ರಾಜಾ ರವಿ ವರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
better image
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
{{ದ್ವಂದ್ವ|ಈ ಲೇಖನ ಕಲಾವಿದ '''ರವಿವರ್ಮ'''ರ ಬಗ್ಗೆ|[[೧೯೯೨]]ರಲ್ಲಿ ಬಿಡುಗಡೆಯಾದ [[ಕನ್ನಡ]] ಚಲನಚಿತ್ರ '''ರವಿವರ್ಮ''' ಬಗ್ಗೆ ಮಾಹಿತಿಗೆ [[ರವಿವರ್ಮ (ಚಲನಚಿತ್ರ)|ಈ ಲೇಖನ]] ನೋಡಿ}}
[[Image:Raja Ravi Varma.jpg|thumb|ರಾಜಾ ರವಿ ವರ್ಮ (೧೮೪೮-೧೯೦೬)]]
 
 
'''ರಾಜಾ ರವಿವರ್ಮ'''( ೨೯, ಏಪ್ರಿಲ್, ೧೮೪೮-೨, ಅಕ್ಟೋಬರ್, ೧೯೦೬ ) - ಭಾರತದ ಸುಪ್ರಸಿದ್ಧ ವರ್ಣಚಿತ್ರಗಾರ.
Line ೧೮ ⟶ ೧೭:
 
ಒಬ್ಬ ಆಂಗ್ಲಸಂಸ್ಕೃತ ವಿದ್ವಾಂಸರು, ಪ್ರಕಟಿಸಿದ ಶಾಕುಂತಲ ಮಹಾಕಾವ್ಯದ ಮುಖಪುಟಕ್ಕೆ ತಕ್ಕದಾದ ಚಿತ್ರವನ್ನು ಬರೆದುಕೊಟ್ಟರು. ಈ ಪುಸ್ತಕ ಹೆಸರುವಾಸಿಯಾಗಿದ್ದು, ಕಾವ್ಯ ಸೌಂದರ್ಯಕ್ಕೆ. ಆದರೆ ಹೆಚ್ಚು ಜನಪ್ರಿಯವಾದದ್ದು ಪುಸ್ತಕದ ಹೊರಕವಚದಲ್ಲಿ ಮೂಡಿಸಿದ್ದ ಶಕುಂತಳೆಯ ಮುಗ್ಧ ಸೌಂದರ್ಯಕ್ಕೆ. ಹೀಗೆ ಪುಸ್ತಕದ ಜೊತೆಗೆ, ರವಿವರ್ಮರೂ ವಿಶ್ವದಾದ್ಯಂತ ಹೆಸರುವಾಸಿಯಾದ ವ್ಯಕ್ತಿಯಾದರು.
 
 
೧೮೭೬, ರಲ್ಲಿ ಪ್ಯಾರಿಸ್ಸಿನಲ್ಲಿ ಪ್ರದರ್ಶನಗೊಂಡ, "ವಸ್ತುಕಲಾ ಪ್ರದರ್ಶನ," ದಲ್ಲಿ ' " ಮಲೆಯಾಳದ ವನಿತೆ " ಎಂಬ ತೈಲಚಿತ್ರಕ್ಕೆ, ರವಿವರ್ಮರಿಗೆ "ಗೋಲ್ಡ್ ಮೆಡಲ್," ಪ್ರಶಸ್ತಿ ದೊರೆಯಿತು. ಅದೇ ವರ್ಷ ವಿಯನ್ನ ದಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲೂ, " ಮಲಯಾಳದ ವನಿತೆ", ಗೆ ಬಹುಮಾನ ದೊರೆಯಿತು. ಈ ಪ್ರದರ್ಶನಗಳಿಂದ ರವಿವರ್ಮರಿಗೆ ವಿಶ್ವಮಾನ್ಯತೆ ದೊರೆಯಿತು. ಸೀರೆ ಉಡುಪನ್ನು ಅವರ ಭವ್ಯಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಆಗಿನಕಾಲದಲ್ಲಿ [[ಕೇರಳ]] ಮುಂತಾದ ರಾಜ್ಯಗಳಲ್ಲಿ ಸೀರೆ ಉಡುವ ಪರಂಪರೆ ಇರಲಿಲ್ಲ. ಹಾಗಾಗಿ, ಸೀರೆಉಡುಪನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
 
