ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
'''ಹಿಂದುಸ್ತಾನಿ ಸಂಗೀತ''' ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು; ಉತ್ತರ [[ಭಾರತ]], ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ [[ಕರ್ನಾಟಕ]] ರಾಜ್ಯದಲ್ಲಿ ಪ್ರಚಲಿತವಾಗಿದೆ.
 
ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ [[ಸಾಮವೇದ]] ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩-೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ಪ್ರಾರಂಭವಾದ ನಂತರ ಅನೇಕ ಸಂಗೀತಗಾರರು ಈ ರಾಜರ ಬಳಿ ಆಶ್ರಯ ಪಡೆದರು. ಮುಸ್ಲಿಮ್ ರಾಜರ ಆಸ್ಥಾನಗಳಲ್ಲಿ ಭಾರತೀಯ ಸಂಗೀತ ಪರ್ಷಿಯದ ಸಾಕಷ್ಟು ಸಂಗೀತ ತತ್ವಗಳನ್ನು ತನ್ನದಾಗಿಸಿಕೊಂಡಿತು. ಈ ಸಂಯುಕ್ತ ಸಂಪ್ರದಾಯ ಹಿಂದುಸ್ತಾನಿ ಸಂಗೀತವಾಗಿ ಬೆಳವಣಿಗೆ ಹೊಂದಿದೆ.
 
ಮೊಘಲ್ ಕಾಲದ ಪ್ರಸಿದ್ಧ ಸಂಗೀತಗಾರ '''ಅಮೀರ್ ಖುಸ್ರೋ''' - ವೈದಿಕ ಸಂಪ್ರದಾಯದ ಸಂಗೀತ ಮತ್ತು ಪರ್ಷಿಯನ್ ಸಂಗೀತಗಳನ್ನು ಸಮಾಗಮಗೊಳಿಸಲು ಸಾಧ್ಯವಾಗುವ ಅನೇಕೆ ವಿಧಾನಗಳ ಪಿತಾಮಹ ಅಮೀರ್ ಖುಸ್ರೋ ಎಂದು ಪರಿಗಣಿಸಲಾಗಿದೆ. ಮೊಘಲ್ ಸಾಮ್ರಾಜ್ಯದ ಉನ್ನತಿಯಲ್ಲಿ [[ಅಕ್ಬರ್]]‍ನ ಆಡಳಿತದ ಕಾಲದ ಇನ್ನೊಬ್ಬ ಪ್ರಸಿದ್ಧ ಸಂಗೀತಗಾರ [[ತಾನ್ ಸೇನ್]].
 
[[Image:Bheemsen_joshi.gif|thumb|[[ಭೀಮ್‍ಸೇನ್ ಜೋಷಿ]] - ಹಿಂದುಸ್ತಾನೀ ಸಂಗೀತ ಪದ್ಧತಿಯ ಸುಪ್ರಸಿದ್ಧ ಗಾಯಕರು]]
೧೧ ನೇ ಸಾಲು:
===ಹಾಡುಗಾರರು===
ಈ ಸಂಗೀತ ಪದ್ಧತಿಯ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ [[ಗುರುರಾವ್ ದೇಶಪಾಂಡೆ]], ಪಂಡಿತ್ [[ಭೀಮಸೇನ್ ಜೋಷಿ]],[[ಪಂಡಿತ್ ಜಸ್ ರಾಜ್]], [[ಮಲ್ಲಿಕಾರ್ಜುನ ಮನ್ಸೂರ್]], [[ಗಂಗೂಬಾಯಿ ಹಾನಗಲ್]], [[ಬಸವರಾಜ ರಾಜಗುರು]], ನಸ್ರತ್ ಫತೇ ಅಲಿ ಖಾನ್ (ಪಾಕಿಸ್ತಾನ) ಮೊದಲಾದವರನ್ನು ಹೆಸರಿಸಬಹುದು.ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್, ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದವರಲ್ಲಿ [[ವಿನಾಯಕ ತೊರವಿ ]], ರಷೀದ್ ಖಾನ್, ಸಂಜೀವ್ ಅಭ್ಯಂಕರ್ ಮೊದಲಾದವರು ಸೇರಿದ್ದಾರೆ.
 
