ರತ್ನಾಕರ ವರ್ಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2401:4900:4E52:CEE:E7D3:EEB4:4B1A:7091 (ಚರ್ಚೆ) ರ 1044221 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩೮ ನೇ ಸಾಲು:
*[[ಭರತೇಶ ವೈಭವ|ಭರತೇಶ ವೈಭವವು]] [[ನಡುಗನ್ನಡ]] ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. [[ಹಳೆಗನ್ನಡ]]ದ ಕವಿಗಳು [[ಛಂದಸ್ಸು|ಛಂದಸ್ಸುಗಳಲ್ಲಿ]] ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.ಉಂಡು ಉಪವಾಸಿ,ಬಳಸಿ ಬ್ರಹ್ಮಚಾರಿ ಭೂ ಮಂಡಲದಲ್ಲಿದ್ದು ನಿಸ್ಸೀಮ.
*[[ಭರತೇಶ ವೈಭವ]]’ ರತ್ನಾಕರವರ್ಣಿಯು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ.
*ಆದಿತೀರ್ಥಂಕರರ ಹಿರಿಯ ಮಗ ಭರತ. ಈತನು ತನ್ನ ೯೬ಸಾವಿರ ರಾಣಿಯರ ಜೊತೆಗೆ ಭೋಗಜೀವನದಲ್ಲಿ ನಿರತನಾಗಿದ್ದ. ಈತನ ಆಯುಧಾಗಾರದಲ್ಲಿ ಪವಿತ್ರ ಚಕ್ರರತ್ನವೊಂದು ಉದಯಿಸಿ , ದಿಗ್ವಿಜಯಕ್ಕೆ ಹೊರಡಲು ಸೂಚಿಸುತ್ತದೆ. ಭರತ ವಿಜಯಯಾತ್ರೆ ಮಾಡುತ್ತ ತನ್ನ ತಮ್ಮ ಬಾಹುಬಲಿಯ ರಾಜಧಾನಿ ಪೌದನಪುರಕ್ಕೆ ಬರುತ್ತಾನೆ. ಚಕ್ರರತ್ನ ಅಲ್ಲಿ ನಿಲ್ಲುತ್ತದೆ. ಬಾಹುಬಲಿ ಅಣ್ಣನೊಡನೆ ಹೋರಾಡುತ್ತಾನೆ. ಭರತ ಬಾಹುಬಲಿಯ ಮನಸ್ಸನ್ನು ಒಲಿಸುತ್ತಾನೆ. ಬಾಹುಬಲಿ ವಿರಕ್ತನಾಗಿ ಜಿನದೀಕ್ಷೆ ಪಡೆದು ತಪಸ್ಸಿಗೆ ತೆರಳುತ್ತಾನೆ. ತನ್ನ ರಾಜಧಾನಿಗೆ ಮರಳಿದ ಭರತ ತಾನೂ ವಿರಕ್ತನಾಗಿ ತಪಸ್ಸಿಗೆ ತೆರಳಿ ಮೋಕ್ಷ ಸಂಪಾದಿಸುತ್ತಾನೆ. ಇದಿಷ್ಟು ಕತೆಯ ತಿರುಳು.
ಕರ್ನಾಟಕದ ಶಿಲ್ಪಕಲಾವೈಭವನ್ನು ಸಾರುವ ಒಂದೇ ಶಿಲೆಯಲ್ಲಿ ಕೆತ್ತಲಾದ ಬಾಹುಬಲಿಯ ಮೂರ್ತಿ ಶ್ರವಣ ಬೆಳಗೊಳದಲ್ಲಿದೆ. ಹನ್ನೆರಡು ವರ್ಷಕ್ಕೊಮ್ಮೆ ಈ ಶಿಲಾಮೂರ್ತಿಗೆ ಮಜ್ಜನವಾಗುತ್ತದೆ.<ref>[https://kn.wikisource.org/s/58i ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರತ್ನಾಕರವರ್ಣಿ]</ref>
 
*ಭರತೇಶ ವೈಭವ’ ಕಾವ್ಯದಲ್ಲಿ ಒಂದು ಪದ್ಯ:
;‘ಬಡವಗೆ ಬಲುರೋಗ ಬಂದು ಬಾಯ್ಬಿಡಲೊರ್ವ/
;ರೆಡಹಿಯು ಕಾಣರುರ್ವಿಯೊಳು/
;ಒಡವೆಯುಳ್ಳವಗಲ್ಪರುಜೆ ಬರೆ ವಿಸ್ಮಯ/
;ಬಡುತ ಸಾರುವರದು ಸಹಜ’ || <ref>ಭರತೇಶವೈಭವ- ರತ್ನಾಕರ ವರ್ಣಿ</ref>
:ಎಂದು ಕವಿ ರತ್ನಾಕರವರ್ಣಿ ಉದ್ಗರಿಸುತ್ತಾನೆ. ಎಲ್ಲ ಕಾಲದಲ್ಲೂ ಬಡವರ ಜೀವ ಅಗ್ಗವೇ, ಮಾನವೀಯತೆ ದುರ್ಲಭವೇ!
 
== ಉಲ್ಲೇಖ ==
"https://kn.wikipedia.org/wiki/ರತ್ನಾಕರ_ವರ್ಣಿ" ಇಂದ ಪಡೆಯಲ್ಪಟ್ಟಿದೆ