ಕೊವ್ಯಾಕ್ಸಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
'''ಕೊವ್ಯಾಕ್ಸಿನ್''' (ಅಧೀಕೃತ ಹೆಸರು '''ಬಿಬಿವಿ೧೫೨''') [[ಕೊರೋನಾವೈರಸ್ ಕಾಯಿಲೆ ೨೦೧೯|ಕೊರೊನಾ ವೈರಸ್]] ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು [[ಲಸಿಕೆ]]. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, '''[[ಭಾರತ್ ಬಯೋಟೆಕ್''']] ಸಂಸ್ಥೆ, [[ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಮಂಡಳಿ]]ಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
 
==ಸಿದ್ಧತೆ==
೨೫ ನೇ ಸಾಲು:
ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಯನ್ನು ಸದ್ಯಕ್ಕೆ ವೆರೊ ಸೆಲ್ ತಯಾರಿಕಾ ಘಟಕದಲ್ಲಿ ಉತ್ಪಾದಿಸುತ್ತಿದೆ. ಈ ಘಟಕ ಒಮ್ಮೆಗೆ ಸುಮಾರು ೩೦೦ ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ<ref>{{cite web |title=Coronavirus vaccine update: Bharat Biotech's Covaxin launch likely in Q2 of 2021, no word on pricing yet |url=https://www.businesstoday.in/sectors/pharma/coronavirus-vaccine-update-bharat-biotech-covaxin-launch-likely-in-q2-of-2021-no-word-on-pricing-yet/story/422659.html |website=businesstoday.in |publisher=business today |accessdate=17 January 2021}}</ref>. ಇದಲ್ಲದೆ, ಸಂಸ್ಥೆಯು ಹೈದರಾಬಾದಿನಲ್ಲಿನ ಜಿನೋಮ್ ವ್ಯಾಲಿಯಲ್ಲಿಯೂ ಲಸಿಕೆಯನ್ನು ತಯಾರಿಸುವ ಸ್ಥಾವರವನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನು, ದೇಶದ ಇತರ ಭಾಗಗಳಲ್ಲಿ ಸಹ ಕೊವ್ಯಾಕ್ಸಿನ್ ತಯಾರಿಸುವ ಘಟಕ ಸ್ಥಾಪನೆಗಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದೆ. ಜೊತೆಗೆ, ಲಸಿಕೆಯ ತಯಾರಿಕೆ ಮಾರಾಟ ಸಂಬಂಧವಾಗಿ ಜಾಗತಿಕ ಮಟ್ಟದ ಸಂಸ್ಥೆಗಳನ್ನು ಸಂಪರ್ಕಿಸುವ ಪ್ರಯತ್ನಗಳೂ ಜಾರಿಯಲ್ಲಿವೆ.
 
ಡಿಸೆಂಬರ್ ೨೦೨೦ರಲ್ಲಿ, '''[[ಆಕ್ಯುಜೆನ್ ಇಂಕ್''']] ಎಂಬ ಸಂಸ್ಥೆಯು ಭಾರತ್ ಬಯೋಟೆಕ್ ಜೊತೆ ಸೇರಿ, ಕೊವಾಕ್ಸಿನ್ ಲಸಿಕೆ ತಯಾರಿಸಿ ಅಮೇರಿಕನ್ ಮಾರುಕಟ್ಟೆಗೆ ಪೂರೈಸುವ ಸಲುವಾಗಿ ಒಂದು ಒಪ್ಪಂದವನ್ನು ಮಾಡಿಕೊಂಡಿತು<ref>{{cite web |title=Ocugen to co-develop Bharat Biotech's COVID-19 vaccine candidate for U.S. |url=https://www.reuters.com/article/health-coronavirus-ocugen-bharat-idUSKBN28W1G4 |website=reuters.com |publisher=Thomson Reuters |accessdate=18 January 2021}}</ref>. ಅದೇ ರೀತಿ, ಜನವರಿ ೨೦೨೧ರಲ್ಲಿ '''[[ಪ್ರಿಸಿಸಾ ಮೆಡ್''']] ಎಂಬ ಸಂಸ್ಥೆಯು [[ಬ್ರೆಜಿಲ್]] ದೇಶದಲ್ಲಿ ಕೊವಾಕ್ಸಿನ್ ಲಸಿಕೆಯನ್ನು ಪೂರೈಸಲು ಭಾರತ್ ಬಯೋಟೆಕ್ ಸಂಸ್ಥೆಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿತು<ref>{{cite web |title=Bharat Biotech inks pact with Precisa Med to supply Covaxin to Brazil |url=https://www.livemint.com/news/india/bharat-biotech-inks-pact-with-precisa-med-to-supply-covaxin-to-brazil-11610456928074.html |website=livemint.com |publisher=livemint |accessdate=18 January 2021}}</ref>.
 
ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಯ ಅನುಮತಿಯನ್ನು ಪಡೆಯುವ ಸಲುವಾಗಿ ಭಾರತ್ ಬಯೋಟೆಕ್, ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಡಿಸೆಂಬರ್ ೭ರಂದು ಅರ್ಜಿ ಸಲ್ಲಿಸಿತು<ref>{{cite web |title=Bharat Biotech seeks emergency use authorization for Covid-19 vaccine |url=https://www.hindustantimes.com/india-news/bharat-biotech-seeks-emergency-use-authorization-for-covid-19-vaccine-govt-source/story-HmmD0JnniJeigdF6xmjxBO.html |website=hindustantimes.com |publisher=hindustan times}}</ref>. [[ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ]] ಮತ್ತು [[ಫಿಜೆರ್|ಫಿಜರ್]] ನಂತರ ತುರ್ತು ಬಳಕೆಯ ಅನುಮೋದನೆಗೆ ಅರ್ಜಿ ಸಲ್ಲಿಸಿದ ಮೂರನೇ ಸಂಸ್ಥೆ ಭಾರತ್ ಬಯೋಟೆಕ್ ಆಗಿದೆ<ref>{{cite web |title=After SII, Bharat Biotech seeks DCGI approval for Covaxin |url=https://www.thehindu.com/sci-tech/health/coronavirus-serum-institute-seeks-emergency-use-approval-for-covishield-in-india/article33265921.ece |website=thehindu.com |publisher=The Hindu |accessdate=18 January 2021}}</ref>.
 
