ನಾಸಿಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
'''ನಾಸಿಕ್''' (ಅಧಿಕೃತ ಹೆಸರು : ನಾಶಿಕ್) [[ಮಹಾರಾಷ್ಟ್ರ]]ದ ಒಂದು ನಗರ. [[ಮುಂಬಯಿ]]ಯಿಂದ ೧೮೦ ಮತ್ತು [[ಪುಣೆ]]ಯಿಂದ ೨೨೦ ಕಿಮೀ ದೂರದಲ್ಲಿ ಉತ್ತರ-ಪಶ್ಚಿಮದಲ್ಲಿದೆ. ಇದು ನಾಸಿಕ್ ವಿಭಾಗ ಮತ್ತು ನಾಸಿಕ್ ಜಿಲ್ಲೆಯ ಆಡಳಿತಾತ್ಮಕ ಕೇಂದ್ರವೂ ಹೌದು. "ಭಾರತದ ದ್ರಾಕ್ಷಾರಸದ ರಾಜಧಾನಿ " ಅಥವಾ “ದ್ರಾಕ್ಷಿ ನಗರ” ಎಂದು ಕೂಡಾ ಹೆಸರಾಗಿರುವ ನಾಸಿಕ್ [[ಗೋದಾವರಿ ನದಿ]]ಯ ತೀರದಲ್ಲಿ, ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಹರಡಿಕೊಂಡಿದೆ.ರಮಣೀಯ ಪ್ರಕೃತಿ ಸಂಪತ್ತು ಮತ್ತು ಚೇತೋಹಾರಿ ಹವಾಮಾನಕ್ಕೂ ಇದು ಹೆಸರಾಗಿದೆ. ಗೋದಾವರಿ ನದಿಯ ಉಗಮಸ್ಥಾನ [[ತ್ರ್ಯಂಬಕೇಶ್ವರ]] ನಾಸಿಕದ ಹತ್ತಿರದಲ್ಲಿಯೇ ಇದೆ. ಭರದಿಂದ ಬೆಳೆಯುತ್ತಿರುವ ಈ ನಗರದ ೨೦೦೬ರ ಅಂದಾಜು ಜನಸಂಖ್ಯೆ ೧೪ ಲಕ್ಷ.
 
ನಾಸಿಕ್ ಪೌರಾಣಿಕ, ಐತಿಹಾಸಿಕ, ಸಾಮಾಜಿಕ,ಸಾಂಸ್ಕೃತಿಕ ದೃಷ್ಟಿಯಿಂದಲೂ ಮುಖ್ಯವಾದ ಪಟ್ಟಣ.ಗೋದಾವರಿ ನದಿಯ ದಡದಲ್ಲಿರುವ ಅನೇಕ ಪುರಾತನ ದೇವಾಲಯಗಳಿಂದ ಪ್ರಸಿದ್ಧವಾಗಿರುವ ನಾಸಿಕ್ [[ಹಿಂದೂ]]ಗಳ ಪವಿತ್ರ ಯಾತ್ರಾಸ್ಥಳವೂ ಹೌದು. ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಬೃಹತ್ ಸಿಂಹಸ್ಥ [[ಕುಂಭಮೇಳ]] ನಡೆಯುವ [[ಭಾರತ]]ದ ನಾಲ್ಕು ಸ್ಥಳಗಳಲ್ಲಿ ನಾಸಿಕ್ ಒಂದು.
 
