ಜೇಬು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Pocket" ಲೇಖನದ ಅನುವಾದ
 
Rescuing 1 sources and tagging 0 as dead.) #IABot (v2.0.8
 
೫ ನೇ ಸಾಲು:
ಪ್ರಾಚೀನ ಜನರು ಅಮೂಲ್ಯ ವಸ್ತುಗಳನ್ನು ಹಿಡಿದಿಡಲು ಚಕ್ಕಳದ ಅಥವಾ ಬಟ್ಟೆಯ ಚೀಲಗಳನ್ನು ಬಳಸುತ್ತಿದ್ದರು. ಕ್ರಿ.ಪೂ. ೩,೩೦೦ರ ಆಸುಪಾಸಿನಲ್ಲಿ ಜೀವಿಸಿದ್ದ ಅಟ್ಝಿ, ಚೀಲ ಹೊಲಿಯಲ್ಪಟ್ಟಿರುವ ಬೆಲ್ಟ್‌ನ್ನು ಹೊಂದಿದ್ದನು. ಇದು ಉಪಯುಕ್ತ ವಸ್ತುಗಳ ಸಂಗ್ರಹವನ್ನು ಹೊಂದಿತ್ತು: ಕೆರೆಗ, ರಂಧ್ರ ಕೊರೆಯುವ ಯಂತ್ರ, ಚಕಮಕಿ ಕಲ್ಲಿನ ತುಂಡು, ಮೂಳೆಯ ಹಿಡಿದಬ್ಬಳ, ಮತ್ತು ಒಣಗಿದ ಶಿಲೀಂಧ್ರ.
 
ಕೈಗಡಿಯಾರ ಜೇಬು ಎಂದರೆ ಜೇಬುಗಡಿಯಾರವನ್ನು ಹಿಡಿದಿಡಲು ವಿನ್ಯಾಸಗೊಳಿಸಲಾದ ಚಿಕ್ಕ ಜೇಬು. ಇದು ಕೆಲವೊಮ್ಮೆ ಪುರುಷರ [[ಷರಾಯಿ]] ಹಾಗೂ ನಡುವಂಗಿಗಳಲ್ಲಿ ಮತ್ತು ಸಾಂಪ್ರದಾಯಿಕ ನೀಲಿ ಜೀನ್ಸ್‌ನಲ್ಲಿ ಕಂಡುಬರುತ್ತದೆ. ಆದರೆ, ಕೈಗಡಿಯಾರ ಜೇಬುಗಳ ಜನಪ್ರಿಯತೆಯು ಕುಗ್ಗಿದ ಕಾರಣ, ಈ ಜೇಬುಗಳನ್ನು ಅವುಗಳ ಮೂಲ ಉದ್ದೇಶಿತ ಕಾರ್ಯಕ್ಕೆ ಅಪರೂಪವಾಗಿ ಬಳಸಲಾಗುತ್ತದೆ. ಬೀಸಮ್ ಜೇಬು ಅಥವಾ ಸೀಳು ಜೇಬು ಎಂದರೆ ಮೇಲೆ ಹೊಲಿಯುವ ಬದಲಾಗಿ ಉಡುಪಿನ ಒಳಗೆ ಕತ್ತರಿಸಲಾದ ಜೇಬು. ಈ ಜೇಬುಗಳು ಹಲವುವೇಳೆ ಜೇಬಿನ ಸೀಳಿನ ಉದ್ದಕ್ಕೆ ಬಲವರ್ಧಿತ ಅಲಂಕರಣವನ್ನು ಹೊಂದಿರುತ್ತವೆ, ಮತ್ತು ಪ್ರಾಯಶಃ ಬಟ್ಟೆಯ ಹೆಚ್ಚುವರಿ ತುಂಡು ಅಥವಾ ಹೊಲಿಗೆಯಂತೆ ಕಾಣಿಸುತ್ತದೆ. ಬೀಸಮ್ ಜೇಬುಗಳು ಟಕ್ಸೀಡೊ ಜ್ಯಾಕೆಟ್‍ಗಳು ಮತ್ತು ಷರಾಯಿಗಳ ಮೇಲೆ ಕಂಡುಬರುತ್ತವೆ ಮತ್ತು ಮುಚ್ಚಳ ಅಥವಾ ಗುಂಡಿ ಮುಚ್ಚುವಿಕೆಯಿಂದ ಇವನ್ನು ಎದ್ದು ಕಾಣುವಂತೆ ಮಾಡಿರಬಹುದು. ಕ್ಯಾಂಪ್ ಪಾಕೆಟ್‍ಗಳು ಅಥವಾ ಸರಕು ಜೇಬುಗಳು ಉಡುಪಿನ ಹೊರಭಾಗದಲ್ಲಿ ಹೊಲಿಯಲಾದ ಜೇಬುಗಳು. ಅವುಗಳು ಸಾಮಾನ್ಯವಾಗಿ ನಾಲ್ಕು ಬದಿಗಳನ್ನು ಹೊಂದಿದ್ದು ಹೊಲಿಗೆ ಪಟ್ಟಿ ಕಾಣುವುದು ಲಕ್ಷಣವಾಗಿರುತ್ತದೆ.<ref>{{cite web | url=http://www.dressking.com/search/glossary.htm | title=Glossary of fashion design terminology at Dress King | accessdate=December 1, 2011 | archive-date=ಜನವರಿ 3, 2018 | archive-url=https://web.archive.org/web/20180103225019/http://www.dressking.com/search/glossary.htm | url-status=dead }}</ref> ಬಿಯರ್ ಜೇಬು ಎಂದರೆ ನಿರ್ದಿಷ್ಟವಾಗಿ ಬಿಯರ್‌ನ ಬಾಟಲಿಯನ್ನು ಸಾಗಿಸುವಷ್ಟು ಗಾತ್ರ ಕೊಟ್ಟಿರುವ ಜ್ಯಾಕೆಟ್ ಅಥವಾ ನಡುವಂಗಿಯೊಳಗಿನ ಒಂದು ಸಣ್ಣ ಜೇಬು. ಇದು ಅಮೇರಿಕಾದ ಪಶ್ಚಿಮ ಮಧ್ಯಭಾಗದ ಆಯ್ದ ಪ್ರದೇಶಗಳಲ್ಲಿ ನಿಷೇಧಕ್ಕಿಂತ ಮುಂಚೆ ೧೯೧೦ರ ದಶಕದಲ್ಲಿ ಫ಼್ಯಾಷನ್ ಆಗಿ ಬಂದಿತು. ನಿಷೇಧದ ನಂತರ ತುಲನಾತ್ಮಕ ಅಜ್ಞಾತತೆಯಲ್ಲಿ ಮರೆಯಾಯಿತು, ಆದರೆ ೧೯೮೦ ಮತ್ತು ೨೦೦೦ರ ದಶಕದ ಆರಂಭದಲ್ಲಿ ಸಣ್ಣಪ್ರಮಾಣದಲ್ಲಿ ಮರುಹುಟ್ಟನ್ನು ಅನುಭವಿಸಿತು.
 
==ಉಲ್ಲೇಖಗಳು==
"https://kn.wikipedia.org/wiki/ಜೇಬು" ಇಂದ ಪಡೆಯಲ್ಪಟ್ಟಿದೆ