ಭಾರತದ ಸ್ವಾತಂತ್ರ್ಯ ಚಳುವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
 
== ''''೧೮೫೭'' ಕ್ಕೆ ಮುನ್ನ ಪ್ರಾಂತೀಯ ಚಳುವಳಿಗಳು ==
[[೧೮೫೭|೧೮೫೭ರ]] ಮುಂಚಿನ ಭಾರತದಲ್ಲಿ ವಿದೇಶಿ ಆಳ್ವಿಕೆಯ ವಿರುದ್ಧ ಹಲವು ಪ್ರಾಂತೀಯ ಚಳುವಳಿಗಳು ನಡೆದಿದ್ದವು. ಆದರೆ ಆ ಹೋರಾಟಗಳು ಏಕೀಕರಣಗೊಂಡಿರಲಿಲ್ಲವಾದುದರಿಂದ ಅವುಗಳನ್ನು ವಿದೇಶಿ ಆಡಳಿತಗಾರರು ಸುಲಭವಾಗಿ ಹತ್ತಿಕ್ಕಿದರು. ದಕ್ಷಿಣದ ಕೆಲವು ರಾಜರುಗಳು ವಿದೇಶಿ ಆಡಳಿತಗಾರ ವಿರುದ್ಧ ಹೋರಾಟಗಳನ್ನು ನಡೆಸಿದ್ದರು. [[ಟಿಪ್ಪು ಸುಲ್ತಾನ್]] ಹಾಗೂ ಬ್ರಿಟೀಷರ ನಡುವೆ ನಡೆದ [[ಮೈಸೂರು ಯುದ್ಧಗಳು]], ೧೭೮೭ ರಲ್ಲಿ [[ಗೋವಾ]]ದ ಮೇಲೆ [[ಪೋರ್ಚುಗಲ್|ಪೋರ್ಚುಗೀಯ]] ನಿಯಂತ್ರಣವನ್ನು ವಿರೋಧಿಸಿ ನಡೆದ [[ಪಿಂಟೋಗಳ ಒಳಸಂಚು]] ಹೆಸರಿನ ಜನಾಂಗೀಯ ದಂಗೆ, [[ತಮಿಳುನಾಡು|ತಮಿಳುನಾಡಿನ]] ಇಂದಿನ [[ತೂತುಕುಡಿ ಜಿಲ್ಲೆ|ಟ್ಯುಟಿಕಾರಿನ್ ಜಿಲ್ಲೆ]]ಯನ್ನು ಆಳಿದ [[ವೀರ ಪಾಂಡ್ಯ ಕಟ್ಟಿ ಬೊಮ್ಮನ್]] ನಡೆಸಿದ ಹೋರಾಟ ಇವುಗಳ ಉದಾಹರಣೆಗಳು. ವೀರ ಪಾಂಡ್ಯನು ಸ್ಥಳೀಯ ಜನರು ತಮ್ಮ ಕೃಷಿ ಉತ್ಪನ್ನಗಳ ಮೇಲೆ ವಿದೇಶಿ ಆಡಳಿತಗಾರರಿಗೆ ತೆರಿಗೆ ಕೊಡುವುದರ ಅಗತ್ಯವನ್ನು ಪ್ರಶ್ನಿಸಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದನು <ref>An Advanced History of India. By Majumder, Raychoudhary, Datta.</ref>. ಉಳಿದ ಚಳುವಳಿಗಳಲ್ಲಿ [[ಸಂತಾಲರ ದಂಗೆ]] ಮತ್ತು ಬ್ರಿಟಿಷರಿಗೆ [[ಬಂಗಾಲ]]ದಲ್ಲಿ [[ಟಿಟುಮೀರ್]] ಒಡ್ಡಿದ ಪ್ರತಿರೋಧಗಳು ಸೇರಿದ್ದವು.''''Italic
 
--[[ವಿಶೇಷ:Contributions/122.167.4.122|122.167.4.122]] ೦೫:೦೨, ೧೯ ಆಗಸ್ಟ್ ೨೦೧೨ (UTC)
 
== ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ==