ಆರ್ಥಿಕ ರಕ್ಷಣಾ ನೀತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removed invalid template.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಚು http → https. General fixes enabled, replaced: http://www.nytimes.com → https://www.nytimes.com (2)
೪ ನೇ ಸಾಲು:
 
== ಇತಿಹಾಸ ==
ಐತಿಹಾಸಿಕವಾಗಿ, ಆರ್ಥಿಕ ರಕ್ಷಣಾ ನೀತಿಯನ್ನು, (ಎಂದಿಗೂ [[ವಹಿವಾಟು ಸಮತೋಲನ]]ವನ್ನು ಧನಾತ್ಮಕವಾಗಿ ಕಾಯ್ದುಕೊಳ್ಳುವುದು ಅನುಕೂಲಕರ ಎಂದು ನಂಬಿದ) [[ವಾಣಿಜ್ಯ ಸಿದ್ಧಾಂತ]] ಮತ್ತು [[ಆಮದು ಬದಲಿಕೆ]]ಯಂತಹ ಆರ್ಥಿಕ ಸಿದ್ಧಾಂತದೊಂದಿಗೆ ಸಂಬಂಧಿತವಾಗಿತ್ತು. ಆ ಸಮಯದಲ್ಲಿ, ಬಳಕೆದಾರರ ವಿರುದ್ಧ ಕುತರ್ಕಗಳನ್ನು ಬಳಸಿ ಮೇಲುಗೈ ಸಾಧಿಸಲು ಯತ್ನಿಸುವ ಕೈಗಾರಿಕೆಗಳ ವಿರುದ್ಧ [[ಆಡಮ್‌ ಸ್ಮಿತ್]] ಎಚ್ಚರಿಕೆಯ ಕರೆ ನೀಡಿರುವುದು ಬಹಳಷ್ಟು ಸುದ್ದಿಯಾಗಿತ್ತು.‌ <ref name="FreeToChoose">[[ಫ್ರೀ ಟು ಚೂಸ್‌]], ಮಿಲ್ಟನ್‌ ಫ್ರೀಡ್ಮನ್‌</ref> ಆರ್ಥಿಕ ರಕ್ಷಣಾ ನೀತಿಯು ಹಾನಿಕಾರಕ, ಅದರ ವೆಚ್ಚಗಳು ಅನುಕೂಲಗಳಿಗಿಂತಲೂ ಹೆಚ್ಚಾಗಿರುತ್ತವೆ, ಜೊತೆಗೆ ಅದು ಅರ್ಥಿಕ ಬೆಳವಣಿಗೆಗೆ ವಿಘ್ನವೊಡ್ಡುತ್ತದೆ, ಎಂದು ಇಂದಿನ ಹಲವು ಆರ್ಥಶಾಸ್ತ್ರಜ್ಞರು ಒಪ್ಪಿದ್ದಾರೆ. <ref>{{cite web|url=http://www.econlib.org/library/Enc/Protectionism.html |title=CEE:Protectionism |last=Bhagwati |first=Jagdish |work=Concise Encyclopedia of Economics|publisher=Library of Economics and Liberty|accessdate=2008-09-06}}</ref><ref name="Mankiw">{{cite web|url=http://www.economics.harvard.edu/faculty/mankiw/files/Smart%20Taxes.pdf|format=PDF|title=Smart Taxes: An Open Invitation to Join the Pigou Club|last=Mankiw|first=N. Gregory|accessdate=2008-09-06|archiveurl=http://web.archive.org/20080910040407/www.economics.harvard.edu/faculty/mankiw/files/Smart%20Taxes.pdf|archivedate=2008-09-10}}</ref> ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ [[ಪಾಲ್‌ ಕ್ರುಗ್ಮನ್‌]] ಒಮ್ಮೆ ಹೀಗೆ ಹೇಳಿದ್ದು ದೊಡ್ಡ ಸುದ್ದಿಯಾಗಿತ್ತು: 'ಅರ್ಥಶಾಸ್ತ್ರಜ್ಞನ ಸಿದ್ಧಾಂತವೊಂದಿದ್ದಲ್ಲಿ, ಅದು ಖಂಡಿತವಾಗಿಯೂ 'ನಾನು [[ಸಮರೂಪಗಳ ಅನುಕೂಲಗಳ ತತ್ತ್ವ]]ಗಳು ಅರ್ಥೈಸಿರುವೆ; ನಾನು ಮುಕ್ತ ವಹಿವಾಟನ್ನು ಸಮರ್ಥಿಸುವೆ' <ref name="Krugman">{{cite journal|last=Krugman|first=Paul R.|year=1987|title=Is Free Trade Passe?|journal=The Journal of Economic Perspectives|volume=1|issue=2|pages=131–144 |url=http://www.jstor.org/pss/1942985}}</ref>
ಶ್ರೀಮಂತ ದೇಶಗಳಲ್ಲಿ ಆರ್ಥಿಕ ರಕ್ಷಣಾ ನೀತಿಯ ಇತ್ತೀಚೆಗಿನ ಉದಾಹರಣೆಗಳು, ಮಾದರಿಯಾಗಿ, ರಾಜಕೀಯವಾಗಿ ಮುಖ್ಯವಾದ ಸ್ಥಳೀಯ ಕೈಗಾರಿಕೆಗಳಲ್ಲಿ ವ್ಯಕ್ತಿಗಳ ಜೀವನವನ್ನು ರಕ್ಷಿಸುವ ಆಶಯದಿಂದ ಪ್ರೇರಿತವಾಗಿತ್ತು. {{Citation needed|date=April 2008}} ಮುಂಚೆ [[ಕಾರ್ಮಿಕ]]ರ ಕೆಲಸಗಳು ವಿದೇಶೀ ಪೈಪೋಟಿಯ ಮೂಲಕ [[ಅಭಿವೃದ್ಧಿ ಹೊಂದಿದ ರಾಷ್ಟ್ರ]]ಗಳಿಂದ ಇಲ್ಲವಾಗುತ್ತಿದ್ದವು, ಇತ್ತೀಚೆಗೆ, [[ಹೊರಗುತ್ತಿಗೆ]] ಮತ್ತು [[ಗುಮಾಸ್ತೆ/ಆಡಳಿತ ಕೆಲಸ]]ಗಳು ಕೈಬಿಟ್ಟು ಹೋಗುತ್ತಿರುವುದರಿಂದ, ಆರ್ಥಿಕ ರಕ್ಷಣಾ ನೀತಿಯ ಕುರಿತು ವಿಸ್ತರಿತ ಚರ್ಚೆ ನಡೆಯುತ್ತಿದೆ.
=== (ಯುನೈಟೆಡ್ ಸ್ಟೇಟ್ಸ್ )ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆರ್ಥಿಕ ರಕ್ಷಣಾ ನೀತಿ ===
೧೦ ನೇ ಸಾಲು:
ಐತಿಹಾಸಿಕವಾಗಿ, ದಕ್ಷಿಣ ಭಾಗದಲ್ಲಿರುವ, ಜೀತದಾಳುಗಳನ್ನು ಬಳಸಿದ ರಾಜ್ಯಗಳಲ್ಲಿ, ಮಾನವ ಶ್ರಮಿಕ ವೆಚ್ಚವು ಅಗ್ಗವಾಗಿದ್ದರಿಂದ, ಯಂತ್ರಗಳ ಅಗತ್ಯವೇ ಕಂಡುಬರಲಿಲ್ಲ. ಯಾವುದೇ ರಾಷ್ಟ್ರದಿಂದಲೂ ತಾವು ತಯಾರಿಸಲಾದ ಸರಕನ್ನು ಕೊಂಡುಕೊಳ್ಳುವ ಹಕ್ಕನ್ನು ಸಮರ್ಥಿಸಿದವು. ಹಾಗಾಗಿ, ಅವುಗಳು ತಮ್ಮನ್ನು ಮುಕ್ತ ವಹಿವಾಟುದಾರರೆಂದು ಕರೆದುಕೊಂಡರು.
