ಶಾಂತಿನಿಕೇತನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
೨೫ ನೇ ಸಾಲು:
}}
 
'''ಶಾಂತಿನಿಕೇತನ''' ವು ([[ಬಂಗಾಳಿ|ಬಾಂಗ್ಲ]]: [http://santiniketanphoto.jimdo.com/ শান্তিনিকেতন] ''ಶಾಂತಿನಿಕೇಟನ್'' ) [[ಭಾರತ|ಭಾರತ]]ದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಲ]]ದ ಬರ್ಭಮ್ ಜಿಲ್ಲೆಯ [[ಕೊಲ್ಕತ್ತ|ಕೋಲ್ಕತ್ತಾ]](ಹಿಂದಿನ ಕಲ್ಕತ್ತಾ) ನಗರದ ಉತ್ತರಕ್ಕೆ ಸುಮಾರು 180 ಕಿಲೋಮೀಟರ್‌ನಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣ. [http://santiniketanphoto.jimdo.com/Bolpur]. ಇದನ್ನು ಪ್ರಸಿದ್ಧಿಗೆ ತಂದವರು ನೋಬಲ್ ಪ್ರಶಸ್ತಿ ವಿಜೇತ [[ರವೀಂದ್ರನಾಥ ಠಾಗೋರ್|ರವೀಂದ್ರನಾಥ ಟಾಗೋರ್‌‌]]ರವರು, ಅವರ ದೂರದೃಷ್ಟಿಯು ಪ್ರತೀ ವರ್ಷವೂ ಸಾವಿರಾರು ಜನರನ್ನು ಆಕರ್ಷಿಸುವ ಈಗಿನ ವಿಶ್ವವಿದ್ಯಾಲಯದ ನಗರವಾಗಲು (ವಿಶ್ವ-ಭಾರತಿ ವಿಶ್ವವಿದ್ಯಾಲಯ) ಕಾರಣವಾಯಿತು. ರವೀಂದ್ರನಾಥರು ತಮ್ಮ ಅನೇಕ ಅತ್ಯುತ್ಕೃಷ್ಟ ಸಾಹಿತ್ಯಕ ಗ್ರಂಥಗಳನ್ನು ಇಲ್ಲಿ ಬರೆದದ್ದರಿಂದ ಶಾಂತಿನಿಕೇತನ ಒಂದು ಪ್ರವಾಸೀ ಆಕರ್ಷಣೆಯೂ ಆಗಿದೆ, ಮತ್ತು ಅವರ ಮನೆಯು ಐತಿಹಾಸಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ.
 
