ಜಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ, ಇಂಗ್ಲೀಷ್ ಪುಟದಿಂದ ಚಿತ್ರ ಸೇರ್ಪಡೆ
 
೧೪ ನೇ ಸಾಲು:
ಪರ್ಷಿಯನ್ ಸಾಹಿತ್ಯ ಸಂಪತ್ತಿಗೆ-ಮುಖ್ಯವಾಗಿ ಕಾವ್ಯಕ್ಕೆ-ಈತ ವಿಪುಲವಾದ ಕೊಡುಗೆಯನ್ನು ನೀಡಿದ್ದಾನೆ. ಗಜಲ್, ಕಸೀದಾ, ರುಬಾಯಿ ಮತ್ತು ಮಸ್‍ನವಿ ರಚನೆಗಳಲ್ಲಿ ಈತ ಪ್ರಖ್ಯಾತ. [[ಸಾದಿ]]ಯ ನೈತಿಕದೃಷ್ಟಿ, [[ರೂಮಿ]]ಯ ಔನ್ನತ್ಯ, [[ಹಫೀಸ್‍]]ನ ಸರಳತೆ ಮತ್ತು ನಯವಾದ ಹರಿವು, ಅಲ್ಲದೆ ನಿಜಾಮಿಯ ನಿರ್ದಿಷ್ಟತೆ ಜಾಮಿಯ ಕಾವ್ಯಗಳಲ್ಲಿ ಹಿತಮಿತವಾಗಿ ಬೆರೆತು, ಅಪೂರ್ವಶಕ್ತಿ, ಸೌಂದರ್ಯವನ್ನು ನೀಡಿವೆಯೆಂಬುದಾಗಿ ದಿ ಪರ್ಷಿಯನ್ ಪೋರ್‍ಟ್ರೇಟ್ ಎಂಬ ಗ್ರಂಥದ ಕರ್ತೃ ತಿಳಿಸಿದ್ದಾನೆ. ಕಸೀದಾ ರಚನೆಯಲ್ಲಿ (ಕಸೀದಾ ಎಂದರೆ ಚಕ್ರವರ್ತಿ ಅಥವಾ ಸುಲ್ತಾನರನ್ನು ಹೊಗಳಿ ಬರೆಯುವ ಪದ್ಯ) ವಿಶೇಷ ನೈಪುಣ್ಯವನ್ನು ಪಡೆದು ಜಾಮಿ ಅಗ್ರಮಾನ್ಯನಾಗಿದ್ದಾನೆಂದು ವಿಮರ್ಶಕರ ಅಭಿಪ್ರಾಯ. ಜಾಮಿಯ ಕಸೀದಾದ ವೈಶಿಷ್ಟ್ಯವೇನೆಂದರೆ ಹೊಗಳಿಕೆಗೆ ಬದಲಾಗಿ ಉಪದೇಶವಿರುವುದು. ಈತನ ಘಸಲ್‍ಗಳಲ್ಲಿ ಕಾಣುವ ಅನುರಾಗ ಪರಮಪುರುಷನಲ್ಲಿರುವಂತೆ, ಕಸೀದಾಗಳಲ್ಲಿ ನ್ಯಾಯಪರಿಪಾಲನೆ, ಧರ್ಮಮಾರ್ಗ, ನೀತಿಯ ಬಗ್ಗೆ ಅಧಿಕಾರಯುತವಾದ ಸರ್ವಮಾನ್ಯವಾದ ಸೂಚನೆಗಳಿವೆ.
ಪರ್ಷಿಯನ್ನಿನ ಶ್ರೇಷ್ಠ ಕವಿಗಳಲ್ಲಿ ಜಾಮಿಯೇ ಕಟ್ಟಕಡೆಯವನೆಂಬ ಒಂದು ಅಭಿಪ್ರಾಯವೂ ಇದೆ. ಈತನ ಮುಖ್ಯ ಕೃತಿಗಳು : ಹಫ್ತ್ ಔರಂಗ್, ಯೂಸುಫ್-ಓ-ಸುಲೇಖಾ, ನಫಾಹಾತ್-ಉಲ್-ಉನ್ಸ ಮತ್ತು ಬೆಹಾರಿಸ್ತಾನ್.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಮಿ}}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಜಾಮಿ" ಇಂದ ಪಡೆಯಲ್ಪಟ್ಟಿದೆ