ಇನ್ನೊಂದೆಡೆ, ಉತ್ತರ ರಾಜ್ಯಗಳು ತಯಾರಿಕೆಯ ಕ್ಷಮತೆಯನ್ನು ಬೆಳೆಸಿಕೊಳ್ಳಲು ಬಯಸಿದವು. ಉತ್ತರ ಭಾಗದ ತಯಾರಕ ಉದ್ದಿಮೆಗಳು ತಮ್ಮ ದಕ್ಷ ಬ್ರಿಟಿಷ್‌ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಲು ಸಹಾಯಾರ್ಥವಾಗಿ, ಅವುಗಳು ಸುಂಕ ದರಗಳನ್ನು ಹೆಚ್ಚಿಸಿದವು. U.S.ನ ಮೊದಲ ಖಜಾಂಚಿ ಕಾರ್ಯದರ್ಶಿ ಅಲೆಕ್ಸಾಂಡರ್‌ ಹ್ಯಾಮಿಲ್ಟನ್‌ ತಮ್ಮ ವರದಿ 'ರಿಪೋರ್ಟ್‌ ಆನ್‌ ಮ್ಯಾನುಫ್ಯಾಕ್ಚರ್ಸ್‌'ನಲ್ಲಿ ಉದಯೋನ್ಮುಖ ಕೈಗಾರಿಕೆಗಳನ್ನು ರಕ್ಷಿಸಲು ಸುಂಕಗಳು ಮತ್ತು ಆ ಸುಂಕಗಳ ಭಾಗದಿಂದ ಪಡೆದ ಅನುದಾನಗಳ ಪ್ರಸ್ತಾಪಗಳಿಂದ ಹಿಡಿದು, ಅಮೆರಿಕಾ ಸಂಯುಕ್ತ ಸಂಸ್ಥಾನವು ಮುಕ್ತ ವಹಿವಾಟು ಸಿದ್ಧಾಂತವನ್ನು ವಿರೋಧಿಸುವುದರಲ್ಲಿ ಪ್ರಮುಖ ರಾಷ್ಟ್ರವಾಗಿತ್ತು. ಹತ್ತೊಂಬತ್ತನೆಯ ಶತಮಾನದುದ್ದಕ್ಕೂ, ಸೆನೇಟರ್‌ ಹೆನ್ರಿ ಕ್ಲೇ ಸೇರಿದಂತೆ, U.S.ನ ಪ್ರಮುಖ ರಾಜಕಾರಣಿಗಳು ವ್ಹಿಗ್‌ ಪಾರ್ಟಿಯೊಳಗೆ ಹ್ಯಾಮಿಲ್ಟನ್‌ರ ಪ್ರಸ್ತಾಪವನ್ನು 'ಅಮೆರಿಕನ್‌ ವ್ಯವಸ್ಥೆ' ಎಂಬ ಹೆಸರಡಿ ಮುಂದುವರೆಸುತ್ತಾ ಬಂದರು.
ಇದಕ್ಕೆ ವಿರೋಧಿಗಳಾದ ಸದರ್ನ್‌ ಡೆಮೊಕ್ರಾಟಿಕ್‌ ಪಾರ್ಟಿ, ಸುಂಕ ಮತ್ತು ಕೈಗಾರಿಕೆಗಳಿಗೆ ರಕ್ಷಣೆ ಕುರಿತು, 1830, 1840 ಮತ್ತು 1850ರ ದಶಕಗಳುದ್ದಕ್ಕೂ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದವು. ಆದರೂ, ಸದರ್ನ್‌ ಡೆಮೊಕ್ರಾಟ್‌ಗಳು ಅಮೆರಿಕಾದ ಸದನದಲ್ಲಿ ಹೆಚ್ಚು ಜನನಿಬಿಡ ಉತ್ತರ ಭಾಗದ ಪ್ರತಿನಿಧಿಗಳಷ್ಟು ಪ್ರಬಲರಾಗಿರಲಿಲ್ಲ. ದಕ್ಷಿಣದವರ ವಿರೋಧವನ್ನು ಲೆಕ್ಕಿಸದೆ, ನಾರ್ದರ್ನ್‌ ವ್ಹಿಗ್ಸ್‌ನವರು ಹೆಚ್ಚಿನ ಸುಂಕಗಳನ್ನು ಬೇಡಿ ಪಡೆದುಕೊಂಡರು. ಸುಂಕದ ವಿಚಾರವಾಗಿ, ದಕ್ಷಿಣದ ರಾಜ್ಯವೊಂದು ಶೂನ್ಯಕರಣ ಬಿಕ್ಕಟ್ಟನ್ನು ಎದುರಿಸಿತು. ರಾಜ್ಯಗಳು ಸಂಯುಕ್ತತೆಯ ನಿಯಮ-ಕಾನೂನುಗಳನ್ನು ಪಾಲಿಸದಿರುವ ಬಗ್ಗೆ ಎಲ್ಲಾ ಹಕ್ಕುಗಳಿವೆಯೆಂದು ವಾದಿಸಿತು. ಜೀತಪದ್ಧತಿ ನಿರ್ಮೂಲನ ಮತ್ತು ಇತರೆ ವಿವಾದಗಳ ಕುರಿತು ವ್ಹಿಗ್ಸ್‌ ಅಂತಿಮವಾಗಿ ಕುಸಿದುಬಿದ್ದು ಒಂದು ಖಾಲಿ ಕಂದರವನ್ನು ಬಿಟ್ಟುಹೋಯಿತು. ಅಬ್ರಹಾಮ್‌ ಲಿಂಕನ್‌ ನಾಯಕತ್ವದ ರಿಪಬ್ಲಿಕನ್‌ ಪಾರ್ಟಿಯು ಈ ಜಾಗವನ್ನು ತುಂಬುವುದಾಗಿತ್ತು. ತನ್ನನ್ನು ತಾನು ಹೆನ್ರಿ ಕ್ಲೇ ಟ್ಯಾರಿಫ್‌ ವ್ಹಿಗ್‌' ಎಂದು ಕರೆದ ಲಿಂಕನ್‌ ಮುಕ್ತ ವ್ಯಾಪಾರ ವಿರೋಧಿಸಿದರು. ಅಂತರ್ಯುದ್ಧ ನಡೆಯುತ್ತಿದ್ದ ಸಮಯ, ಯೂನಿಯನ್‌ ಪೆಸಿಫಿಕ್‌ ರೇಲ್‌ರೋಡ್‌ನ ನಿರ್ಮಾಣ, ಯುದ್ಧ ಧನ ಮತ್ತು ಅಮೆರಿಕಾದ ಕೈಗಾರಿಕೆಗಳ ರಕ್ಷಣೆಗಾಗಿ, ಅಬ್ರಹಾಮ್‌ ಲಿಂಕನ್‌ 44%ರಷ್ಟು ಸುಂಕವನ್ನು ಭಾಗಶಃ ಜಾರಿಗೊಳಿಸಿದರು. <ref>[http://web.archive.org/web/20060106154801/http://www.newamerica.net/index.cfm?pg=article&amp;DocID=1080] ಲಿಂಡ್‌, ಮೈಕಲ್‌. ನ್ಯೂ ಅಮೆರಿಕಾ ಫೌಂಡೇಷನ್‌.</ref>
ಉತ್ತರ ಭಾಗದಲ್ಲಿರುವ ಕೈಗಾರಿಕೆಗಳಿಗೆ ಬೆಂಬಲವು ಅಂತಿಮವಾಗಿ ಸಫಲವಾಯಿತು. ರಾಷ್ಟ್ರಾಧ್ಯಕ್ಷ ಅಬ್ರಹಾಮ್‌ ಲಿಂಕನ್‌ರ ಅವಧಿಯ ಹೊತ್ತಿಗೆ, ಕೈಗಾರಿಕೆಗಳನ್ನು ಹೊಂದಿದ್ದ ಉತ್ತರ ಭಾಗದ ರಾಜ್ಯಗಳು ದಕ್ಷಿಣ ರಾಜ್ಯಗಳಿಗಿಂತಲೂ ಹತ್ತು ಪಟ್ಟು ಹೆಚ್ಚು GDP ಹೊಂದಿದ್ದವು. ಈ ಆರ್ಥಿಕ ಅನುಕೂಲಗಳನ್ನು ಹೊಂದಿದ ಉತ್ತರ ಭಾಗದ ರಾಜ್ಯಗಳು ದಕ್ಷಿಣ ರಾಜ್ಯಗಳಿಗೆ ಯಾವುದೇ ಶಸ್ತ್ರಗಳು ತಲುಪದಂತೆ ನೋಡಿಕೊಂಡು, ಸಂಪೂರ್ಣ ನಿರ್ಬಂಧ ಹೇರಿದ್ದಲ್ಲದೆ, ತಮ್ಮದೇ ಸೇನೆಗೆ ಭಾರೀ ಶಸ್ತ್ರಾಸ್ತ್ರ ಮತ್ತು ಹೆನ್ರಿ ರೈಫಲ್‌ಗಳನ್ನು ಪೂರೈಸಿದವು.
