ವೋರಾರ್ಲ್‌ಬರ್ಗ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 76 interwiki links, now provided by Wikidata on d:q38981 (translate me)
ಚು replaced [[Category: → [[ವರ್ಗ: , general fixes enabled
೩೮ ನೇ ಸಾಲು:
| footnotes =
}}
'''ವೋರಾರ್ಲ್‌ಬರ್ಗ್‌''' ಎಂಬುದು [[ಆಸ್ಟ್ರಿಯ|ಆಸ್ಟ್ರಿಯಾ]]ದ ಪಶ್ಚಿಮದ ಕಡೆಯ ಫೆಡರಲ್-ರಾಜ್ಯ (''ಭೂಮಿ'' ) ವಾಗಿದೆ. ಪ್ರದೇಶದ ವ್ಯಾಪ್ತಿ ಮತ್ತು ([[ವಿಯೆನ್ನ|ವಿಯೆನ್ನ]] ಅತ್ಯಂತ ಚಿಕ್ಕದು) ಜನಸಂಖ್ಯೆಯ ದೃಷ್ಟಿಯಿಂದ (ಬರ್ಗೆನ್ ಲೆಂಡ್ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿದೆ) ಇದು ಎರಡಣನೆಯ ಚಿಕ್ಕ ರಾಜ್ಯವಾದರು ಕೂಡ, ಮೂರು ರಾಷ್ಟ್ರಗಳಿಗೆ ಗಡಿಪ್ರದೇಶವಾಗಿದೆ: [[ಜರ್ಮನಿ|ಜರ್ಮನಿ]] (ಕನ್ ಸ್ಟ್ಯಾನ್ಸ್ ಸರೋವರ ದ ಮೂಲಕ ಬವೇರಿಯಾ ಮತ್ತು ಬೇಡನ್-ವೃಟೆಂಬರ್ಗ್/4}), [[ಸ್ವಿಜರ್ಲೆಂಡ್]] ([[ಗ್ರೌಬುಡನ್]] ಮತ್ತು [[ಸೆಂಟ್.ಗ್ಯಾಲನ್]]) ಮತ್ತು [[ಲಿಚ್ಟೆನ್ಸ್ಟಿನ್]]. ಪೂರ್ವದಲ್ಲಿ [[ಟೈರೋಲ್]], ವೋರಾರ್ಲ್‌ಬರ್ಗ್‌ ನೊಂದಿಗೆ ಗಡಿಪ್ರದೇಶವನ್ನು ಹಂಚಿಕೊಂಡ ಆಸ್ಟ್ರಿಯಾದ ಫೆಡರಲ್ ರಾಜ್ಯಗಳಲ್ಲಿ ಏಕಮಾತ್ರ ರಾಜ್ಯವಾಗಿದೆ.
 
ಡಾರ್ನ್ ಬಿರ್ನ್ ಮತ್ತು ಫೆಲ್ಡ್ ಕಿರ್ಚ್ ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡ ನಗರಗಳಾದರು ಕೂಡ, ಬ್ರೆಗೆನ್ಜ್ ವೋರಾರ್ಲ್‌ಬರ್ಗ್‌ ನ ರಾಜಧಾನಿಯಾಗಿದೆ. ವೋರಾರ್ಲ್‌ಬರ್ಗ್‌ ಆಸ್ಟ್ರೋ-ಬವೇರಿಯನ್ ಬಾಷೆಯನ್ನು ಮಾತನಾಡದಂತಹ ಆಸ್ಟ್ರಿಯಾದ ಏಕಮಾತ್ರ ಪ್ರದೇಶವಾಗಿದ್ದು, ಈ ಕಾರಣದಿಂದ ಭಿನ್ನವಾಗಿದೆ. ಅಲ್ಲದೇ ಮಾತನಾಡಲು ಅಲೆಮ್ಯಾನಿಕ್ ಉಪಭಾಷೆಯನ್ನು ಬಳಸುತ್ತದೆ; ಆದ್ದರಿಂದ ಇದು ಸಾಂಸ್ಕೃತಿಕವಾಗಿ ಬವೇರಿಯಾ ಮತ್ತು ಆಸ್ಟ್ರಿಯಾದ ಇತರ ಪ್ರದೇಶಗಳಿಗಿಂತ ಹೆಚ್ಚಾಗಿ ಅಲೆಮ್ಯಾನಿಕ್- ಭಾಷೆಯನ್ನು ಮಾತನಾಡುವ ನೆರೆಹೊರೆಯ ರಾಷ್ಟ್ರಗಳಾದ ಸ್ವಿಜರ್ಲೆಂಡ್, ಲಿಚ್ಟೆನ್ಸ್ಟಿನ್ ಮತ್ತು ಸ್ವ್ಯಾಬಿಯಾದೊಂದಿಗೆ ಹೆಚ್ಚು ನಿಕಟವಾಗಿದೆ.
 
==ಭೌಗೋಳಿಕತೆ==
ವೋರಾರ್ಲ್‌ಬರ್ಗ್‌ ನಲ್ಲಿರುವ ಪ್ರಮುಖ [[ನದಿ|ನದಿ]]ಗಳೆಂದರೆ:ಇಲ್ (ಇದು ಮಾಂಟಫೊನ್ ಮತ್ತು ವ್ಯಾಲ್ಗೌ ಕಣಿವೆಗಳ ಮೂಲಕ ರೈನೆಗೆ ಹರಿಯುತ್ತದೆ), ರೈನೆ ([[ಸ್ವಿಟ್ಜರ್ಲ್ಯಾಂಡ್|ಸ್ವಿಜರ್ಲೆಂಡ್]] ಗೆ ಗಡಿಯನ್ನು ರೂಪಿಸಿದೆ), ಬ್ರೆಗೆನ್ಜರ್ ಆಕ್ ಮತ್ತು ಡಾರ್ನ್ಬಿರ್ನರ್ ಆಕ್. ಲೇಕ್ ಕಾನ್ ಸ್ಟ್ಯಾನ್ಸ್ ನ ಹೊರತಾಗಿ ಇರುವಂತಹ ಇತರ ಪ್ರಮುಖ [[ಸರೋವರ|ಸರೋವರ]]ಗಳು: ಲೂನರ್ ಸರೋವರ, ಸಿಲ್ವ್ರೆಟ್ಟಾ ಸರೋವರ, ವರ್ಮಂಟ್ ಸರೋವರ, ಸ್ಪುಲ್ಲರ್ ಸರೋವರ, the ಕಾಪ್ಸ್ ಬ್ಯಾಸಿನ್ ಮತ್ತು ಫಾರ್ಮರೀನ್ ಸರೋವರ; ಮೊದಲ ನಾಲ್ಕನ್ನು ಜಲವಿದ್ಯುತ್ ಉತ್ಪಾದನೆಗಾಗಿ ಸೃಷ್ಟಿಸಲಾಯಿತು. ಅಲ್ಲದೇ ಅಣೆಕಟ್ಟಿನೆದರು ಶಕ್ತಿ ಕೇಂದ್ರವನ್ನು ನಿರ್ಮಿಸಲಾಗಿದೆ. ಲೂನರ್ ಸರೋವರವು ಪರ್ವತಶಿಖರದಲ್ಲಿರುವ ಅತ್ಯಂತ ದೊಡ್ಡ ಪರ್ವತ ಸರೋವರವಾಗಿದೆ. ಈ ಬಹುಪಾಲು ಜಲವಿದ್ಯುತ್ ಶಕ್ತಿಯನ್ನು ಜರ್ಮನಿಗೆ ದಟ್ಟಣೆಯ ಅವಧಿಯಲ್ಲಿ ರಫ್ತು ಮಾಡಲಾಗುತ್ತದೆ. ರಾತ್ರಿಯ ಹೊತ್ತಿನಲ್ಲಿ, ಜರ್ಮನಿಯ ಶಕ್ತಿ ಕೇಂದ್ರಗಳಿಂದ ಉತ್ಪಾದಿಸುವ ಶಕ್ತಿಯನ್ನು, ಕೆಲವೊಂದು ಸರೋವರಗಳಿಗೆ ನೀರು ಹಿಂದಿರುಗುವಂತೆ ಪಾಂಪ್ ಮಾಡಲು ಬಳಸಲಾಗುತ್ತದೆ.