==ಇತಿಹಾಸ==
[http://santiniketanphoto.jimdo.com/ ಶಾಂತಿನಿಕೇತನ] ವನ್ನು ಹಿಂದೆ ಭುಬಾಂಡಂಗ (ಭುಬನ್ ಡಕಟ್ ಎಂಬ ಸ್ಥಳೀಯ ಡಕಾಯಿತನ ಹೆಸರು) ಎಂದು ಕರೆಯುತ್ತಿದ್ದರು, ಮತ್ತು ಇದು ಟಾಗೋರ್ ಕುಟುಂಬಕ್ಕೆ ಸೇರಿತ್ತು. ರವೀಂದ್ರನಾಥರ ತಂದೆ, ಮಹರ್ಷಿ ದೇವೇಂದ್ರನಾಥ ಟಾಗೋರ್, ಈ ಜಾಗವನ್ನು ಬಹಳ ಶಾಂತಿಯುತವಾದುದಾಗಿ ಕಂಡರು ಮತ್ತು ಶಾಂತಿನಿಕೇತನವೆಂದು ಮರುನಾಮಕರಣ ಮಾಡಿದರು, ಇದರ ಅರ್ಥ ಶಾಂತಿಯ (''ಶಾಂತಿ'' ) ಬೀಡಾಗಿದೆಯೆಂದು (''ನಿಕೇತನ'' ). ಇಲ್ಲಿ ರವೀಂದ್ರನಾಥ ಟಾಗೋರ್‌ರವರು ಪಾಠ ಭವನವನ್ನು ಆರಂಭಿಸಿದ್ದರು, ಅವರ ಧ್ಯೇಯಪರವಾದ ಶಾಲೆ, ಅದರ ಪ್ರಮುಖ ಪೂರ್ವ ಸಿಧ್ಧಾಂತವೆಂದರೆ ನೈಸರ್ಗಿಕ ಪರಿಸರದಲ್ಲಿ ಕಲಿಯುವುದು ಹೆಚ್ಚು ಸಂತೋಷಕರವಾಗಿರುತ್ತದೆ ಮತ್ತು ಫಲಕಾರಿಯಾಗಿರುತ್ತದೆ. [[ನೊಬೆಲ್ ಪ್ರಶಸ್ತಿ|ನೋಬಲ್ ಪ್ರಶಸ್ತಿ]]ಯನ್ನು (1913) ಗಳಿಸಿದ ನಂತರ, ಈ ಶಾಲೆಯು ವಿಶ್ವವಿದ್ಯಾಲಯವಾಗಿ 1921ರಲ್ಲಿ ವಿಸ್ತಾರಗೊಂಡಿತು, ಆದರೆ 1951ರಲ್ಲಿ, ಭಾರತದಲ್ಲಿಯೇ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದಾಯಿತು. ಅನೇಕ ವಿಶ್ವ ವಿಖ್ಯಾತ ಅಧ್ಯಾಪಕರು ಈ ವಿಶ್ವವಿದ್ಯಾನಿಲಯದ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ [[ಇಂದಿರಾ ಗಾಂಧಿ|ಇಂದಿರಾ ಗಾಂಧಿ]], [[ಸತ್ಯಜಿತ್ ರೇ|ಸತ್ಯಜಿತ್ ರೇ]], ಅಬ್ದುಲ್ ಘನಿ ಖಾನ್
ಮತ್ತು ನೋಬಲ್ ಪ್ರಶಸ್ತಿ ವಿಜೇತ [[ಅಮರ್ತ್ಯ ಸೇನ್|ಅಮಾರ್ತ್ಯ ಸೇನ್]] ಅವರುಗಳು ಇದರ ಸುಪ್ರಸಿಧ್ಧ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದಾರೆ,
 