ಉತ್ತರ ಭಾಗದ ರಾಜ್ಯಗಳು ಅಂತರ್ಯುದ್ಧದಲ್ಲಿ ಜಯಗಳಿಸುವುದರೊಂದಿಗೆ, ಡೆಮೊಕ್ರಾಟ್‌ ವಿರುದ್ಧ ರಿಪಬ್ಲಿಕನ್‌ರ ಪ್ರಾಬಲ್ಯ ಖಚಿತವಾಗಿತ್ತು. ಇಪ್ಪತ್ತನೆಯ ಶತಮಾನದ ಆರಂಭದ ವರೆಗೂ, ರಿಪಬ್ಲಿಕನ್ನರು ಅಮೆರಿಕನ್‌ ರಾಜಕೀಯ ರಂಗದ ಮೇಲೆ ತಮ್ಮ ಬಿಗಿ ಹಿಡಿತ ಸಾಧಿಸಿದ್ದರು. ರಿಪಬ್ಲಿಕನ್‌ ಪಕ್ಷದ ಆಳ್ವಿಕೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ನಿಲುವನ್ನು ರಾಷ್ಟ್ರಾಧ್ಯಕ್ಷ ವಿಲಿಯಮ್‌ ಕಿನ್ಲೇ ವಿವರಿಸಿದ್ದು ಹೀಗೆ:
:"ಮುಕ್ತ ವ್ಯಾಪಾರದಡಿ, ವರ್ತಕರು ಮಾಲೀಕರು ಹಾಗೂ ತಯಾರಕರು ಜೀತದಾಳುಗಳಾಗಿರುತ್ತಾರೆ. ರಕ್ಷಣೆಯೆಂಬುದು ಪ್ರಕೃತಿಯ ನಿಯಮ, ಸ್ವಯಂ-ಸಂರಕ್ಷಣೆಯೂ ಒಂದು ನಿಯಮ, ಆತ್ಮವಿಕಾಸದ, ಹಾಗೂ ಮಾನವ ಕುಲಕ್ಕೆ ಅತ್ಯುತ್ತಮ ನೀತಿಯನ್ನು ತಮ್ಮದಾಗಿಸಿಕೊಳ್ಳುವ ಒಂದು ಯೋಜನೆ. ರಕ್ಷಣೆ ಅನೈತಿಕ ಎಂದು ಭಾವಿಸಲಾಗಿದೆ... ಜನಸಂಖ್ಯೆ ಹೆಚ್ಚಾಗಿ, ರಕ್ಷಣಾ ನೀತಿಯು 63,000,000 [U.S. ಜನಸಂಖ್ಯೆ] ಜನರಿಗೆ ಅನುಕೂಲ ಮಾಡಿದರೆ, ಈ 63,000,000 ಜನರ ಪ್ರಭಾವವು ಉಳಿದ ಭಾಗದ ಜನರನ್ನು ಉದ್ಧಾರ ಮಾಡಬಲ್ಲವು. ಎಲ್ಲೆಡೆಯೂ ಮಾನವ ಕುಲದ ಉದ್ಧಾರ ಮಾಡದೆ ನಾವು ಪ್ರಗತಿಪಥದಲ್ಲಿ ಹೆಜ್ಜೆ ಹಾಕಲು ಸಾಧ್ಯವಾಗದು. 'ಅತಿ ಅಗ್ಗ ಬೆಲೆಗೆ ಅದೆಲ್ಲಿ ಸಿಗುತ್ತೋ ಕೊಂಡುಕೊಳ್ಳಿ' ಎಂದು ಹೇಳಬಹುದು... ಉಳಿದೆಲ್ಲಕ್ಕೂ ಅನ್ವಯಿಸುವಂತೆ, ದುಡಿಮೆಗೂ ಸಹ ಅನ್ವಯಿಸುತ್ತದೆ. ಅದಕ್ಕಿಂತಲೂ ಇನ್ನೂ ಸಾವಿರ ಪಟ್ಟು ಉತ್ತಮ ಸೂತ್ರವಾಕ್ಯವನ್ನು ಹೇಳುವೆ; ಅದು ರಕ್ಷಣಾ ನೀತಿಯ ಸೂತ್ರವಾಕ್ಯ: 'ಸುಲಭವಾಗಿ ಪಾವತಿ ಮಾಡುವಲ್ಲಿ ಕೊಂಡುಕೊಳ್ಳಿ.' ಭೂಮಿ ಮೇಲಿನ ಆ ಜಾಗವೇ ದುಡಿಮೆಗೆ ಅತ್ಯುತ್ತಮ ಪ್ರತಿಫಲ ಲಭಿಸುವ ಜಾಗವಾಗಿದೆ." <ref> ಬೋಸ್ಟನ್‌ (MA)ನಲ್ಲಿ 4 ಅಕ್ಟೋಬರ್‌ 1892ರಂದು ವಿಲಿಯಮ್‌ ಮೆಕಿನ್ಲೇ ಭಾಷಣ; ವಿಲಿಯಮ್‌ ಮೆಕಿನ್ಲೇ ಪೇಪರ್ಸ್‌ (ಲೈಬ್ರೆರಿ ಆಫ್‌ ಕಾಂಗ್ರೆಸ್‌)</ref>
ದಕ್ಷಿಣದ ಡೆಮೊಕ್ರಾಟ್‌ಗಳು ಹಂತ-ಹಂತವಾಗಿ ತಮ್ಮ ಪಕ್ಷವನ್ನು ಕಟ್ಟಿ ದೃಢಗೊಳಿಸಿದರು. ಅವರು ನಾರ್ದರ್ನ್‌ ಪ್ರೊಗ್ರೆಸಿವ್ಸ್‌ ಪಕ್ಷದೊಂದಿಗೆ ಮಿತೃತ್ವ ಬೆಳೆಸಿಕೊಂಡರು. ಅವರ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಎರಡೂ ಪಕ್ಷಗಳು ಕುದುರಿಕೊಂಡಿದ್ದ ಸಾಂಸ್ಥಿಕ ದತ್ತಿಗಳ ವಿರೋಧಿಗಳಾಗಿದ್ದರು. ರಿಪಬ್ಲಿಕನ್‌ ಪಕ್ಷದಲ್ಲಿ ಭ್ರಷ್ಟಾಚಾರ ನೆಲೆಯೂರಿತ್ತು. ಒಂದೇ ಎದುರಾಳಿಯನ್ನು ಎದುರಿಸಲು ಅನುಕೂಲಕರವಾದ ಈ ಜೊತೆಗೂಡುವಿಕೆಯು ಡೆಮೊಕ್ರಾಟಿಕ್‌ ಪಾರ್ಟಿಗೆ ಅಗತ್ಯ ಚೇತರಿಕೆ ನೀಡಿತು. ಇದರಿಂದಾಗಿ ದೆಮೊಕ್ರಾಟಿಕ್‌ ಪಕ್ಷವು ಅಧಿಕಾರಕಕ್ಕೆ ಮರಳಿತು. ರಿಪಬ್ಲಿಕನ್ನರ ಪ್ರಾಬಲ್ಯವನ್ನು ದುರ್ಬಲಗೊಳಿಸಲು, ನಾರ್ದರ್ನ್‌ ಪ್ರೊಗ್ರೆಸಿವ್ಸ್‌ ಮುಕ್ತ ವ್ಯಾಪಾರಕ್ಕಾಗಿ ಆಗ್ರಹ ಪಡಿಸಿದರು - ಇದರ ಕುರಿತು ವುಡ್ರೊ ವಿಲ್ಸನ್‌ ಕಾಂಗ್ರೆಸ್‌ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಈ ವಿಚಾರವನ್ನು ಒಪ್ಪಿಕೊಂಡರು. 1920ರ ದಶಕದಲ್ಲಿ ರಿಪಬ್ಲಿಕನ್ನರ ಪುನರುತ್ಥಾನದ ಕ್ಷಿಪ್ರ ಯತ್ನವು ಅವರಿಗೆ ತೀವ್ರ ಹಾನಿಯೊಡ್ಡಿತು. ವುಡ್ರೊ ವಿಲ್ಸನ್‌ರ ಸೈದ್ಧಾಂತಿಕ ಶಿಷ್ಯ {{Citation needed|date=January 2010}} ಫ್ರ್ಯಾಂಕ್ಲಿನ್‌ ರೂಸ್ವೆಲ್ಟ್‌ ಹಿಂದಿನ ರಿಪಬ್ಲಿಕನ್‌ ರಾಷ್ಟ್ರಾಧ್ಯಕ್ಷ ಹರ್ಬರ್ಟ್ ಹೂವರ್‌ನ ಆರ್ಥಿಕ ರಕ್ಷಣಾ ನೀತಿಗಳಿಗೆ ಇದೊಂದು 'ಗ್ರೇಟ್‌ ಡಿಪ್ರೆಷನ್‌' ಎಂದು ಟೀಕಿಸಿದರು. {{Citation needed|date=January 2010}}
ಪಕ್ಷದ ದಕ್ಷಿಣ-ಭಾಗದಲ್ಲಿರುವ ಬಣದ ಕೃಪಾಕಟಾಕ್ಷ ಪಡೆಯಲು, ಡೆಮೊಕ್ರಾಟಿಕ್‌ ಪಾರ್ಟಿ ಮುಕ್ತ ವ್ಯಾಪಾರದ ಪರ ಹಲವು ನಿರ್ಧಾರಗಳನ್ನು ಕೈಗೊಂಡಿದ್ದುಂಟು. ಪಕ್ಷದ ಶ್ರಮಿಕ-ಪರ ಗುಂಪುಗಳಿಂದ ಹೆಚ್ಚಾಗುತ್ತಿರುವ ಸಂಯಮದ ಕರೆಗಳ ನಡುವೆ ಬಹಳ ಎಚ್ಚರಿಕೆಯಿಂದ ನಡೆದುಹೋಗುತ್ತಿತ್ತು. ಎರಡನೆಯ ಮಹಾಯುದ್ಧ ನಂತರದ(ಅಲೈಸ್‌) ಮುಕ್ತ ವ್ಯಾಪಾರವು, ಮೈತ್ರಿಕೂಟಕ್ಕಿರುವ ಧ್ಯೇಯವಾಗಿತ್ತು. ಇದರತ್ತ ಹಂತ-ಹಂತವಾಗಿ ಸಾಗಲು ಹಲವು ಸುತ್ತುಗಳ ಚರ್ಚೆಗಳು ಮತ್ತು ಒಪ್ಪಂದಗಳು ನಡೆದವು. ಗ್ರೇಟ್‌ ಡಿಪ್ರೆಷನ್‌ಗೆ ಕಾರಣರಾಗಿ, ಎಲ್ಲರಿಂದಲೂ ತೀವ್ರ ಟೀಕೆಗೊಳಗಾದ ರಿಪಬ್ಲಿಕನ್ನರು ಹಂತ-ಹಂತವಾಗಿ ಮುಕ್ತ ವಹಿವಾಟಿನ ಪರ ವಹಿಸುವವರಾದರು. ಇಂದಿಗೂ ಸಹ ರಿಪಬ್ಲಿಕನ್‌ ಪಕ್ಷವು ಮುಕ್ತ ವಹಿವಾಟಿನ ಪರ ವಹಿಸುತ್ತಿದೆ.
೩೦ ನೇ ಸಾಲು:
===
ಇಂದಿನ ವಹಿವಾಟು ಕ್ಷೇತ್ರದಲ್ಲಿ, ಸುಂಕಗಳಲ್ಲದೆ, ಹಲವು ಯತ್ನಗಳನ್ನು ಆರ್ಥಿಕ ರಕ್ಷಣಾ ಯತ್ನಗಳೆಂದು ಪರಿಗಣಿಸಲಾಗಿದೆ. ಉದಾಹರಣೆಗೆ, [[ಜಗದೀಶ್‌ ಭಾಗವತಿ]]ಯವರಂತಹ ವಿಮರ್ಶಕರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮದೇ ಆದ ಶ್ರಮಿಕ ಅಥವಾ ಪರಿಸರೀಯ ಮಾನದಂಡಗಳನ್ನು ಜಾರಿಗೊಳಿಸುವುದನ್ನು 'ಆರ್ಥಿಕ ರಕ್ಷಣಾ ನೀತಿ' ಎಂದು ಪರಿಗಣಿಸಿದ್ದಾರೆ. ಜೊತೆಗೆ, ಆಮದುಗಳ ಮೇಲೆ ನಿರ್ಬಂಧಿಸುವಂತಹ ಪ್ರಮಾಣೀಕರಣ ವಿಧಾನಗಳ ಜಾರಿಗೊಳಿಸುವಿಕೆಯನ್ನೂ ಸಹ ಆರ್ಥಿಕ ರಕ್ಷಣಾ ನೀತಿ ಎಂದು ಪರಿಗಣಿಸಲಾಗಿದೆ.
