ತಟ್ಟೆ ಇಡ್ಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಕ್ಷರದೋಷ
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
[[ಇಡ್ಲಿ]], [[ಅಕ್ಕಿ]] ಹಾಗೂ [[ಉದ್ದಿನ ಬೇಳೆ|ಉದ್ದಿನ ಬೇಳೆಯನ್ನು]] ನೀರಿನಲ್ಲಿ ಚೆನ್ನಾಗಿ ನೆನೆಸಿ, ರುಬ್ಬಿ ಹಬೆಯಲ್ಲಿ ತಯಾರಿಸುವ ಒಂದು ತಿನಿಸು. ಈ ಇಡ್ಲಿಯನ್ನು ತಯಾರಿಸಲು ಅದಕ್ಕೇ ಪ್ರತ್ಯೇಕವಾದ ತಟ್ಟೆಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇಡ್ಲಿಯು ಅಂಗೈ ಅಗಲ ಇರುತ್ತದೆ. ಮಕ್ಕಳಿಗೆ ಇಷ್ಟವಾದ ಪುಟ್ಟ ಪುಟ್ಟ ಇಡ್ಲಿಗಳನ್ನೂ ಮನೆಗಳಲ್ಲಿ ಮಾಡುವರು. ಹೊಟೆಲ್‍ಗಳಲ್ಲಿ ಹೆಚ್ಚಿನದಾಗಿ ವ್ಯಾಪಾರವಾಗುವ ತಿನಿಸೆಂದರೆ ಇಡ್ಲಿ. [[ ಆರೋಗ್ಯ]]ದ ದೃಷ್ಟಿಯಿಂದಲೂ ಇದನ್ನು ಸೇವಿಸುವುದು ಒಳ್ಳೆಯದು. ಸುಲಭವಾಗಿ ಜೀರ್ಣವಾಗುವ ಈ ತಿನಿಸನ್ನು ರೋಗಿಗಳಾದಿಯಾಗಿ ಎಲ್ಲರೂ ತಿನ್ನುವರು.
 
ಹಲವು [[ವರ್ಷ]]ಗಳ ಹಿಂದೆ ಪ್ರಯೋಗಾತ್ಮಕವಾಗಿ [[ದೋಸೆ|ದೋಸೆಯಷ್ಟು]] ಅಗಲದ ಇಡ್ಲಿಗಳನ್ನು [[ಕರ್ನಾಟಕ]]ದ [[ತುಮಕೂರು]] ಜಿಲ್ಲೆಯ ಕ್ಯಾತ್ಸಂದ್ರದಲ್ಲಿರುವ ನಟರಾಜ ಹೊಟೆಲ್ ಮಾಲೀಕರು ತಯಾರಿಸಿದರು. ಅತಿ ಶೀಘ್ರದಲ್ಲಿಯೇ ಅದು ಪ್ರಸಿದ್ಧವಾಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಆ ಹೊಟೆಲ್‍ಗೆ ಬರುವವರ ಸಂಖ್ಯೆ ಬಹಳವಾಯಿತು. ಕ್ಯಾತ್ಸಂದ್ರ ಊರನ್ನು ತಟ್ಟೆ ಇಡ್ಲಿಯಿಂದಲೇ ಗುರುತಿಸುವಂತಾಯಿತು. ಇನ್ನು ತಟ್ಟೆ ಇಡ್ಲಿ ಎಂದ ತಕ್ಷಣ ಎಲ್ಲರಿಗೂ ಮೊತ್ತ ಮೊದಲಿಗೆ ನೆನಪಾಗುವುದು ನಟರಾಜ ಹೊಟೆಲ್. ಆದರೆ, ರವಿ ಹೊಟೆಲ್ ಕೂಡಾ ಈಗ ಪ್ರಸಿದ್ಧವಾಗಿದೆ. [[ ಒಂದು]] ಇಡ್ಲಿ ತಿನ್ನಲು ಒಪ್ಪತ್ತಿನ ಹೊಟ್ಟೆ ತುಂಬುವುದೆಂದರೆ ನಂಬಲಾದೀತೇ?
 
[[Categoryವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ತಟ್ಟೆ_ಇಡ್ಲಿ" ಇಂದ ಪಡೆಯಲ್ಪಟ್ಟಿದೆ