ಕಲ್ಯಾಣಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೦ ನೇ ಸಾಲು:
ಅಮರಸುಳ್ಯ ಸೀಮೆಗಳಲ್ಲಿ ಬ್ರಿಟಿಷರ ವಿರೋಧ ಚಳವಳಿಯಲ್ಲಿ ಮುಖ್ಯಸ್ಥನಾಗಿದ್ದ ಕೆದಂಪಾಡಿ ರಾಮೇಗೌಡನೆಂಬವನು ಮೊದಲು ಕಲ್ಯಾಣಸ್ವಾಮಿಯ ಜತೆಯಲ್ಲಿದ್ದ ಕೊಡಗಿನ ಏಳುಸಾವಿರ ಸೀಮೆಯ ಪುಟ್ಟಬಸವನೆಂಬವನನ್ನು ಇದಕ್ಕೆ ಆರಿಸಿ ಬೆಳ್ಳಾರೆ ಕೋಟೆಗೆ ಕರೆದುಕೊಂಡು ಹೋಗಿ ಅಲ್ಲಿ ಹಾಕಿದ್ದ ಚಪ್ಪರದ ಅಡಿಯಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ. ಇವನೇ ಕಲ್ಯಾಣಸ್ವಾಮಿ ಅಥವಾ ನಂಜುಂಡರಸ, ಕೊಡಗು ಅಮರಸುಳ್ಯಗಳ ರಾಜ ಎಂದು ಸೀಮೆಯವರಿಗೆಲ್ಲ ತಿಳುಹಿಸಿದ. ಎರಡು ಮೂರು ಸಾವಿರ ಸಶಸ್ತ್ರಜನ ಇವನನ್ನು ಕೂಡಿಕೊಂಡರು. ಮರುದಿವಸ ಕಲ್ಯಾಣಸ್ವಾಮಿಯ ಹೆಸರಿನಲ್ಲಿ ನಿರೂಪಗಳನ್ನು ಬರೆಯಿಸಿ ಅವುಗಳ ಪ್ರತಿಗಳನ್ನು ಚೆಂಬು ಪೆರಾಜೆಗಳ ಪಾರ್ಪತಿಗಾರರಿಗೂ [[ಮಂಜರಾಬಾದ್ ಕೋಟೆ|ಮಂಜುರಾಬಾದು]] ಸೀಮೆಯ ಪಟೇಲರಿಗೂ ತಾವುನಾಡು, ಟೇಂಗುನಾಡು, ಗಡಿನಾಡುಗಳ ಪಾರ್ಪತಿಗಾರರಿಗೂ ದಿವಾನ್ ಪೊನ್ನಪ್ಪನಿಗೂ ಕಳುಹಿಸಿದರು. ೧೮೩೭ನೆಯ ಮಾರ್ಚ್ ೩೧ರಲ್ಲಿ ಈ ನಿರೂಪದ ಒಂದು ಪ್ರತಿಯು ಕೊಡಗಿನ ಸೂಪರಿಂಟೆಂಡೆಂಟನಿಗೂ ತಲಪಿ ಅವನಿಗೆ ಬಂಡಾಯದ ಸುಳುಹು ಸಿಕ್ಕಿತು.
 
=== ಹೋರಾಟ ೧ ===
ಒಂದೆರಡು ದಿನಗಳಲ್ಲೆ ಕೆದಂಪಾಡಿ ರಾಮೇಗೌಡ ಅಲ್ಲಿದ್ದ ಇತರ ಮುಖಂಡರನ್ನು ಸುಬೇದಾರರನ್ನಾಗಿ ನೇಮಿಸಿ ಅವರನ್ನು ಕೆಲವು ಜನರೊಡನೆ ಆ ಸೀಮೆಯ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿದ. ತಾನು ಕಲ್ಯಾಣಸ್ವಾಮಿಯನ್ನೂ ಸೈನಿಕರನ್ನೂ ಕರೆದುಕೊಂಡು ಪುತ್ತೂರಿಗೆ ಹೊರಟ. ದಾರಿಯಲ್ಲಿ ಇವನ ಸಂಗಡಿಗರು ಒಬ್ಬ ಬ್ರಿಟಿಷ್ ಅಧಿಕಾರಿಗೆ ಸೇರಿದ್ದ ಏಳೆಂಟು ಕುದುರೆಗಳನ್ನು ಹಿಡಿದರು. [[ಧರ್ಮಸ್ಥಳ]]ದ ಮಂಜಯ್ಯಹೆಗ್ಗಡೆ ತನ್ನಲ್ಲಿದ್ದ ಎರಡು ಫಿರಂಗಿಗಳನ್ನು ಕೊಟ್ಟರು. ಇತರ ಅನೇಕರು ವಿವಿಧ ರೀತಿಯಲ್ಲಿ ಸಹಾಯ ನೀಡಿದರು.
=== ಹೋರಾಟ ೨ ===
 
