ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೧ ನೇ ಸಾಲು:
'''ವಿಶ್ವಾಮಿತ್ರ''' ಪ್ರಾಚೀನ ಭಾರತದಲ್ಲಿ ಬಹಳ ಪೂಜನೀಯರಾದ ಸನ್ಯಾಸಿಗಳಲ್ಲಿ ಒಬ್ಬರು. ಋಗ್ವೇದದ ೩ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ ಒಬ್ಬ ಮಹಾನ್ ಸಂತ. ಸನ್ಯಾಸಿಯಾಗುವ ಮುನ್ನಿನ ಜೀವನದಲ್ಲಿ ಒಬ್ಬ ಚಂದ್ರವಂಶದ ಕ್ಷತ್ರಿಯ ರಾಜ,
[[File:Menaka Vishwamitra by RRV.jpg|thumb|right|ವಿಶ್ವಾಮಿತ್ರ ಮೇನಕ [[ರಾಜಾ ರವಿವರ್ಮ]]ನ ತೈಲಚಿತ್ರ.]]
 
 
== ಹಿನ್ನೆಲೆ ==
ವಿಶ್ವಮಿತ್ರ ಅಂದರೆ ವಿಶ್ವಕ್ಕೆ ಗೆಳೆಯ ಎಂದರ್ಥ.
ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬನು ಕುಶ(ಈತ ರಾಮನ ಮಗ ಕುಶ ಅಲ್ಲ, ಗಮನಿಸಿ.). ಈತನಿಗೆ ನಾಲ್ಕು ಮಂದಿ ಮಕ್ಕಳು- ಕುಶಾಂಭ, ಕುಶನಾಭ, ಅಧೂರ್ಥರಜಸ್ ಮತ್ತು ವಸು. ಈ ನಾಲ್ವರು ನಾಲ್ಕು ರಾಜ್ಯಗಳನ್ನು- ಕುಶಾಂಭ ಕೌಶಾಂಬಿಯನ್ನೂ, ಕುಶನಾಭ ಮಹೋದಯವನ್ನೂ, ಅಧೂರ್ಥರಜಸ್ ಧರ್ಮಾರಣ ಮತ್ತು ವಸು ಗಿರಿವಜ್ರವನ್ನು ಆಳಿಕೊಂಡಿದ್ದರು. ಈ ನಾಲ್ವರಲ್ಲಿ ಕುಶನಾಭನ ಮಗ ಗಾದಿ ಎಂಬಾತ, ಈತನ ಮಗ ವಿಶ್ವರಥ ಈತನಿಗೆ ಕೌಶಿಕನೆಂಬ ಹೆಸರು ಸಹ ಇತ್ತು. ಈ ಕೌಶಿಕನೇ ಮುಂದೆ ಅಖಂಡ ತಪಸ್ಸನ್ನಾಚರಿಸಿ, ತನಗೆ ಸವಾಲೆಸೆದ ವಸಿಷ್ಠರಿಂದಲೇ ಬ್ರಹ್ಮರ್ಷಿ(ಅತ್ಯುನ್ನತ ದೈವಿಕ, ಅನಂತ ಮತ್ತುಬ್ರಹ್ಮಜ್ಞಾನವನ್ನು ಪಡೆದುಕೊಂಡಿರುವ ಋಷಿ.) ಎಂದು ಕರೆಸಿಕೊಂಡ ಸಾಧಕರೆನಿಸಿಕೊಂಡರು. ಇವನಿಗೆ ಹೈಮವತಿ, ಶಾಲಾವತಿ, ದೃಷದ್ವತಿ, ರೇಣು, ಮಾಧವಿ ಮುಂತಾದ ಹೆಂಡತಿಯರಿದ್ದರು. ಇವನಿಗೆ ಮಧುಚ್ಛಂದ, ಕತಿ, ಯಾಜ್ಞವಲ್ಕ್ಯ, ಪಾಣಿನ, ಗಾಲವ, ಮುದ್ಗಲ, ಸಾಂಕೃತಿ, ದೇವಲ, ಅಷ್ಟಕರೆಂಬ ಮಕ್ಕಳಲ್ಲದೆ ಇವನ ವಂಶಕ್ಕೆ ಸೇರಿದ ಶುನಶ್ಯೇಪ ಎಂಬ ಹುಡುಗನೂ ಪ್ರಖ್ಯಾತರಾದವರು.
ಕ್ಷತ್ರಿಯ ಸೂರ್ಯವಂಶಸ್ಥರಾದ ಇವರನ್ನು ಕೌಶಿಕಯೆಂದು ಕರೆಯಲಾಗುತ್ತದೆ.
ದೇವರ ವರದಿಂದ ಇವರ ಹುಟ್ಟು ಕ್ಷತ್ರಿಯ ಕುಲ ರಾಜ ಮನೆತನದಲ್ಲಾದರು, ಬ್ರಹ್ಮರ್ಶಿಗಳಾದರು.
ಬ್ರಹ್ಮ ಜಾನೀತಿ ಬ್ರಾಹ್ಮನಃ
 
