀಜಸಸ್ಯಗಳು ಎಂಬ ಎರಡು ಪ್ರಧಾನ ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಆವೃತಬೀಜಸಸ್ಯಗಳಲ್ಲಿ ಅಂಡಕಗಳು ಅಂಡಾಶಯದಿಂದ ಆವೃತಗೊಂಡಿರುತ್ತವೆ. ಆದರೆ ನಗ್ನಬೀಜಸಸ್ಯಗಳಲ್ಲಿ ಅಂಡಕಗಳು ಈ ರೀತಿ ಆವೃತವಾಗಿರದೆ ಬಹಿರಂಗವಾಗಿರುತ್ತವೆ.<ref>{{Cite web |url=https://www.ingentaconnect.com/content/iapt/tax/2007/00000056/00000003/art00020 |title=ಆರ್ಕೈವ್ ನಕಲು |access-date=2019-12-12 |archive-date=2018-10-18 |archive-url=https://web.archive.org/web/20181018163409/https://www.ingentaconnect.com/content/iapt/tax/2007/00000056/00000003/art00020 |url-status=dead }}</ref> ಮೇಲಿನ ಅಂಶ ಇವೆರಡು ಗುಂಪುಗಳ ನಡುವಣ ಒಂದು ಉತ್ತಮ ವ್ಯತ್ಯಾಸವಾಗಿದೆಯಾದರೂ, ಕೆಲವು ನಗ್ನಬೀಜಸಸ್ಯಗಳ ಶಂಕುಗಳಲ್ಲಿನ ಬೀಜಗಳು ಪಟ್ಟೆಗಳ ನಡುವೆ ಮುಚ್ಚಿಹೋಗಿರುತ್ತವೆ, ಇಲ್ಲವೆ ಆಳವಾಗಿ ಹೂತುಹೋಗಿರುತ್ತವೆ. ಅಂತೆಯೇ ಕೆಲವು ಆವೃತಬೀಜಸಸ್ಯಗಳಲ್ಲಿ ಅಂಡಕಗಳು ತೆರೆದ ಕಾರ್ಪೆಲ್‍ಗಳಲ್ಲಿ ಸ್ಥಿತವಾಗಿದ್ದು ಬಹಿರಂಗ ಸ್ಥಿತಿಯಲ್ಲಿರುತ್ತವೆ. <ref>http://www.theplantlist.org/browse/G/</ref>ಆದರೆ ಪರಾಗ ಮೊಳೆಯುವ ಕ್ರಮದಲ್ಲಿ ಮಾತ್ರ ಎರಡು ಗುಂಪುಗಳ ನಡುವೆ ವ್ಯತ್ಯಾಸವನ್ನು ಕಾಣಬಹುದು. ಆವೃತಬೀಜಸಸ್ಯಗಳಲ್ಲಿ ಪರಾಗನಳಿಕೆ ಶಲಾಕನಳಿಕೆಯ ಮೂಲಕ ಅಂಡಕವನ್ನು ಪ್ರವೇಶಿಸಿದರೆ ನಗ್ನಬೀಜಸಸ್ಯಗಳಲ್ಲಿ ಅದು ನೇರವಾಗಿ ಅಂಡಕವನ್ನು ಪ್ರವೇಶಿಸುತ್ತದೆ.
==ಲಿಂಗ ಮತ್ತು ವಿಕಸನ==
ನೀಟಮ್ ಮತ್ತು ವೆಲ್ವಿಶ್ಚಿಯಗಳನ್ನು ಬಿಟ್ಟರೆ, ನಗ್ನಬೀಜ ಸಸ್ಯಗಳ ಗಂಡು ಲಿಂಗಾಣುಜನಕಗಳು, ಆವೃತಬೀಜ ಸಸ್ಯಗಳ ಲಿಂಗಾಣುಜನಕಗಳಿಗಿಂತ ಹೆಚ್ಚು ಬಂಜೆಕೋಶಗಳನ್ನು ಉತ್ಪಾದಿಸುತ್ತದೆ. ಹೆಣ್ಣು ಲಿಂಗಾಣುಜನಕಗಳಿಗೆ ಸಂಬಂಧಪಟ್ಟಂತೆಯೂ ಒಂದು ಮುಖ್ಯ ವ್ಯತ್ಯಾಸವುಂಟು. <ref>https://www.ncbi.nlm.nih.gov/pmc/articles/PMC2944650</ref>ನಗ್ನಬೀಜ ಸಸ್ಯಗಳ ಹೆಣ್ಣು ಲಿಂಗಾಣುಜನಕಗಳು ದೊಡ್ಡ ಗಾತ್ರದವು ಮತ್ತು ನೀಟಮ್ ಹಾಗೂ ವೆಲ್ವಿಶ್ಚಿಯಗಳನ್ನು ಬಿಟ್ಟರೆ ಉಳಿದ ನಗ್ನಬೀಜಸಸ್ಯಗಳಲ್ಲಿ ಆರ್ಕಿಗೋನಿಯಗಳಿವೆ. ಬಹುಭ್ರೂಣತೆಯ (ಪಾಲಿಎಂಬ್ರಿಯಾನಿ) ಲಕ್ಷಣದಲ್ಲೂ ನಗ್ನಬೀಜಸಸ್ಯಗಳು ಆವೃತಬೀಜ ಸಸ್ಯಗಳನ್ನು ಮೀರಿಸಿವೆ. ಒಳರಚನೆಯಲ್ಲೂ ಈ ಎರಡು ಗುಂಪುಗಳ ನಡುವೆ ಕೆಲವು ಮುಖ್ಯ ವ್ಯತ್ಯಾಸಗಳನ್ನು ಕಾಣಬಹುದು. ನಗ್ನಬೀಜಸಸ್ಯಗಳ ಫ್ಲೋಯೆಮಿನ ಜರಡಿಕೋಶಗಳ ಜೊತೆ (ಇವು ಜರಡಿ ನಳಿಕೆಗಳೆಂದು ಕರೆಸಿಕೊಳ್ಳುವಷ್ಟು ವಿಶಿಷ್ಟತೆ ಪಡೆದಿಲ್ಲ) ಸಂಗಾತಿ ಜೀವಕೋಳಗಳಿಲ್ಲ. ಆವೃತಬೀಜಸಸ್ಯಗಳ ವೈಶಿಷ್ಟ್ಯಪೂರ್ಣ ಟ್ರೇಕಿಯಗಳು ನಗ್ನಬೀಜಸಸ್ಯಗಳಲ್ಲಿ (ನೀಟೇಲಿಸ್‍ನಲ್ಲಿ ಕಂಡುಬಂದರೂ ಅವುಗಳ ಉಗಮ ಮತ್ತು ವಿಕಸನಗಳು ಬೇರೆ ಬಗೆಯವು).<br>
"https://kn.wikipedia.org/wiki/ನಗ್ನಬೀಜ_ಸಸ್ಯಗಳು" ಇಂದ ಪಡೆಯಲ್ಪಟ್ಟಿದೆ