ಬಕಿಂಗ್ ಹ್ಯಾಮ್ ಡ್ಯೂಕರ, ಎತ್ತರದ ನಿಲುವಿನ ತೈಲಚಿತ್ರವನ್ನು ಬರೆದುಕೊಟ್ಟಿದ್ದರು. ಅದನ್ನು [[ಮದ್ರಾಸ್ ]] ಸರ್ಕಾರ, ತಮ್ಮ ಆಫೀಸಿನ ಮುಖ್ಯದ್ವಾರದಮುಂದೆ ಪ್ರದರ್ಶಿಸಿದ್ದರು.
 
೧೮೭೭ ರಲ್ಲಿ, [[ಮದ್ರಾಸ್]] ಲಲಿತಕಲಾ ಅಕ್ಯಾಡಮಿಯವರು ಪ್ರಸ್ತುತಪಡಿಸಿದ, ವಸ್ತು ಪ್ರದರ್ಶನದಲ್ಲಿ, ರವಿವರ್ಮರ, " ವೀಣೆನುಡಿಸುವ ತಮಿಳು ಮಹಿಳೆ" ಎಂಬ ತೈಲಚಿತ್ರದ ಪ್ರದರ್ಶನವಾಗಿತ್ತು. ದುಶ್ಯಂತನಿಗೆ ಶಕುಂತಳೆ ಬರೆಯುತ್ತಿರುವ ಪ್ರೇಮ-ಪತ್ರ,ದ ತೈಲಚಿತ್ರಕ್ಕೆ ಬಹುಮಾನ ದೊರೆಯಿತು.
 
ಒಮ್ಮೆ ಆಗಿನ ಬ್ರಿಟಿಷ್ ಗವರ್ನರ್, ತಿರುವನಂತಪುರದ ಅರಮನೆಗೆ ಬಂದವರು, ನೇರವಾಗಿ ಶಕುಂತಲ, ತೈಲಚಿತ್ರವನ್ನು ನೋಡಲು ಹೋದರು. ಅಲ್ಲೇ ನಿಂತಿದ್ದರೂ ಗವರ್ನರ್ ಸಾಹೇಬರು ಆಯಿಲ್ಯಂರವರನ್ನು ವಿಚಾರಿಸದೇ ಹೋದ ಘಟನೆಯಿಂದ ರಾಜರು ತತ್ತರಿಸಿದರು. ಆಯಿಲ್ಯಂ ತಿರುನಾಳ್ ರವರಿಗೆ ಅವಮಾನವಾಗಿ, ಮುಖಭಂಗವಾಯಿತು. ಕೂಡಲೇ ರವಿವರ್ಮರನ್ನು ಅರಮನೆಯಿಂದ ವಜಾ ಮಾಡಿದರು. ೧೮೮೦ ರಲ್ಲಿ ಆಯಿಲ್ಯಂ ತಿರುನಾಳ್ ತೀರಿಕೊಂಡಮೇಲೆ ಹೊಸರಾಜ, ವಿಶಾಖಂ ತಿರು ಆಯಿಲ್ಯರು, ರವಿವರ್ಮರನ್ನು ಪುನಃ ಬರಮಾಡಿಕೊಂಡು ಸನ್ಮಾನಿಸಿದರು.
 
==ಬರೋಡ ಮಹಾರಾಜರ ಬಳಿ==
Line ೩೭ ⟶ ೩೫:
 
ಕೃಷ್ಣರಾಜವೊಡೆಯರ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು. ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ಅಲಂಕೃತವಾಗಬೇಕೆಂದು ಮನವಿ ಮಾಡಿಕೊಂಡರು. ಅವರ ಇಷ್ಟದಂತೆ ರವಿವರ್ಮರು ೯ ಭವ್ಯ ಚಿತ್ರಗಳನ್ನು ರಚಿಚಿದರು. ಜೊತೆಗೆ, ರಾಜಪರಿವಾರದ ಜನರ, ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟರು. ಪಾಂಡವರ ದ್ಯೂತ, ಕೌರವನ ಆಸ್ತಾನದಲ್ಲಿ ಪ್ರವೇಶಿಸಿದ ಶ್ರೀ ಕೃಷ್ಣ, ಬಂಧನಕ್ಕಾಗಿ ಸಾಗರದ ಮುಂದೆ, ಬಿಲ್ಲುಹೂಡಿದ ಶ್ರೀ ರಾಮಚಂದ್ರ. ಇವು ರವಿವರ್ಮರು ರಚಿಸಿದ ಕೆಲವಾರು ಶ್ರೇಷ್ಟಚಿತ್ರಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
 
