ಪದ್ಮನಾಭಸ್ವಾಮಿ ದೇವಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
106.197.192.201 (ಚರ್ಚೆ) ರ 1043624 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೬ ನೇ ಸಾಲು:
*ಪ್ರಧಾನ ದೇವತೆ ಪದ್ಮನಾಭಸ್ವಾಮಿ (ವಿಷ್ಣು) [[ಆದಿಶೇಷ]] ಎಂಬ ಸರ್ಪದ ಮೇಲೆ ಶಾಶ್ವತ [[ಯೋಗ]]ನಿದ್ರೆಯ- "ಅನಂತ ಶಯನ" ಭಂಗಿಯಲ್ಲಿ ಪ್ರತಿಷ್ತಷ್ಠಿಸಲಾಗಿದೆ. ಪದ್ಮನಾಭಸ್ವಾಮಿ [[ತಿರುವಾಂಕೂರು|ತಿರುವಾಂಕೂರಿನ]] ರಾಜಮನೆತನದ ದೇವರು. ತಿರುವಾಂಕೂರಿನ ಮಹಾರಾಜ, ಮೂಲಂ ತಿರುನಾಳ್ ರಾಮ ವರ್ಮ, ದೇವಾಲಯದ ಟ್ರಸ್ಟಿ.
===ಇತಿಹಾಸ===
*ಬ್ರಹ್ಮ ಪುರಾಣ, ಮತ್ಸ್ಯ ಪುರಾಣ, ವರಾಹ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ವಾಯು ಪುರಾಣ, ಭಾಗವತ ಪುರಾಣ ಮತ್ತು ಮಹಾಭಾರತದಂತಹ ಹಲವಾರು ಹಿಂದೂ ಗ್ರಂಥಗಳು ಈ ದೇವಾಲಯದ '''ಅನಂತಶಯನ ವಿಷ್ಣು'''ವನ್ನು ಉಲ್ಲೇಖಿಸುತ್ತವೆ. ದೇವಾಲಯವನ್ನು (ದಾಖಲಾದ)ಕ್ರಿ.ಪೂ 500 ಮತ್ತು ಕ್ರಿ.ಶ 300 ರ ನಡುವಿನ ಸಾಹಿತ್ಯದ ಅವಧಿಯ ಕಾಲದ 'ಸಂಗಮ' ಸಾಹಿತ್ದyaಲ್ಲಿಸಾಹಿತ್ಯದಲ್ಲಿ ಹಲವಾರು ಬಾರಿ ಉಲ್ಲೇಖಿಸಲಾಗಿದೆ. <ref>[https://www.thehindu.com/opinion/op-ed/eclectic-architecture-exquisite-features/article2236138.ece T. S. Subramanian. "Eclectic architecture, exquisite features". The Hindu.]</ref> ಅನೇಕ ಸಾಂಪ್ರದಾಯಿಕ ಇತಿಹಾಸಕಾರರು ಮತ್ತು ವಿದ್ವಾಂಸರು ಈ ದೇವಾಲಯದ ಹೆಸರನ್ನು "ಗೋಲ್ಡನ್ ಟೆಂಪಲ್" ಎಂದು ಕರೆಯುತ್ತಾರೆ. ಅಕ್ಷರಶಃ ದೇವಾಲಯವು ಆ ಹೊತ್ತಿಗಾಗಲೆ ಊಹಿಸಲಾಗದಷ್ಟು ಶ್ರೀಮಂತವಾಗಿದೆ ಎಂಬ ಅಂಶವನ್ನು ಅಕ್ಷರಶಃ ಗುರುತಿಸಿಕೊಂಡಿದೆ. <ref>[https://www.rediff.com/news/slide-show/slide-show-1-interview-with-prof-mg-sashibhushan-on-padmanabhaswamy-temple%20treasure/20110712.htm Treasure belongs to the temple and nobody else'