 
ವೋರಾರ್ಲ್‌ಬರ್ಗ್‌ ನಲ್ಲಿ ಸಿಲ್ವ್ರೆಟ್ಟಾ ಮತ್ತು ರಾಟಿಕನ್ ವೆರ್ವಾಲ್ ಮತ್ತು ಅರ್ಲ್ಬರ್ಗ್, ನಂತಹ ಅನೇಕ ಗಮನಾರ್ಹ ಪರ್ವತ ಶೇಣಿಗಳಿವೆ. ಇವುಗಳು ಅತ್ಯಂತ ಪ್ರಸಿದ್ಧ ಹಿಮಜಾರಾಟದ ಪ್ರದೇಶಗಳಾಗಿವೆ (ಅರ್ಲ್ಬರ್ಗ್, ಮಾಂಟಫಾನ್, ಬ್ರೆಗೆನ್ಜರ್ ವ್ಯಾಲ್ಡ್) ಮತ್ತು ಸ್ಕೀ ರೆಸಾರ್ಟ್ ಗಳಾಗಿವೆ(ಲೇಚ್,ಜೂರ್ಸ್, ಚುರ್ನ್ಸ್, ವಾರ್ತ್, ಡ್ಯಾಮುಲ್ಸ್, ಬ್ರ್ಯಾಂಡ್ ಮತ್ತು ಅನೇಕ ಇತರವು). ಡ್ಯಾಮುಲ್ಸ್ , ಪ್ರಪಂಚದಲ್ಲೆ ಅತ್ಯಂತ ಹೆಚ್ಚು ಹಿಮಪಾತವನ್ನು ಕಾಣುವುದರೊಂದಿಗೆ ಪುರಸಭೆಯಾಗಿಯು ಪ್ರಸಿದ್ಧವಾಗಿದೆ (ಸರಿಸುಮಾರು 9.30 ಮೀಟರ್ ಗಳು). ಪಿಜ್ ಬುಯಿನ್ ಅತ್ಯಂತ ಎತ್ತರದ ಪರ್ವತವಾಗಿದೆ. ಇದು 3,312 ಮೀಟರ್ ಗಳಷ್ಟು ಎತ್ತರವಿದ್ದು, ಹಿಮನದಿಗಳಿಂದ ಸುತ್ತುವರೆಯಲ್ಪಟ್ಟಿದೆ. ವೋರಾರ್ಲ್‌ಬರ್ಗ್‌, ಪೂರ್ವದ ಎಲ್ಲಾ ಪರ್ವತಶಿಖರಗಳಲ್ಲೆ ಸೀಮಿತ ಮಟ್ಟದಲ್ಲಿ ಅತ್ಯಂತ ರಮಣೀಯ ನೈಸರ್ಗಿಕ ವೈವಿದ್ಯವನ್ನು ಹೊಂದಿದೆ; ಇದು ಪಶ್ಚಿಮ ಪರ್ವತಶಿಖರಗಳನ್ನು ಸೇರಿಕೊಂಡಿರುತ್ತದೆ. ಕಾನ್ ಸ್ಟ್ಯಾನ್ಸ್ ಸರೋವರ ಮತ್ತು ರೈನೆ ಕಣಿವೆಯ ಬಯಲುಸೀಮೆ ಪ್ರದೇಶದಿಂದ ಮಧ್ಯಮ ಎತ್ತರ ಹಾಗು ಉನ್ನತ ಪರ್ವತ ವಲಯಗಳ ಮೂಲಕ ಸಾಗಿ ಸಿಲ್ವ್ರೆಟ್ಟಾ ಶ್ರೇಣಿಯ ಹಿಮನದಿಗಳ ತನಕ ಕೇವಲ 90 ಕಿಲೋ ಮೀಟರ್ ವರೆಗಿದೆ.
