ಪದವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪದವಿ
 
Rescuing 1 sources and tagging 0 as dead.) #IABot (v2.0.8
 
೧ ನೇ ಸಾಲು:
'''ಪದವಿ''' ಎಂದರೆ ಕಾಲೇಜು ಅಥವಾ ವಿಶ್ವವಿದ್ಯಾಲಯ ತಾನು ನಿಷ್ಕರ್ಷಿಸಿರುವ ಪಠ್ಯಕ್ರಮವನ್ನು ಯಶಸ್ವಿಯಾಗಿ ವ್ಯಾಸಂಗ ಮಾಡಿ ಪಾರಂಗತರಾದವರಿಗೆ ನೀಡುವ ಪ್ರಶಸ್ತಿ.<ref>{{Cite web |url=https://www.unr.edu/academic-central/academics-101/what-is-a-degree |title=ಆರ್ಕೈವ್ ನಕಲು |access-date=2020-01-08 |archive-date=2017-02-10 |archive-url=https://web.archive.org/web/20170210130306/http://www.unr.edu/academic-central/academics-101/what-is-a-degree |url-status=dead }}</ref> ಸದ್ಯದಲ್ಲಿ ಪ್ರಚಾರದಲ್ಲಿರುವ ಪದವಿಗಳು ಹದಿಮೂರನೆಯ ಶತಮಾನದಿಂದ ಪ್ರಚಾರದಲ್ಲಿರುವ ಪದವಿಗಳು ಹದಿಮೂರನೆಯ ಶತಮಾನದಿಂದ ಪ್ರಚಾರದಲ್ಲಿದ್ದರೂ ಅವುಗಳ ಮೂಲ ಅದಕ್ಕೂ ಹಿಂದೆ ಯೂರೋಪಿನ ಗಿಲ್ಡುಗಳು ನೀಡುತ್ತಿದ್ದ ಪ್ರಶಸ್ತಿಗಳಲ್ಲಿದೆ. ವಿಶ್ವವಿದ್ಯಾಲಯ ಅಥವಾ ಕಾಲೇಜು ನೀಡುವ ಪ್ರಥಮ ಪದವಿ ಬ್ಯಾಚಲರ್ ಪದವಿ. ಇದನ್ನು ಪಡೆದವರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಪದವಿಗೆ ವ್ಯಾಸಂಗ ಮಾಡುವುದಕ್ಕೂ ಅಧ್ಯಾಪಕರ ವೃತ್ತಿ ಶಿಕ್ಷಣ ಪಡೆದು ಅಧ್ಯಾಪಕರ ಕಾಲೇಜಿನಲ್ಲಿ ಬೋಧಿಸುವುದಕ್ಕೂ ಹಿಂದೆ ಅವಕಾಶವಿತ್ತು. ನ್ಯಾಯ, ಪೌರೋಹಿತ್ಯ, ವೈದ್ಯ ಈ ಶಾಸ್ತ್ರಗಳಲ್ಲಿ ಪ್ರಥಮ ಪದವಿ ಪಡೆದವರು ಆ ವೃತ್ತಿಯನ್ನು ಆರಂಭಿಸಲೂ ಸನ್ನದು ಪಡೆಯುತ್ತಿದ್ದರು. ಮಾನವತಾಶಾಸ್ತ್ರಗಳಲ್ಲಿ ಪ್ರಥಮ ಪದವಿ ಆ ಶಾಸ್ತ್ರದಲ್ಲಿ ಕೇವಲ ಪಂಡಿತರೆಂದು ಮಾತ್ರ ಸಂಕೇತಿಸುತ್ತಿತ್ತು.
 
ಸಾಮಾನ್ಯವಾಗಿ ಬ್ಯಾಚಲರ್ ಪದವಿ ಎರಡು ಅಥವಾ ಮೂರು ವರ್ಷದ್ದು ; ಮಾಸ್ಟರ್ ಪದವಿ ಎರಡು ವರ್ಷದ್ದು. ಅನಂತರದ ಡಾಕ್ಟರ್ ಪದವಿಗೆ ಕೆಲವು ವಿಶ್ವವಿದ್ಯಾಲಯಗಳು ನಿರ್ದಿಷ್ಟ ಕಾಲಾವಧಿ ಪಠ್ಯಕ್ರಮಾದಿಗಳನ್ನು ಗೊತ್ತು ಮಾಡಿದ್ದರೂ ಇನ್ನು ಕೆಲವು ಸಂಶೋಧನ ಪ್ರಬಂಧಕ್ಕೇ ಪದವಿ ನೀಡುವುದುಂಟು. ಯೂರೋಪಿನ ಕೆಲವು ದೇಶಗಳಲ್ಲಿ ಬ್ಯಾಚಲರ್ ಮತ್ತು ಮಾಸ್ಟರ್ ಪದವಿಗಳೇ ಇಲ್ಲದವರಿಗೂ ಅವರ ಪಾಂಡಿತ್ಯವನ್ನು ಪರಿಗಣಿಸಿ ಡಾಕ್ಟರ್ ಪದವಿಯನ್ನೇ ಪ್ರಥಮ ಪದವಿಯಾಗಿ ನೀಡುವುದುಂಟು. ಫ್ರಾನ್ಸಿನಲ್ಲಿ ನ್ಯಾಯಶಾಸ್ತ್ರವನ್ನುಳಿದ ಮಿಕ್ಕ ವಿಷಯಗಳಲ್ಲಿ ಲೈಸೆಂಷಿಯೇಟ್ ಎಂಬ ಪ್ರಥಮ ಪದವಿಯನ್ನೂ ಅನಂತರ ಡಾಕ್ಟರ್ ಪದವಿಯನ್ನೂ ನೀಡುವುದಿದೆ. ಜರ್ಮನಿಯಲ್ಲಿ ಡಾಕ್ಟರೇಟ್ ಒಂದೇ ವಿಶ್ವವಿದ್ಯಾಲಯ ನೀಡುವ ಪದವಿ ; ಈಚೆಗೆ 4-7 ಸೆಮೆಸ್ಟರುಗಳ ಆ ಪದವಿಗೆ ಹೋಗಲಾರದವರಿಗಾಗಿ ಡಿಪ್ಲೊಮ ಪದವಿಗಳನ್ನು ಆರಂಭಸಿವ ಪ್ರವೃತ್ತಿ ಹೆಚ್ಚುತ್ತಿದೆ. ಇಂಗ್ಲೆಂಡು, ಭಾರತ ಮತ್ತು ಕಾಮನ್ವೆಲ್ತ್ ದೇಶಗಳಲ್ಲಿ ಬ್ಯಾಚಲರ್, ಮಾಸ್ಟರ್ ಮತ್ತು ಡಾಕ್ಟರ್-ಈ ಮೂರು ಅಂತಸ್ತಿನ ಪದವಿಗಳೂ ಪ್ರಚಾರದಲ್ಲಿವೆ.
"https://kn.wikipedia.org/wiki/ಪದವಿ" ಇಂದ ಪಡೆಯಲ್ಪಟ್ಟಿದೆ