ಇಷ್ಟೇ ಅಲ್ಲ, ಮುಕ್ತ ವಹಿವಾಟು ಒಪ್ಪಂದಗಳಲ್ಲಿ ಆಗಾಗ್ಗೆ ಆರ್ಥಿಕ ರಕ್ಷಣಾ ನೀತಿಯಂತಹ ವಿಧಿಗಳಿವೆ - ಉದಾಹರಣೆಗೆ ಬೌದ್ಧಿಕ ಸ್ವತ್ತು, [[ಕೃತಿಸ್ವಾಮ್ಯ]] ಹಾಗೂ ಬೃಹತ್‌ ಉದ್ದಿಮೆಗಳಿಗೆ ಅನುಕೂಲಕರವಾಗುವಂತಹ ಹಕ್ಕುಸ್ವಾಮ್ಯ ನಿರ್ಬಂಧಗಳು. ಈ ವಿಧಿಗಳು ಸಂಗೀತ, ಚಲನಚಿತ್ರಗಳು, ಔಷಧಿಗಳು, ತಂತ್ರಾಂಶಗಳು ಮತ್ತು ಇತರೆ ಸಿದ್ದಪಡಿಸಿದ ವಸ್ತುಗಳನ್ನು ಹೆಚ್ಚಿನ ವೆಚ್ಚದ ತಯಾರಕರಿಗೆ ನಿರ್ಬಂಧಿಸಿ, ಕಡಿಮೆ ವೆಚ್ಚದ ತಯಾರಕರಿಗಾಗಿ ಕೋಟಾಗಳನ್ನು ಸೊನ್ನೆಗೆ ಹೊಂದಿಸುತ್ತವೆ. <ref>[http://www.globalpolicy.org/globaliz/econ/2003/0714rta.htm ]{{Dead link|date=October 2008}}</ref><ref>[http://www.conservativenannystate.org/ ದಿ ಕನ್ಸರ್ವೇಟಿವ್‌ ನ್ಯಾನಿ ಸ್ಟೇಟ್‌]</ref>
== ಆರ್ಥಿಕ ರಕ್ಷಣಾ ನೀತಿಯ ಪರವಾಗಿ ವಾದಗಳು ==
ತಮ್ಮ ದೇಶದ ಆರ್ಥಿಕತೆ ಮತ್ತು ತಮ್ಮ ಜನತೆಯ ಜೀವನದ ಗುಣಮಟ್ಟದ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರವು ಮುಕ್ತ ವಹಿವಾಟಿನ ಮೇಲೆ ಸರ್ಕಾರಿ ನಿರ್ಬಂಧ ಹೇರಲು ನ್ಯಾಯಸಮ್ಮತ ಅಗತ್ಯವಿದೆ.
೪೫ ನೇ ಸಾಲು:
== ಆರ್ಥಿಕ ರಕ್ಷಣಾ ನೀತಿ ವಿರುದ್ಧದ ವಾದ
==
ಆರ್ಥಿಕ ರಕ್ಷಣಾ ನೀತಿ ಸಹಾಯ ಮಾಡಬೇಕಾದವರಿಗೆ ತೊಂದರೆ ನೀಡುವಂತಹ ನೀತಿಯಾಗಿದೆ, ಎಂದು ಅದನ್ನು ಪದೇ ಪದೇ ಟೀಕಿಸಲಾಗಿದೆ. ಹಲವು ಮುಖ್ಯವಾಹಿನಿಯ [[ಆರ್ಥಶಾಸ್ತ್ರ]]ಜ್ಞರು ಮುಕ್ತ ವಹಿವಾಟಿನ ಪರ ವಾದಿಸುತ್ತಾರೆ. <ref name="FreeToChoose"/><ref name="Krugman"/> ಮುಕ್ತ ವಹಿವಾಟಿನಿಂದ ಪಡೆಯಲಾದ ಲಾಭಗಳು ಯಾವುದೇ ನಷ್ಟವನ್ನು ಮೀರಿಸುತ್ತವೆ, ಏಕೆಂದರೆ, ಅವು ಹೋಲಿಕೆಯ ಅನುಕೂಲವನ್ನು ಹೊಂದಿರುವ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ತೊಡಗಲು ದೇಶಗಳಿಗೆ ಅವಕಾಶ ನೀಡುತ್ತವೆ, ಎಂದು [[ಹೋಲಿಕೆಯ ಅನುಕೂಲ]]ದ ತತ್ವದಡಿ, ಆರ್ಥಿಕ ಸಿದ್ಧಾಂತವು ಸಾಧಿಸಿ ತೋರಿಸುತ್ತದೆ. <ref>ಕ್ರುಗ್ಮನ್‌, ಪಾಲ್‌ (24 ಜನವರಿ 1997). [http://www.slate.com/id/1916/ ದಿ ಆಕ್ಸಿಡೆಂಟಲ್‌ ಥಿಯರಿಸ್ಟ್‌]. ''ಸ್ಲೇಟ್‌'' </ref> ಆರ್ಥಿಕ ರಕ್ಷಣಾ ನೀತಿಯು [[ಜಡತೂಕದ ನಷ್ಟ]]ದಲ್ಲಿ ಪರಿಣಮಿಸುತ್ತದೆ; ಈ ನಷ್ಟವು ಯಾರಿಗೂ ಎಂತಹ ಅನುಕೂಲವನ್ನೂ ನೀಡುವುದಿಲ್ಲ. ಆದರೆ ಮುಕ್ತ ವಹಿವಾಟಿನಲ್ಲಿ ಇಂತಹ ಯಾವುದೇ ನಷ್ಟವಿರುವುದಿಲ್ಲ. ಆರ್ಥಶಾಸ್ತ್ರಜ್ಞ [[ಸ್ಟೀಫೆನ್‌ ಪಿ. ಮ್ಯಾಗೀ]] ಪ್ರಕಾರ, ಮುಕ್ತ ವಹಿವಾಟುಗಳ ಅನುಕೂಲಗಳು ನಷ್ಟವನ್ನು 100:1ರ ನಿಷ್ಪತ್ತಿಯಲ್ಲಿ ಮೀರಿಸುತ್ತವೆ. <ref>{{cite book|last=Magee |first=Stephen P. |title=International Trade and Distortions In Factor Markets |publisher=Marcel-Dekker |location=New York |year=1976}}</ref>