ಜನವರಿ ೨, ೨೦೨೧ರಂದು, ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ(ಸಿಡಿಎಸ್ಕೊ)ಯು ತುರ್ತು ಬಳಕೆಯ ಅನುಮತಿ ನೀಡುವಂತೆ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಶಿಫಾರಸು ಮಾಡಿತು<ref>{{cite web |title=Expert panel recommends granting approval for restricted emergency use of Bharat Biotech’s Covaxin |url=https://indianexpress.com/article/india/bharat-biotechs-covaxin-covid-vaccine-approval-cdsco-7130213/ |website=indianexpress.com |publisher=indian express |accessdate=18 January 2021}}</ref>. ಅಂತಿಮವಾಗಿ ಜನವರಿ ೩ರಂದು ಪ್ರಾಧಿಕಾರವು ಭಾರತ್ ಬಯೋಟೆಕ್ ಸಂಸ್ಥೆಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಸಾರ್ವಜನಿಕ ವಲಯದಲ್ಲಿ ಬಳಸಲು ಅನುಮತಿಯನ್ನು ನೀಡಿತು. ಲಸಿಕೆಯ ೩ನೇ ಹಂತದ ವೈದ್ಯಕೀಯ ಪ್ರಯೋಗದ ಅಂತಿಮ ಫಲಿತಾಂಶಗಳು ಬರುವ ಮುನ್ನವೇ ಲಸಿಕೆಯ ಬಳಕೆಗೆ ಅನುಮತಿಯನ್ನು ನೀಡಿದ್ದು ಮಾಧ್ಯಮ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಯಿತು<ref>{{cite web |title=Despite Mounting Disputes, Govt Presses Ahead With Vaccine Roll Out |url=https://science.thewire.in/health/covaxin-covishield-indian-government-rollout-peoples-hospital-phase-3-clinical-trials-centralisation-pm-cares/ |website=science.thewire.in |publisher=The Wire |accessdate=18 January 2021}}</ref><ref>{{cite web |title=Covaxin phase-3 trials to end today, average efficacy 60-70% |url=https://www.deccanherald.com/national/covaxin-phase-3-trials-to-end-today-average-efficacy-60-70-935362.html |website=deccanherald.com |publisher=printers mysore |accessdate=18 January 2021}}</ref>.
===ಕೋವ್ಯಾಕ್ಸಿನ ಲಸಿಕೆ===
*ಗವಿ’ ಮೂಲಕ ಲಸಿಕೆ ಪೂರೈಕೆ
*‘ಗವಿ’ ಎಂಬುದು ಒಂದು ಅಂತರರಾಷ್ಟ್ರೀಯ ಲಸಿಕೆ ಮೈತ್ರಿಕೂಟ. ಮಾರಣಾಂತಿಕ ರೋಗಗಳಿಂದ, ಬಡರಾಷ್ಟ್ರಗಳ ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡುವ ಕಾರ್ಯಕ್ರಮವೇ ಗವಿ. ಗವಿ ಮೂಲತಃ ಒಂದು ಸ್ವಯಂಸೇವಾ ಸಂಸ್ಥೆ. ಆದರೆ, ಇದು [[ವಿಶ್ವ ಆರೋಗ್ಯ ಸಂಸ್ಥೆಯಸಂಸ್ಥೆ]]ಯ ಜತೆಗೆ ಕಾರ್ಯನಿರ್ವಹಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ, [[ವಿಶ್ವ ಬ್ಯಾಂಕ್]], [[ಯುನಿಸೆಫ್]], ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಅಭಿವೃದ್ಧಿ ಸಂಸ್ಥೆಗಳು, ಲಸಿಕೆ ದಾನ ನೀಡುವ ದೇಶಗಳು, [[ಬಿಲ್ ಗೇಟ್ಸ್|ಬಿಲ್‌]] ಮತ್ತು [[ಮೆಲಿಂಡಾ ಗೇಟ್ಸ್]] ಪ್ರತಿಷ್ಠಾನ ಹಾಗೂ ಹಲವು ಎನ್‌ಜಿಒಗಳ ಸಹಯೋಗದಲ್ಲಿ ಗವಿ ಕಾರ್ಯನಿರ್ವಹಿಸುತ್ತಿದೆ. ಗವಿ ಸಂಸ್ಥೆಯು ಈವರೆಗೆ ವಿಶ್ವದಾದ್ಯಂತ ವಿವಿಧ ಕಾಯಿಲೆಗಳನ್ನು ತಡೆಯುವ ಲಸಿಕೆಗಳನ್ನು 82.2 ಕೋಟಿ ಮಕ್ಕಳಿಗೆ ನೀಡಿದೆ
===ಭಾರತ ಸಾಮರ್ಥ್ಯ===
ಭಾರತವು ಈವರೆಗೆ ಸುಮಾರು 5.8 ಕೋಟಿ ಕೋವಿಡ್ ಲಸಿಕೆಯ ಡೋಸ್‌ಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ವಿತರಣೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ದೇಶಗಳಿಗೆ ಉಚಿತವಾಗಿ ನೆರವಿನ ರೂಪದಲ್ಲಿ ನೀಡಿದರೆ, ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟಕ್ಕೆ ಒಂದಿಷ್ಟು ಲಸಿಕೆ ನೀಡಲಾಗುತ್ತಿದೆ. ಉಳಿದವನ್ನು ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ.
===ಯಾವ ದೇಶಗಳಿಗೆ ನೆರವಿನ ಲಸಿಕೆ===
*[[ಬಾಂಗ್ಲಾದೇಶ]], [[ಮಯನ್ಮಾರ್|ಮ್ಯಾನ್ಮಾರ್]], [[ನೇಪಾಳ]], [[ಭೂತಾನ್]], [[ಮಾಲ್ಡೀವ್ಸ್]], [[ಮಾರಿಷಸ್]], [[ಸೆಶೆಲ್ಸ್|ಸೀಷೆಲ್ಸ್]], [[ಶ್ರೀಲಂಕಾ]], [[ಬಹರೇನ್]], [[ಒಮಾನ್]], [[ಅಫ್ಘಾನಿಸ್ತಾನ|ಅಫ್ಗಾನಿಸ್ತಾನ]], [[ಬಾರ್ಬಡೋಸ್]] ಮತ್ತು ಡೊಮೊನಿಕಾ,
[[ಬ್ರೆಜಿಲ್]], [[ಮೊರಾಕೊ|ಮೊರಾಕ್ಕೊ]], ಬಾಂಗ್ಲಾದೇಶ, ಮ್ಯಾನ್ಮಾರ್, [[ಈಜಿಪ್ಟ್]], [[ಅಲ್ಜೀರಿಯ|ಅಲ್ಜೀರಿಯಾ]], [[ದಕ್ಷಿಣ ಆಫ್ರಿಕಾ]], [[ಕುವೈತ್]], ಯುಎಇ[[ಯುನೈಟೆಡ್ ಹಾಗೂಅರಬ್ ದೇಶಗಳಿಗೆ ಲಸಿಕೆ ಮಾರಾಟಗೂ ಇತರೆಎಮಿರೇಟ್ಸ್|ಯುಎಇ]] ದೇಶಗಳು.<ref>[https://www.prajavani.net/explainer/india-about-win-a-race-in-vaccine-supply-and-world-vaccine-diplomacy-812270.html
 
ಆಳ-ಅಗಲ: ಲಸಿಕೆ ರಾಜಕಾರಣ ಮುಂಚೂಣಿಗೆ ಭಾರತ;;ಪ್ರಜಾವಾಣಿ ವಾರ್ತೆ Updated: 11 ಮಾರ್ಚ್ 2021,]</ref>
"https://kn.wikipedia.org/wiki/ಕೊವ್ಯಾಕ್ಸಿನ್" ಇಂದ ಪಡೆಯಲ್ಪಟ್ಟಿದೆ