೬೧ ನೇ ಸಾಲು:
 
==ಜನಸಂಖ್ಯಾ ವಿವರ==
ವೋರಾರ್ಲ್‌ಬರ್ಗ್‌ 372,500 ಜನಸಂಖ್ಯೆಯನ್ನು ಹೊಂದಿದೆ. ಬಹುಪಾಲು (86ಪ್ರತಿಶತ) ನಿವಾಸಿಗಳು ಪಶ್ಚಿಮಕ್ಕೆ [[ಸ್ವಿಟ್ಜರ್ಲ್ಯಾಂಡ್|ಸ್ವಿಜರ್ಲೆಂಡ್]] ಮತ್ತು ಲಿಚ್ಟೆನ್ಸ್ಟಿನ್ ನೊಂದಿಗೆ ಮತ್ತು ಉತ್ತರಕ್ಕೆ [[ಜರ್ಮನಿ|ಜರ್ಮನಿ]]ಯೊಂದಿಗೆ ಸಾಂಸ್ಕೃತಿಕ ಸಂಬಂಧವನ್ನು ಹೊಂದಿರುವ ಆಸ್ಟ್ರಿಯನ- ಜರ್ಮನಿಕ್ ಮೂಲದವರಾಗಿದ್ದಾರೆ. ಜನಸಂಖ್ಯೆಯ ಪೂರ್ವಿಕರ ಗಣನೀಯ ಅನುಪಾತವು ವ್ಯಾಲೈಸ್ ನ ಸ್ವಿಸ್ ಕ್ಯಾಂಟನ ( ಪರಗಣ) ದಿಂದ "ವಾಲ್ಸರ್ ಗಳ" ವಲಸೆಯಲ್ಲಿ ಬಂದಿದೆ. ಇದರ ಜೊತೆಯಲ್ಲಿ ಆಸ್ಟ್ರೊ- ಹಂಗೇರಿಯನ್ ಸಾಮ್ರಜ್ಯ ದ ದಿನಗಳ ಸಂದರ್ಭದಲ್ಲಿ ನೀಡಿದ ಆಹ್ವಾನದಿಂದಾಗಿ 19 ನೇ ಶತಮಾನದಲ್ಲಿ ಸ್ವಿಸ್ ಫ್ರೆಂಚರು ಬಂದರು. {{Citation needed|date=April 2009}}
 
==ಧಾರ್ಮಿಕತೆ==
೬೯ ನೇ ಸಾಲು:
ಆಸ್ಟ್ರಿಯಾದ ಉಳಿದ ಭಾಗಗಳಿಂದ ವೋರಾರ್ಲ್‌ಬರ್ಗ್‌ ಸ್ವಲ್ಪ ದೂರದಲ್ಲಿರುವ ಕಾರಣ ಅಲ್ಲಿನ ಬಹುಪಾಲು ಜನರು ಅತ್ಯಂತ ಭಿನ್ನವಾದ ಮತ್ತು ಇತರ ಆಸ್ಟ್ರಿಯನ್ನರಿಗೆ ಅರ್ಥೈಸಿಕೊಳ್ಳಲು ಕಷ್ಟವಾಗುವ ಜರ್ಮನ್ ಉಪಭಾಷೆಯನ್ನು ಮಾತನಾಡುತ್ತಾರೆ. ಇದು ಸ್ವಿಸ್ ಜರ್ಮನ್ ಅನ್ನು ಒಳಗೊಳ್ಳುವ ಅಲೆಮ್ಯಾನಿಕ್ ಉಪಭಾಷೆಗಳಲ್ಲಿ ಒಂದಾಗಿದೆ. ಆದರೆ ಇವುಗಳನ್ನು