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಕಟ್ಟುನಿಟ್ಟಾದ ಆರೋಗ್ಯ ಮತ್ತು ಶ್ರಮ ಗುಣಮಟ್ಟಗಳಿಗೆ ಒಳಪಡದಿದ್ದರೂ ಸಹ, ಮುಕ್ತ ವಹಿವಾಟು ಅಭಿವೃದ್ಧಿಶೀಲ ದೇಶಗಳ ಉದ್ಯೋಗಿಗಳಿಗೆ ನೆರವಾಗುತ್ತದೆ, ಎಂದು ನೊಬೆಲ್‌ ಪ್ರಶಸ್ತಿ ವಿಜೇತರಾದ [[ಮಿಲ್ಟನ್‌ ಫ್ರೈಡ್ಮನ್]]‌ ಮತ್ತು [[ಪಾಲ್‌ ಕ್ರುಗ್ಮನ್]]‌ ಸೇರಿದಂತೆ ಹಲವು ಅರ್ಥಶಾಸ್ತ್ರಜ್ಞರು ನಂಬಿದ್ದಾರೆ. ಇದಕ್ಕೆ ಕಾರಣ, 'ತಯಾರಿಕೆಯ ಕ್ಷೇತ್ರದ ಹಾಗೂ ನೂತನ ರಫ್ತು ಕ್ಷೇತ್ರವು ಸೃಷ್ಟಿಸಿದಂತಹ ಹಲವು ಇತರೆ ಉದ್ಯೋಗಗಳ ಅಭಿವೃದ್ಧಿಯು ಆರ್ಥಿಕತೆಯುದ್ದಕ್ಕೂ ಅಲೆಗಳನ್ನು ಸೃಷ್ಟಿಸಿದೆ,' ಉತ್ಪಾದಕರ ನಡುವೆ ಪೈಪೋಟಿಗೆ ಕಾರಣವಾಗಿದೆ. ವೇತನಗಳು ಮತ್ತು ಜೀವನಮಟ್ಟವನ್ನೂ ಸಹ ಉತ್ತಮಗೊಳಿಸಿದೆ. <ref>ಕ್ರುಗ್ಮನ್‌, ಪಾಲ್‌ (21 ಮಾರ್ಚ್‌ 1997). [http://www.slate.com/id/1918/ ಇನ್‌ ಪ್ರೇಯ್ಸ್‌ ಆಫ್‌ ಚೀಪ್‌ ಲೇಬರ್‌]. ''ಸ್ಲೇಟ್‌'' </ref> ಮೂರನೆಯ ವಿಶ್ವದ ಹಿತಾಸಕ್ತಿಗಳನ್ನು ವೃದ್ಧಿಸಲೆಂದು ಆರ್ಥಿಕ ರಕ್ಷಣಾ ನೀತಿಯ ಪರವಾಗಿ ನಿಲುವು ಹೊಂದಿರುವವರು, ಗೂಢೋದ್ದೇಶವುಳ್ಳವರಾಗಿರುತ್ತಾರೆ, ಕೇವಲ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಉದ್ಯೋಗಗಳನ್ನು ರಕ್ಷಿಸುವುದೇ ಅವರ ಧ್ಯೇಯವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಸೂಚಿಸಿದ್ದಾರೆ. <ref>ಕ್ರುಗ್ಮನ್‌, ಪಾಲ್‌ (21 ನವೆಂಬರ್‌ 1997). [http://www.slate.com/id/1926/ ಎ ರಾಸ್ಪ್‌ಬೆರಿ ಫಾರ್‌ ಫ್ರೀ ಟ್ರೇಡ್‌]. ''ಸ್ಲೇಟ್‌'' </ref> ಇನ್ನೂ ಹೆಚ್ಚಿಗೆ, ಮೂರನೆಯ ಪ್ರಪಂಚದ ಉದ್ಯೋಗಿಗಳು ಅತ್ಯುತ್ತಮ ಪ್ರಸ್ತಾಪವಿದ್ದರೆ ಮಾತ್ರ ಆ ಉದ್ಯೋಗವನ್ನು ಒಪ್ಪುವರು, ಏಕೆಂದರೆ ಎಲ್ಲಾ ಪರಸ್ಪರ ಒಪ್ಪಂದಗಳು ಉಭಯ ಪಕ್ಷಗಳಿಗೆ ಸರಿಹೊಂದಬೇಕು. ಇಲ್ಲದಿದ್ದಲ್ಲಿ ಈ ಒಪ್ಪಂದವು ಅಂಗೀಕೃತವಾಗುತ್ತಿರಲಿಲ್ಲ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮುಂದಿಡುವ ಕಡಿಮೆ ವೇತನದ ಉದ್ಯೋಗಗಳನ್ನು ಅವರು ಒಪ್ಪುವುದು, ಅವರ ಇತರೆ ಔದ್ಯೋಗಿಕ ಅವಕಾಶಗಳು ಅದಕ್ಕಿಂತಲೂ ಕಳಪೆಯೆಂಬುದನ್ನು ಸಾಬೀತುಪಡಿಸುತ್ತದೆ.
ಅಮೆರಿಕನ್‌ [[ಫೆಡರಲ್‌ ರಿಸರ್ವ್‌]]ನ ಮಾಜಿ ಅಧ್ಯಕ್ಷ [[ಅಲ್ಯಾನ್‌ ಗ್ರೀನ್‌ಸ್ಪ್ಯಾನ್]]‌ ರಕ್ಷಣಾ ನೀತಿ ಪ್ರಸ್ತಾಪಗಳನ್ನು ಟೀಕಿಸಿ, 'ನಮ್ಮ ಸ್ಪರ್ಧಾತ್ಮಕ ಕ್ಷಮತೆಯ ಬಲದ ಧಕ್ಕೆಗೆ ಕಾರಣವಾಗುತ್ತದೆ... ಆರ್ಥಿಕ ರಕ್ಷಣಾ ನೀತಿಯನ್ನು ಅನುಸರಿಸಿದಲ್ಲಿ, ನೂತನ, ಹೆಚ್ಚು ದಕ್ಷ ಕೈಗಾರಿಕೆಗಳಿಗೆ ವಿಕಸನ ಹೊಂದಲು ಯಾವುದೇ ಅವಕಾಶವಿರುವುದಿಲ್ಲ, ಒಟ್ಟಾರೆ ಉತ್ಪಾದಕತೆ ಮತ್ತು ಆರ್ಥಿಕ ಯೋಗಕ್ಷೇಮಕ್ಕೆ ನಷ್ಟವಾಗುತ್ತದೆ.' <ref>ಸಿಸಿಲಿಯಾ, ಡೇವಿಡ್‌ ಬಿ. &amp; ಕ್ರುಯಿಕ್ಷಾಂಕ್‌, ಜೆಫ್ರಿ ಎಲ್‌. (2000). ''ದಿ ಗ್ರೀನ್‌ಸ್ಪ್ಯಾನ್‌ ಇಫೆಕ್ಟ್‌'' , ಪಿ. 131. ನ್ಯೂಯಾರ್ಕ್‌: ಮೆಗ್ರಾ-ಹಿಲ್‌. ISBN 0-471-80580-7.</ref>
ಯುದ್ಧಗಳ ಹಿಂದಿನ ಪ್ರಮುಖ ಕಾರಣಗಳಲ್ಲಿ ಆರ್ಥಿಕ ರಕ್ಷಣಾ ನೀತಿಯೂ ಸಹ ಒಂದು ಎಂಬ ಆರೋಪವಿದೆ. ಈ ಸಿದ್ಧಾಂತದ ಪ್ರತಿಪಾದಕರು ವಿವರಿಸುವ ಪ್ರಕಾರ, 17ನೆಯ ಮತ್ತು 18ನೆಯ ಶತಮಾನಗಳಲ್ಲಿ ಯುರೋಪೀಯ ದೇಶಗಳ ನಡುವೆ ಯುದ್ಧ-ಘರ್ಷಣೆಗಳು ನಡಯುತ್ತಿದ್ದವು. ಕೆಲವು ಯುರೋಪೀಯ ದೇಶದ ಸರ್ಕಾರಗಳು ವ್ಯಾಪಾರ-ಪರವಿದ್ದರೆ, ಇನ್ನು ಕೆಲವು ಸರ್ಕಾರಗಳು ಆರ್ಥಿಕ ರಕ್ಷಣಾ ನೀತಿಯತ್ತ ಒಲವು ತೋರಿಸುತ್ತಿದ್ದವು. ಬ್ರಿಟಿಷರು ವಿಧಿಸುತ್ತಿದ್ದ ಸುಂಕಗಳು ಮತ್ತು ತೆರಿಗೆಗಳು ಅಮೆರಿಕನ್‌ ಕ್ರಾಂತಿಗೆ ಕಾರಣವಾದವು. ಇದಲ್ಲದೆ, [[ಮೊದಲನೆಯ]] ಹಾಗೂ [[ಎರಡನೆಯ ವಿಶ್ವ ಸಮರ]]ಗಳ ಮುಂಚೆಯ ಆರ್ಥಿಕ ರಕ್ಷಣಾ ನೀತಿಗಳು ಸಹ ಪ್ರಬಲ ಕಾರಣಗಳಾಗಿದ್ದವು. [[ಫ್ರೆಡ್ರಿಕ್‌ ಬಸ್ಟಿಯಟ್]]‌ ಹೇಳಿದಂತೆ, 'ಸರಕು ಗಡಿಯ ದಾಟದಿದ್ದರೆ, ಸೇನೆಗಳು ದಾಟುತ್ತವೆ!'
