ಕೊಡಗಿನ ಗೌಡರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
[[ಚಿತ್ರ:Tulu Gowdas Logo.jpg|thumb]]
'''ಗೌಡರು''' ಎಂದರೆ ಭೂಮಿಗೆ ಒಡೆಯ ಎಂದರ್ಥ. ಕರ್ನಾಟಕ[[ಕರ್ನಾಟಕ]] ರಾಜ್ಯದ ನೈಋತ್ಯ ದಿಕ್ಕಿನಲ್ಲಿರುವ [[ಕೊಡಗು ಜಿಲ್ಲೆ]] ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ [[ಸುಳ್ಯ]], [[ಪುತ್ತೂರು]] ಹಾಗೂ [[ಬಂಟವಾಳ]] ತಾಲ್ಲೂಕಿನಲ್ಲಿ ಅರೆಗೌಡರುಅರೆಭಾಷೆ ಗೌಡರು ವಾಸಿಸುತ್ತಾರೆ.<ref> https://kn.wikipedia.org/wiki/ಅರೆಭಾಷೆ</ref> ಗೌಡರು ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಇದ್ದರೆಂದು ಚರಿತ್ರೆಗಳಿಂದ ತಿಳಿಯುತ್ತದೆ. ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಗೌಡರಲ್ಲಿ ಕೆಲವರು ಹದಿನೆಂಟನೆಯ ಶತಮಾನದ ಕೊನೆಯಲ್ಲಿ ಮತ್ತು ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಇವರು ಕೊಡಗಿಗೆ ಬಂದು ನೆಲೆಸಿದರು. ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷೆ ಗೌಡ ಜನಾಂಗದವರು ಹಿಂದು ಸಂಸ್ಕ್ರತಿಯ ಪರಂಪರೆಯಲ್ಲಿ ವಿಶಾಲವಾದ ಕೊಡುಗೆಯನ್ನು, ಜಾನಪದ ಸೋಬಾನೆ ಕಂಪಿನ ಮೂಲಕ ಕರ್ನಾಟಕ ಜಾನಪದ ಸಾಹಿತ್ಯ ರಂಗಕ್ಕೆ ನೀಡಿದೆ. ಮಲೆನಾಡಿನ ಸಂಸ್ಕ್ರತಿ ವೈಭವವನ್ನು ಹೊಂದಿದ ಅರೆಭಾಷೆಯನ್ನಾಡುವ ಕೊಡಗು ಗೌಡ ಜನಾಂಗದವರು ತಮ್ಮದೇ ಆದ ಆಚರಣೆಗಳನ್ನು ಹೊಂದಿ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ.<ref> https://en.wikipedia.org/wiki/Arebhashe_dialect</ref>
==ಹರಿಸೇವೆ==
ಗೌಡರ ಕುಲದೇವರಾದ ಶ್ರೀ ಲಕ್ಶ್ಮಿ ಸಹಿತ ವೆಂಕಟರಮಣ ಸ್ವಾಮಿಯ ಹರಿಸೇವೆಯನ್ನು ಆಚರಿಸುತ್ತಾರೆ. ಕೊಡಗು ಜಿಲ್ಲೆಯ ಗೌಡ ಜನಾಂಗದವರು ಹಿಂದಿನಿಂದಲೂ ಈ ಹರಿಸೇವೆಯನ್ನು ಆಚರಿಸುತ್ತಾ ಬಂದಿದ್ದಾರೆ. ಗೌಡ ಜನಾಂಗದ ಪ್ರತೀ ಕುಟುಂಬಕ್ಕೂ '''ಐನ್‍ಮನೆ'''(ಮೂಲ ಮನೆ) ಎಂಬುದು ಇರುತ್ತದೆ. ಐನ್‍ಮನೆಯ ಬಾಡೆಯಲ್ಲಿ ದೇವರ ದೀಪವನ್ನು ಹಾಗು ಶ್ರೀ ವೆಂಕತರಮಣ ದೇವರ ಭಾವ ಚಿತ್ರವನ್ನು ಇಟ್ಟು ಬೆಳಿಗ್ಗೆ ಮತ್ತು ಸಂಜೆ ಪೂಜಿಸುತ್ತಾರೆ. ಕುಟುಂಬದ ಹರಿಕೆ ಹಣವನ್ನು ಮುಡುಪುನಲ್ಲಿಟ್ಟು(ಭಂಡಾರ ಪೆಟ್ಟಿಗೆ) ಬೀಗಮುದ್ರಿಸಿ ಐನ್ ಮನೆಯ ಉಪ್ಪರಿಗೆ(ಅಟ್ಟ)ಯಲ್ಲಿ ಯಾರ ಕೈಗೂ ಎಟುಕದಂತೆ ನೇತು ಹಾಕುತ್ತಾರೆ. ಇದಕ್ಕೆ ಕಾರಣ ಮುಡಿಪಿಗೆ ಮೈಲಿಗೆ ಆಗಬಾರದು, ಸೂತಕದವರು ಮುಟ್ಟಬಾರದು ಎಂಬ ಉದ್ದೇಶ. ಸದ್ರಿ 'ಮುಡುಪು ಹಣಕ್ಕೆ' ಪೂಜೆ ಸಲ್ಲಿಸಿ ದೇವರನ್ನು ಆರಾಧಿಸುವುದನ್ನು 'ಹರಿಸೇವೆ' ಎಂದು ತಿಳಿಯಲಾಗಿದೆ. ಹರಿಸೇವೆಗಳಲ್ಲಿ 'ಹರಿಸೇವೆ' ಮತ್ತು 'ಘನ ಹರಿಸೇವೆ' ಎಂದು ೨ ವಿಧ. ಹಾಗೆಯೇ 'ಮಣೆ ಹರಿಸೇವೆ' ಮತ್ತು 'ಪಾನಕ ಹರಿಸೇವೆ' ಎಂದು ಇನ್ನು ಎರಡು ವಿಧಗಳಿವೆ. ಇದನ್ನು ಶ್ರೀ ಸ್ವಾಮಿಯವರ ದಿನವಾದ ಶನಿವಾರ ಮತ್ತು ಬುಧವಾರದಂದು ಆಚರಿಸಲಾಗುತ್ತದೆ.
"https://kn.wikipedia.org/wiki/ಕೊಡಗಿನ_ಗೌಡರು" ಇಂದ ಪಡೆಯಲ್ಪಟ್ಟಿದೆ