ಕಲ್ಯಾಣಸ್ವಾಮಿ ಮತ್ತು ಸಂಗಡಿಗರು ಪುತ್ತೂರನ್ನು ತಲಪಿದಾಗ ಸಣ್ಣ ತುಕಡಿಯೊಡನೆ ಅಲ್ಲಿಗೆ ಬಂದಿದ್ದ [[ಮಂಗಳೂರು|ಮಂಗಳೂರಿನ]] ಕಲೆಕ್ಟರ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು. ಆದರೆ ಸುದ್ದಿ ತಿಳಿದ ಕಲೆಕ್ಟರ್ ಓಡಿಹೋದ.
=== ಹೋರಾಟ ೩ ===
 
ಕಲ್ಯಾಣಸ್ವಾಮಿ ಪುತ್ತೂರನ್ನು ಸುಲಿಗೆ ಮಾಡಿ ಪಾಣೆಮಂಗಳೂರಿಗೆ ಹೋದ. ಅಲ್ಲಿ ನಂದಾವರದ ಲಕ್ಕಪ್ಪ ಬಂಗರಸ ಇವನ ಜೊತೆ ಸೇರಿಕೊಂಡ. ಆ ಹೊತ್ತಿಗೆ ದೊಡ್ಡದಾಗಿ ಬೆಳೆದಿದ್ದ ಸಮೂಹದೊಡನೆ ಕಲ್ಯಾಣಸ್ವಾಮಿಯು [[ಬಂಟ್ವಾಳ]]ಕ್ಕೆ ತೆರಳಿ ಪೇಟೆಯನ್ನು ಸುಲಿಗೆ ಮಾಡಿ ಮಂಗಳೂರಿಗೆ ಹೋದ. ಇವನು ಮಂಗಳೂರನ್ನು ತಲಪುವಷ್ಟರಲ್ಲಿ ಅಲ್ಲಿದ್ದ ಇಂಗ್ಲಿಷ್ ಅಧಿಕಾರಿಗಳು [[ಕಣ್ಣಾನೂರು|ಕಣ್ಣಾನೂರಿಗೆ]] ಓಡಿಹೋಗುವುದಕ್ಕೆ ಹಡಗನ್ನು ಕಾಯುತ್ತಿದ್ದರು. ಕಲ್ಯಾಣಸ್ವಾಮಿ ಅಲ್ಲಿ ಸೆರೆಮನೆಯ ಖೈದಿಗಳನ್ನು ಬಿಡಿಸಿ ತಾಲ್ಲೂಕು ಖಜಾನೆಯನ್ನು ಒಡೆದು ಹಣವನ್ನು ದೋಚಿದ. ಅಲ್ಲಿದ್ದ ಇಂಗ್ಲಿಷ್ ಉದ್ಯೋಗಸ್ಥರ ಮನೆಗಳಿಗೆ ಬೆಂಕಿ ಕೊಡಿಸಿದ. ಮಂಗಳೂರಿನಲ್ಲಿ ತನ್ನ ಬಾವುಟವನ್ನೇರಿಸಿ ಹದಿಮೂರು ದಿವಸಗಳಿದ್ದ. ಆದರೆ ಅಷ್ಟರಲ್ಲಿ [[ತಲಚೇರಿ]], ಕಣ್ಣಾನೂರುಗಳಿಂದ ಇಂಗ್ಲಿಷರ ಸೈನ್ಯಗಳು ಮಂಗಳೂರನ್ನು ತಲಪಿದವು. ಸರಿಯಾದ ಆಯುಧಗಳಿಲ್ಲದ ಕಲ್ಯಾಣಸ್ವಾಮಿಯ ಜನ ಹೆದರಿ ಓಡಿ ಹೋದರು. ಕಲ್ಯಾಣಸ್ವಾಮಿಯೂ ಸುಳ್ಯಕ್ಕೆ ಓಡಿಬಂದ.
 
