ಆಸ್ಫಾಲ್ಟ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
೧ ನೇ ಸಾಲು:
ಆಸ್ಫಾಲ್ಟ್ (150) : ಇದನ್ನು ಆಸ್ ಫಾಲ್ಟಂ, ಮಿನರಲ್ ಪಿಚ್, ಕಪ್ಪುರಾಳಿ, ಕಲ್ಲರಗು, ಟಾರೆಣ್ಣೆ ಮುಂತಾಗಿ ಕರೆಯುತ್ತಾರೆ.<ref>{{Cite web |url=http://www.eapa.org/asphalt.php?c=78 |title=ಆರ್ಕೈವ್ ನಕಲು |access-date=2016-10-20 |archive-date=2016-03-04 |archive-url=https://web.archive.org/web/20160304230920/http://www.eapa.org/asphalt.php?c=78 |url-status=dead }}</ref> ಯಾವ ತೆರನಾದ ಸ್ಪಷ್ಟ ಒಳರಚನೆಯಿರದ ಕಾರಣ ಮುದ್ದೆಯಾಗಿರುತ್ತದೆ. ಹೀಗೆಯೇ ಇದಕ್ಕೆ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯಿಲ್ಲ. ಬಣ್ಣದಲ್ಲಿ ಕಂದು, ಕಪ್ಟು ಅಥವಾ ಅಚ್ಚಕಪ್ಪು; ಟಾರೆಣ್ಣೆಯ ಹೊಳಪು, ವಾಸನೆಯೂ ಟಾರೆಣ್ಣೆಯದೇ. ಸಾಪೇಕ್ಷಸಾಂದ್ರತೆ 1-1.8. ಕೆಲವು ಬಗೆಯ ಟಾರೆಣ್ಣೆ ಕಾಕಂಬಿಯಂತೆ ಜಿಗುಟಾದ ದ್ರವರೂಪವನ್ನು ಹೊಂದಿರುತ್ತದೆ. ಈ ಬಗೆಯ ಕಪ್ಪುರಾಳವನ್ನು ಗಾಳಿಗೊಡ್ಡಿದಾಗ ಕ್ರಮೇಣ ಗಟ್ಟಿಯಾಗುತ್ತದೆ. ಟರ್ಪೆಂಟೈನ್, [[ಈಥರ್‍ಗಳು|ಈಥರ್]] ಮತ್ತು ಆಲ್ಕೊಹಾಲ್‍ಗಳಲ್ಲಿ ಆಸ್ಫಾಲ್ಟ್ ಸುಲಭವಾಗಿ ಕರಗುತ್ತದೆ. ಇದು ಭೂಚರಿತ್ರೆಯ ನಾನಾ ಯುಗದ ಶಿಲೆಗಳಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ ಕಪ್ಪುರಾಳದ ವಿಸ್ತಾರವಾದ ನಿಕ್ಷೇಪಗಳು ಭೂಮಿಯ ಮೇಲ್ಭಾಗದಲ್ಲಿ ಅಥವಾ ಹೆಚ್ಚು ಆಳವಿಲ್ಲದ ಪ್ರದೇಶಗಳಲ್ಲಿ ಕಂಡುಬಂದಿದೆ. ಬಲು ಮಟ್ಟಿಗೆ ಇದು ಬಿಟ್ಯುಮಿನಸ್ ಪದಾರ್ಥ ಅಥವಾ ಸಸ್ಯಾವಶೇಷಗಳು ಶೇಖರವಾಗಿರುವ ಪ್ರದೇಶಗಳಲ್ಲಿ ಸಿಗುತ್ತದೆ.
 
ಇಸ್ರೇಲಿನ ಡೆಡ್ ಸೀ ಸುತ್ತಮುತ್ತ ಕಪ್ಪುರಾಳದ ಉತ್ತಮ ನಿಕ್ಷೇಪಗಳಿವೆ. ಇತಿಹಾಸಕಾರರು ಇದನ್ನು ಆಸ್‍ಫಾಲ್ಟೈಟಿಸ್ ಸರೋವರವೆಂದೇ ಹೆಸರಿಸಿದ್ದಾರೆ. ಟ್ರಿನಿಡಾಡ್‍ನಲ್ಲಿ ಕಪ್ಪುರಾಳದ ಸರೋವರವೊಂದಿದೆ. ಇದರ ಸುತ್ತಳತೆ ಸುಮಾರು ಒಂದೂವರೆ ಮೈಲಿ. ಸರೋವರ ಮಧ್ಯ ಭಾಗ ಉಷ್ಣತೆಯಿಂದ ಕೂಡಿ ದ್ರವರೂಪವಾಗಿ ಇದೆ. ಅಂಚುಗಳು ತಣ್ಣಗೆ ಮತ್ತು ಘನರೊಪದಲ್ಲಿ ಇವೆ. ಈ ಪ್ರದೇಶದಲ್ಲಿ ಸಮೃದ್ಧವಾದ ಸಸ್ಯ ಸಂಪತ್ತನ್ನು ಹೆಮ್ಮರಗಳನ್ನು ಕಾಣಬಹುದು. ಅಂದರೆ ಇದಿರುವ ಭೂಮಿ ಫಲವತ್ತಾದುದು. ಸಾಮಾನ್ಯವಾಗಿ ತೈಲನಿಕ್ಷೇಪಗಳಿರುವ ಕಡೆ ಆಸ್ಫಾಲ್ಟನ್ನು ವಿವಿಧ ಪ್ರಮಾಣಗಳಲ್ಲಿ ದೊರಕಿಸಿಕೊಳ್ಳಬಹುದು. ಕಪ್ಪುರಾಳದಲ್ಲಿ ಹಲವಾರು ಬಗೆಗಳನ್ನು ಭೂವಿಜ್ಞಾನಿಗಳು ಗುರುತಿಸಿದ್ದಾರೆ. ಇವುಗಳಲ್ಲಿ ಮುಖ್ಯವಾದವು-ಎಲಾಟರೈಟ್, ಆಲ್ಬರ್ಟೈಟ್, ಗ್ರಹಾಮೈಟ್, ಗಿಲ್ಸನೈಟ್, ನಿಗ್ರೈಟ್, ಥೊಕೊಲೈಟ್.
"https://kn.wikipedia.org/wiki/ಆಸ್ಫಾಲ್ಟ್‌" ಇಂದ ಪಡೆಯಲ್ಪಟ್ಟಿದೆ