== ಜನನ ಮತ್ತು ಜೀವನ ==
ಗಾದಿ ರಾಜನ ಮಗಳು ಸತ್ಯವತಿ, ಋಚೀಕನೆಂಬ ಮುನಿಯನ್ನು ಮದುವೆ ಆಗುತ್ತಾಳೆ. ಸತ್ಯವತಿಯು ವಯಸಿನಲ್ಲಿ ಚಿಕ್ಕವಳಾದ ಕಾರಣ, ಸತ್ಯವತಿಯ ಜೊತೆಗೆ ಅವಳ ತಾಯಿಯೂ ಋಚಿಕನ ಆಶ್ರಮಕ್ಕೆ ತೆರಳುತ್ತಾಳೆ. ಒಮ್ಮೆ, ಗಂಡನೊಂದಿಗೆ ಈಶ್ವರನ ಕುರಿತಾದ ಹೋಮವೊಂದನ್ನು ಕೈಗೊಂಡ ಸಂದರ್ಭದಲ್ಲಿ ತನಗೊಂದು ಗಂಡು ಮಗು ಬೇಕೆಂಬ ಬೇಡಿಕೆಯನ್ನಿಡುತ್ತಾಳೆ. ಹೋಮ ಮಾಡುತ್ತಿರುವ ಕಾಲದಲ್ಲಿ ಅಗ್ನಿಧಾತಳಾದ ಪತ್ನಿಯು ಕೇಳಿದ್ದನ್ನು ನಿರಾಕರಿಸುವಂತಿಲ್ಲ. ಇಕ್ಕಟ್ಟಿನಲ್ಲಿ ಸಿಕ್ಕಿದ ಋಚೀಕನು ದೇವರಿಗೆ ಅರ್ಪಿಸಬೇಕಿದ್ದ ಹವಿಸ್ಸನ್ನೇ ಮಂತ್ರಿಸಿ, ಪಿಂಡ ರೂಪದಲ್ಲಿ ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಕೊಡುವಾಗ ಮೊದಲ ಪಿಂಡವನ್ನು ನೀನೇ ತಿನ್ನು, ಈ ಎರಡನೆಯ ಪಿಂಡವನ್ನು ನಿನ್ನ ತಾಯಿಗೆ ಕೊಡು ಎಂದು ಆದೇಶಿಸುತ್ತಾನೆ. ಯಾಗವನ್ನು ಮುಗಿಸಿ ಮನಃಶಾಂತಿಗಾಗಿ ತಪಸ್ಸಿಗೆ ತೆರಳುತ್ತಾನೆ.
 
'''ವಿಶ್ವಾಮಿತ್ರ''' - ವಿಶ್ವಾಮಿತ್ರ ಒಬ್ಬ ಋಷಿ. ಕೋಪಕ್ಕೆ ಹೆಸರುವಾಸಿಯಾದವನು. ಅರಣ್ಯದಲ್ಲಿ ತನ್ನ ಹೋಮ,ಹವನಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹರಿಸಲು [[ರಾಮ]],[[ಲಕ್ಶ್ಮಣ|ಲಕ್ಷ್ಮಣರನ್ನು]] ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಮಾರ್ಗ ಮಧ್ಯದಲ್ಲಿ ವಿಶ್ವಾಮಿತ್ರ ರಾಮನನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜನಕರಾಜನು [[ಸೀತಾ]] ಸ್ವಯಂವರ ಏರ್ಪಡಿಸಿರುತ್ತಾನೆ. ಅಲ್ಲಿ ರಾಮ [[ಶಿವಧನುಸ್ಸು|ಶಿವ ಧನುಸ್ಸನ್ನು]] ಮುರಿದು ಸೀತೆಯನ್ನು ವಿವಾಹವಾಗುತ್ತಾನೆ.
 