== ಕಲ್ಯಾಣ ಸ್ವಾಮಿ ಸೆರೆ ==
ಕಲ್ಯಾಣಸ್ವಾಮಿ ಮಂಗಳೂರಿಗೆ ಹೋದಾಗ ಇವನ ಸಂಗಡಿಗರು ಕೊಡಗನ್ನು ಹಿಡಿಯಬೇಕೆಂದು ಸನ್ನಾಹಮಾಡಿದ್ದರೂ ಕೊಡಗಿನಲ್ಲಿ ದಿವಾನರುಗಳಾಗಿದ್ದ ಚಪ್ಪುದಿರ ಪೊನ್ನಪ್ಪ ಮತ್ತು ಅಪ್ಪಾರಂಡ ಬೋಪು ಬ್ರಿಟಿಷರ ಆಳಿಕೆಗೆ ಬೆಂಬಲ ಕೊಟ್ಟಿದ್ದರಿಂದ ಸಾಧ್ಯವಾಗಲಿಲ್ಲ. ಪ್ರತಿಯಾಗಿ ಅವರು ಈ ದಂಗೆಯನ್ನು ಅಡಗಿಸಲು ಅಮರಸುಳ್ಯ ಸೀಮೆಗಳಿಗೆ ಬಂದು ಸುಳ್ಯದ ಕೋಟೆಪೇಟೆಗಳನ್ನು ಹಿಡಿದುಕೊಂಡು ಕಲ್ಯಾಣಸ್ವಾಮಿಯು [[ಬೆಳ್ಳಾರೆ]]ಯಲ್ಲಿರುವನೆಂಬ ವರ್ತಮಾನವನ್ನು ಕೇಳಿ ಬೆಳ್ಳಾರೆಗೆ ಹೋದರು. ಅಷ್ಟರಲ್ಲಿ ಕಲ್ಯಾಣಸ್ವಾಮಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಲಪಿದ್ದ. ಅಲ್ಲಿದ್ದ ಇಂಗ್ಲಿಷ್ ಸೈನ್ಯದ ಕಣ್ಣು ತಪ್ಪಿಸಿ ಮರೆಯಾದ. ಈ ವರ್ತಮಾನವನ್ನು ತಿಳಿದು [[ಈಸ್ಟ್‌ ಇಂಡಿಯ ಕಂಪನಿ]] ಸರ್ಕಾರ ಕಲ್ಯಾಣಸ್ವಾಮಿಯನ್ನು ಹಿಡಿದುಕೊಟ್ಟವರಿಗೆ ಹತ್ತು ಸಾವಿರ ರೂಪಾಯಿಗಳ ಬಹುಮಾನವನ್ನು, ಇವನ ಸಂಗಡಿಗರನ್ನು ಹಿಡಿದುಕೊಟ್ಟವರಿಗೆ ಐದು ಸಾವಿರ ರೂಪಾಯಿಗಳ ಬಹುಮಾನಗಳನ್ನು ಕೊಡುವುದಾಗಿ ಪ್ರಕಟಿಸಿತು. ಕಲ್ಯಾಣಸ್ವಾಮಿ ವೇಷ ಮರೆಸಿಕೊಂಡು ತನ್ನ ಊರನ್ನು ತಲುಪಿದ್ದ. ಇದನ್ನು ಅರಿತ ಅಲ್ಲಿನ ಕೆಲವು ಜನ ಹಣದ ಆಸೆಗಾಗಿ ಬ್ರಿಟಿಷರಿಗೆ ಸುದ್ದಿ ನೀಡಿದರು. ಕಲ್ಯಾಣಸ್ವಾಮಿ ಸೆರೆಸಿಕ್ಕಿದ.
 
ಆಗ ಕಲ್ಯಾಣಸ್ವಾಮಿ ತಾನು ಶನಿವಾರಸಂತೆಯ ಹತ್ತಿರದ ಹೆಮ್ಮನಿ ಗ್ರಾಮದ ಬೇಸಾಯಗಾರ, ಅಲ್ಲಿಗೆ ಕೆದಂಪಾಡಿ ರಾಮೇಗೌಡನ ಜನ ಬಂದು ತನ್ನನ್ನು ಅಮರಸುಳ್ಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತನ್ನನ್ನು ಕೊಡಗಿನ ದೊರೆಯೆಂದು ಇತರರಿಗೆ ಹೇಳಿ ದಂಗೆಯೆಬ್ಬಿಸಿದರು, ತನ್ನ ಹುಟ್ಟು ಹೆಸರು ಬಸಪ್ಪ, ದೊಡ್ಡವನಾದಮೇಲೆ ತನ್ನನ್ನು ಪುಟ್ಟಬಸವ ಅಥವಾ ಮರಿಬಸವ ಎಂದು ಊರಿನವರು ಕರೆಯುತ್ತಿದ್ದರು ಎಂದು ಹೇಳಿಕೆ ನೀಡಿದನೆಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.
 
== ಗಲ್ಲು ಶಿಕ್ಷೆ ==
೧೮೩ರಲ್ಲಿ ಕಲ್ಯಾಣಪ್ಪನ ಹೋರಾಟದಲ್ಲಿ ಮಂಗಳೂರಿನಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಗಳು ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದರು. ಕಲ್ಯಾಣಸ್ವಾಮಿ, ಲಕ್ಷ್ಮಪ್ಪ ಬಂಗರಸು ಮತ್ತು ಇನ್ನು ಕೆಲವು ಮುಖಂಡರೊಡನೆ ಮಂಗಳೂರಿನ ಬಿಕ್ರನಕಟ್ಟೆ ಪದವಿನ ಹತ್ತಿರ ಗಲ್ಲಿಗೇರಿಸಲ್ಪಟ್ಟ.<ref>{{cite book |last1=Gaṇapati Rāv Aigaḷ |first1=Em.̣ |title=Dakṣiṇa Kannaḍa Jilleya prācīna itihāsa |date=2004 |publisher=Rāṣṭrakavi Gōvinda Pai Saṃśōdhana Kēndra |location=Uḍupi |isbn=81-86668-47-0}}</ref>
 
== ಉಲ್ಲೇಖಗಳು ==
"https://kn.wikipedia.org/wiki/ಕಲ್ಯಾಣಸ್ವಾಮಿ" ಇಂದ ಪಡೆಯಲ್ಪಟ್ಟಿದೆ