ಸ್ವಾತಂತ್ರ್ಯ ಸಂಗ್ರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
 
== ಕಿತ್ತೂರಿನ ಬಂಡಾಯ ==
{{ಮುಖ್ಯ|ಕಿತ್ತೂರು ಚೆನ್ನಮ್ಮ}}
ಬ್ರಿಟಿಷರು ವಾರಸುದಾರರಿಲ್ಲವೆಂಬ ನೆಪದಿಂದ ಕಿತ್ತೂರು ಸಂಸ್ಥಾನವನ್ನು ನುಂಗಲು ಹವಣಿಸಿದರು. ಬ್ರಿಟಿಷರಿಗೆ ಕಿತ್ತೂರಿನ ಮೇಲೆ ಮೊದಲಿ ನಿಂದಲೂ ಕಣ್ಣಿತ್ತು. ಉದಾಹರಣೆಯಾಗಿ 1822ರಲ್ಲೇ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರು ದೇಸಾಯಿಗೆ “ಕಳ್ಳಕಾಕರಿಗೆ ಆಶ್ರಯ ಕೊಡುತ್ತಿದ್ದೀಯೆ, ಸುತ್ತ ಮುತ್ತಣ ಪ್ರಾಂತದವರಿಗೆ ತೊಂದರೆಯಾಗುತ್ತಿದೆ” ಎಂದೆಲ್ಲ ಆಪಾದನೆ ಮಾಡಿದ್ದ.
=== ಕಿತ್ತೂರು ರಾಣಿ ಚೆನ್ನಮ್ಮ ===
{{ಮುಖ್ಉಮುಖ್ಯ|ಕಿತ್ತೂರು ಚೆನ್ನಮ್ಮ}}
ಕಿತ್ತೂರ ರಾಣಿ ಚೆನ್ನಮ್ಮ ಬ್ರಿಟಿಷರ ಕುಟಿಲ ನೀತಿಯನ್ನರಿತು ಯುದ್ಧಸನ್ನದ್ಧಳಾದಳು. ಕೊಲ್ಲಾಪುರದ ಅರಸ ಬ್ರಿಟಿಷರ ಕೈಗೊಂಬೆಯೆನ್ನುವುದು ತಿಳಿಯದೆ ಚೆನ್ನಮ್ಮ ಅವನ ಸಹಾಯ ಬೇಡಿದಳು. ಅವನಿಂದ ಬ್ರಿಟಿಷರಿಗೆ ವಿಷಯ ತಿಳಿದು ಅವರು ಹೆದರಿದರು. ಬ್ರಿಟಿಷ್ ಸೈನಿಕರು ಕಿತ್ತೂರಿನ ಕೋಟೆಯನ್ನು ಮುತ್ತಿದರು. 1824 ಅಕ್ಟೋಬರ್ 23ರ ಮೊದಲ ಮುತ್ತಿಗೆಯಲ್ಲಿ ಥ್ಯಾಕರೆ ಸತ್ತು ಕಿತ್ತೂರ ವೀರರಿಗೆ ಜಯವಾಯಿತು. ಆದರೆ ಮುಂದೆ ದೇಶದ್ರೋಹಿಗಳ ಸಂಚಿನಿಂದ 1824 ನವೆಂಬರ್ 3ರ ಯುದ್ಧದಲ್ಲಿ ಕಿತ್ತೂರಿಗೆ ಸೋಲಾಯಿತು. ಚೆನ್ನಮ್ಮನನ್ನು ಬಂಧಿಸಿ ಬೈಲಹೊಂಗಲದಲ್ಲಿ ಸೆರೆಹಾಕಿದರು. ಚೆನ್ನಮ್ಮ 1830 ಫೆಬ್ರವರಿ 30ರಂದು ಸೆರೆಯಲ್ಲೇ ಮೃತಳಾದಳು.