ಹಟ್ಟಿಯಂಗಡಿ ನಾರಾಯಣ ರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
}}
 
1863'''ಹಟ್ಟಿಯಂಗಡಿ ಪರಮೇಶ್ವರಯ್ಯ ನಾರಾಯಣರಾಯರು'''(೧೮೬೩-1921.೧೯೨೧) [[ಹೊಸಗನ್ನಡ]] ಅರುಣೋದಯ ಕಾಲದ ಆದ್ಯಲೇಖಕರಲ್ಲೊಬ್ಬರು. [[ಆಂಗ್ಲ]] [[ಕವನ]]ಗಳನ್ನು [[ಕನ್ನಡ]]ಕ್ಕೆ ಅನುವಾದಿಸಿ ಹೊಸಗನ್ನಡದ [[ನವೋದಯ]]ಕ್ಕೆ ಅಡಿಗಲ್ಲು ಹಾಕಿದವರು. <ref>http://www.ijcrt.org/papers/IJCRT1704274.pdf</ref> 1863೧೮೬೩ [[ಫೆಬ್ರವರಿ]] 11ರಂದು೧೧ ರಂದು [[ಮಂಗಳೂರು|ಮಂಗಳೂರಿನ]]ಲ್ಲಿ ಜನಿಸಿದರು. [[ಕಾರ್ಕಳ]] ಮತ್ತು [[ಮದರಾಸು]]ಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸರಳತೆ, ಸಾತ್ವಿಕತೆ, ಸಹಾಯ ತತ್ಪರತೆಗಳು ಇವರ ವ್ಯಕ್ತಿತ್ವದ ವೈಶಿಷ್ಟ್ಯಗಳು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. [[ವಕೀಲ]]ರಾಗಬೇಕೆಂಬ ಆಸೆಯಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಮದರಾಸಿಗೆ ತೆರಳಿ [[ಕಾನೂನು]] ಪದವಿ ಗಳಿಸಿದರು. ವಕೀಲವೃತ್ತಿ ಹಿಡಿದು ಅದರೊಂದಿಗೇ ಇಂಡಿಯನ್ ಸ್ಪೆಕ್ಟೇಟರ್ ಎಂಬ ರಾಷ್ಟ್ರೀಯ ಪತ್ರಿಕೆಯಲ್ಲಿ ಅನಾಮಧೇಯರಾಗಿ ಲೇಖನ ಬರೆಯುತ್ತಿದ್ದರು. ಕಾರಣಾಂತರಗಳಿಂದ ಪತ್ರಿಕೆ [[ಮುಂಬಯಿ]]ಗೆ ಸ್ಥಳಾಂತರಗೊಂಡಾಗ ಇವರೂ ಮುಂಬಯಿಗೆ ತೆರಳಿ(1903೧೯೦೩) ಅಲ್ಲಿಯೇ ನೆಲೆಸಿದರು.
 
== ಬರವಣಿಗೆ ಆರಂಭ ==
ಇವರು ತಮ್ಮ 50ನೆಯ ವರ್ಷದಲ್ಲಿ [[ಕನ್ನಡ]]ದಲ್ಲಿ ಬರೆವಣಿಗೆ ಆರಂಭಿಸಿದರು.<ref>https://shodhganga.inflibnet.ac.in/bitstream/10603/1878/9/09_chapter4.pdf</ref> [[ಕನ್ನಡ ಸಾಹಿತ್ಯ ಪರಿಷತ್]] ಪತ್ರಿಕೆ ಆರಂಭಗೊಂಡದ್ದು ಇವರ ಬರೆವಣಿಗೆಗೆ ಸ್ಫೂರ್ತಿಯಾಯಿತು. ಇದೇ ಅವಧಿಯಲ್ಲಿ ಮಂಗಳೂರಿನ ಸ್ವದೇಶಾಭಿಮಾನಿ, [[ಧಾರವಾಡ]]ದ ವಾಗ್ಭೂಷಣ ಮೊದಲಾದ ಪತ್ರಿಕೆಗಳಲ್ಲಿ ಆಂಗ್ಲಕವಿತಾನುವಾದವನ್ನು ಪ್ರಕಟಿಸತೊಡಗಿದರು. ಇಂಥ ಅನುವಾದಗಳ ಸಂಕಲನವೇ ಇವರ ಆಂಗ್ಲಕವಿತಾವಳಿ(1919೧೯೧೯).
 
