ಗೋವಿಂದ ಪೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2405:204:542D:D0DE:2E63:30A9:63C3:C067 (talk) to last revision by ಅನೂಪ್
೧೭ ನೇ ಸಾಲು:
 
===ಎಂ ಗೋವಿಂದ ಪೈ ಮತ್ತು ಶಿಕ್ಷಣದ ಬಾಲ್ಯ===
* ಎಂ. ಗೋವಿಂದ ಪೈ ಅವರು [[ಮಂಗಳೂರಿ]]ನ ಸಾಹುಕಾರ ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮ. ತಾಯಿಯ ತೌರುಮನೆ '''ಮಂಜೇಶ್ವರ'''. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, ೧೮೮೩ ರಂದು ಜನಿಸಿ ದರು.<ref name="ಭಟ್ ಭಟ್ 1993"/><ref>{{cite news |title=M.Govinda Pai:A Kannada Scholar-Poet ,an Indian Image of Universal Religion|url=http: //bavivekrai. wordpress. com/ 2012/ 01/ 19/m-govinda-paia-kannada-scholar-poet-an-indian-image-of-universal-religion/}}</ref> ಅವರ ತಂದೆ ತುಂಬ ಸ್ಥಿತಿವಂತರು ತಿಮ್ಮಪ್ಪ ಪೈ ಅವರ ಹಿರಿಯ [[ಮಗ]]. ಇವರಿಗೆ ಮೂವರು ತಮ್ಮಂದಿರು ಮತ್ತು ಮೂವರು [[ಸಹೋದರಿ]]ಯರಿರು. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಎಂ. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ [[ಮಂಗಳೂರು]]ರಲ್ಲಿಯೇ ಆಯಿತು. ಪದವಿ ಪೂರ್ವದ ವಿದ್ಯಾಭ್ಯಾಸ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ನಡೆಯಿತು. ಅವರ ಒಡನಾಡಿಗಳಲ್ಲಿ ಎಂ. ಎನ್. ಕಾಮತ್ ಒಬ್ಬರು. ಅವರಿಗೆ ಪಾಠ ಕಲಿಸಿದ ಗುರುವರ್ಯರಲ್ಲಿ [[ಪಂಜೆ ಮಂಗೇಶರಾಯ]]ರೂ ಒಬ್ಬರು. ಬಿ.ಎ ಪದವಿ ಶಿಕ್ಷಣಕ್ಕಾಗಿ 1903-1906ರವರೆಗೆ [[ಮದರಾಸು]]ವಿನ( ಈಗಿನ [[ಚೆನ್ನೈ|ಚೆನ್ನೈಗೆ]]) ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕಾಯಿತು. ಅಲ್ಲಿ ಡಾ.[[ಸರ್ವೆಪಲ್ಲಿ ರಾಧಾಕೃಷ್ಣನ್|ಎಸ್. ರಾಧಾಕೃಷ್ಣನ್]] ಅವರು ಇವರ ಸಹಪಾಠಿಯಾಗಿದ್ದರು. ತಂದೆಯ ಮರಣದಿಂದಾಗಿ ಬಿ.ಎ ಪದವಿ ಪರೀಕ್ಷೆಯ ಮಧ್ಯದಲ್ಲಿಯೇ ಅವರು ಮಂಗಳೂರಿಗೆ ಹಿಂತಿರುಗಬೇಕಾಯಿತು. ಹಿರಿಯ ಮಗನಾಗಿದ್ದರಿಂದ ಮನೆಯ ಜವಾಬ್ದಾರಿ ವಹಿಸಬೇಕಾಯಿತು. ಬಿ.ಎ ಪದವಿ ಪಡೆಯಲಾಗದಿದ್ದರೂ [[ಇಂಗ್ಲಿಷ್]] ವಿಭಾಗದಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದುದರಿಂದ [[ಚಿನ್ನ]]ದ ಪದಕನ್ನು ಗಳಿಸಿದರು. ಅವರ ವ್ಯಾಸಂಗ ಅರ್ಧಕ್ಕೆ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ ಸಾಗಿತು. ಅವರು ತಮ್ಮ ತಾಯಿಯ ಊರಾದ ಮಂಜೇಶ್ವರದಲ್ಲಿ ಹುಟ್ಟಿದರು. ಆಕೆಯ ಮೂಲಕ ತಮಗೆ ದತ್ತವಾದ [[ಆಸ್ತಿ]]ಯನ್ನು ನೋಡಿಕೊಂಡು ಅಲ್ಲಿಯೇ ನೆಲೆಸಿದ್ದರಿಂದ ಅವರನ್ನು ಮಂಜೇಶ್ವರದ ಗೋವಿಂದ ಪೈ ಎಂದೇ ಕರೆಯುವುದು ರೂಢಿಯಾಯಿತು.
*ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು.<ref name="bio">{{cite news |title=Rashtrakavi M. Govind Pai|url=http://www.kamat.com/kalranga/kar/writers/govind_pai.htm}}</ref> ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ '''ಸುವರ್ಣ ಪದಕ''' ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.<ref name="ಭಟ್ ಭಟ್ 1993"/>
* ಇವರಿಗೆ [[ಮೈಸೂರು ವಿಶ್ವವಿದ್ಯಾನಿಲಯ]] ಗೌರವ ಡಿಲಿಟ್ ಪದವಿ ನೀಡಲು ಮುಂದಾಗಿತ್ತು ಅದನ್ನು ಪೈಗಳು ನಯವಾಗಿ ತಿರಸ್ಕರಿಸಿದರು.
"https://kn.wikipedia.org/wiki/ಗೋವಿಂದ_ಪೈ" ಇಂದ ಪಡೆಯಲ್ಪಟ್ಟಿದೆ