ತುಳು ನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
 
==ತುಳು ಶಬ್ಧ==
[[ತುಳು]] ಶಬ್ದ ವ್ಯುತ್ಪತ್ತಿಯ ಬಗ್ಗೆ ವಿದ್ವಾಂಸರಲ್ಲಿ ಅಭಿಪ್ರಾಯಭೇಧವಿದೆ. ತು¿ು ಎಂಬ ಶಬ್ದದಿಂದ ತುಳು ಬಂತೆಂದು ಒಂದು ಅಭಿಪ್ರಾಯವಾದರೆ, ತುಳುವೆ (ಮೃದು) ಶಬ್ದದಿಂದ (ಮೃದುನೆಲ) ಬಂತೆಂದು ಇನ್ನೊಂದು. ತುಳು ಎಂಬುದು ಪ್ರದೇಶವಾಚಕವೂ ಹೌದು. ಭಾಷಾವಾಚಕವೂ ಹೌದು. ತುಳು ನಾಡಿನ ಕಲ್ಯಾಣಪುರದ ಉತ್ತರ ಭಾಗದಲ್ಲಿ ತುಳು ಭಾಷೆ ಇಲ್ಲದಿರುವಾಗ ತುಳು ಎಂಬ ಶಬ್ದ ಮೂಲತಃ ಪ್ರದೇಶವಾಚಕವೇ ಇದ್ದಿರಬೇಕು. ಈ ಪ್ರದೇಶಕ್ಕೆ ಮತ್ತೆ ಬಂದು ನೆಲಸಿದ ಜನಾಂಗವೊಂದರ ಭಾಷೆಯೂ ತುಳು ಎಂಬ ಅಭಿಧಾನವನ್ನು ಪಡೆದಿರಬಹುದು. ತುಳು ಭಾಷೆ ದಕ್ಷಿಣದ ಇತರ ದ್ರಾವಿಡ ಭಾಷೆಗಳಲ್ಲಿ ಯಾವುದಕ್ಕೆ ಹತ್ತಿರವಾದುದು ಎಂಬುದನ್ನು ಕುರಿತ ಅಭಿಪ್ರಾಯಭಿನ್ನತೆಯಿಂದ ಮೇಲಿನ ಸಂದೇಹ ಬಲಪಡುತ್ತದೆ. ತುಳು ಭಾಷೆ ಬಳಕೆಯಲ್ಲಿಲ್ಲದ ಬಾರಕೂರು, ಬಸರೂರು, ಹಾಡುವಳ್ಳಿ, ಗೇರುಸೊಪ್ಪಗಳು ತುಳು ನಾಡಿನ ಕೇಂದ್ರಗಳಾಗಿದ್ದವು.
 
==ಇತಿಹಾಸ==
*ಐತಿಹಾಸಿಕವಾಗಿ, ತುಳು ನಾಡು ಹೈವ ಮತ್ತು ತುಳುವಾದ ಎರಡು ಪ್ರತ್ಯೇಕ ಪ್ರದೇಶಗಳನ್ನು ಒಳಗೊಂಡಿತ್ತು. ತುಳುನಾಡಿನ ಸುದೀರ್ಘವಾದ ಆಳ್ವಿಕೆಯ ಮತ್ತು ಅತ್ಯಂತ ಹಳೆಯ ಸ್ಥಳೀಯ ರಾಜವಂಶವು ಅಲುಪರದಾಗಿತ್ತು . ಅವರ ಸಾಮ್ರಾಜ್ಯವನ್ನು ಅಲ್ವಾಖೇಡಾ ಎಂದೂ ಕರೆಯಲಾಗುತ್ತಿತ್ತು. ೧೮ ನೇ ಶತಮಾನದವರೆಗೂ ವಿಜಯನಗರ ಸಾಮ್ರಾಜ್ಯದ ಸ್ಥಳೀಯ ರಾಜರು ತುಳುನಾಡಿನ ಆಡಳಿತವನ್ನು ಹೊಂದಿದ್ದರು .ವಿಜಯನಗರ ಕಾಲದಲ್ಲಿ ಬಾರಕೂರು ಮತ್ತು ಮಂಗಳೂರು ಪ್ರಾಮುಖ್ಯತೆಯನ್ನು ಪಡೆದು ಈ ಪ್ರದೇಶವು ಅತ್ಯಂತ ಶ್ರೀಮಂತವಾಯಿತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ, ಇಕ್ಕೇರಿನ ಕೆಳದಿ ನಾಯಕರು ತುಳುನಾಡಿನ ಹೆಚ್ಚಿನ ಭಾಗವನ್ನು ನಿಯಂತ್ರಿಸಿದರು. .ಕೆಲವು ಶತಮಾನಗಳ ನಂತರ, ಇತರೆ ಜನಾಂಗೀಯ ಗುಂಪುಗಳು ಈ ಪ್ರದೇಶಕ್ಕೆ ವಲಸೆ ಬಂದವು. ಗೋವಾದ ಕೊಂಕಣಿಗಳು ಸಮುದ್ರದಿಂದ ಆಗಮಿಸಿದರು, ಅರಬ್ಬರು ಮಾತ್ರವಲ್ಲದೆ ಪೋರ್ಚುಗೀಸರೂ ಕೂಡಾ ಮಂಗಳೂರು ಬಂದರನ್ನು ವ್ಯಾಪಾರಕ್ಕೆ ಬಳಸುತ್ತಿದ್ದರು. ಸಣ್ಣ ಸಂಖ್ಯೆಯಿದ್ದರೂ, ಜೈನರು ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿ ಬಾಹುಬಲಿಯ ಏಕಶಿಲಾ ಮೂರ್ತಿಗಳನ್ನೂ, ಅನೇಕ ಬಸದಿಗಳನ್ನೂ ನಿರ್ಮಿಸಿದ್ದಾರೆ.
"https://kn.wikipedia.org/wiki/ತುಳು_ನಾಡು" ಇಂದ ಪಡೆಯಲ್ಪಟ್ಟಿದೆ