Last updated on: July 12, 2011]</ref><ref>[https://www.huffpost.com/entry/endless-riches-in-the-end_b_894550?ir=India&adsSiteOverride=in The Real Riches of India’s Vishnu Temple 07/11/2011]</ref>
*ಸಂಗಮ್ ತಮಿಳು ಸಾಹಿತ್ಯ ಮತ್ತು ಕಾವ್ಯದ ಅನೇಕ ತುಣುಕುಗಳು ಮತ್ತು ನಂತರದ 9 ನೇ ಶತಮಾನದ ತಮಿಳು ಕವಿ-ಸಂತರಾದ ನಮ್ಮಲ್ವಾರ್ ಅವರ ಕೃತಿಗಳು ದೇವಾಲಯ ಮತ್ತು ನಗರವನ್ನು ಶುದ್ಧ ಚಿನ್ನದ ಗೋಡೆಗಳನ್ನು ಹೊಂದಿವೆ ಎಂದು ಉಲ್ಲೇಖಿಸುತ್ತವೆ. ಕೆಲವು ಸ್ಥಳಗಳಲ್ಲಿ, ದೇವಾಲಯ ಮತ್ತು ಇಡೀ ನಗರವು ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ದೇವಾಲಯವನ್ನು ಸ್ವರ್ಗವೆಂದು ಪ್ರಶಂಸಿಸಲಾಗಿದೆ.<ref>"The Real Riches of India's Vishnu Temple". HuffPost.</ref>
೧೪ ನೇ ಸಾಲು:
*ದೇವಾಲಯದ ಮುಖ್ಯ ವಿಗ್ರಹದ ಪಾವಿತ್ರ್ಯತೆ ಸಂಬಂಧಿಸಿದ ಮತ್ತೊಂದು ಆವೃತ್ತಿಯು ಪೌರಾಣಿಕ ಋಷಿ ವಿಲ್ವಮಂಗಲತು ಸ್ವಾಮಿಯಾರ್‌ಗೆ ಸಂಬಂಧಿಸಿದೆ. ಕಾಸರಗೋಡು ಜಿಲ್ಲೆಯ ಅನಂತಪುರಂ ದೇವಸ್ಥಾನದ ಬಳಿ ವಾಸವಾಗಿದ್ದ ಸ್ವಾಮಿಯಾರ್, ವಿಷ್ಣುವಿನ ದರ್ಶನ ಅಥವಾ "ಶುಭ ದೃಶ್ಯ" ಕ್ಕಾಗಿ ಪ್ರಾರ್ಥಿಸಿದರು. ಚೇಷ್ಟೆಯ ಸ್ವಭಾವದ ಪುಟ್ಟ ಹುಡುಗನ ವೇಷದಲ್ಲಿ ಭಗವಂತ ಬಂದಿದ್ದನೆಂದು ನಂಬಲಾಗಿದೆ. ಆ ಹುಡುಗ ಪೂಜೆಗೆ ಇಡಲಾಗಿದ್ದ ವಿಗ್ರಹವನ್ನು ಅಪವಿತ್ರಗೊಳಿಸಿದನು. ಇದರಿಂದ ಋಷಿ ಕೋಪಗೊಂಡು ಹುಡುಗನನ್ನು ಓಡಿಸಿದನು. ಹುಡುಗನು ಅವನ ಮುಂದೆ ಕಣ್ಮರೆಯಾದನು. ಹುಡುಗ ಸಾಮಾನ್ಯ ಮನುಷ್ಯನಲ್ಲ ಎಂದು ಅರಿತುಕೊಂಡ ಋಷಿ ಕ್ಷಮೆ ಬೇಡಿ ಕಣ್ಣೀರಿಟ್ಟನು ಮತ್ತು ಮತ್ತೊಂದು ಸಂಕೇತ ದರ್ಶನವನ್ನು ಕೇಳಿದನು. "ನೀನು ನನ್ನನ್ನು ನೋಡಲು ಬಯಸಿದರೆ ಅನಂತವನಕ್ಕೆ (ಕೊನೆಯಿಲ್ಲದ ಅರಣ್ಯ ಅಥವಾ ಅನಂತಕಾಡು) ಬರಲು ಅಶರೀರ ವಾಣಿ ಹೇಳಿತು. ಒಂದು ಸುದೀರ್ಘ ಹುಡುಕಾಟದ ನಂತರ, ಅವರು ಲಕ್ಕಾಡಿವ್ ಸಮುದ್ರದ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಒಂದು ಪುಲಯ(ನಿಮ್ನವರ್ಗದ) ಮಹಿಳೆ ತನ್ನ ಮಗುವಿಗೆ, ಅವನನ್ನು ಅನಂತಂಕಾಡಿನಲ್ಲಿ ಎಸೆಯುವುದಾಗಿ ಗದರಿಸುವುದನ್ನು ಅವನು ಕಂಡನು. ಸ್ವಾಮಿ ಅನಂತಂಕಾಡು ಎಂಬ ಪದವನ್ನು ಕೇಳಿದ ಕ್ಷಣ ಅವನು ಖುಶಿಪಟ್ಟನು. ಅವನು ವಿಚಾರಿಸಿದ ಮಹಿಳೆಯ ನಿರ್ದೇಶನದ ಆಧಾರದ ಮೇಲೆ ಅವನು ಅನಂತಂಕಾಡಿಗೆ ಹೊರಟನು. ಋಷಿ ಹುಡುಗನನ್ನು ಹುಡುಕುತ್ತಾ ಅನಂತಂಕಾಡು ತಲುಪಿದನು. ಅಲ್ಲಿ ಅವನು ಹುಡುಗನು ಇಲುಪ್ಪ ಮರದಲ್ಲಿ (ಭಾರತೀಯ ಬೆಣ್ಣೆ ಮರ) ವಿಲೀನಗೊಳ್ಳುವುದನ್ನು ನೋಡಿದನು. ಮರ ಕೆಳಗೆ ಬಿದ್ದು ಅನಂತಶಯನ ಮೂರ್ತಿ (ವಿಷ್ಣುವು ಅನಂತಹಾವಿನ ಮೇಲೆ ಒರಗಿಕೊಂಡ ಭಂಗಿಯ ಮೂರ್ತಿ ಆಯಿತು. ಆದರೆ ಭಗವಂತನು ಧರಿಸಿದ ಮೂರ್ತಿ ಅಸಾಧಾರಣವಾಗಿ ದೊಡ್ಡ ಗಾತ್ರದ್ದಾಗಿತ್ತು. ಅವನ ತಲೆಯು ತುಕ್ಕಲೆ ಬಳಿಯ ತಿರುವತ್ತರದಲ್ಲಿ= ತಮಿಳುನಾಡು, ತಿರುವನಂತಪುರಂನಲ್ಲಿ ದೇಹ ಅಥವಾ ಉಡಾಲ್, ಮತ್ತು ಕುಲತೂರು ಮತ್ತು ಟೆಕ್ನೋಪಾರ್ಕ್ (ತ್ರಿಪ್ಪಪ್ಪೂರ್) ಬಳಿಯ ತ್ರಿಪ್ಪದಪುರಂನಲ್ಲಿ ಪಾದಕಮಲಗಳು, ಮೂರ್ತಿ ರೂಪದ ಅವನ ದೇಹ ಎಂಟು ಮೈಲುಗಳಷ್ಟು ಉದ್ದವಾಗಿತ್ತು. ಋಷಿಯು ಭಗವಂತನನ್ನು ಒಂದು ಸಣ್ಣ ಪ್ರಮಾಣದ ಗಾತ್ರಕ್ಕೆ ತನ್ನ ಊರುಗೋಲಿನ(ದೊಣ್ಣೆ) ಮೂರು ಪಟ್ಟು ಉದ್ದಕ್ಕೆ ಮೂರ್ತಿಯನ್ನು ಕುಗ್ಗಿಸುವಂತೆ ವಿನಂತಿಸಿದನು. ದೇವಾಲಯದಲ್ಲಿ ಪ್ರಸ್ತುತ ಕಂಡುಬರುವ ವಿಗ್ರಹದ ರೂಪಕ್ಕೆ ತಕ್ಷಣ ಭಗವಂತ ಕುಗ್ಗಿದನು.