ಕೌಶಿಕ ಅಥವಾ ವಿಶ್ವಾಮಿತ್ರ ಒಂದು ಕಾಲದಲ್ಲಿ ಅಯೋಧ್ಯೆಯನ್ನ ಪಾಲಿಸುತ್ತಿದ್ದ. ಬೇಟೆಗೆಂದು ಬಂದ ರಾಜ, ವಶಿಷ್ಠ ಮಹಾಮುನಿಯ ಆಶ್ರಮದಲ್ಲಿ, ಕಾಮಧೇನುವನ್ನು ನೋಡುತ್ತಾನೆ. ಅದರ ಮೇಲೆ ಮೋಹ ಗೊಂಡ ಅರಸ, ಅದನ್ನ ತನಗೆ ನೀಡುವಂತೆ ಮಹಾಮುನಿಗಳಲ್ಲಿ ಬೇಡಿಕೆ ಇಡುತ್ತಾನೆ... ಆದ್ರೆ, ಇಂದ್ರನಿಂದಾ, ತನಗೆ ಬಹೂಕರಿಸಲ್ಪಟ್ಟ ಆ ಧೇನುವನ್ನು ನೀಡಲು ಸಾಧ್ಯವಿಲ್ಲಾ ಅಂತಾರೆ ವಶಿಷ್ಠರು. ಅದನ್ನು ಬೇರೆಯವರಿಗೆ ನೀಡುವ ಅಧಿಕಾರ ನನ್ನದಲ್ಲಾ. ಕೇವಲ ಧೇನುವಿನ ಪೋಷಣೆ ಮತ್ತು ಅದರ ಹಾಲಿನ ಬಳಕೆಯಷ್ಟೇ ತಾನು ಮಾಡಬಹುದಾಗಿದೆ ಅನ್ನೋ ವಶಿಷ್ಠರ ಸೌಜನ್ಯಯುತ ತಿರಸ್ಕಾರ ವಿಶ್ವಾಮಿತ್ರ ಕೆರಳೋ ತರಾ ಮಾಡತ್ತೆ.. ಅಲ್ಲಿಂದಾ ಅರಮನೆಗೆ ಬಂದ ವಿಶ್ವಾಮಿತ್ರ, ತಾನೂ ಅಂಥದ್ದೊಂದು ಧೇನುವನ್ನು ಪಡೆಯುವ ಸಲುವಾಗಿ ರಾಜ್ಯ ತ್ಯಜಿಸಿ, ತಪಸ್ಸಿಗೆ ತೊಡಗುತ್ತಾನೆ. ಹಾಗೆ ತಪೋ ನಿರತ ನಾಗಿದ್ದಾಗಲೇ, ದೇವತೆಗಳು ತಪೋ ಭಂಗಕ್ಕಾಗಿ, ಮೇನಕೆಯನ್ನು ಕಳುಹಿಸಿಕೊಡುತ್ತಾರೆ. ಮೇನಕೆ ಮತ್ತು ವಿಶ್ವಾಮಿತ್ರರಿಗೆ ಜನಿಸುವ ಕೂಸೇ ಶಕುಂತಲೆ. ಮುಂದೆ ಭರತ ಅನ್ನೋ ಮಗುವಿಗೆ ಜನ್ಮ ನೀಡುವ ಈ ಶಕುಂತಲೆ, ಭರತ ವಂಶದ ಉದಯಕ್ಕೆ ಕಾರಣಳಾಗ್ತಾಳೆ
 
{{ಚುಟುಕು}}
"https://kn.wikipedia.org/wiki/ವಿಶ್ವಾಮಿತ್ರ" ಇಂದ ಪಡೆಯಲ್ಪಟ್ಟಿದೆ