ವಿಡಿಯೋಟೆಕ್ಸ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
 
೨ ನೇ ಸಾಲು:
ವಿಡಿಯೋಟೆಕ್ಸ್ಟ್ ಹಾಗೂ [[ಟೆಲಿಟೆಕ್ಸ್ಟ್]] ಹೆಚ್ಚಾಗಿ ಒಂದನ್ನೊಂದು ಹೋಲುತ್ತವೆ. ಇವುಗಳ ಒಂದೇ ಒಂದು ವ್ಯತ್ಯಾಸವೆಂದರೆ, ವಿಡಿಯೋಟೇಕ್ಸ್ಟ್ ಸಂಪರ್ಕ ಜಾಲವಾಗಿ ಸಾರ್ವಜನಿಕ [[ದೂರವಾಣಿ]] ಜಾಲವನ್ನು ಉಪಯೋಗಿಸಿಕೊಳ್ಳುತ್ತದೆ. ಇದರಲ್ಲಿ ಚಂದಾದಾರನು ಒಂದು ದೂರವಾಣಿ ಕರೆಯನ್ನು ಮಾಡಿ, ವಿಡಿಯೋಟೆಕ್ಸ್ಟ್ ಪ್ರಾಧಿಕಾರದ ಗಣಕಯಂತ್ರ ವ್ಯವಸ್ಥೆಯ ಜೊತೆಯಲ್ಲಿ ತಾತ್ಕಾಲಿಕ ಕೊಂಡಿಯನ್ನು ಸ್ಥಾಪಿಸಿಕೊಳ್ಳುತ್ತಾನೆ. [[ಗಣಕಯಂತ್ರ]]ವು ದೂರವಾಣಿಯ ಮೂಲಕ ಮಾಹಿತಿಯನ್ನು ಕಳುಹಿಸುತ್ತದೆ. ಅದನ್ನು ಒಂದು [[ಅಯಸ್ಕಾಂತ]] ಟೇಪಿನ ಮೇಲೆ, ಡಿಕೋಡರ್'ನಿಂದ ಅನುವಾದಿಸಿ [[ದೂರದರ್ಶನ]] ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮಾಹಿತಿಯನ್ನು ಬಣ್ಣ ಮತ್ತು ಕಪ್ಪು ಬಿಳುಪು ದೂರದರ್ಶನಗಳೆರಡರ ಮೇಲೂ ಪ್ರದರ್ಶಿಸಬಹುದು. ವೀಕ್ಷಕನು ವಿಡಿಯೋಟೆಕ್ಸ್ಟ್ ಸೇವೆಯನ್ನು ಪೂರ್ಣಗೊಳಿಸಿದ ಮೇಲೆ, ದೂರವಾಣಿ ಮಾರ್ಗವು ತನ್ನಷ್ಟಕ್ಕೆ ತಾನೇ ಕಡಿದು ಹೋಗುತ್ತದೆ.
 
ವಿಡಿಯೋಟೆಕ್ಸ್ಟ್ ಸೌಲಭ್ಯವನ್ನು ಉಪಯೋಗಿಸುವವನು ಯಾವುದೇ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು. ವಾಸ್ತವವಾಗಿ ಅಂಕಿ ಅಂಶ ಮೂಲವು ಈ ಎಲ್ಲಾ ವಿಷಯಗಳ ಬಗ್ಗೆ ಆ ಸಮಯದವರೆಗಿನ ಮಾಹಿತಿಗಳನ್ನು ಇಟ್ಟುಕೊಂಡಿರುತ್ತದೆ. ಮತ್ತು ದೂರವಾಣಿ ಕರೆಯನ್ನು ಕೊಟ್ಟಾಗ ಗಣಕಯಂತ್ರವು, ಅಂಕಿ ಅಂಶದ ಮೂಲದಿಂದ ಮಾಹಿತಿಯನ್ನು ಹುಡುಕಿ ಅದನ್ನು ದೂರವಾಣಿ ಮೂಲಕ ಕಳುಹಿಸುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ಚಂದಾದಾರನು ಅದನ್ನು ಪಡೆಯುತ್ತಾನೆ.<ref>{{Cite web |url=https://www.element14.com/community/community/news/blog/2012/12/26/the-french-minitel-system-legacy-the-biggest-pre-internet-comes-to-an-end |title=ಆರ್ಕೈವ್ ನಕಲು |access-date=2016-02-20 |archive-date=2013-01-06 |archive-url=https://web.archive.org/web/20130106074417/http://www.element14.com/community/community/news/blog/2012/12/26/the-french-minitel-system-legacy-the-biggest-pre-internet-comes-to-an-end |url-status=dead }}</ref>
 
===ಉಲ್ಲೇಖ===
"https://kn.wikipedia.org/wiki/ವಿಡಿಯೋಟೆಕ್ಸ್ಟ್" ಇಂದ ಪಡೆಯಲ್ಪಟ್ಟಿದೆ