*ಆದರೆ ಆಗಲೂ ಅನೇಕ ಇಲುಪ್ಪ ಮರಗಳು ಭಗವಂತನನ್ನು ಋಷಿಯ ದೃಷ್ಟಿಗೆ ಸಂಪೂರ್ಣವಾಗಿ ಕಾಣದಂತೆ ಅಡ್ಡಬಂದವು. ಋಷಿ ಭಗವಂತನನ್ನು ತಿರುಮುಖಂ, ತಿರುವುಡಾಲ್ ಮತ್ತು ತ್ರಿಪ್ಪದಂ ಎಂದು ಮೂರು ಭಾಗಗಳಲ್ಲಿ ನೋಡಿದನು. ಸ್ವಾಮಿ ಪದ್ಮನಾಭನನ್ನು ಕ್ಷಮಿಸುವಂತೆ ಪ್ರಾರ್ಥಿಸಿದರು. ಸ್ವಾಮಿ ಅವರು ಪುಲಯ ಮಹಿಳೆಯಿಂದ ಪಡೆದ ಪೆರುಮಾಳಿಗೆ (ದೇವರಿಗೆ) ತೆಂಗಿನ ಚಿಪ್ಪಿನಲ್ಲಿ ಅಕ್ಕಿ ಗಂಜಿ ಮತ್ತು ಉಪ್ಪುಮಂಗ (ಉಪ್ಪಿನಕಾಯಿ, ಉಪ್ಪುಸಹಿತ ಮಾವಿನ ತುಂಡುಗಳನ್ನು) ಅರ್ಪಿಸಿದರು. ಋಷಿಯು ಭಗವಂತನ ದರ್ಶನ ಪಡೆದ ಸ್ಥಳ 'ಕೂಪಕ್ಕರ ಪೊಟ್ಟಿ' ಮತ್ತು 'ಕರುವಾ ಪೊಟ್ಟಿ'ಗೆ ಸೇರಿತ್ತು. ಆಳುವ ರಾಜ ಮತ್ತು ಕೆಲವು ಬ್ರಾಹ್ಮಣ ಮನೆಗಳ ಸಹಾಯದಿಂದ ದೇವಾಲಯವನ್ನು ನಿರ್ಮಿಸಲಾಯಿತು. ಪದ್ಮನಾಭಸ್ವಾಮಿ ದೇವಾಲಯದ ವಾಯುವ್ಯ ದಿಕ್ಕಿನಲ್ಲಿ 'ಅನಂತಕಾಡು ನಾಗರಾಜ ದೇವಸ್ಥಾನ' ಇಂದಿಗೂ ಇದೆ. ಪದ್ಮನಾಭ ದೇವಾಲಯದ ಪಶ್ಚಿಮಕ್ಕೆ ಸ್ವಾಮಿಯಾರ್‌ನ ಸಮಾಧಿ (ಅಂತಿಮ ವಿಶ್ರಾಂತಿ ಸ್ಥಳ) ಅಸ್ತಿತ್ವದಲ್ಲಿದೆ. ಆ ಸಮಾಧಿಯ ಮೇಲೆ ಕೃಷ್ಣ ದೇವಾಲಯವನ್ನು ನಿರ್ಮಿಸಲಾಯಿತು. ವಿಲ್ವಮಂಗಲಂ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನ ಎಂದು ಕರೆಯಲ್ಪಡುವ ಈ ದೇವಾಲಯವು ತ್ರಿಶೂರ್ ನಾಡುವಿಲ್ ಮಾಧೋಮ್‌ಗೆ ಸೇರಿದೆ. <ref>Bayi, Aswathi Thirunal Gouri Lakshmi (1995). Sree Padmanabha Swamy Temple. Bharatiya Vidya Bhavan, Bombay, India.</ref>
 
===ತಿರುವಾಂಕೂರು ರಾಜಮನೆತನ===
*18 ನೇ ಶತಮಾನದ ಮೊದಲಾರ್ಧದಲ್ಲಿ, ಮಾತೃಪ್ರಧಾನ ಪದ್ಧತಿಗಳಿಗೆ ಅನುಗುಣವಾಗಿ, 'ಅನಿಜಮ್ ತಿರುನಾಲ್ ಮಾರ್ಥಂಡಾ ವರ್ಮಾ', ತಮ್ಮ ಚಿಕ್ಕಪ್ಪ ರಾಮ ವರ್ಮಾ ಅವರ ನಂತರ 23 ನೇ ವಯಸ್ಸಿನಲ್ಲಿ ರಾಜರಾದರು. ಅವರು 700 ವರ್ಷ ಹಳೆಯ ಎಟ್ಟುವೆಟಿಲ್ ಪಿಲ್ಲಮಾರ್ ಮತ್ತು ಅವರ ಸೋದರಸಂಬಂಧಿಗಳ ಪಿತೂರಿ ಮತ್ತು ವಿರೋಧವನ್ನು ಹತ್ತಿಕ್ಕಿ ಆದರೆ ಒಟ್ಟಾರೆಯಾಗಿ ಅವರು ಆಡಳಿತದ ಮೇಲೆ ನಿಯಂತ್ರಣವನ್ನು ತೆಗೆದುಕೊಂಡು ಆಡಳಿತವನ್ನು ಕೇಂದ್ರೀಕರಿಸಿದರು. (ಈ ಕಥೆಗಳ ಬಗ್ಗೆ ವಿವಿಧ ದಂತಕಥೆಗಳು ಮತ್ತು ವಿವಾದಗಳಿವೆ)