ಗಂಗೋತ್ರಿ ಹಿಮನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Added interwiki links
ಚು replaced [[Category: → [[ವರ್ಗ: , general fixes enabled
೫ ನೇ ಸಾಲು:
ಗಂಗೋತ್ರಿ ಹಿಮನದಿಯು ಸುಮಾರು ೩೦ ಕಿ.ಮೀ. ಉದ್ದವಾಗಿದ್ದು ೨ ರಿಂದ ೪ ಕಿ.ಮೀ.ಗಳಷ್ಟು ಅಗಲವಾಗಿದೆ. ಈ ಹಿಮನದಿಯ ಸುತ್ತಲೂ ಗಂಗೋತ್ರಿ ಶ್ರೇಣಿಯ ಹಿಮಾಲಯ ಶಿಖರಗಳಿವೆ. ಇವುಗಳಲ್ಲಿ ಶಿವಲಿಂಗ, ಥಲಯ್ ಸಾಗರ್, ಮೇರು ಮತ್ತು ಭಾಗೀರಥಿ-೩ ಶಿಖರಗಳು ಮುಖ್ಯವಾದವು. ಈ ಸರಣಿಯ ಅತಿ ಎತ್ತರದ ಶಿಖರವಾದ [[ಚೌಖಂಬಾ]]ದ ತಳದಲ್ಲಿ ಉಗಮಿಸುವ ಈ ಹಿಮನದಿಯು ವಾಯವ್ಯ ದಿಕ್ಕಿನಲ್ಲಿ ಸರಿಯುತ್ತದೆ (ಹರಿಯುತ್ತದೆ). ಗಂಗೋತ್ರಿ ಹಿಮನದಿಯ ಕೊನೆಯು ಹಸುವಿನ ಮುಖದ ಆಕಾರದಲ್ಲಿದ್ದು ಅದನ್ನು ಗೋಮುಖ ಎಂದು ಕರೆಯಲಾಗುತ್ತದೆ. ಗೋಮುಖದಲ್ಲಿ ಹಿಮನದಿಯು ನೀರಾಗಿ ಹರಿಯಲಾರಂಭಿಸುವುದರಿಂದ ಈ ಸ್ಥಾನವನ್ನು ಗಂಗಾ ಮೂಲವೆಂದು ತಿಳಿಯಲಾಗುತ್ತದೆ. ಗೋಮುಖ ಹಿಂದೂ ಶ್ರದ್ಧಾಳುಗಳಿಗೆ ಒಂದು ಅತಿ ಪಾವನ ಕ್ಷೇತ್ರವಾಗಿದೆ. ಗೋಮುಖವು ಶಿವಲಿಂಗ ಪರ್ವತದ ಬುಡದಲ್ಲಿದೆ. [[ಗಂಗೋತ್ರಿ]]ಯಿಂದ ೧೮ ಕಿ.ಮೀ. ದೂರದಲ್ಲಿರುವ ಗೋಮುಖವನ್ನು ಕಾಲ್ನಡಿಗೆಯಲ್ಲಿ ಕಠಿಣಹಾದಿಯನ್ನು ಕ್ರಮಿಸಿ ತಲುಪಬಹುದಾಗಿದೆ.ಇಲ್ಲಿಂದ ಮುಂದೆ ಮತ್ತಷ್ಟು ದುರ್ಗಮ ಹಾದಿಯನ್ನು ಕ್ರಮಿಸಿದಲ್ಲಿ ಶಿವಲಿಂಗ ಪರ್ವತದ ತಪ್ಪಲಾದ ಹಾಗೂ ಧಾರ್ಮಿಕವಾಗಿ ಪವಿತ್ರ ಸ್ಥಳವಾದ ತಪೋವನವನ್ನು ತಲುಪಬಹುದು. ಶಿವಲಿಂಗ ಪರ್ವತವು [[ಗಂಗಾ ಮೂಲ|ಗಂಗಾಮಾತೆಯ]] ನಿಜಮೂಲವಾಗಿದೆ.
 
ಗಂಗೋತ್ರಿಯಿಂದ ತಪೋವನಕ್ಕೆ ಒಟ್ಟು ೨೨ ಕಿ.ಮಿ.ಗಳಷ್ಟಾಗುತ್ತದೆ. ಸರಿಯಾದ ಮಾರ್ಗದರ್ಶಕರಿಲ್ಲದೆ ಸಾಗುವುದು ಅಪಾಯಕಾರಿ. ಗಂಗೋತ್ರಿ>ಚಿರಬಾಸ>ಭೊಜವಾಸ>ಗೋಮುಖ>ತಪೋವನ.
 
 
[[File:Gaumukh Gangotri glacier.jpg|right|200px|thumb|ಗೋಮುಖದ ಇನ್ನೊಂದು ಚಿತ್ರ.]]
 
 
[[ಗಂಗೋತ್ರಿ]] ಹಿಮನದಿಯ [[ಪರಿಸರ|ಪರಿಸರದಲ್ಲಿ]] ಮಾನವ ಚಟುವಟಿಕೆಗಳು ಹೆಚ್ಚುತ್ತಿದ್ದು ಈ ಕಾರಣದಿಂದಾಗಿ ಮತ್ತು ಒಟ್ಟಾರೆ ಪರಿಸರ ಹಾನಿಯಿಂದಾಗಿ ಗಂಗೋತ್ರಿ ಹಿಮನದಿಯು ತೀವ್ರ ಗತಿಯಲ್ಲಿ ಕುಗ್ಗುತ್ತಿದೆ. ಇದು ಹೀಗೇ ಮುಂದುವರಿದಲ್ಲಿ ಇನ್ನು ಕೆಲ ದಶಕಗಳಲ್ಲಿ ಗಂಗೋತ್ರಿ ಹಿಮನದಿಯು ಸಂಪೂರ್ಣವಾಗಿ ಮಾಯವಾಗುವ ಭೀತಿ ವ್ಯಕ್ತಪಡಿಸಲಾಗಿದೆ.
Line ೨೧ ⟶ ೧೯:
* [http://savegangotri.org ಗಂಗೋತ್ರಿಯನ್ನು ಉಳಿಸಿರಿ]
 
[[Categoryವರ್ಗ:ಜಲಸಮೂಹಗಳು]]
 
[[Category:ಜಲಸಮೂಹಗಳು]]
[[ವರ್ಗ:ನದಿಗಳು]]
"https://kn.wikipedia.org/wiki/ಗಂಗೋತ್ರಿ_ಹಿಮನದಿ" ಇಂದ ಪಡೆಯಲ್ಪಟ್ಟಿದೆ