ಮುಕ್ತ ವಹಿವಾಟು ದೇಶೀಯ ಹಾಗೂ ವಿದೇಶೀಯ ಭಾಗೀದಾರರಿಗೆ ದೇಶೀಯ ಸಂಪನ್ಮೂಲಗಳತ್ತ (ಮಾನವ ಶಕ್ತಿ, ನೈಸರ್ಗಿಕ, ಬಂಡವಾಳ ಇತ್ಯಾದಿ) ಅವಕಾಶ ನೀಡುತ್ತದೆ. ಮುಕ್ತ ವಹಿವಾಟಿನಡಿ ಭಾಗವಹಿಸುವ ದೇಶಗಳ ನಾಗರೀಕರಿಗೆ ಸಂಪನ್ಮೂಲಗಳು ಹಾಗೂ ಸಾಮಾಜಿಕ ಯೋಗಕ್ಷೇಮ ಕ್ಷೇತ್ರಗಳಲ್ಲಿ (ಶ್ರಮಿಕರ ಕಾನೂನುಗಳು, ಶಿಕ್ಷಣ ಇತ್ಯಾದಿ) ಸಮನಾದ ಪ್ರವೇಶಾನುಮತಿ ನೀಡುತ್ತದೆ; ಎಂದು ಕೆಲವು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ವೀಸಾ ಪ್ರವೇಶ ನೀತಿಗಳು ಹಲವು ದೇಶಗಳ ನಡುವಿನ ಮುಕ್ತ ಪುನರ್ವಿಂಗಡನೆಗೆ ಅಸಮ್ಮತಿ ಸೂಚಿಸಿ ಇನ್ನೂ ಕೆಲವರೊಂದಿಗೆ ಉತ್ತೇಜಿಸುತ್ತವೆ. ಹಲವು ವಿಚಾರಗಳಲ್ಲಿ, ನೆರವು ಯೋಜನೆಗಳಿಗಿಂತಲೂ, ಹೆಚ್ಚಿನ ಸ್ವಾತಂತ್ರ್ಯ ಮತ್ತು ಚಲನಶೀಲತೆಯು ಇನ್ನೂ ಹೆಚ್ಚು ಅಭಿವೃದ್ಧಿಗೆ ಕಾರಣವಾಗುತ್ತದೆ. ಉದಾಹರಣೆಗೆ ಯುರೋಪ್‌ ಒಕ್ಕೂಟದಲ್ಲಿ ಪೂರ್ವ ಯುರೋಪಿಯನ್‌ ದೇಶಗಳು. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ವೀಸಾ ಪ್ರವೇಶ ಅಗತ್ಯಗಳು ಒಂದು ರೀತಿಯ ಸ್ಥಳೀಯ ಆರ್ಥಿಕ ರಕ್ಷಣಾ ನೀತಿ.
== ವಿಶ್ವಾದ್ಯಂತ ಪ್ರಚಲಿತ ವಿದ್ಯಮಾನಗಳು ==
[[ಎರಡನೆಯ ಮಹಾಯುದ್ಧ]] ಅಂತ್ಯಗೊಂಡಾಗಿನಿಂದಲೂ, [[ವಿಶ್ವ ವಹಿವಾಟು ಸಂಘಟನೆ]]ಯಂತಹ ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಸಂಘಟನೆಗಳು, ಜಾರಿಗೊಳಿಸಿರುವ ಮುಕ್ತ ವಹಿವಾಟು ನೀತಿಗಳ ಮೂಲಕ ಆರ್ಥಿಕ ರಕ್ಷಣಾ ನೀತಿಗಳನ್ನು ನಿರ್ಮೂಲಗೊಳಿಸುವುದು, ಹಲವು [[ಅಭಿವೃದ್ಧಿ ಹೊಂದಿದ ರಾಷ್ಟ್ರ]]ಗಳ ನೀತಿಯಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸರ್ಕಾರಗಳ ಕೆಲವು ನೀತಿಗಳನ್ನು ರಕ್ಷಣಾ ನೀತಿಗಳೆಂದು ಟೀಕಿಸಲಾಗಿವೆ; ಉದಾಹರಣೆಗೆ; ಯುರೋಪಿಯನ್‌ ಒಕ್ಕೂಟದಲ್ಲಿ [[ಸಮಾನ ಕೃಷಿ ನೀತಿ]], <ref>httphttps://www.nytimes.com/2003/08/31/opinion/a-french-roadblock-to-free-trade.html</ref> ಹಾಗೂ, ಅಮೆರಿಕಾ ಸಂಯುಕ್ತ ಸಂಸ್ಥಾನದ ಆರ್ಥಿಕ ಪುನಶ್ಚೇತನಾ ಯೋಜನೆಗಳಡಿ ಪ್ರಸ್ತಾಪಿಸಲಾದ 'ಅಮೆರಿಕಾದಲ್ಲೇ ತಯಾರಿಸಲಾದ ಸರಕನ್ನೇ ಕೊಳ್ಳಿ' ವಿಧಿ. <ref>http://www.dw-world.de/dw/article/0,,3988551,00.html</ref>
[[ವಿಶ್ವ ವಹಿವಾಟು ಸಂಘಟನೆ]] ನಡೆಸುತ್ತಿರುವ ಸದ್ಯದ ವಹಿವಾಟಿನ ಮಾತುಕತೆಗಳಲ್ಲಿ [[ದೊಹಾ ಡೆವೆಲಪ್ಮೆಂಟ್‌ ರೌಂಡ್]]‌ ಮತ್ತು ಕೊನೆಯ ಮಾತುಕತೆಗಳ ಸಭೆಯು ಸ್ವಿಟ್ಜರ್ಲೆಂಡ್‌ನ ಜಿನಿವಾದಲ್ಲಿ ನಡೆದು, ಯಾವುದೇ ನಿರ್ಣಯಕ್ಕೆ ಬರಲಾರದೆ ಮುಗಿದುಹೋಯಿತು. ಇಸವಿ 2009ರ ಆರಂಭದಲ್ಲಿ ಲಂಡನ್‌ನಲ್ಲಿ ನಡೆದ G20 ಸಭೆಯಲ್ಲಿ ನಾಯಕರ ಹೇಳಿಕೆಯಲ್ಲಿ ದೊಹಾ ಮಾತುಕತೆಗಳನ್ನು ಮುಂದುವರೆಸುವ ಭರವಸೆಯಿತ್ತು.