ಲಿಚ್ಟೆನ್ಸ್ಟಿನ್, ಬ್ಯಾಡನ್-ವೃಟ್ಟೆಂಬರ್ಗ್ ಮತ್ತು ಫ್ರಾನ್ಸ್ ನ ಅಲ್ಸಾಕೆಯಲ್ಲಿಯು ಮಾತನಾಡುತ್ತಾರೆ. ಆಸ್ಟ್ರಿಯಾದ ಉಳಿದ ಭಾಗಗಳು ಮಾತನಾಡುವ ಉಪಭಾಷೆಗಳು , ಬವೇರಿಯನ್-ಆಸ್ಟ್ರಿಯನ್ ಭಾಷಾ ಗುಂಪಿನ ಭಾಗವಾಗಿವೆ. ಅಲ್ಲದೇ ವೋರಾರ್ಲ್‌ಬರ್ಗ್‌ ನಲ್ಲಿ ಅನೇಕ ಪಟ್ಟಣಗಳು ಮತ್ತು ಹಳ್ಳಿಗಳು ಅವುಗಳದೇ ಆದ ವಿಭಿನ್ನ ಉಪ- ಪ್ರಾಂತ ಭಾಷೆಗಳನ್ನು ಹೊಂದಿವೆ.
 
[[File:Karte-vorarlberg.png|thumb|300px|right|ವೋರಾರ್ಲ್‌ಬರ್ಗ್‌ ನ ಜಿಲ್ಲೆಗಳು. ಉತ್ತರದಿಂದ ಬಲಮುರಿಯಾಗಿ: ಬ್ರೆಗೆನ್ಜ್, ಬ್ಲೂಡೆನ್ಜ್, ಫೆಲ್ಡ್ ಕಿರ್ಚ್, ಡಾರ್ನ್ ಬಿರ್ನ್ ]]
 
==ಇತಿಹಾಸ==
೭೫ ನೇ ಸಾಲು:
ವೋರಾರ್ಲ್‌ಬರ್ಗ್‌ ಅನ್ನು ರೋಮನ್ನರು ವಶಪಡಿಸಿಕೊಳ್ಳುವ ಮೊದಲು, ಎರಡು ಸೆಲ್ಟಿಕ್ ಬುಡಕಟ್ಟು ಜನಾಂಗದವರು ಈ ಪ್ರದೇಶದಲ್ಲಿ ನೆಲೆಸಿದ್ದರು: ರೇಟಿಯಾ ಎತ್ತರದ ಪ್ರದೇಶಗಳಲ್ಲಿ ಮತ್ತು ವಿಂಡೆಲಿಸಿ ಕೆಳಪ್ರದೇಶಗಳಲ್ಲಿ ವಾಸವಾಗಿದ್ದರು, ಉದಾಹರಣೆಗೆ ಕಾನ್ ಸ್ಟ್ಯಾನ್ಸ್ ಸರೋವರ ಪ್ರದೇಶ ಮತ್ತು ರೈನೆ ಕಣಿವೆ. ವಿಂಡೆಲಿಸಿಗಳು ನೆಲೆಸಿದ್ದಂತಹ ಪ್ರಮುಖ ನೆಲೆಗಳಲ್ಲಿ ಬ್ರಿಗ್ಯಾನ್ಷನ್ (ಇಂದಿನ ಬ್ರೆಗೆನ್ಜ್) ಕೂಡ ಒಂದಾಗಿದ್ದು, 500 BC ಯಲ್ಲಿ ಸ್ಥಾಪಿಸಲಾಗಿತ್ತು. ಇದನ್ನು 15 BCಯಲ್ಲಿ ರೋಮನ್ನರು ವಶಪಡಿಸಿಕೊಂಡರು.