[[File:Gandhi-Tagore.jpg|left|300px|thumb|1940ರಲ್ಲಿ ಶಾಂತಿನಿಕೇತನದಲ್ಲಿ ಮಹಾತ್ಮಾಗಾಂಧಿ ಮತ್ತು ಕಸ್ತೂರಿಬಾ ಗಾಂಧಿಯವರ ಜೊತೆಗೆ ರವೀಂದ್ರನಾಥ ಠಾಕೂರ್ ]]ಕಾಲ ಭವನ್, ಶಾಂತಿನಿಕೇತನದ ಕಲಾ ಕಾಲೇಜು, ಈಗಲೂ ಪ್ರಪಂಚದಲ್ಲೇ ಶ್ರೇಷ್ಠ ಕಲಾ ಕಾಲೇಜುಗಳಲ್ಲಿ ಒಂದಾಗಿದೆ. ಇತರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾ ಭವನ; ಮಾನವ ಶಾಸ್ತ್ರಗಳ ಸಂಸ್ಥೆ, ಶಿಕ್ಷಾ ಭವನ; ವಿಜ್ಞಾನ ಸಂಸ್ಥೆ, ಸಂಗೀತ್ ಭವನ; ನೃತ್ಯ, ನಾಟಕ ಮತ್ತು ಸಂಗೀತದ ಸಂಸ್ಥೆ, ವಿನಯ ಭವನ; ಶಿಕ್ಷಣ ಸಂಸ್ಥೆ, ರವೀಂದ್ರ ಭವನ, ಟಾಗೋರ್ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನೆ, ಪಲ್ಲಿ-ಸಂಘಟನ ವಿಭಾಗ; ಗ್ರಾಮೀಣ ಪುನರ್ನಿರ್ಮಾಣ ಸಂಸ್ಥೆ, ಮತ್ತು ಪಲ್ಲಿ ಶಿಕ್ಷಾ ಭವನ; ಕೃಷಿ ವಿಜ್ಞಾನ ಸಂಸ್ಥೆ. ಇನ್ನೂ ಇತರ ಕೇಂದ್ರಗಳಿವೆ, ನಿಪ್ಪಾನ್ ಭವನ, ಇಂದಿರ ಗಾಂಧಿ ರಾಷ್ಟ್ರೀಯ ಸಮನ್ವಯ ಕೇಂದ್ರ, ಗ್ರಾಮೀಣ ವಿಸ್ತರಣಾ ಕೇಂದ್ರ, ಶಿಲ್ಪ ಸದನ; ಗ್ರಾಮೀಣ ಕರಕುಶಲ ಕೇಂದ್ರ, ತಾಂತ್ರಿಕ ವಿಜ್ಞಾನ ಮತ್ತು ವಿನ್ಯಾಸ, ಪಲ್ಲಿ-ಚರ್ಚಾ ಕೇಂದ್ರ; ಸಾಮಾಜಿಕ ಶಿಕ್ಷಣ ಮತ್ತು ಗ್ರಾಮೀಣ ಅಭಿವೃಧ್ಧಿ ಕೇಂದ್ರ, ಜೈವಿಕ ತಂತ್ರಜ್ಞಾನ ಕೇಂದ್ರ, ಗಣಿತಶಾಸ್ತ್ರ ಶಿಕ್ಷಣ ಕೇಂದ್ರ, ಪರಿಸರ ಶಿಕ್ಷಣ ಕೇಂದ್ರ, ಗಣಕಯಂತ್ರ ಕೇಂದ್ರ ಮತ್ತು ಇಂದಿರ ಗಾಂಧಿ ರಾಷ್ಟ್ರೀಯ ಸಮನ್ವಯ ಕೇಂದ್ರಗಳಂಥ ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ಅಂಗಸಂಸ್ಥೆಗಳಾಗಿವೆ. ಪಾಠ-ಭವನದಲ್ಲಿ, ಎರಡು ಶಿಶುವಿಹಾರದ ಮಟ್ಟದ ಶಿಕ್ಷಣಗಳಿವೆ; ಮ್ರಿನಾಲಿನಿ ಆನಂದ ಪಾಠಶಾಲೆ, ಸಂತೋಷ್ ಪಾಠಶಾಲೆ; ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಶಾಲೆಯನ್ನು ಶಿಕ್ಷಾ ಸತ್ರವೆಂದು ಕರೆಯಲಾಗುತ್ತದೆ, ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಶಾಲೆಯನ್ನು ಉತ್ತರ-ಶಿಕ್ಷಾ ಸದನವೆಂದು ಕರೆಯುತ್ತಾರೆ.
 
ಶಾಂತಿನಿಕೇತನ [[ಅಮರ್ತ್ಯ ಸೇನ್|ಅಮಾರ್ತ್ಯ ಸೇನ್]]‌ರವರಿಗೂ ನಿವಾಸವಾಗಿದೆ, ಇವರು 1998ರ [[ಅರ್ಥಶಾಸ್ತ್ರ|ಅರ್ಥಶಾಸ್ತ್ರ]]ದ ನೋಬಲ್ ಪ್ರಶಸ್ತಿ ವಿಜೇತರು.
 