=== ಇಸವಿ 2008ರ ಹಣಕಾಸಿನ ಬಿಕ್ಕಟ್ಟಿನ ನಂತರ ಆರ್ಥಿಕ ರಕ್ಷಣಾ ನೀತಿ ===
೭೩ ನೇ ಸಾಲು:
* [http://www.financialcrisis2009.org ಆರ್ಥಿಕ ಬಿಕಟ್ಟು]
* [http://www.perc.org/perc.php?subsection=5&amp;id=416 ವಾಹನಗಳ ಮೇಲೆ ಸ್ವಯಂ-ಪ್ರೇರಿತ ರಫ್ತು ನಿರ್ಬಂಧಗಳು]
* [http://www.treatyist.com/issue1/protectionismcivilwar.aspx ಆರ್ಥಿಕ ರಕ್ಷಣಾ ನೀತಿ ಹಾಗೂ ಅಂತರ್ಯುದ್ಧ ]
* [http://www.foei.org/trade/activistguide/whatis.htm FoEI ಸಿಟಿಜೆನ್ಸ್‌ ಗೈಡ್‌ ಟು: ವಾಟ್‌ ಈಸ್‌ ಟ್ರೇಡ್‌? ]
]
* [http://www.foei.org/trade/activistguide/whatis.htm FoEI ಸಿಟಿಜೆನ್ಸ್‌ ಗೈಡ್‌ ಟು: ವಾಟ್‌ ಈಸ್‌ ಟ್ರೇಡ್‌?
]
* [http://www.americaneconomicalert.org ಅಮೆರಿಕನ್‌ ಎಕನಾಮಿಕ್‌ ಅಲರ್ಟ್‌]
* [https://archive.is/20121209105739/www.vdare.com/roberts/050904_marx.htm ಮುಕ್ತ ವಹಿವಾಟು ಕುರಿತು ಪಾಲ್‌ ಕ್ರೇಗ್‌ ರಾಬರ್ಟ್ಸ್‌ರ ವಿಮರ್ಶಾತ್ಮಕ ಚರ್ಚೆ]
Line ೮೪ ⟶ ೮೨:
* [http://www.eagleforum.org/psr/1996/mar96/psrmar96.html ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮುಕ್ತ ವಹಿವಾಟು ಮತ್ತು ಆರ್ಥಿಕ ರಕ್ಷಣಾ ನೀತಿಯ ಕುರಿತು 1996ರಲ್ಲಿ ಫಿಲಿಸ್‌ ಷ್ಲಾಫ್ಲಿಯವರಿಂದ ವಿಮರ್ಶೆ]
* [http://www.economyincrisis.org ಬಿಕ್ಕಟ್ಟಿನಲ್ಲಿ ಆರ್ಥಿಕತೆ]
* [http://itssddisguisedtradebarriers.blogspot.com ಮರೆಮಾಚಲಾದ ಆರ್ಥಿಕ ರಕ್ಷಣಾ ನೀತಿಯ ಕುರಿತು ITSSD ಪತ್ರಿಕೆ ]
]
* [[ನಾನ್‌-ಟ್ಯಾರಿಫ್‌ ಬ್ಯಾರಿಯರ್ಸ್‌ ಟು ಟ್ರೇಡ್, ವಿಕಿಪೀಡಿಯಾ]].
* [http://www.wto.org/english/forums_e/ngo_e/posp47_nftc_enlightened_e.pdf '''ಎನಲೈಟೆನ್ಡ್‌ ಎನ್ವಿರಾನ್ಮೆಂಟಲಿಸಮ್‌ ಆರ್‌ ಡಿಸ್ಗಯ್ಸ್ಡ್‌ ಪ್ರೊಟೆಕ್ಷನಿಸಮ್‌: ಅಸೆಸಿಂಗ್‌ ದಿ ಇಂಪ್ಯಾಕ್ಟ್‌ ಆಫ್‌ EU ಪ್ರಿಕಾಷನ್‌-ಬೇಸ್ಡ್‌ ಸ್ಟಾಂಡರ್ಡ್ಸ್‌ ಆನ್‌ ಡೆವೆಲಪಿಂಗ್‌ ಕಂಟ್ರೀಸ್‌ '''' ''' ], ಲಾರೆನ್ಸ್‌ ಎ. ಕೊಗನ್‌‌, ಫಾರ್‌ ದಿ ನ್ಯಾಷನಲ್‌ ಫಾರೀನ್‌ ಟ್ರೇಡ್‌ ಕೌನ್ಸಿಲ್‌ (ಏಪ್ರಿಲ್‌ 2004); [http://www.itssd.org/White%20Papers/L%20Kogan%20NFTC%20White%20Paper%203.pdf ].
* [http://www.itssd.org/Publications/Kogan%20TNI%2077FINAL.pdf ''ಎಕ್ಸ್ಪೋರ್ಟಿಂಗ್‌ ಯುರೋಪ್ಸ್‌ ಪ್ರೊಟೆಕ್ಷನಿಸಮ್‌'' ], ಲಾರೆನ್ಸ್‌ ಎ. ಕೊಗನ್‌, ದಿ ನ್ಯಾಷನಲ್‌ ಇಂಟರೆಸ್ಟ್‌ (ಸೆಪ್ಟೆಂಬರ್‌ 2004).
* [httphttps://www.nytimes.com/2004/11/27/opinion/27iht-edkogan_ed3_.html?_r=1 ''ಟ್ರೇಡ್‌ ಪ್ರೊಟೆಕ್ಷನಿಸಮ್‌: ಡಕಿಂಗ್‌ ದಿ ಟ್ರೂತ್ ಎಬೌಟ್‌ ಯುರೋಪ್ಸ್‌ GMO ಪಾಲಿಸಿ'' ], ನ್ಯೂ ಯಾರ್ಕ್‌ ಟೈಮ್ಸ್‌ ಆಪ್‌-ಎಡ್‌ 27 ನವೆಂಬರ್‌ 2004).
* [http://www.spaef.com/article.php?id=966 ''ಪ್ರಿಕಾಷನರಿ ಪ್ರೆಫೆರೆನ್ಸ್‌: ಹೌ ಯುರೋಪ್‌ ಎಂಪ್ಲಾಯ್ಸ್‌ ಡಿಸ್ಗೈಸ್ಡ್‌ ರೆಗ್ಯುಲೇಟರಿ ಪ್ರೊಟೆಕ್ಷನಿಸಮ್‌ ಟು ವೀಕೆನ್‌ ಅಮೆರಿಕನ್‌ ಫ್ರೀ ಎಂಟರ್ಪ್ರೈಸ್‌'' ] ಲಾರೆನ್ಸ್‌ ಎ. ಕೊಗನ್‌, ಇಂಟರ್ನ್ಯಾಷನಲ್‌ ಜರ್ನಲ್‌ ಆಫ್‌ ಎಕನಾಮಿಕ್‌ ಡೆವೆಲಪ್ಮೆಂಟ್‌ (IJED), ಸಂಪುಟ. 7 ಸಂಖ್ಯೆ 2-3 (2005); [http://www.itssd.org/White%20Papers/ijed-7-2-3-kogan.pdf ]
{{Trade|state=expanded}}
 
[[ವರ್ಗ:ಆರ್ಥಿಕ ಚಿಂತನೆ]]