[[Image:Santoor.jpg|thumb|[[ಸಂತೂರ್]] ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲೊಂದು]]
೧೭ ನೇ ಸಾಲು:
===ವಾದ್ಯ===
 
ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋದ್, ತಬಲಾ, ಸಾರಂಗಿ, [[ಸಂತೂರ್]] ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸಂಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ), [[ಪಂಡಿತ್ ರವಿ ಶಂಕರ್]] (ಸಿತಾರ್), [[ಶಿವಕುಮಾರ್ ಶರ್ಮಾ]] (ಸಂತೂರ್), [[ಹರಿಪ್ರಸಾದ್ ಚೌರಾಸಿಯಾ]] (ಕೊಳಲು), [[ಅಲ್ಲಾ ರಖಾ]] ಮತ್ತು[[ಜಾಕಿರ್ ಹುಸೇನ್ (ಸಂಗೀತಗಾರ)]] (ತಬಲಾ), [[ಅಲಿ ಅಕ್ಬರ್ ಖಾನ್ |ಅಲಿ ಅಕ್ಬರ್ ಖಾನ್]] ಮತ್ತು [[ಅಮ್ಜದ್ ಅಲಿ ಖಾನ್ ]](ಸರೋದ್).
 
==ಸಂಗೀತ ಪ್ರಕಾರಗಳು==
 
ಹಿಂದುಸ್ತಾನಿ ಹಾಡುಗಾರಿಕೆಗೆ ಸಂಬಂಧಪಟ್ಟಂತೆ ಹೆಚ್ಚಾಗಿ ಬಳಕೆಯಲ್ಲಿರುವ ಪ್ರಕಾರಗಳೆಂದರೆ '''ಖಯಾಲ್, ಗಜಲ್'''' ಮತ್ತು '''ಠುಮ್ರಿ'''. ಬಳಕೆಯಲ್ಲಿರುವ ಇತರ ಪ್ರಕಾರಗಳಲ್ಲಿ ಧ್ರುಪದ್, ಧಮಾರ್ ಮತ್ತು ತರಾನಾ ಗಳು ಸೇರಿವೆ.
 
===ಧ್ರುಪದ್===
೩೭ ನೇ ಸಾಲು:
===ಖಯಾಲ್===
 
ಇತ್ತೀಚಿನ ವರ್ಷಗಳಲ್ಲಿ ಹಿಂದುಸ್ತಾನಿ ಸಂಗೀತದ ಅತ್ಯಂತ ಜನಪ್ರಿಯ ಪ್ರಕಾರ ಖಯಾಲ್. ಈ ಪ್ರಕಾರದಲ್ಲಿ ಮನೋಧರ್ಮ ಸಂಗೀತದ ಪ್ರಾಮುಖ್ಯತೆ ಇತರ ಪ್ರಕಾರಗಳದ್ದಕ್ಕಿಂತ ಹೆಚ್ಚು. ೧೮ ನೆಯ ಶತಮಾನದಿಂದ ಇತ್ತೀಚೆಗೆ ಜನಪ್ರಿಯವಾದ ಈ ಪ್ರಕಾರದ ಇತ್ತೀಚಿನ ಹಾಡುಗಾರರಲ್ಲಿ ಪ್ರಸಿದ್ಧರಾದವರು [[ಭೀಮಸೇನ್ ಜೋಷಿ]], [[ಮಲ್ಲಿಕಾರ್ಜುನ ಮನ್ಸೂರ್]], ಮತ್ತಿತರರು.
 
===ತರಾನಾ===
 
ತರಾನಾಗಳು [[ಕರ್ನಾಟಕ ಸಂಗೀತ]] ಪದ್ಧತಿಯ ತಿಲ್ಲಾನಾ ಗಳನ್ನು ಹೋಲುವಂತಹ ಕೃತಿಗಳು. ಸಂತೋಷ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕೃತಿಗಳನ್ನು ಸಾಮಾನ್ಯವಾಗಿ ಕಛೇರಿಗಳ ಕೊನೆಯಲ್ಲಿ ಹಾಡಲಾಗುತ್ತದೆ. ಲಯಬದ್ಧವಾದ ಶಬ್ದಪುಂಜಗಳು ಹೆಚ್ಚಿದ್ದು ಪದಗಳ ಬಳಕೆ ಈ ಪ್ರಕಾರದಲ್ಲಿ ಕಡಿಮೆ.
 
===ಠುಮ್ರಿ===
೫೭ ನೇ ಸಾಲು:
* [http://www.swaveda.com/indianmusic.php ಹಿಂದುಸ್ತಾನಿ ಸಂಗೀತ ಕಲಿಯಿರಿ]
* [http://www.tablaonline.com/events/ ಹಿಂದುಸ್ತಾನಿ ಸಂಗೀತ ಕಛೇರಿಗಳು]
 
 
{{ಹಿಂದುಸ್ತಾನಿ ಸಂಗೀತ - ಪ್ರಸಿದ್ಧ ಸಂಗೀತಗಾರರು}}
{{ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪುಟ ಕೊನೆಯಲ್ಲಿ}}
 
[[Categoryವರ್ಗ:ಸಂಸ್ಕೃತಿ]]
[[Categoryವರ್ಗ:ಸಂಗೀತ]]