ಅನಿಲದ ಮೊಗವಾಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 0 sources and tagging 1 as dead.) #IABot (v2.0.8
೧ ನೇ ಸಾಲು:
ಅನಿಲದ ಮೊಗವಾಡ ಮನುಷ್ಯ ಜೀವಕ್ಕೆ ಅಪಾಯಕಾರಕ ಅನಿಲ ಸೇವನೆಯಿಂದ ತಟ್ಟಬಹುದಾದ ಹಾನಿಯಿಂದ ಮನುಷ್ಯನನ್ನು ರಕ್ಷಿಸುವ ಸಾಧನೆ (ಗ್ಯಾಸ್ ಮಾಸ್ಕ್).
=ಇತಿಹಾಸ=
ಇದಕ್ಕೆ ಈಗ ಉಸಿರಾಟಿಕವೆಂದೂ ([[:w:Respirator|ರೆಸ್ಪೆರೇಟರ್]]) ಹೆಸರಿದೆ. ಯುದ್ಧದ ಕೈದುವಾಗಿ ಮೊಟ್ಟಮೊದಲು (ಜನವರಿ 31, 1915) ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಪೋಲೆಂಡಿನಲ್ಲಿ ಜರ್ಮನರು ರಷ್ಯನರ ಮೇಲೆ ವಿಷದ ಅನಿಲಗಳನ್ನು ಹಾಕಿದರು.[[File:Monmouth Regimental Museum - QRpedia 5.JPG|thumb|ಮಹಾಯುದ್ಧದ ಸಮಯದಲ್ಲಿ ಬಳಸಿದ ಅನಿಲದ ಮೊಗವಾಡ]]<ref>[http://www.firstworldwar.com/weaponry/gas.html]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}ಯುದ್ಧದ ಸಾಮಗ್ರಿ - ವಿಷಾನಿಲ</ref> ಮತ್ತೆ ಬೆಲ್ಜಿಯಮ್ಮಿನಲ್ಲಿ ಮಿತ್ರರಾಷ್ಟ್ರಗಳ ಸೇನೆಗಳ ಮೇಲೂ ಬಳಸಿದರು. ಆಗ ಅನಿಲ ಮೊಗವಾಡದ ಆವಶ್ಯಕತೆ ಉಂಟಾಯಿತು.
==ಅನನುಕೂಲಗಳು==
ವಿಷಾನಿಲದ ಕೆಡುಕು ತಾಗದಂತೆ ತಡೆಯಲು ಮೊದಲು ತಯಾರಿಸಿ ಬಳಸಿದ ಸೈನಿಕನ ಮೊಗವಾಡ ಒಡ್ಡೊಡ್ಡಾಗಿತ್ತು. ಮೊಗದ ಸುತ್ತ ತಗುಲಿಸಿರುವ ಮೊಗವಾಡ ಎದೆಯ ಮುಂದೆ ಕೊರಳಿಗೆ ತೂಗು ಕಟ್ಟಿರುವ, ಮೊಗವಾಡದೊಂದಿಗೆ ಕೊಳವೆಯಿಂದ ಕೂಡಿರುವ ಕರಾಟವನ್ನು (ಕ್ಯಾನಿಸ್ಟರ್) ಹೊತ್ತುಕೊಂಡಿರಬೇಕಿತ್ತು. ಒಣ ಇದ್ದಲು ತುಂಬಿದ ಕವಾಟದ ಮೂಲಕ ಬರುವ ಕೊಳವೆಯನ್ನು ಸೈನಿಕ ಬಾಯಲ್ಲಿ ಇರಿಸಿಕೊಂಡು ಉಸಿರು ಎಳೆದುಕೊಂಡಾಗ ವಿಷಾನಿಲ ಸೋಸಿ ಬರುತ್ತಿತ್ತು. ಮೂಗಿನಲ್ಲಿ ಗಾಳಿ ತೂರದಂತೆ ಒಂದು ಚಿಪ್ಪಳ (ಕ್ಲಿಪ್)ಹಾಕುತ್ತಿದ್ದರು. ಇವನ್ನು ತೊಟ್ಟ ಸೈನಿಕನ ಚಲನವಲನವೂ, ಕಾದಾಡುವ ಸಾಮರ್ಥ್ಯವೂ ಕುಗ್ಗಿತ್ತು. ಗುಂಡಿನ ಸುರಿಮಳೆಯಿಂದ ತಪ್ಪಿಸಿಕೊಳ್ಳಲು ಸೈನಿಕ ನೆಲದ ಮೇಲೆ ಕವುಚಿ ಬೀಳಲು ಆತಂಕವಾಗಿತ್ತು.
"https://kn.wikipedia.org/wiki/ಅನಿಲದ_ಮೊಗವಾಡ" ಇಂದ ಪಡೆಯಲ್ಪಟ್ಟಿದೆ