ಬನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬನ್ಸ್ ಕರಾವಳಿ ಕರ್ನಾಟಕದ ಪ್ರಸಿದ್ಧ ತಿಂಡಿ. ಮಂಗಳೂರಿನಲ್ಲಿ ಇದರ ಉಗಮವಾದ್ದ...
( ಯಾವುದೇ ವ್ಯತ್ಯಾಸವಿಲ್ಲ )

೧೩:೦೬, ೧೮ ಜೂನ್ ೨೦೨೧ ನಂತೆ ಪರಿಷ್ಕರಣೆ

ಬನ್ಸ್ ಕರಾವಳಿ ಕರ್ನಾಟಕದ ಪ್ರಸಿದ್ಧ ತಿಂಡಿ. ಮಂಗಳೂರಿನಲ್ಲಿ ಇದರ ಉಗಮವಾದ್ದರಿಂದ ಇದನ್ನು ಮಂಗಳೂರು ಬನ್ಸ್ ಎಂದೂ ಕರೆಯುತ್ತಾರೆ. ಮೃದುವಾಗಿ, ಸಿಹಿಯಾಗಿ, ಪದರಪದರವಾಗಿ ಬನ್ಸ್ ಇರುತ್ತದೆ.

ಬನ್ಸ್

ಬೇಕಾಗುವ ಸಾಮಗ್ರಿಗಳು

  • ಗೋಧಿ ಅಥವಾ ಮೈದಾ ಹಿಟ್ಟು
  • ಬಾಳೆಹಣ್ಣು
  • ಎಣ್ಣೆ
  • ಸಕ್ಕರೆ
  • ಮೊಸರು
  • ಉಪ್ಪು
  • ಅಡುಗೆಸೋಡಾ
  • ಜೀರಿಗೆ

ಮಾಡುವ ವಿಧಾನ

 

ಮೈದಾ ಅಥವಾ ಗೋಧಿ ಹಿಟ್ಟನ್ನು ಚೆನ್ನಾಗಿ ಕಳಿತ ಬಾಳೆಹಣ್ಣಿನೊಂದಿಗೆ ಕಲಸುತ್ತಾರೆ. ಕಲಸುವಾಗ ಸಕ್ಕರೆ, ಉಪ್ಪು, ಮೊಸರು, ಅಡುಗೆ ಸೋಡಾ, ಜೀರಿಗೆಗಳನ್ನೂ ಸೇರಿಸುತ್ತಾರೆ ಬಾಳೆಹಣ್ಣಿನಲ್ಲಿ ನೀರಿನಂಶವಿರುವುದರಿಂದ ನೀರನ್ನು ಸೇರಿಸುವುದಿಲ್ಲ. ಹಿಟ್ಟನ್ನು ಕಲಸಿ ಕನಿಷ್ಠ 4 ಗಂಟೆಗಳ ಕಾಲ ಬಿಡುತ್ತಾರೆ. ಆಮೇಲೆ ಪೂರಿಯ ಆಕಾರದಲ್ಲಿ ಎಣ್ಣೆಯಲ್ಲಿ ಕರಿಯುತ್ತಾರೆ.

ವಿಧಗಳು

ಸಾಮಾನ್ಯವಾಗಿ ಸ್ವಲ್ಪ ಸಿಹಿಯಾಗಿರುವ ಬನ್ಸ್ ಗಳೇ ಪ್ರಸಿದ್ಧವಾಗಿವೆ. ಸಕ್ಕರೆಯ ಬದಲಿಗೆ ಮೆಣಸಿನ ಪುಡಿಯನ್ನು ಸೇರಿಸಿ ಖಾರ ಬನ್ಸ್ ಕೂಡಾ ಮಾಡುತ್ತಾರೆ.

ಪ್ರಾಮುಖ್ಯ

ಕರಾವಳಿ ಕರ್ನಾಟಕದಲ್ಲಿ ಬೆಳಗಿನ ತಿಂಡಿಗೆ ಬನ್ಸ್ ಸೇವಿಸುತ್ತಾರೆ. ಸಂಜೆಯ ಹೊತ್ತು ಚಹದೊಂದಿಗೆ ಬನ್ಸ್ ತಿನ್ನುವ ಅಭ್ಯಾಸವೂ ಇದೆ. ಬನ್ಸ್ ನ್ನು ಚಟ್ನಿ ಅಥವಾ ಸಾಂಬಾರ್ ನೊಂದಿಗೂ ಸೇವಿಸುತ್ತಾರೆ. ಚಟ್ನಿ ಸಾಂಬಾರ್ ಗಳಿಲ್ಲದೆಯೂ ತಿನ್ನಬಹುದು.

"https://kn.wikipedia.org/w/index.php?title=ಬನ್ಸ್&oldid=1040692" ಇಂದ ಪಡೆಯಲ್ಪಟ್ಟಿದೆ