==ಇತಿಹಾಸ==
೨೦ ನೇ ಸಾಲು:
==ಉದ್ಯಮ ==
 
ಮೊಘಲರ ಕಾಲದಲ್ಲಿ ನಾಸಿಕ್ ಗುಲ್ಶನಾಬಾದ್ ,ಅಂದರೆ [[ಗುಲಾಬಿ]]ಗಳ ನಗರ, ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸದ್ಯ ನಾಸಿಕ್ ಪ್ರಸಿದ್ಧವಾಗಿರುವುದು [[ದ್ರಾಕ್ಷಿ]] ಬೆಳೆಗೆ ಮತ್ತು , ಪುನಃ ಪ್ರಾರಂಭಿಸಲಾಗಿರುವ ,ಒಂದು ಕಾಲದ ಹೆಸರಾಂತ, ಗುಲಾಬಿ ಹೂವಿನ ಕೃಷಿಗೆ. ರಫ್ತು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ವಿಧಾನಗಳಿಂದ ವೈನ್ ಮತ್ತು ಗುಲಾಬಿ ಕೃಷಿಯನ್ನು ಅಭಿವೃದ್ಧಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗಿನ ವ್ಯಾಪಕ ಔದ್ಯೋಗಿಕ ಪ್ರಗತಿಯಿಂದ , ನಾಸಿಕ್ "[[ಮುಂಬಯಿ]] ಮತ್ತು [[ಪುಣೆ]] ಬಿಟ್ಟರೆ [[ಮಹಾರಾಷ್ಟ್ರ]]ದಲ್ಲಿಯೇ ಅತಿ ಹೆಚ್ಚು ಔದ್ಯೋಗಿಕೀಕರಣವಾಗಿರುವ ನಗರ" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ (ಏಕ್ಲಾಹಾರೆ) ಒಂದು ಮುಖ್ಯ ಉಷ್ಣ ವಿದ್ಯುತ್ ಸ್ಥಾವರವಿದ್ದು , [[ಭಾರತ]] ಸರಕಾರದ ನಾಣ್ಯ ಮತ್ತು ನೋಟು ಮುದ್ರಣಾಲಯವೂ ಇಲ್ಲಿದೆ. ಸಾತ್ಪುರ, ಅಂಬಡ್, ಸಿನ್ನರ್ ‍ , ಇಗತಪುರಿ ಮತ್ತು ದಿಂಡೋರಿ ಎಂಬಲ್ಲಿ ಐದು ಔದ್ಯೋಗಿಕ ವಲಯಗಳನ್ನು ಸ್ಥಾಪಿಸಲಾಗಿದೆ. ಮಹೀಂದ್ರ ಆಂಡ್ ಮಹೀಂದ್ರ, ರಾಬರ್ಟ್ ಬಾಶ್, ಥೈಸ್ಸೆನ್ ಕ್ರುಪ್ಪ್ , ಸ್ಯಾಮ್ಸೊನೈಟ್, ಸಿಯಾಟ್ , ಅಟ್ಲಾಸ್ ಕಾಪ್ಕೋ, ಎಲ್ ಆಂಡ್ ಟಿ, ಯೂನಿಲೀವರ್‍, ಕೇಬಲ್ ಕಾರ್ಪೋರೇಷನ್ ಆಫ್ ಇಂಡಿಯಾ, ಸೀಮನ್ಸ್, ಕ್ರಾಂಪ್ಟನ್ ಗ್ರೀವ್ಸ್, ಏಬಿಬಿ ಇತ್ಯಾದಿ ಪ್ರಖ್ಯಾತ ಕಂಪನಿಗಳು ಇಲ್ಲಿ ತಮ್ಮ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಿವೆ. ನಾಸಿಕ್ ಐಟಿ / ಬಿಪಿಓ ಉದ್ಯಮದಲ್ಲಿಯೂ ಹೆಸರು ಮಾಡುತ್ತಿದೆ.
 
==ಶಿಕ್ಷಣ==
೩೦ ನೇ ಸಾಲು:
==ಹವಾಮಾನ==
 
ಗರಿಷ್ಟ ತಾಪಮಾನದ ದಾಖಲೆ : ೪೪.೮ ಡಿಗ್ರಿ ಸೆಲ್ಸಿಯಸ್. [[೧೯೬೦]]ರ [[ಮೇ ]] ೧೨ರಂದು. ಕನಿಷ್ಟ ತಾಪಮಾನ ದಾಖಲೆ ೦.೬ ಡಿಗ್ರಿ ಸೆಲ್ಸಿಯಸ್ [[೧೯೪೫]]ರ [[ಜನವರಿ]] ೭ರಂದು.
 
==ಬಾಹ್ಯ ಸಂಪರ್ಕಗಳು==
[[Category:ಭಾರತದ ಪಟ್ಟಣಗಳು]]
[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು ]]
 
==ಬಾಹ್ಯ ಸಂಪರ್ಕಗಳು==
 
* [http://www.nashik.nic.in/ ನಾಸಿಕ್ ನಗರದ ಅಧಿಕೃತ ತಾಣ ]
Line ೪೧ ⟶ ೩೮:
* [http://www.wikimapia.org/#y=19990127&x=73749847&z=12&l=0&m=a ವಿಕಿಮ್ಯಾಪಿಯಾದಲ್ಲಿ ನಾಸಿಕ್ ಪಕ್ಷಿನೋಟ ]
* [http://www.maharashtra.gov.in/english/gazetteer/nasik/index.htm ನಾಸಿಕ್ ಜಿಲ್ಲಾ ಗೆಜೆಟಿಯರುಗಳು]
 
[[Categoryವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು ]]
"https://kn.wikipedia.org/wiki/ನಾಸಿಕ್" ಇಂದ ಪಡೆಯಲ್ಪಟ್ಟಿದೆ