ಹಟ್ಟಿಯಂಗಡಿ ನಾರಾಯಣ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
}}
 
'''ಹಟ್ಟಿಯಂಗಡಿ ಪರಮೇಶ್ವರಯ್ಯ ನಾರಾಯಣರಾಯರು''' <ref> [https://www.prajavani.net/article/ನಾರಾಯಣ-ರಾಯರ-‘ಆಂಗ್ಲಕವಿತಾವಳಿ’ ಪ್ರಜಾವಾಣಿ ಪತ್ರಿಕೆ,ನಾರಾಯಣರಾಯರು, ೦೭,ಜೂನ್, ಮಧುಸೂಧನ,೨೦೧೩೨೦೧೫] </ref> (೧೮೬೩-೧೯೨೧) [[ಹೊಸಗನ್ನಡ]] ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. [[ಆಂಗ್ಲ]] [[ಕವನ]]ಗಳನ್ನು [[ಕನ್ನಡ]]ಕ್ಕೆ ಅನುವಾದಿಸಿ ಹೊಸಗನ್ನಡದ [[ನವೋದಯ]]ಕ್ಕೆ ಅಡಿಗಲ್ಲು ಹಾಕಿದವರು. <ref>http://www.ijcrt.org/papers/IJCRT1704274.pdf</ref> ೧೮೬೩ [[ಫೆಬ್ರವರಿ]] ೧೧ ರಂದು [[ಮಂಗಳೂರು|ಮಂಗಳೂರಿನ]]ಲ್ಲಿ ಜನಿಸಿದರು. [[ಕಾರ್ಕಳ]] ಮತ್ತು [[ಮದರಾಸು]]ಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ತತ್ಪರತೆಗಳು ಇವರ ವ್ಯಕ್ತಿತ್ವದ ವೈಶಿಷ್ಟ್ಯಗಳು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. [[ವಕೀಲ]]ರಾಗಬೇಕೆಂಬ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ [[ಕಾನೂನು]] ಪದವಿ ಗಳಿಸಿದರು. ವಕೀಲವೃತ್ತಿ ಹಿಡಿದು ಅದರೊಂದಿಗೇ ಇಂಡಿಯನ್ ಸ್ಪೆಕ್ಟೇಟರ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅನಾಮಧೇಯರಾಗಿ ಲೇಖನ ಬರೆಯುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ [[ಮುಂಬಯಿ]]ಗೆ ಸ್ಥಳಾಂತರಗೊಂಡಾಗ ಇವರೂ ಮುಂಬಯಿಗೆ ತೆರಳಿ(೧೯೦೩) ಅಲ್ಲಿಯೇ ನೆಲೆಸಿದರು.
== ಬರವಣಿಗೆ ಆರಂಭ ==
ಇವರು ತಮ್ಮ 50ನೆಯ ವರ್ಷದಲ್ಲಿ [[ಕನ್ನಡ]]ದಲ್ಲಿ ಬರೆವಣಿಗೆ ಆರಂಭಿಸಿದರು.<ref>https://shodhganga.inflibnet.ac.in/bitstream/10603/1878/9/09_chapter4.pdf</ref> [[ಕನ್ನಡ ಸಾಹಿತ್ಯ ಪರಿಷತ್]] ಪತ್ರಿಕೆ ಆರಂಭಗೊಂಡದ್ದು ಇವರ ಬರೆವಣಿಗೆಗೆ ಸ್ಫೂರ್ತಿಯಾಯಿತು. ಇದೇ ಅವಧಿಯಲ್ಲಿ ಮಂಗಳೂರಿನ ಸ್ವದೇಶಾಭಿಮಾನಿ, [[ಧಾರವಾಡ]]ದ ವಾಗ್ಭೂಷಣ ಮೊದಲಾದ ಪತ್ರಿಕೆಗಳಲ್ಲಿ ಆಂಗ್ಲಕವಿತಾನುವಾದವನ್ನು ಪ್ರಕಟಿಸತೊಡಗಿದರು. ಇಂಥ ಅನುವಾದಗಳ ಸಂಕಲನವೇ ಇವರ ಆಂಗ್ಲಕವಿತಾವಳಿ(೧೯೧೯).