 
ಇಲ್ಲಿ ದಾಖಲಿಸಬಹುದಾದ ಮತ್ತೊಂದು ಭವ್ಯ ತೈಲಚಿತ್ರವನ್ನು ಬರೆದು ರವಿವರ್ಮರು ಅತ್ಯಂತ ಯಶಸ್ಸನ್ನು ಗಳಿಸಿದರು. ೩ ಜನ ನಂಬಿಕೆಯ ಅನುಚರರೊಡನೆ, ಆಶ್ವಾಸನೆ ಕೊಡಲು ಕೈಯಲ್ಲಿ ಭವಾನಿತಾಯಿ ಪ್ರಸಾದಿಸಿದ ಖಡ್ಗವನ್ನು ಝಳಪಿಸುತ್ತಾ ಶಿವನೇರಿದುರ್ಗದಬಳಿ, ಅರಿಭಯಂಕರನಾಗಿ ಕುದುರೆಯನ್ನೇರಿ ಬರುತ್ತಿರುವ ವೀರ[[ಶಿವಾಜಿ]]ಯವರ ಚಿತ್ರ, ಬಹುಶಃ ಬಹುತೇಕ [[ಮಹಾರಾಷ್ಟ್ರ]]ದವರ ಮನೆಗಳಲ್ಲಿ ಈ ವರ್ಣಚಿತ್ರವನ್ನು ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾರೆ. ರವಿವರ್ಮರು ಚಿತ್ರಿಸಿದ ವರ್ಣಚಿತ್ರಗಳು ಒಟ್ಟು ೮೯. ಅವೆಲ್ಲಾ ಅಚ್ಚಾಗಿ ಮದ್ಯಮವರ್ಗದ ಕಲಾಪ್ರೇಮಿಗಳಿಗೆ, ಸಾಂತ್ವನ ನೀಡುವಲ್ಲಿ ಸಹಕಾರಿಯಾದವು.
 
==[[ತಿರುವಾಂಕೂರು]] ಮಹಾರಾಜರ ಆಸ್ಥಾನದಲ್ಲಿ ==
 
ಆಸ್ತಾನ ಕಲಾವಿದರಾಗಿ ನೇಮಿತರಾಗಿದ್ದರು. ವಿರಾಟನ ಆಸ್ಥಾನ, ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ ಮತ್ತು ಮೋಹಿನಿ. ಪ್ರತಿ ವರ್ಣಚಿತ್ರಗಳಿಗೂ ತಲಾ ೩,೦೦೦ ರೂ ಪ್ರಶಸ್ತಿ ಕೊಡಲಾಯಿತು. "ಚಿತ್ರ ಆರ್ಟ್ ಗ್ಯಾಲರಿ ಎಂಬ ಸಂಸ್ತೆಯನ್ನು ಸ್ಥಾಪಿಸಲಾಯಿತು. ಅಲ್ಲಿ ರವಿವರ್ಮರ ೧೪ ಭಾರಿ ಎತ್ತರದ ತೈಲಚಿತ್ರಗಳನ್ನು ಸ್ಥಾಪಿಸಲಾಗಿದೆ. ೧೦ ಸಣ್ಣಗಾತ್ರದ ಪೇಂಟಿಂಗ್ ಗಳಿವೆ. ೨ ಅಪೂರ್ಣ ಚಿತ್ರಗಳೂ ಇವೆ. ಬಹುಶಃ ರವಿವರ್ಮರ ಕೊನೆಯದಿನಗಳಲ್ಲಿ ಅವರ ಮಾನಸಿಕಬಲ ಸ್ವಲ್ಪ ಕಡಿಮೆಯಾಗಿತ್ತು. ಹೆಚ್ಚು ಹೊತ್ತು ಕುಳಿತು ಕೆಲಸಮಾಡುವುದು ಸಾಧ್ಯವಿರಲಿಲ್ಲ. ಅವರ ಸೋದರ, ರಾಜರಾಜ ವರ್ಮರು ತೀರಿಕೊಂಡಮೇಲೆ ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗಿತ್ತು. ಆರೋಗ್ಯವೂ ಸರಿಯಾಗಿರದೆ [[ಖಂಡಾಲ]] ಲೋನಾವಲಗಳಲ್ಲಿ ಸ್ವಲ್ಪದಿನ ಇದ್ದು ಸುಧಾರಿಸಿಕೊಡರು. ಇದೇ ಸಮಯದಲ್ಲಿ ಹೈದರಾಬಾದಿನ ರಾಜಾ ದೀನ ದಯಳರ ಒತ್ತಾಯಾಕ್ಕೆ ಮಣಿದು ಅಲ್ಲಿಗೆ ಹೋಗಿ, ೨ ತಿಂಗಳಿದ್ದು ವರ್ಣಚಿತ್ರಗಳನ್ನು ರಚಿಸಿಕೊಟ್ಟುಬಂದರು. ೧೯೦೬ ರಲ್ಲಿ ತಮ್ಮ ೫೭ ನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು.
==ರವಿವರ್ಮರ ಚಿತ್ರಕಲಾಮುದ್ರಣಾಲಯ==
 