== ಆಸಕ್ತಿಯ ವಿಷಯ ==
[[ಭಾಷಾಶಾಸ್ತ್ರ]] ಮತ್ತು ತತ್ತ್ವಜ್ಞಾನಗಳು ಇವರ ವಿಶೇಷ ಆಸಕ್ತಿಯ ವಿಷಯಗಳಾಗಿದ್ದವು. ಇವರ ಕನ್ನಡ ಕಥಾನಕ, [[ಕನ್ನಡ ಭಾಷೆ|ಕನ್ನಡಭಾಷೆ]], ಅದರ ಶಬ್ದಸಂಪತ್ತುಗಳನ್ನು ಕುರಿತು ಮಾಡಿದ ಮೌಲಿಕ ವಿವೇಚನೆಯಾಗಿದೆ. ಕನ್ನಡ ಶಬ್ದಗಳು ದೇಶ್ಯ, [[ಸಂಸ್ಕೃತ]]ದ [[ತತ್ಸಮ-ತದ್ಭವ]] ಎಂಬಿಷ್ಟೇ ಪರಿಮಿತಿಯಲ್ಲಿವೆ ಎಂದು ತಿಳಿದಿದ್ದ ಆ ಕಾಲದಲ್ಲಿ, ಕನ್ನಡದಲ್ಲಿ [[ಪ್ರಾಕೃತ]]ದಿಂದಲೂ ಸ್ವೀಕೃತವಾಗಿರುವ ಹಲವಾರು ಶಬ್ದ, ಪದಗಳ ಕಡೆಗೆ ಎಲ್ಲರ ಗಮನವನ್ನು ವಿಸ್ತರಿಸಿದರು. ಈ ಎಲ್ಲ [[ಭಾಷೆ]]ಗಳೊಂದಿಗೆ [[ಮರಾಠಿ]]ಯನ್ನೂ ಒಳಗೊಂಡು ಮುಂಬಯಿಯ [[ಏಷ್ಯಾಟಿಕ್ ಸೊಸೈಟಿ]]ಯಲ್ಲಿ ನೀಡಿದ ಇವರ [[ಭಾಷಣ]] ಬಹಳ ಮಹತ್ತ್ವದ್ದಾಗಿದೆ. ಇವರ [[ಮಾತೃಭಾಷೆ]] [[ಕೊಂಕಣಿ]]ಯಲ್ಲೂ ಚಿಂತನೆ ನಡೆಸಿ '''ಕೊಂಕಣೀಚೆ ಮೂಲಾದರ್ಶೋ''' ಎಂಬ ಕೃತಿಯನ್ನು ರಚಿಸಿದ್ದಾರೆ. [[ಬ್ರಹ್ಮ ಸಮಾಜ|ಬ್ರಹ್ಮಸಮಾಜ]]ದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇವರು [[ಗಾಯತ್ರಿ ಮಂತ್ರ|ಗಾಯತ್ರಿಮಂತ್ರ]], [[ಭಜನೆ]]ಯ ಪದಗಳನ್ನು ಕನ್ನಡದಲ್ಲಿ ತಂದದ್ದು ಮಾತ್ರವಲ್ಲ ಅವುಗಳನ್ನು ಸೊಗಸಾಗಿ ಹಾಡುತ್ತಿದ್ದರು. 'ಟ್ರಾಕ್ಸ್ ಫಾರ್ ಥಿಂಕರ್ಸ್' ಎಂಬ ಇವರ ಕಿರುಹೊತ್ತಗೆಯೂ ಈ ನಿಟ್ಟಿನದೇ ಆಗಿದೆ.
 
== ಕೃತಿ ರಚನೆ ==
ಇವರು ಬರೆದದ್ದು ಕಡಿಮೆಯಾದರೂ ಮೌಲ್ಯ ಹಾಗೂ ಸತ್ತ್ವದಲ್ಲಿ ಹಿರಿಯದಾಗಿದೆ. ಇವರ ಅನುವಾದಿತ [[ಕವಿತೆ]]ಗಳಿಗೆ ಐತಿಹಾಸಿಕ ಮಹತ್ತ್ವವಿದೆ. ಇವರ ಆಂಗ್ಲಕವಿತಾವಳಿಯ ವಿಸ್ತೃತ ಪ್ರತಿ 1985ರಲ್ಲಿ ಪ್ರಕಟಗೊಂಡಿದೆ([[ಪಂಡಿತಾರಾಧ್ಯ]]). ಇವರ [[ಗದ್ಯ]] ಲೇಖನಗಳ ಸಂಪುಟವನ್ನು [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಕಟಿಸಿದೆ. ಇವರು 1921 [[ಜೂನ್]] 17ರಂದು ನಿಧನರಾದರು.
==ನಿಧನ==
 
ಎಚ್.ನಾರಯಣರಾಯರು ೧೯೨೧ [[ಜೂನ್]] ೧೭ ರಂದು ನಿಧನರಾದರು.
== ಉಲ್ಲೇಖ ==
<references />