==ಭೂಗೋಳ ಶಾಸ್ತ್ರ/ಭೂ ವಿವರಣೆ==
ಶಾಂತಿನಿಕೇತನ {{coord|23.68|N|87.68|E|}}<ref>[http://www.fallingrain.com/world/IN/28/Shanti_Niketan.html ಫಾಲಿಂಗ್ ರೈನ್ ಜಿನೊಮಿಕ್ಸ್, ಇಂಕ್ - ಶಾಂತಿನಿಕೇತನ]</ref> ರಲ್ಲಿ ನೆಲೆಸಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿದೆ.
==ಹವಾಗುಣ==
ತಾಪಮಾನ (ಡಿಗ್ರಿ ಸೆ) : ಬೇಸಿಗೆ- ಗರಿಷ್ಠ. 39.4, ಕನಿಷ್ಠ.34.3; ಚಳಿಗಾಲ-ಗರಿಷ್ಠ.15.7, ಕನಿಷ್ಠ.12.1.
 
ಮಳೆಸುರಿತ : 125 ಸೆಂ.ಮೀ (ಜೂನ್‌ನಿಂದ ಸೆಪ್ಟಂಬರ್‌ವರೆಗೆ). ಜುಲೈ-ಆಗಸ್ಟ್‌ನಲ್ಲಿ ಭಾರೀ ಮಳೆ.
೪೪ ನೇ ಸಾಲು:
ಶಾಂತಿನಿಕೇತನದಲ್ಲಿರುವ ಹವಾಮಾನವು ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ, ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಹವಾಮಾನ ಬದಲಾವಣೆಯಾಗುತ್ತದೆ. ಆದಾಗ್ಯೂ ವಸಂತಕಾಲದಲ್ಲಿ ಶಾಂತಿನಿಕೇತನವು ತನ್ನದೇ ಆದ ಸೊಬಗನ್ನು ಹೊಂದಿರುತ್ತದೆ, ಅದರ ಸ್ವಾಭಾವಿಕ ಸಮೃದ್ಧ ಹಸಿರು ಸೌಂದರ್ಯಕ್ಕಾಗಿ ಅಷ್ಟೇ ಅಲ್ಲ ಅದರ ವಸಂತಕಾಲದ ಆರಂಭದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ನಡೆಯುವ ವಸಂತೋತ್ಸವಕ್ಕಾಗಿ ಖ್ಯಾತಿ ಪಡೆದಿದೆ.
 
ವರ್ಷದ ಯಾವುದೇ ಸಮಯದಲ್ಲಿಯೂ ಶಾಂತಿನಿಕೇತನಕ್ಕೆ ಭೇಟಿ ನೀಡಬಹುದು. ಕೊಲ್ಕತ್ತಾದ ತರಹವೇ ಇಲ್ಲಿಯ ಹವಾಮಾನವು ಸ್ವಲ್ಪ ಬೆಚ್ಚಗಿರುತ್ತದೆ, ಬೇಸಿಗೆಯಲ್ಲಿ ಉಷ್ಣಾಂಶವು ಸುಮಾರು 34-38º&nbsp;°C ಮತ್ತು ಚಳಿಗಾಲದಲ್ಲಿ ಸುಮಾರು 12-15º&nbsp;°C. ಜುಲೈ ಮತ್ತು ಆಗಸ್ಟ್‌ನಲ್ಲಿ ಹೆಚ್ಚಿನ ಮಳೆಯಾಗುತ್ತದೆ.
 
== ಪ್ರಮುಖ ಸ್ಪರ್ಧೆಗಳು ==
೧೨೮ ನೇ ಸಾಲು:
{{Birbhum District}}
 
[[Categoryವರ್ಗ:ಬೀರ್ಭಮ್ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು]]
[[Categoryವರ್ಗ:ಶಾಂತಿನಿಕೇತನಕ್ಕೆ ಸಂಬಂಧಿಸಿದ ಜನರು]]
[[ವರ್ಗ:ಸಂಸ್ಕೃತಿ]]
[[ವರ್ಗ:ಶೈಕ್ಷಣಿಕ ಸಂಸ್ಥೆಗಳು]]
"https://kn.wikipedia.org/wiki/ಶಾಂತಿನಿಕೇತನ" ಇಂದ ಪಡೆಯಲ್ಪಟ್ಟಿದೆ