ಸಾಮಾನ್ಯ ಜನರಿಗೆ ತೈಲಚಿತ್ರಗಳನ್ನು ಕೊಳ್ಳುವುದು ಸಾಧ್ಯವಿಲ್ಲದಮಾತು. ಅದಕ್ಕಾಗಿ ರವಿವರ್ಮರು, ಒಬ್ಬ ಪಾಲುದಾರನ ಜೊತೆಗೆ, ಒಪ್ಪಂದ ಮಾಡಿಕೊಂಡು ಒಂದು ಮುದ್ರಣಾಲಯವನ್ನು [[ಬೊಂಬಾಯಿ]]ನಲ್ಲಿ ಸ್ಥಾಪಿಸಿದರು. ಅದನ್ನು ನೋಡಿಕೊಳ್ಳಲು ಸದಾ ಅವರು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಪಾಲುದಾರ, ಹಣವನ್ನೆಲ್ಲಾ ಲಪಟಾಯಿಸಿದ್ದ. ೧೮೯೪ ರಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ತಮ್ಮ ಮುದ್ರಣಾಲಯವನ್ನು ಮಾರುವ ಪರಿಸ್ಥಿತಿ ಬಂತು. ಅವರು ಮೊದಲು ಕಾರ್ಲಿ ಎಂಬ ಜಾಗಕ್ಕೆ ಸ್ಥಳಾಂತರಿಸಿದರು. ಅಲ್ಲೂ ವ್ಯಾಪಾರ ಕುದುರದೆ, ಒಬ್ಬ ವಿದೇಶಿಗೆ ೨೫ ಸಾವಿರ ರೂಪಾಯಿಗಳಿಗೆ ಮಾರಿದರು.
Line ೬೨ ⟶ ೫೯:
 
== ಛಾಯಾಂಕನ ==
 
 
<gallery>
Line ೯೯ ⟶ ೯೫:
* [http://www.imagesofasia.com/by/html/india/Ravi_Varma.html Early 20th century Ravi Varma postcards]
 
[[ವರ್ಗ:ಕಲಾವಿದರು]]
 
[[ವರ್ಗ:ವರ್ಣಶಿಲ್ಪಿಗಳು]]
 
[[ವರ್ಗ:ಚಿತ್ರಕಾರರು]]
 
[[Category:ಕಲಾವಿದರು]] [[Category:ವರ್ಣಶಿಲ್ಪಿಗಳು]] [[Category:ಚಿತ್ರಕಾರರು]]
"https://kn.wikipedia.org/wiki/ರಾಜಾ_ರವಿ_ವರ್ಮ" ಇಂದ ಪಡೆಯಲ್ಪಟ್ಟಿದೆ