 
ವೋರಾರ್ಲ್‌ಬರ್ಗ್‌ ಒಂದು ಕಾಲದಲ್ಲಿ ರೋಮನ್ ಪ್ರಾಂತ ರೇಟಿಯಾದಲ್ಲಿ [[ರೋಮನ್ ಸಾಮ್ರಾಜ್ಯ|ರೋಮನ್ ಸಾಮ್ರಾಜ್ಯ]] ದ ಭಾಗವಾಗಿತ್ತು.; ಅನಂತರ ಅದು ಬವೇರಿ (ಬವೇರಿಯನ್ಸ್) ಬುಡಕಟ್ಟು ಜನಾಂಗದ ಆಳ್ವಿಕೆಗೆ ಒಳಪಟ್ಟಿತು. ತರುವಾಯ ಈ ಪ್ರದೇಶದಲ್ಲಿ ಬವೇರಿ ಮತ್ತು ಲ್ಯಾಂಗೊಬಾರ್ಡ್ಸ್ ನೆಲೆಯೂರಿದರು. ಅನಂತರ ಹ್ಯಾಬ್ಸ್ ಬರ್ಗ್ಸ್ ರ ಇದರ ನಿಯಂತ್ರಣವನ್ನು ತೆಗೆದುಕೊಂಡಾಗ, 1525 ರ ವರೆಗೆ, ಕೌಂಟ್ಸ್ ಆಫ್ ಮಾಂಟ ಫೋರ್ಟ್ ರ ಆಳ್ವಿಕೆಗೆ ಒಳಪಟ್ಟಿತು.<ref> http://encyclopedia.farlex.com/Vorarlberg</ref>
ಹಿಂದಿನ ಬಿಷಪ್ ಆಡಳಿತಕ್ಕೆ ಒಳಪಟ್ಟ ಐತಿಹಾಸಿಕ ಜರ್ಮನಿಕ್ ಪ್ರಾಂತವನ್ನು [[ಮೊದಲನೇ ಮಹಾಯುದ್ಧ|ಮಹಾಯುದ್ಧ I]] ಆರಂಭವಾಗುವ ವರೆಗು ಅರೆ-ಸ್ವಾಧಿಕಾರದ ಕೌಂಟ್ ಗಳು(ಕುಲೀನ) ಮತ್ತು ಉಳಿದಿರುವ ಬಿಷಪ್ ಗಳು ಆಳಿದರು. ವೋರಾರ್ಲ್‌ಬರ್ಗ್‌, ಪೂರ್ವವರ್ತಿ ಆಸ್ಟ್ರಿಯಾದ ಭಾಗವಾಗಿತ್ತು. ಅಲ್ಲದೇ, ವೋರಾರ್ಲ್‌ಬರ್ಗ್ ನ ಮಾಂಟ್ ಫೊರ್ಟ್‌ ನ ಕೌಂಟ್ ಗಳು ಆಳಿದ ಪ್ರದೇಶಗಳ ಭಾಗವಾಗಿತ್ತು.
 
೧೦೩ ನೇ ಸಾಲು:
{{Use dmy dates|date=January 2011}}
 
[[Categoryವರ್ಗ:ವೋರಾರ್ಲ್‌ಬರ್ಗ್‌]]
[[Categoryವರ್ಗ:NUTS 2 ಯೂರೋಪಿಯನ್ ಒಕ್ಕೂಟದ ಸಂಖ್ಯಾಶಾಸ್ತ್ರೀಯವಾದ ಪ್ರದೇಶಗಳು]]
[[Categoryವರ್ಗ:ಆಸ್ಟ್ರೀಯಾದ ರಾಜ್ಯಗಳು]]
"https://kn.wikipedia.org/wiki/ವೋರಾರ್ಲ್‌ಬರ್ಗ್‌" ಇಂದ ಪಡೆಯಲ್ಪಟ್ಟಿದೆ